ಪೋಸ್ಟ್‌ಗಳು

ಹಾಸ್ಯಕವಿತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನ್ಯೂಟನ್, ಬುದ್ಧ, ಮತ್ತು ಮರ

ನ್ಯೂಟನ್, ಬುದ್ಧ, ಮತ್ತು ಮರ ^^^^^^^^^^^^^^^^^^^^^^^^^^^^ ಒಬ್ಬನು ಹೋಗಿ ಕೂತ ಬೋಧಿ ಮರದ ಕೆಳಗೆ ಪೂರ್ಣಿಮೆಯ ರಾತ್ರಿ ಮಲಗಿರುವಾಗ ಧಾತ್ರಿ ಇರದಿದ್ದರೂ ಸದ್ದು ನಿದ್ದೆ ಬರದೆ ಎದ್ದಿದ್ದು ಆಸೆಯೇ ದುಃಖಕ್ಕೆ ರೂಟು ಎಂದೇನೇನೋ ನೂರೆಂಟು ರಚಿಸಿ ಸಮೀಕರಣ ತೊಡಿಸಿದ ಆಭರಣ ನಮ್ಮ ನಿಮ್ಮ ತಲೆಗೆ ಬೋಧಿ ಮರದ ಕೆಳಗೆ ಇನ್ನೊಬ್ಬ ಹೋಗಿ ಕೂತ ಸೇಬಿನ ಮರದ ಕೆಳಗೆ ಸೇಬು ತಿನ್ನುವ ಆಸೆ ಒಳಗೊಳಗೇ ಮೇಲೇಳಲು ಮಾತ್ರ ಬಿಡದು ಆಲಸಿಕೆ ಪ್ಲೇಗ್ ಹರಡಿದ್ದ ಕಾಲಮಾನ ಲಾಕ್ ಡೌನ್ ಪರಿಣಾಮ ರದ್ದಾಗಿ ಸಾರೋಟು ಲೈಸೆನ್ಸು ಎಲ್ಲೆಲ್ಲೂ ಶಾಂತಿ ಸೈಲೆನ್ಸು ಹೀಗಿರುವಾಗ ಸದ್ದಾಗಿ ಟಪ್ ಎಂದು ಹಣ್ಣು ತಲೆಯಮೇಲೇ ಬಿದ್ದಿತೊಂದು! ಏನಾಯಿತೋ ತಲೆಯಲ್ಲಿ ಪರಿವರ್ತನೆ ವಿಚಿತ್ರವಾಯಿತು ಐಸಾಕನ ವರ್ತನೆ ಫೋರ್ಸು ಗ್ರಾವಿಟಿ ಎಂಜಿ ಎಂದು ಏನೇನೋ ಬಡಬಡಿಸಿ ಮಡದಿ "ಯಾವಾಗ ಬರುವುದೋ ರೇಷನ್ನು?" ಎಂದರಿವನು "ಬಂದಾಗ ಆಕ್ಸಲರೇಷನ್ನು, ಯಾವುದೂ ಬಾರದು ತನ್ನಿಂದ ತಾನೇ ತಡೆಯಲೂ ನಡೆಸಲೂ ಶಕ್ತಿ ಇರಬೇಕು ಕಾಣೇ" ಎಂದು ಆಕೆಗೂ ತನ್ನ ಕನ್ಫ್ಯೂಷನ್ನು ಹರಡಿಬಿಡುತ್ತಿದ್ದನಂತೆ ನ್ಯೂಟನ್ನು! ಪಾಪ ಇನ್ನೇನು ಮಾಡಿಯಾಳು ಬಡಪಾಯಿ ಹೆಣ್ಣು ನೀಡದೆ ಈಕ್ವಲ್ ಅಂಡ್ ಆಪೋಸಿಟ್ ರಿಯಾಕ್ಷನ್ನು! ಕಂಡುಹಿಡಿಯುವ ಮುನ್ನ ಪ್ಲೇಗ್ ಲಸಿಕೆ ಚುಚ್ಚಿಬಿಟ್ಟನು ಎಲ್ಲರಿಗೂ ಕ್ಯಾಲ್ಕ್ಯುಲಸಿಕೆ! ಒಂದೆರಡಲ್ಲ ಚಲನಕ್ಕೆ ಮೂರು ಸೂತ್ರಗಳು ಯೂ, ವೀ, ಏ, ಟೀ ಎಂಬ ವಿಚಿತ್ರ ಪಾತ್ರಗಳು! ತುಂಬಿಹೋದ ನಮ್ಮ...

ಲಾಕ್ ಡೌನ್ ಚುಟುಕಗಳು

ಲಾಕ್ ಡೌನ್ ಕಾಲದಲ್ಲಿ ಬರೆದ ಚುಟುಕಗಳು  ರಾಜು   ನನ್ನ ಫ್ರೆಂಡ್ ಎಂಎನ್ಎಚ್ ರಾಜು ಅಂತ ಓದಿಕೊಂಡಿಲ್ಲವಾದ್ರೂ ಸಹಜ ಬುದ್ಧಿವಂತ ಹುಟ್ಟಿದ್ದು ಮಾಗಡಿಯ ನಗುವಳ್ಳಿ ಅಂತ ಅವನ ತಂದೆಯ ಹೆಸರು ಹನುಮಂತ ಎಂದೂ ಬರೆದದ್ದು ಕಾಣೆ ಮಾ.ನ.ಹ. ರಾಜು ಅಂತ ಥ್ರೋ ಬ್ಯಾಕ್  ಮ್ಯಾನೇಜರ್ ನೀಡಿದ ಸಮಸ್ಯೆಗೆ ಪರಿಹಾರ ಇಂಜಿನಿಯರ್ ಕೊಡಬಾರದಾಗಿತ್ತು ಗುರುವಾರ ಸೂಕ್ತವಾಗಿದ್ದರೂ ವಾಪಸ್ ಬಂತು ರೀಬೌಂಡು ಯೋಚಿಸಲು ತಿಳಿದುಬಂತು ಯಾಕೆಂದು ಅಂದು ಮ್ಯಾನೇಜರ್‌ಗೆ ಥ್ರೋ ಬ್ಯಾಕ್ ಥರ್ಸ್ಡೇ ಆಚಾರ ಮೂರು   ರುಕ್ಮಿಣಿಗೆ ಎಷ್ಟಿತ್ತು ಗೊತ್ತೇ ಮುತುವರ್ಜಿ ಪತಿದೇವ ಕೃಷ್ಣನ ತೂಕ ಕುರಿತು ಕಾಳಜಿ ತಂದಾಗ ಸುದಾಮ ಖಾರದವಲಕ್ಕಿ ಕೃಷ್ಣ ತಿಂದದ್ದು ಎರಡೇ ಹಿಡಿ ಮುಕ್ಕಿ ಮೂರನೇ ಹಿಡಿಗೇ ಬಸ್ ಕರೋ ಸರ್ ಜೀ. ಲಾಕ್ ಡೌನ್ ಅಲೆಮಾರಿ   ಕೆಲವರು ಅಲೆಮಾರಿ ಜನಾಂಗ ಮನೆಯ ಹೊರಗೇ ಪಟ್ಟಾಂಗ ಈಗ "ಅಲ್ಲಿದೆ ನಮ್ಮ ಮನೆ ಇಲ್ಲಿಗೆ ಬಂದೆವು ಸುಮ್ಮನೆ" ಎಂದು ದಾಸರ ರಾಗ ಹಾಡುತ್ತಿರುವರೀಗ! ಕಳಪೆ ಕಿಟ್ಟು  ಯಾವಾಗ ಹೋದ ಭಾರತ ಬಿಟ್ಟು ನಮ್ಮ ಕಿಟ್ಟು ಚೈನಾಗೆ, ಮಾನಗೆಟ್ಟು! ಇಲ್ಲಿ ಕನಕಪುರದಲ್ಲಿದ್ದಾಗಲೂ ಮಾರುತ್ತಿದ್ದದ್ದು ಕಳಪೆ ಮಾಲು ಈಗಂತೂ ಹೆಡ್ಲೈನ್ ನ್ಯೂಸ್ "ಕಳಪೆ ಚೈನಾ ಕಿಟ್ಟು" ಡೌನ್ ಡೌನ್  ಅದು ಡೌನು ಇದು ಡೌನು ಲಾಕ್ ಡೌನು ಸೀಲ್ ಡೌನು ಬರಲಿದೆಯೋ ಏನೇನು ಚಿಂತಿಸೆನು ನಾನಿನ್ನು ಏನು ಫಲ, ಲೋಕವೇ ಆದಾಗ ಅಪ್ ಸೈಡ್ ...

ಲಾಕ್ ಡೌನ್ ಉದಯ

ಇಮೇಜ್
ಬೆಳ್ಳಂಬೆಳಗ್ಗೆ ಮಳೆ ಬಲು ಜೋರು ಏಳಲು ಯಾತಕ್ಕೋ ಬೇಜಾರು ಮಲಗುವೆನಮ್ಮಾ ಬೆಚ್ಚಗೆ ಹೊದ್ದು ಮಾಡಲಾದರೂ ಏನಿದೆ ಎದ್ದು ಲಾಕ್ ಡೌನ್ ಅಂತ ಮುಚ್ಚಿದೆ ಸ್ಕೂಲು ಈಗ ಯಾವ ಎಕ್ಸಾಮ್ ಇದೆ ಹೇಳು ದೇವರು ವರ ಕೊಟ್ಟರೂ ಪೂಜಾರಿ ಕೊಡದ ಹಾಗೆ ನೀನೇತಕೆ, ವೈರಿ, ಏಳೋ ಏಳೋ ಏಳೋ ಬೇಗ ರಿಕಾರ್ಡು ಹಚ್ಚುವೆ ಒಂದೇ ರಾಗ! ಏನು ಮಾಡಲಿದೆ ನಾ ಮೇಲೆದ್ದು ಹೊರಗಡೆ ಹೋದರೆ ಕೊಡುವರು ಗುದ್ದು ಬೋರಾಗಿದೆ ಮನೆಯೊಳಗೇ ಇದ್ದು ಕೋವಿಡ್ ಕರೋನಾ ಎರಡರದೇ ಸದ್ದು ಸರಿಯೇ ಕಣೋ ಹೇಳುವುದೂ ನೀನು ಬೆಚ್ಚಗೆ ಹೊದ್ದು ಮಲಗುವೆ ನಾನೂ ಅಪ್ಪನೇ ಮಾಡಲಿ ಇಂದಿನ ತಿಂಡಿ ಮಲಗಲು ಸೂಚಿಸುತಿದೆ ಈ ಥಂಡಿ ಅಯ್ಯೋ ಬೇಡಮ್ಮಾ ಇದೋ ಎದ್ದೆ ಅಪ್ಪನ ಉಪ್ಪಿಟ್ ಹಸಿಹಸಿ, ಮುದ್ದೆ ನೀನೇ ಮಾಡು ಪೂರಿಸಾಗು ರೆಡಿಯಾದಾಗ ನನ್ನನು ಕೂಗು ಅಷ್ಟರವರೆಗೂ ಮಲಗುವೆ ನಾನು ಸವಿಯುತ್ತಾ ನಿದ್ದೆಯ ಜಾಮೂನು - ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೦

ಕೊರೋನಾ ಕೊರೋನಾ - ಭಾಗ ೨ (ಚುಟುಕಗಳು)

ಇಮೇಜ್
ಕನಕಾ  ********* ಪ್ರತಿ ರಾಮನವಮಿಗೆ ಪಾನಕ ತಪ್ಪದೆ ಹಂಚುವಳು ಮಿಸ್ ಕನಕಾ ಈ ಸಲ ಯುಗಾದಿಗೇ ಏನು ಸ್ಫೂರ್ತಿ ಇವಳಿಗೆ ಹಂಚುತಿಹಳು ನೆಟ್ ಮೇಲೆ ಕೊರೋನಾ ಪ್ಯಾನಿಕ ಶಾರ್ವರಿ  ******* ಓ ಸಂವತ್ಸರ ಶಾರ್ವರಿ! ಎಷ್ಟಂತಾ ಮಾಡೋದು ವರಿ? ಕೊರೊನಾ ಕೋವಿಡ್ ಮೂರನೇ ಹಂತ ಮುಗಿಯುವ ಮುನ್ನವೇ ಬಂತೇ ಹಂತಾ ತಿಳಿಸವರಿಗೆ, ವೀ ಆರ್ ಇನ್ ನೋ ಹರಿ! ಬೋರಸ್  ********** ಬಂತು  ಕರೋನಾ ವೈರಸ್ ಮನೇಲಿರಿ ಅಂತ ಕೋರಸ್ ಲಾಕ್ ಡೌನ್ ಅಂತೆ ಕ್ಯಾನ್ಸಲ್ ಸಂತೆ ನ್ಯೂಸ್ ಚಾನೆಲ್ಸ್ ಡೋಂಟ್ ಬೋರಸ್ ಇಳಿಮುಖ  *********** ಎಲ್ಲದರಲ್ಲೂ ಈಗ ಇಳಿಮುಖ ಎಂದು ಬೇಸರಿಸಿದರು ಶ್ರೀಮತಿ ರೇಖಾ ಹಾಕೋದು ಕೇಳಿದ್ದೆ ಲಾಕಪ್ನಲ್ಲಿ ಕೈದಿಗಳ್ನ ಅದಕ್ಕೂ ಸಂಚಕಾರ ತಂತು ಕರೋನಾ ಲಾಕಪ್ ಹೋಗಿ ಲಾಕ್ ಡೌನ್ ಬರಬೇಕಾ? ಮಾರ್ಚ್ ೨೨ - ಸಂಜೆ  *********************** ಸಂಜೆ ಕೇಳಿದೆ  ಇವಳನ್ನು "ಏನು, ತಿಂಡಿ ಮಾಡಿದ್ಯಾ?" ಪಾತ್ರೆ ಕುಕ್ಕುವ ಸದ್ದು! "ಏನೂ ಆಗಲಿಲ್ಲ ತಾನೇ ಸದ್ಯ?" ಮುಂದುವರೆಯಿತು ತಾಲಿ, ಜೊತೆಗೆ ಢಣಢಣಾ ಸದ್ದು ಅಬ್ಬಾ ಏನೋ ವಿಶೇಷವೇ ಇರಬಹುದೆಂದು ಖುದ್ದು ಹೋಗಿ ನೋಡಿದರೆ ಥಾಲೀ ಪೀಟ್ ಎಂಬ ರುಚಿಕರ ಖಾದ್ಯ! ಸಂಕಷ್ಟಿ  ********* ಹೊರಗೆ ಹೋಗಲು ಸಂಕಷ್ಟ ಎದುರಾಗಿ ಮನೆಯಲ್ಲೇ ಗಣಪತಿಯ ಫೋಟೋಗೆ ಎರಗಿ ಅದೂ ಇಲ್ಲದಿದ್ದರೂ ಚಿಂತೆ ಇಲ್ಲ ಎಲ್ಲದಕ್ಕೂ ವಾಟ್ಸಾಪ್ ಇದೆಯಲ್ಲ ಭಜೇಹಂ ಶ್...

ಕರೋನಾ ಕರೋನಾ (ಚುಟುಕಗಳು)

ಇಮೇಜ್
 ಮಜಾ ಕರೋನಾ  ***************** ನಾಳೆಯಿಂದ ಒಂದು ವಾರ ಜರ್ಬೇ ಜರ್ಬು ರಜಾ ಬಂತೆಂದು ಕುಣಿದಾಡಿದನು ಸುಬ್ಬು ಎದುರಾಯ್ತು ಸುಬ್ಬುವಿಗೆ ಮರುದಿವಸ ಪೇಚು ಬಿಟ್ಟುಬಿಟ್ಟಂತಾಯ್ತು ಕೈಗೇ ಬಂದಿದ್ದ ಕ್ಯಾಚು ಬಂದಾಗಿದ್ದವು ಎಲ್ಲಾ ಮಾಲು ಥೇಟರು ಪಬ್ಬು ಥಿಯರಿ ********  ಕೊರೊನಾ ಹೇಗೆ ಬಂತು ರೀ ಎಲ್ಲರಿಗೂ ಇದೆ ಅವರವರ ಥಿಯರಿ ಒಬ್ಬರಿಗೆ ಕಾಣುತ್ತದೆ ಚೈನಾದ ಬಾವಲಿ ಇನ್ನೊಬ್ಬರಿಗೆ ಬಯಲಾಜಿಕಲ್ ವೆಪನರಿ ಮೋದಿ ಅಪ್ಪುಗೆಯಿಂದ ಎಂದು ಕೆಲವರಿಗೆ ಭಯ ರೀ ಟೆರರಿಸ್ಟ್  ********* ಡೋಂಟ್ ಪ್ಯಾನಿಕ್ ಎಂಬ ದೊಡ್ಡ ತಲೆಬರಹ ಕೆಳಗೇಕಿದೆ ಕೊರೊನಾಸುರನ ಚಿತ್ರ ಉಹಹಹಾ? ಕೈತೊಳೆಯಬೇಕೆಂಬ ಸರಳ ಸಂದೇಶ ಎಲ್ಲೋ ಮರೆಯಾಗಿದೆ ಈ ಮುಗ್ಧ ಉದ್ದೇಶ ಹೆದರಿಸುತ್ತಾರೇಕೆ ಜನರು ಈ ತರಹ! ಸೀನಿ  ***** ಸೀನಿ, ಸೀನು, ಸೀನಣ್ಣ ಎಲ್ಲರೂ ಬದಲಾಯಿಸಿಕೊಳ್ಳಿ ಬೇಗನೇ ಹೆಸರು ಯಾರಾದರೂ ಬಂಗಾಳಿ ಪ್ರಭೃತಿ "ಸೀನಿ ದಾ" ಅಂದರೇನು ಗತಿ ಜನರು ಎಷ್ಟು ಹೊತ್ತು ಹಿಡಿದಾರು ಉಸಿರು? ಹೋಮ  ********* ಎಲ್ಲೆಲ್ಲೂ ಕೇಳುತ್ತಿದೆ ಕರೋನಾ ಕರೋನಾ  ಪುರೋಹಿತರನ್ನು ಕರೆದು ಹೋಮ ಮಾಡಿಸೋಣ  ತಾಳ್ಮೆಯಿಂದ ಕೇಳಿದ ಮೇಲೆ ಕಾಲರ್ ಟ್ಯೂನು  "ಸ್ವಾಮೀ ನಿಮ್ಮ ಹಾಗೆಯೇ ನಾನೂ ಕ್ವಾರಂಟೀನು  ಬೇಕಾದರೆ ಮಾಡೋಣ ಹೋಮ ವರ್ಕ್ ಫ್ರಮ್ ಹೋಮ"  ಸರಸ  ****** ಟಿವಿಯಲ್...

ಒಂದು ಡಜನ್ ಲಿಮರಿಕ್ (ಹಾಸ್ಯ)

ಇಮೇಜ್
ಖೇಚರ  ~~~~~  ಆಕಾಶದಲ್ಲಿ ಚಲಿಸುವುದೇ "ಖೇಚರ" ಅರ್ಥಾತ್ ಹಕ್ಕಿ ಎಂದ ಕನ್ನಡ ಟೀಚರ ಮಾತು ಕೇಳಿ ಯೋಚಿಸಿದ ಭಾನು ವಾಟ್ ಅಬೌಟ್ ಪ್ಲೇನು ವಾಟ್ ಅಬೌಟ್ ಡ್ರೋನು ಹೀಗೆ ಕನ್ಫ್ಯೂಸ್ ಆಗೋದೇ ಅವನ ನೇಚರ ಮಾರೀಚ  ~~~~~ ~~  ಬ್ರದರ್ಸ್ ಮಾರೀಚ ಮತ್ತು ಸುಬಾಹು ರಾಮನ ಕೈಯಲ್ಲಿ ಅಪ್ಪಿದರು ಸಾವು ಇನ್ನಿಬ್ಬರು ಇದ್ದರಲ್ಲ ಏನಾದರೋ ಅವರು ಗಣಿತದ ಮೇಷ್ಟ್ರು ಹೇಳ್ತಿದ್ರು ಹೆಸರು ಬ್ರದರ್ಸ್ ಸಮಬಾಹು ಮತ್ತು ವಿಷಮಬಾಹು ದೀರ್ಘ ~~~~~  ಧೂಮ್ರಪಾನದಿಂದ ಆರೋಗ್ಯಹಾನಿ ಎಂದು ನುಡಿದನು ಒಬ್ಬ ದೊಡ್ಡ ವಿಜ್ಞಾನಿ "ಇನ್ನುಮೇಲೆ ಎಲ್ಲರೂ ಸಿಗರೇಟ್ ಬೀಡಿ" ದೊಡ್ಡಕ್ಷರದಲ್ಲಿ ಟೈಪಿಂಗ್ ದೋಷ ನೋಡಿ ಸುದೀರ್ಘವಾಗಿ ಎಳೆದುಕೊಂಡರು ಶ್ವಾಸ ನೆರೆದಿದ್ದ ಮೇಕೆ  ~~~~  ಮೇ ಮೇ ಅಂತಿತ್ತು ಕನ್ನಡ ಮೇಕೆ ಪ್ರಯತ್ನಿಸಿದೆ ಇಂಗ್ಲಿಷ್ ಕಲಿಸೋಕೆ Me Me ಅಂತ ಬರೆದೆ ಪಕ್ ಪಕ್ಕ ನಗೋಕೆ ಶುರು ಮಾಡ್ತು ಮೇಕೆ ಪಕ್ ಪಕಾ ಚೆನ್ನಾಗಿದೆ ನಿನ್ನ MeMe ಅಂತ ಅನ್ಬೇಕಾ, ಪಕ್ಕಾ! ದೇವಕಣ  ~~~~~~  ದೇವಕಣ ಕಂಡು ಹಿಡಿದ ಕೀರ್ತಿ ಕುವೆಂಪು ಅವರಿಗೇ ಸಲ್ಲಬೇಕಿತ್ರೀ ಓದಿದರೆ ಅವರ ಕವಿತೆ ಹೇಳಿ ಸಿಕ್ಕದೇ ಇದ್ದೀತೇ ಮಂತ್ರಕಣಾ ಶಕ್ತಿಕಣಾ ದೇವಕಣಾ ಆಲ್ ತ್ರೀ ಜಲಚರ  ~~~~~~~  "ಜಲದಲ್ಲಿ ಚಲಿಸಿದ್ದು ಜಲಚರ" ಎಂದು ವಿವರಿಸುವಾಗ ಕನ್ನಡ ಟೀಚರ ಭಾನುವಿನ ಕಣ್ಮುಂದೆ ಮೂಡಿತೊಂದು ಚ...

ಇನ್ನೂ ಹತ್ತು ಲಿಮರಿಕ್

ಇನ್ನೂ ಹತ್ತು ಲಿಮರಿಕ್  ಸಿ. ಪಿ. ರವಿಕುಮಾರ್  ೧. ಡಬ್! ಹಾಲಿವುಡ್ ಸಿನಿಮಾದಲ್ಲಿ ಹಾರರ್ ದೃಶ್ಯ ಕನ್ನಡಕ್ಕೆ ಅನುವಾದಿಸಿದ ಸ್ಕ್ರೀನ್ ರೈಟರ್ ಶಿಷ್ಯ ಕಟ್ ಎಂದು ಕೂಗಿದರು ನಿರ್ದೇಶಕರು ಒಮ್ಮೆಲೇ "ಎದೆ ಡಬ್ ಡಬ್ ಅಂತಿದೆ ಅಂತ ಬರೀಬಹುದೇನಲೇ? ಡಬ್ಬಿಂಗ್ ಇದೆಯೋ ಇಲ್ವೋ ಮೊದ್ಲು ತಿಳ್ಕೋ ವಿಷ್ಯಾ" ೨. ಅನುವಾದ  ಇದ್ದಳೊಬ್ಬಳು ಅನುರೂಪಾ ಅಂತ ಅಟೆಂಡ್ ಮಾಡಿದಳು ಅನುವಾದ ಕಮ್ಮಟ ಈಗ ಗಂಡನ ಜೊತೆಗೆ ಬರಿಯ ವಾಗ್ವಾದ ಅವನು "ಮಸಾಲೆ" ಎಂದರೆ ಇವಳು "ಬೇಡ, ಸಾದಾ" ಇದು ಅನು-ವಾದ ಕಮ್ಮಟದ ಪುಟ್ಟ ಅಪಘಾತ ೩. ಡಬ್ಬಿ  ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಲೈನು ನಿಂತಿದ್ದನು ಕವಿಯೊಬ್ಬ ಕ್ಯೂನಲ್ಲಿ ತಾನೂ ಸರದಿ ಬಂದಾಗ ತಟ್ಟೆಯಲ್ಲಲ್ಲದೇ ಡಬ್ಬಿಯಲ್ಲೂ ಕೊಂಡೊಯ್ದ ನಾಲಕ್ಕು ಫೇಡೆ "ಡಬ್ಬಿಂಗಿಗೆ ಈಗ ಪರವಾಗಿದೆ ಕಾನೂನು" ೪. ಜಾಹೀರಾತು  ಕುಡಿತದ ಸಮಸ್ಯೆಯೇ? ಚಿಂತಿಸದಿರಿ! ನಮ್ಮಲ್ಲಿ ಪರಿಹಾರವಿದೆ, ಡೋಂಟ್ ವರಿ! ಕೆಳಗೆ ಕೊಟ್ಟಿದೆ ನೋಡಿ ಮೊಬೈಲ್ ಸಂಖ್ಯೆ ವಾರಕ್ಕೆ ಏಳು ದಿನ ಇಪ್ಪತ್ನಾಲಕ್ಕು ಗಂಟೆ ಕಾಲ್ ಮಾಡಿದರೆ ಮನೆಗೇ ಮಾಡುವೆವು ಡೆಲಿವರಿ" ೫. ಸಂತಾ  ಸಂತಾಸಿಂಗ್ ಮನೆಗೆ ಬಂದಾಗ ಬಂತಾ ತನ್ನ ಇಂಗ್ಲಿಷ್ ಸ್ವಲ್ಪ ತೋರಿಸೋಣ ಅಂತಾ "ಐ ಆಮ್ ಸರ್ದಾರ್ ಅಂಡ್ ಶೀ ಈಸ್ ಸರದಾರ್ನೀ ಹೀ ಈಸ್ ಮೈ ಕಿಡ್ ಅಂಡ್ ಶೀ ಈಸ್ ಮೈ ಕಿಡ್ನೀ" ಎಂದು ಹೆಂಡತಿ ಮಕ್ಕಳ ಜೊತೆಗೆ ಹಲ್...

೨೧ ಲಿಮರಿಕ್ಸ್

ಇಮೇಜ್
ಸಿ. ಪಿ. ರವಿಕುಮಾರ್  (೧) ದೇವರಲ್ಲಿ ಬೇಡಿದ್ದು  ಇದನ್ನು ಹೇಳಿದ್ದು ಈಮೋ ಫಿಲಿಪ್ಸ್, ಅಮೆರಿಕನ್ ನಗೆಗಾರ ಕೇಳಿಕೊಂಡನಂತೆ ದೇವರಲ್ಲಿ "ಒಂದು ಬೈಕ್ ಕಳಿಸು ಹೇಗಾರಾ" ದೇವರು ಹಾಗೆಲ್ಲಾ ಕಳಿಸುತ್ತಾನೆಯೇ, ಪೆದ್ದು! ಎಂದು ಪಾರ್ಕ್ ಮಾಡಿದ್ದ ಹೊಸ ಬೈಕ್ ಕದ್ದು ದೇವರೇ ಕ್ಷಮಿಸಿಬಿಡು ಎಂದು ಪ್ರಾರ್ಥಿಸಿದನಂತೆ ರವಿವಾರ (೨) ಕಲಹಪ್ರಿಯ  ನಾರದನೆಂಬ ಸೇಜು ಕಳಿಸಿದ ಮೊದಲ ಮೆಸೇಜು ಎಡಬಲಗಳಿಗೂ ಚುಚ್ಚಿ 280 ಬೈಟ್‌ನಲ್ಲಿ ಕಚ್ಚಿ ನೋಡುತ್ತಿದ್ದ ಕಾಮೆಂಟ್ ಕಲಹಗಳ ಮೋಜು (೩) ಪಾಲಿಟಿಕ್ಸ್  "ಲ್ಯಾಟಿನ್ ಭಾಷೆಯಲ್ಲಿ 'ಪಾಲಿ' ಬಹುವಚನ ಸೂಚಿ" -- ನಟ ರಾಬಿನ್ ವಿಲಿಯಮ್ಸ್ ಹೀಗೆ ಚುಚ್ಚಿದನು ಸೂಜಿ: "ಇನ್ನು ಟಿಕ್ಸ್ ಎಂದರೆ ನಿಮಗೆಲ್ಲ ಗೊತ್ತು ರಕ್ತವನ್ನೆಲ್ಲಾ ಹೀರಿಬಿಡುವ ಜಂತು ಪಾಲಿಟಿಕ್ಸ್ ಎಂದರೆ ಗೊತ್ತಾಯಿತೇ ಎಂಥದದು ಬೂಚಿ?" (೪)  ಒಂದೇ ಏಟಿಗೆ ಎರಡು ಹಣ್ಣು  ಹೀಗೆ ಹೇಳಿದನಂತೆ ಜಾನತನ ಸ್ವಿಫ್ಟ (ಸಿದ್ಧವಾಗುತ್ತದೆ ಅವನ ಜಾಣತನ ಸ್ಪಷ್ಟ) "ಏರುತ್ತಿರುವ ಜನಸಂಖ್ಯೆ ಹಾಗೂ ಜಗತ್ತಿನ ಹಸಿವಿನ ಸಮಸ್ಯೆ ಎರಡಕ್ಕೂ ನರಮಾಂಸ ಭಕ್ಷಣೆಯೇ ಉತ್ರ" (೫) ಒಗಟು  ಅದು ಮೇಲೆ ಹೋಗುತ್ತೆ ಕೆಳಗೂ ಬರುತ್ತೆ ಆದರೂ ಕದಲೋದಿಲ್ಲ ಒಂಚೂರೂ ಥಟ್ಟಂತ ಹೇಳು ಏನಿರಬಹುದು ಗೊತ್ತಾಗಲಿಲ್ವಾ? ಬೆಟ್ಟದ್ ರಸ್ತೆ! (೬)  ಫಿಲಾಸಫಿ  ನಿಟ್ಟುಸಿರಿಟ್ಟು ಅವನೆಂದ: ...