ಕಾಬುಲ್
ಕವಿತೆ ಓದುವ ಮುನ್ನ: ಶಕೀಲಾ ಅಜೀಜ್ ಜಾದಾ (1964-) ಕಾಬುಲ್ ನಗರದಲ್ಲಿ ಹುಟ್ಟಿಬೆಳೆದರೂ ಅಫ್ಘಾನಿಸ್ತಾನದ ಸಂಘರ್ಷದ ಕಾರಣ ನೆದರ್ಲ್ಯಾಂಡ್ಸ್ ದೇಶಕ್ಕೆ ಹೋಗಿ ನೆಲೆಸಬೇಕಾಯಿತು. ಮೊದಲು ರಷ್ಯಾ, ಅನಂತರ ತಮ್ಮದೇ ದೇಶದ ಉಗ್ರರ ಕೈಗೆ ಸಿಕ್ಕಿ ಅಫ್ಘಾನಿಸ್ತಾನದ ಕ್ರಮಬದ್ಧ ವಿನಾಶವನ್ನು ಅನೇಕ ಕವಿಗಳು, ಕತೆಗಾರರು, ಕಾದಂಬರಿಕಾರರು ಚಿತ್ರಿಸಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಕಾಬುಲ್ ನಗರದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದಾಗ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಳ್ಳುತ್ತಾರೆ. ಬಾಲಾ ಹಿಸ್ಸಾರ್ ಎಂಬುದು ಕಾಬುಲ್ ನಗರದಲ್ಲಿರುವ ಗುಡ್ಡದ ಮೇಲಿರುವ ಕೋಟೆ. ಇದರ ಬುಡದಲ್ಲಿ ಸ್ಮಶಾನವಿದೆ. ಈ ಕವಿತೆಯಲ್ಲಿ "ಬಲತೋಳಿನ ದೇವತೆ" ಎಂಬುದಕ್ಕೆ ಎರಡು ಅರ್ಥಗಳಿರಬಹುದು. ಇಂಥ ದೇವತೆಗಳು ಭುಜಗಳ ಮೇಲೆ ಸದಾ ಕುಳಿತಿದ್ದು ನಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ಗಮನಿಸುತ್ತಿರುತ್ತವೆ ಎಂದು ನಂಬುತ್ತಾರೆ. ಕಾರ್ಟೂನ್ ಚಿತ್ರಗಳಲ್ಲಿ ಇಂಥ ಚಿತ್ರಗಳನ್ನು ಬಳಸುವುದನ್ನು ಕೂಡಾ ನಾವು ನೋಡುತ್ತೇವೆ. ಬೇಸಗೆಯ ರಜೆಗಳಲ್ಲಿ ಮನೆಯಲ್ಲಿದ್ದಾಗ ಮಕ್ಕಳು ಇಂಥ ಕಾರ್ಟೂನ್ ಚಿತ್ರಗಳನ್ನು ನೋಡುವ ಬಗ್ಗೆ ಕೂಡಾ ಲೇಖಕಿ ಉಲ್ಲೇಖಿಸುತ್ತಿರಬಹುದು. ಮೂಲ : ಶಕೀಲಾ ಅಜೀಜ್ ಜಾದಾ ಕನ್ನಡಕ್ಕೆ : ಸಿ. ಪಿ. ರವಿಕುಮಾರ್ ಕಾಬುಲ್ ಗಾಗಿ ನನ್ನ ಎದೆ ಮಿಡಿಯುವುದು ಬಾಲಾ ಹಿಸ್ಸಾರ್ ಕೋಟೆಯ ಇಳಿಜಾರುಗಳಿಗಾಗಿ ಅ...