ಪೋಸ್ಟ್‌ಗಳು

ಆಗಸ್ಟ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕತ್ತಲ ಹಣತೆ

ಇಮೇಜ್
ಕತ್ತಲ ಹಣತೆ ಮೂಲ: ಹರಿವಂಶರಾಯ್ ಬಚ್ಚನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಆಗಸ್ಟ್ ಹದಿನೈದು ೨೦೨೩ ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಕಮನೀಯ ಮಂದಿರವನ್ನು ಕಟ್ಟಿದ್ದೆಯಾ ಕಲ್ಪನೆಯ ಕೈಯಿಂದ? ಭಾವನೆಯ ಕೈಯಿಂದ ಅದರೊಳಗೆ ಬಂಧಿಸಿದ್ದೆಯಾ ಸ್ವಚ್ಛಂದ?ಕನಸುಗಳ ಕೈಯಿಂದ ಸಿಂಗರಿಸಿದ್ದೆಯಲ್ಲ ಬಹು ಅಂದ?ಅಲ್ಲಿ ಹರಡಿದ್ದೆಯಾ ಸ್ವರ್ಗದ ಸೌರಭದ ಸಿರಿಗಂಧ? ಮುರಿದು ಬಿದ್ದಿತೆ ಸೌಧ? ಆಯ್ದು ಇಟ್ಟಿಗೆ ಕಲ್ಲು ಅದರಿಂದ ಕಟ್ಟಿಕೊಳ್ಳಲು ಕಷ್ಟವೇ ಸರಳ ಶಾಂತಿ ಕುಟೀರವೊಂದ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ನಭನೀಲ ನೀಲಿಮೆಯಿಂದ ಮಾಡಿದ ಮಧುಪಾತ್ರೆಯೋ ಮನಮೋಹಕ ಮುಗಿಲ ಕಂಬನಿಯಲ್ಲಿ ನೆಂದು ಹೊಳೆಯುತ ಲಕಲಕ ಮಧುಪಾತ್ರೆಯೊಳು ನವಮೇಘದೊಲು ತುಳುಕುವ ದ್ರಾವಕ ಉಷೆಯ ಕೋಮಲ ಪ್ರಥಮ ಕಿರಣದ ಬಣ್ಣದ ಸಿಹಿ ಪಾನಕ ಮುರಿದು ಹೋದರೆ ಪಾತ್ರೆ ಜೋಡಿಸಿ ಎರಡು ಕೈಗಳ ಅಂಜಲಿ ಒಂದು ನಿರ್ಮಲ ನೀರಧಾರೆಯ ಕುಡಿಯಲು ಯಾವ ನಿರ್ಬಂಧ? ಇರುಳು ಕತ್ತಲುಮಯವಾದರೆ ದೀಪ ಹಚ್ಚಲು ಯಾರ ನಿರ್ಬಂಧ? ಹಿಂದೆ ಜೀವನದಲ್ಲಿ ಎಂದೂ ಹತ್ತಿರ ಬರಲಿಲ್ಲ ಚಿಂತೆ ಕತ್ತಲೆಯ ಮಾತಿರಲಿ ಕರಿಛಾಯೆಯೂ ಬೀಳಲಿಲ್ಲ ಎಂಬಂತೆ! ಕಣ್ಣಲ್ಲಿತ್ತು ಮಾದಕತೆ, ಮಾತುಗಳಲ್ಲಿ ಮೋದದ ಕವಿತೆ ಗುಡುಗಿನಂತಹ ನಗೆಗೆ ನಾಚುತ್ತಿತ್ತು ಕಾರ್ಮೋಡಗಳ ಸಂತೆ ಕಳೆದುಕೊಂಡು ಇದೆಲ್ಲ ಉಲ್ಲಾಸವೇ ಕಳೆದುಹೋದಂತೆ, ಆದರೆ ಅಸ್ಥಿರತೆಯ ಈ ಸಮಯದಲ್ಲಿ ಮುಗುಳುನಗಲು ಯಾರ ನಿರ್ಬಂಧ? ಇರುಳು ಕತ್ತಲುಮಯವಾದರೆ ಹ