ಪೋಸ್ಟ್‌ಗಳು

Raj Kapoor ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಾಜ್ ಕಪೂರ್ ನೆನಪು

ಇಮೇಜ್
ಸಿ ಪಿ ರವಿಕುಮಾರ್ ಈ ನವೆಂಬರ್ ತಿಂಗಳಲ್ಲಿ ನಾನು ವಿಮಾನದಲ್ಲಿ ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣ ಮಾಡಿದಾಗ ಭಾರತೀಯ ಭಾಷೆಗಳ ಅನೇಕ ಚಲನಚಿತ್ರಗಳು ಮನರಂಜನೆಯ ಮೆನುವಿನಲ್ಲಿದ್ದವು. ಬಾಲಿವುಡ್ ಚಿತ್ರಗಳಲ್ಲದೆ ಕನ್ನಡ, ತಮಿಳು, ತೆಲುಗು ಚಿತ್ರಗಳೂ ಇವುಗಳಲ್ಲಿ ಸೇರಿದ್ದವು. ಕೇವಲ ಐದು ವರ್ಷಗಳ ಹಿಂದೆ ಈ ಸ್ಥಿತಿ ಇರಲಿಲ್ಲ. ಮನರಂಜನೆ ಎಂದರೆ ಹಾಲಿವುಡ್ ಚಿತ್ರಗಳು ಮಾತ್ರ ಎನ್ನುವ ಪರಿಸ್ಥಿತಿ ಇತ್ತು. ಇವತ್ತು ಭಾರತದಲ್ಲಿ ತಯಾರಾದ ಚಲನಚಿತ್ರಗಳಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಬಹುಶಃ ಮೊಟ್ಟಮೊದಲು ಭಾರತೀಯ ಚಿತ್ರಗಳನ್ನು ನಮ್ಮ ದೇಶದಿಂದ ಹೊರಗೆ ಜನಪ್ರಿಯಗೊಳಿಸಿದ ಕೀರ್ತಿ ರಾಜ್ ಕಪೂರ್ ಅವರಿಗೆ ಸಲ್ಲುತ್ತದೆ. ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ಅವರು ತಯಾರಿಸಿದ ಕಪ್ಪು-ಬಿಳುಪು ಚಿತ್ರಗಳು ರಷ್ಯಾ ಮತ್ತು ಜಪಾನ್ ದೇಶಗಳಲ್ಲಿ ಜನಪ್ರಿಯವಾದವು. ಆವಾರಾ ಚಿತ್ರವಂತೂ ಅದ್ಭುತ ಯಶಸ್ಸು ಗಳಿಸಿತು. ನೆಹರೂ ಅವರ ಸರ್ಕಾರ ರಷ್ಯನ್ ದೇಶದೊಂದಿಗೆ ವಿಶೇಷ ಸಂಬಂಧ ಹೊದಿದ್ದು ಕೂಡಾ ಇದಕ್ಕೆ ಕಾರಣವಾಗಿರಬಹುದು. ರಷ್ಯನ್ ಮತ್ತು ಜಪಾನ್ ದೇಶದ ಜನರಿಗೆ ರಾಜ್ ಕಪೂರ್ ಅವರ ಮುಗ್ಧ ಪಾತ್ರಗಳ ಅಭಿನಯ ಹಿಡಿಸಿತು. ಮುಂದೆ "ಮೇರಾ ನಾಮ್ ಜೋಕರ್" ಎಂಬ ರಾಜ್ ಕಪೂರ್ ಚಿತ್ರದಲ್ಲಿ ಒಬ್ಬ ರಷ್ಯನ್ ನಟಿ ನಟಿಸಿದರು ಕೂಡಾ. ಸಮಾಜದ ಅನ್ಯಾಯಗಳಿಗೆ ಸಿಕ್ಕಿ ಹಾಕಿಕೊಳ್ಳುವ ಒಬ್ಬ ಮುಗ್ಧ ಯುವಕನ ಪಾತ್ರಗಳಲ್ಲಿ  ರಾಜ್ ಕಪೂರ್ ಎಲ್ಲರ ಸಹಾನುಭೂತಿ ...