ಪೋಸ್ಟ್‌ಗಳು

Sahir Bhopali ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಎದೆ ಬರಿದಾಗಿಹುದು ಪ್ರೇಮದ ನೋವಿನ ಹೊರತು

ಇಮೇಜ್
"ಸಜದಾ" ಎಂಬ ಗಜಲ್ ಸಂಗ್ರಹದಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿರುವ ಈ ಗಜಲ್ ಕೂಡಾ ಒಂದು.  "ದಿಲ್ ಮೇ ಅಬ್ ದರ್ದ್-ಎ-ಮೊಹಬ್ಬತ್ ಕೆ ಸಿವಾ ಕುಛ್ ಭೀ ನಹೀ." ಇದನ್ನು ಬರೆದವರು ಸಾಹಿರ್ ಭೋಪಾಲಿ ಎಂಬ ಕವಿ. ತುಂಬಾ ಇಂಪಾದ ಗಜಲ್; ಮತ್ತೆ ಮತ್ತೆ ಕೇಳುವಂತಿದೆ.   ಕೇಳಲು ಈ ಲಿಂಕ್ ಅನುಸರಿಸಿ.   ಅನೇಕ ಗಜಲ್ ಗಳಂತೆ ಇಲ್ಲೂ ಕೂಡಾ ವಿಷಾದದ ದಟ್ಟ ಛಾಯೆ ಕಂಡು ಬರುತ್ತದೆ.  ಇಲ್ಲಿ ವ್ಯಕ್ತವಾದ ಭಾವನೆಗಳನ್ನು ಒಬ್ಬ ಪ್ರೇಮಿ ತನ್ನ ಭಗ್ನ ಪ್ರೇಮವನ್ನು ಕುರಿತು ಹಾಡುತ್ತಿರಬಹುದು; ಅಥವಾ ಆಧ್ಯಾತ್ಮಿಕ ಸ್ತರದಲ್ಲಿ ಈ ಗಜಲ್ ಭಗವಂತನಿಗೆ ಕವಿಯ ಸಮರ್ಪಣ ಎಂದು ಕೂಡಾ ಪರಿಗಣಿಸಬಹುದು.  ಕವಿ ಯಾವುದೋ ದುಃಖದ ಸನ್ನಿವೇಶದಲ್ಲಿ ಸಿಲುಕಿದ್ದಾನೆ.  ತನ್ನ ಪಾಪಗಳ ಬಗ್ಗೆ ಅವನಿಗೆ ಪಶ್ಚಾತ್ತಾಪ ಉಕ್ಕುತ್ತಿದೆ. ಈ ಸ್ಥಿತಿಯಲ್ಲಿ  ತನಗೆ ಇನ್ನೇನೂ ಬೇಡ ಎಂಬ ವಿರಕ್ತಿ ಅವನಲ್ಲಿ ಹುಟ್ಟಿದೆ.  "ಆದದ್ದೆಲ್ಲಾ ಒಳಿತೇ ಆಯಿತು" ಎಂಬ ದಾಸವಾಕ್ಯದಂತೆ "ನನಗೆ ಒದಗಿದ ಈ ದುಃಖ ನನಗೆ ಬಿಡುಗಡೆಯನ್ನೇ ತಂದಿದೆ," ಎಂದು ಕವಿ ಯೋಚಿಸುತ್ತಾನೆ.  ಈ ಗಜಲ್ ಭಾಷಾಂತರ ನನಗೆ ತೃಪ್ತಿ ಕೊಟ್ಟಿದೆ. ಮೂಲದ ಲಯವನ್ನು ತಕ್ಕಮಟ್ಟಿಗೆ ಹಿಡಿದಿದ್ದೇನೆ ಎನ್ನಿಸಿದೆ. ಕನ್ನಡದಲ್ಲಿ ಹಾಡಲು ಲತಾ ಮಂಗೇಶ್ಕರ್ ಅವರನ್ನು ಒಪ್ಪಿಸುವುದೊಂದೇ ಉಳಿದ ಕೆಲಸ! ಮೂಲ ಗಜಲ್ : ಸಾಹಿರ್ ಭೋಪಾಲಿ  ಕನ್ನಡಕ್ಕೆ : ಸಿ. ಪಿ, ರವಿಕುಮಾರ್...