ಪೋಸ್ಟ್‌ಗಳು

Riddle ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಮೀರ್ ಖುಸ್ರೋ ಅವರ ಒಗಟುಗಳು - 2

ಇಮೇಜ್
ಮೂಲ - ಅಮೀರ್ ಖುಸ್ರೋ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕಪ್ಪು ಮೈಬಣ್ಣ, ಹಲ್ಲುಗಳು ಹಲವು, ಬಳುಕುವಳು ತೆಳ್ಳನೆಯ ನಾರಿ | ಎರಡೂ ಕೈಗಳಿಂದ ಎಳೆಯುತ್ತ ಖುಸ್ರೋ ಬಾ ಎಂದು ಕರೆವ ವೈಯ್ಯಾರಿ  || (ಒಗಟು) ಒಬ್ಬಳು ನಾರಿಗೆ ಇಬ್ಬರು ಮಕ್ಕಳು, ಒಬ್ಬನು ಇನ್ನೊಬ್ಬನ ತದ್ರೂಪು | ಚಲಿಸುವನೊಬ್ಬ, ನಿಂತವನೊಬ್ಬ, ಜೊತೆಗಿರುವರು ಆದರೂ ಇಬ್ಬರೂ || (ಒಗಟು) ನಿಂತಿರುವಳು ಮೂಲೆಯಲ್ಲಿ ಒಂಟಿಕಾಲಿನ ಸುಂದರಿ! ಯಾರು ಏನೆಂದರೆ ನಿಂತಿದ್ದಾಳೆ ಮುದುರಿ! ಒಮ್ಮೆಲೇ ಬದಲಾಯಿತು ಏಕವಳ ಭಾವ? ಎಂಟು ಕೈ ಎತ್ತಿ ಮೇಲೆ ನಗುವಳಲ್ಲ, ಭಾವ! ಯಾರಿವಳು ಹೇಳು ಯಾರಿವಳು ಚೆಲುವೆ? ಎಲ್ಲರಿಗೂ ಬೇಕಾದ ಅರಳು ಮಲ್ಲಿಗೆ ಹೂವೆ! (ಒಗಟು) ಬಾಲಕನಾಗಿದ್ದಾಗ ಎಲ್ಲರ ಕಣ್ಣ ಬೆಳಕಾಗಿದ್ದ , ದೊಡ್ಡವನಾದಾಗ ಯಾವುದಕ್ಕೂ ನಾಲಾಯಕ್ಕು ಬಿಡಿಸು ಖುಸ್ರೋ ಕೇಳುವ ಈ ಒಗಟು ಇಲ್ಲದಿದ್ದರೆ ಎದ್ದು ಊರು ಬಿಡು ಹೊರಟು (ಒಗಟು) ಹೀಗೊಬ್ಬ ಮಾಂತ್ರಿಕನು ಮಾಡಿದನು ಜಾದೂ, ಗಿಳಿಯೊಂದು ಹಾಕಿದನು ಪಂಜರದ ಬಾಯ್ ತೆಗೆದು ಹಸಿರಾಗಿ ಹೋದದ್ದು ಕೆಂಪಾಗಿ ಬಂತು, ರಹಸ್ಯವೇನಿದು ತರಬಲ್ಲೆಯಾ ಅಗೆದು? (ಒಗಟು) ಇಪ್ಪತ್ತು ಜನರ ತಲೆ ಕಡಿದು ಹಾಕಿದರೂ ಕೊಲೆಯೊಂದೂ ಆಗಲಿಲ್ಲ, ಬೀಳಲಿಲ್ಲ ನೆತ್ತರು (ಒಗಟು) ನಲ್ಲನೊಂದಿಗೆ ನಾನು ಹೂಡುವೆನು ಪಂಥ, ಪ್ರೆಮದಾಟವದು ಅಲ್ಲ ಅಂತಿಂಥ | ಗೆದ್ದರೆ ಅವರು ನನ್ನವರು ಮತ್ತು ಸೋತರೆ ನಾನು ಅವರ ಸ್ವತ್ತು ||

ಅಮೀರ್ ಖುಸ್ರೋನ ಒಗಟುಗಳು

ಇಮೇಜ್
ಮೂಲ - ಅಮೀರ್ ಖುಸ್ರೋ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ रात समय वह मेरे आवे। भोर भये वह घर उठि जावे॥ यह अचरज है सबसे न्यारा। ऐ सखि साजन? ना सखि तारा॥ ಸರಿರಾತ್ರಿ ನನ್ನ ಮನೆಗೆ ಬರುತಾರೆ | ಬೆಳಗಾಗ ಮೇಲೆದ್ದು ಹೊರಟುಬಿಡುತಾರೆ || ಜಾಣರಾದವರು ಈ ರಹಸ್ಯ ಬಿಡಿಸುತಾರೆ  | ಗೆಳೆಯನೇನೇ ಸಖೀ? ಅಲ್ಲವೇ, ತಾರೆ|| नंगे पाँव फिरन नहिं देत। पाँव से मिट्टी लगन नहिं देत॥ पाँव का चूमा लेत निपूता। ऐ सखि साजन? ना सखि जूता॥ ಬರಿಗಾಲಿನಲ್ಲಿ ನಡೆಯಲು ಬಿಡುವುದಿಲ್ಲ | ಮಣ್ಣು ಕಾಲಿಗೆ ಹತ್ತಲು ಬಿಡುವುದಿಲ್ಲ || ಮಾತುಮಾತಿಗೆ ಪಾದ ಚುಂಬಿಸುವ ಮತ್ತು | ಗೆಳೆಯನೇನೇ ಸಖೀ? ಅಲ್ಲ, ಮುಳ್ಳೊತ್ತು || वह आवे तब शादी होय। उस बिन दूजा और न कोय॥ मीठे लागें वाके बोल। ऐ सखि साजन? ना सखि ढोल॥ ಬರುವನು   ಅವನು ಮದುವೆಯ ದಿವಸ |  ಅಂದಿಲ್ಲ  ಬೇರಾರಿಗೂ ಒಳಗೆ  ಪ್ರವೇಶ || ಅವನು ನುಡಿದರೆ ಎಷ್ಟು ಸುಖಿಸುವನು ಕೇಳುಗ | ಗೆಳೆಯನೇನೇ ಸಖಿ? ಅಲ್ಲವೇ, ಓಲಗ || जब माँगू तब जल भरि लावे। मेरे मन की तपन बुझावे॥ मन का भारी तन का छोटा। ऐ सखि साजन? ना सखि लोटा॥ ಕೇಳಿದಾಗ ನೀರು ತುಂಬಿ ತರುತಾರೆ | ಮನದ ಬೇಗೆಗೆ ತಂಪೆರೆಯುತಾರೆ || ಮನಸು ದೊಡ್ಡದು, ಅವರ ಮೂರ್ತಿಯಷ್ಟೆ ಚಿಕ್ಕದು  | ಗೆಳೆಯನೇನೇ ಸ...