ನೀಡೌ, ವೀಣಾವಾದಿನಿ, ವರವ!
ಮೂಲ - ಸೂರ್ಯಕಾಂತ ತ್ರಿಪಾಠಿ "ನಿರಾಲಾ" ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ನೀಡೌ, ವೀಣಾವಾದಿನಿ, ವರವ! ನವ ಸ್ವಾತಂತ್ರ್ಯದ ಅಮೃತಮಂತ್ರವು ತುಂಬುವಂತೆ ಭಾರತವ! ಸೀಳಿ ಅಂಧಕಾರದ ಎದೆಯನ್ನು ಹರಿಸು ತಾಯೆ ಜ್ಯೋತಿರ್ಮಯವನ್ನು ಭೇದವೆಂಬ ತಮವನು ಕತ್ತರಿಸಿ ಎಲ್ಲೆಡೆ ಜ್ಞಾನಪ್ರಕಾಶವ ಹರಿಸಿ ಬೆಳಗು ನಮ್ಮ ಮಾನಸವ! ಹೊಸ ತಾಳ-ಸ್ವರ-ರಾಗ-ಲಯಗಳು ಕಂಠವು ಮರಿಮೋಡದ ಗುಡುಗಿನೊಲು, ನೀಡೌ ಆಕಾಶದ ತುದಿಯೊಳಗೆ ರೆಕ್ಕೆಯೊಡೆದು ಹಾರುವ ಖಗಗಳಿಗೆ ಮಾಡಲಿ ಶುಭ ಕಲರವವ! ನೀಡೌ, ವೀಣಾವಾದಿನಿ, ವರವ! (ಹಿಂದಿಯ ಪ್ರಸಿದ್ಧ ಕವಿ "ನಿರಾಲಾ" ಅವರು ಬರೆದ ಈ ಸರಸ್ವತಿವಂದನೆಯನ್ನು ಅನೇಕ ಕಲಾವಿದರು ಹಾಡಿದ್ದಾರೆ. ನಿಮಗೆ ಯೂಟ್ಯೂಬಿನಲ್ಲಿ ಧ್ವನಿಮುದ್ರಿಕೆಗಳು ಸಿಕ್ಕುತ್ತವೆ. ಭಾರತಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾದಾಗ ಬರೆದ ಈ ಕವಿತೆಯಲ್ಲಿ ಭಾರತವನ್ನು ಕುರಿತು ಕವಿಯ ಕನಸುಗಳಿವೆ.)