ಪೋಸ್ಟ್‌ಗಳು

Peace ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೀನು ಬಂದರೆ ಮೆತ್ತಗೆ

ಇಮೇಜ್
 ನೀನು ಬಂದರೆ ಮೆತ್ತಗೆ ಮೂಲ : ಆಡ್ರೆ ಲಾರ್ಡ್ ಕನ್ನಡಕ್ಕೆ : ಸಿ ಪಿ ರವಿಕುಮಾರ್ ನೀನು ಬಂದರೆ ಹೆಜ್ಜೆ ಇಡುತ್ತ ಮೆತ್ತಗೆ ಮರದಲ್ಲಿ ಗಾಳಿ ನುಸುಳಿ ಬರುವ ಹಾಗೆ ನನಗೆ ಕೇಳುವುದೆಲ್ಲ ನಿನಗೂ ಕೇಳಿಸೀತು  ಶೋಕವು ಕಂಡಿದ್ದೆಲ್ಲ ನಿನಗೂ ಕಂಡೀತು. ನೀನು ಬಂದರೆ ಹೆಜ್ಜೆ ಇಡುತ್ತ ಹಗುರವಾಗಿ ಹುಲ್ಲಿನ ಮೇಲೆ ಸುರಿವ ಮಂಜಿನ ಹಾಗೆ ನಿನ್ನನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಕೇಳದೇ ನಿನ್ನನ್ನು ಬೇರೇನೂ ಪ್ರಶ್ನೆ. ಕೂಡಬಹುದು ನನ್ನ ಬಳಿ ನೀನು ಉಸಿರಿನಂತೆ ನಿಶ್ಶಬ್ದವಾಗಿ. ಸತ್ತು ಬಿದ್ದವರಿಗೆ ಮಾತ್ರ ಉಂಟು ಸಾವನ್ನು ನೆನೆಸಿಕೊಳ್ಳುವ ಶಕ್ತಿ. ನಾನು ಮೌನ ವಹಿಸುತ್ತೇನೆ ನೀನು ಬಂದಾಗ ನಿನಗೆ ಚುಚ್ಚುವುದಿಲ್ಲ ಮಾತಿನ ಕಟಕಿ. ಏಕೆ ಹೇಗೆಂದೆಲ್ಲ ಪ್ರಶ್ನಿಸುವುದಿಲ್ಲ ಈಗ. ಏನು ಮಾಡುವೆಯೆಂದು ಕೇಳುವುದಿಲ್ಲ. ನಾವು ಕುಳಿತಿರೋಣ  ಇಲ್ಲಿ ಮೌನವಾಗಿ ಎರಡು ವಿಭಿನ್ನ ಸಂವತ್ಸರಗಳ ಕೆಳಗೆ. ನಮ್ಮ ನಡುವಣ ಈ ಫಲವತ್ತಾದ ಮಣ್ಣು ನಮ್ಮ ಕಣ್ಣೀರನ್ನು ಹೀರುವುದು ಒಳಗೆ.

ಸೂರ್ಯಾಸ್ತ

ಇಮೇಜ್
   ಮೂಲ: ಎಲ್ಲಿಸ್ ನೈಟಿಂಗೇಲ್  ಕನ್ನಡಕ್ಕೆ : ಸಿ ಪಿ ರವಿಕುಮಾರ್ ಕುಳಿತಿರುವೆ ಒಂದು ಹಳೆಯ ಕಲ್ಲುಗೋಡೆಯ ಮೇಲೆ ನೀವು ಅಂದುಕೊಂಡಷ್ಟೇನೂ ಕೊರೆಯುತ್ತಿಲ್ಲ ತಣ್ಣಗೆ ಇಲ್ಲಿಂದ ಕಾಣುತ್ತಿದೆ ಗುಲಾಬಿ ಬಣ್ಣದ ಗಗನ ಮತ್ತು ಅಲ್ಲಿ ಸೂರ್ಯನು ಮುಳುಗುತ್ತಿರುವುದು ಮೆಲ್ಲಗೆ. ಶಾಂತ ಸಾಗರದಂತೆ ಗಾಳಿ ತೊನೆಯುತ್ತಿದೆ ಮೆಲ್ಲಗೆ ತುಂಬಿಕೊಂಡು ತನ್ನಲ್ಲಿ ಮೃದುವಾದ ಕಲಕಲ ನನಗಂತೂ ಹೊಳೆಯುತ್ತಿಲ್ಲ ಇದಕ್ಕಿಂತ ಉತ್ತಮ ಮಾರ್ಗ ವ್ಯರ್ಥಗೊಳಿಸಲು ನನಗೆ ಸಿಕ್ಕ ಕಾಲ.

ಕಾಡುಜೀವಿಗಳ ಶಾಂತಿ

ಇಮೇಜ್
  ಮೂಲ: ವೆಂಡೆಲ್ ಬೆರಿ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಜಗತ್ತಿಗಾಗಿ ಹತಾಶೆ ಬೆಳೆಬೆಳೆದು ಆಕ್ರಮಿಸಿಕೊಂಡಾಗ ಮನವನ್ನು ಏನಾದೀತೋ ನನ್ನ ಬದುಕು, ಮಕ್ಕಳ ಬದುಕೆಂಬ ಭಯಕ್ಕೆ ಇರುಳಿನಲ್ಲಿ ಸಣ್ಣ ಸದ್ದಿಗೂ ಎಚ್ಚರವಾದಾಗ ನಾನು ಮೇಲೆದ್ದು ಹೋಗಿ ಅಡ್ಡಾಗುತ್ತೇನೆ  ಕಾಡು ಬಾತುಕೋಳಿ ತನ್ನ ಚೆಲುವನ್ನು ಹೊದ್ದು ಮಲಗಿರುತ್ತದಲ್ಲ ನೀರಿನಲ್ಲಿ ಮತ್ತು  ಕೊಕ್ಕರೆ ಮೀನು ಹಿಡಿಯುತ್ತದಲ್ಲ, ಅಲ್ಲಿ. ಅಲ್ಲಿ ನಾನು ಅನುಭವಿಸುತ್ತೇನೆ ಕಾಡುಜೀವಿಗಳ ಶಾಂತಿ. ಮುಂಬರುವ ಶೋಕವನ್ನು ನೆನೆದು  ತಳಮಳಗೊಳ್ಳದ ಅವುಗಳ ಸ್ಥಿತಿ. ಸ್ತಬ್ಧ ನೀರಿನ ಉಪಸ್ಥಿತಿಯಲ್ಲಿ ಅರಿವಾಗುತ್ತದೆ ಹಗಲುಗುರುಡು ನಕ್ಷತ್ರಗಳು ಬೆಳಕು ಹಿಡಿದು ಕಾಯುತ್ತಿರುವುದು. ಒಂದಿಷ್ಟು ಹೊತ್ತು  ಜಗತ್ತಿನ ಕೃಪೆಯಲ್ಲಿ ವಿಶ್ರಮಿಸಿದಾಗ ನನಗೆ ದೊರೆಯುತ್ತದೆ ಮುಕ್ತಿ. (ಮುಂದಿನ ಕ್ಷಣವೇ  ಹುಲಿ ಸಿಂಹ ತೋಳ ನರಿ ಮುಂತಾದ ಯಾವುದೋ ಪ್ರಾಣಿ ತನ್ನನ್ನು ಕೊಂದು ತಿನ್ನಬಹುದೆಂಬ ಅರಿವಿದ್ದರೂ ಶಾಂತಿಯಿಂದ ಬದುಕುವ ಜಿಂಕೆ ಮುಂತಾದ ಪ್ರಾಣಿಗಳಿಗೆ ಯಾವ ಆತಂಕವೂ ಇಲ್ಲ. ಅದನ್ನೇ ಕವಿ ಕಾಡು ಜೀವಿಗಳ ಶಾಂತಿ ಎನ್ನುತ್ತಾನೆ.)

ಶಾಂತಿ ನಿಕೇತನ

ಇಮೇಜ್
ನೇರಳೆ ಬಣ್ಣದ ಹೂವಿನ ಹೊದರು ನೀಲಾಕಾಶವು ಹಿನ್ನೆಲೆಯಲ್ಲಿ ಹಸಿರುಹುಲ್ಲು, ಮಣ್ಣಿನ ಕಿರುದಾರಿ ಹಳದಿ ಹೂವುಗಳ ರತ್ನಗಂಬಳಿ ಕೇಳಿಸಿತೇ ಮರಗಳ ಮರೆಯಲ್ಲಿ ಯಾವುದೋ ಹಕ್ಕಿಯ ಪ್ರೇಮಾರ್ತ ಕರೆ? ಎಸೆದ ಕಲ್ಲಿಗೆ  ನಗೆತರಂಗ ತರಂಗ ಚಿಮ್ಮಿಸಿ ಮತ್ತೆ ಶಾಂತವಾದಂತೆ ಕೆರೆ ಮತ್ತೆ ನೆಲೆಸುವುದೆಂತೋ ಶಾಂತಿ ಹಾಗೇ ಮರಳಿ ಬರಲಿ ನೆಮ್ಮದಿ ನಮ್ಮ ಬಾಳ್ಗೆ. ಕೊನೆಗೊಳ್ಳಲಿ  ಕೊರೋನಾ ರೋಗರುಜಿನ, ಮತ್ತು ಮಾನವ-ಮಾನವ ದ್ವೇಷ, ರಕ್ತಪಾತ, ಕದನ.

ಶಾಂತಿ

ಇಮೇಜ್
ಕವಿತಾಸ್ವಾದನೆ: ಬೇಕೆಂದರೆ ಮೊದಲು ಕವಿತೆಯನ್ನು ಓದಿ ಆನಂತರ ಈ ಟಿಪ್ಪಣಿಯನ್ನು ಓದಿ.  ಡಯಾನಾ ಆನ್ಫಿಮಿಯಾಡಿ ಜಾರ್ಜಿಯಾ ದೇಶದ ಕವಯಿತ್ರಿ.  ಈ ಕವಿತೆಯನ್ನು ಎರಡು ಸ್ತರಗಳಲ್ಲಿ ನೋಡಬಹುದು.  ಮೊದಲನೆಯದು ವ್ಯಕ್ತಿಗತ ಸ್ತರ. ನಮ್ಮ ಬದುಕಿನಲ್ಲಿ ಶಾಂತಿಯನ್ನು ನಾವು ಅನುಭವಿಸಬೇಕಾದರೂ ನೋವು ಮತ್ತು ಭೀತಿಗಳ ನಡುವೆಯೇ ಎಂಬುದು ಒಂದು ಧ್ವನಿ. ನಾಳೆ ಏನಾಗುತ್ತದೋ ಎಂಬ ಭೀತಿಯಲ್ಲೇ ಇಂದು ಎಲ್ಲರೂ ಬದುಕುತ್ತಿದ್ದೇವೆ. ಇನ್ನೊಂದು ಸ್ತರದಲ್ಲಿಯೂ ಕವಿತೆಯನ್ನು ನೋಡಬಹುದು. ಇದಕ್ಕಾಗಿ ಜಾರ್ಜಿಯಾ ದೇಶದ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ಟರ್ಕಿ, ಆರ್ಮೀನಿಯಾ, ರಷ್ಯಾ ಇವುಗಳನ್ನು ಹೊಂದಿಕೊಂಡಿದೆ ಜಾರ್ಜಿಯಾ.  ಹಿಂದೊಮ್ಮೆ ರಷ್ಯಾ ದೇಶದೊಂದಿಗೆ ಯುದ್ಧದಲ್ಲಿ ಪಾಲ್ಗೊಂಡಿದ್ದ ಜಾರ್ಜಿಯಾಗೆ ಸದಾ ರಷ್ಯಾ ದೇಶದ ಭಯ ಕಾಡುತ್ತಲೇ ಇರುತ್ತದೆ.  ಪೂರ್ವ ಯೂರೋಪಿನಲ್ಲಿದ್ದರೂ ಪಾಶ್ಚಿಮಾತ್ಯ ದೇಶಗಳ ಧೋರಣೆಯನ್ನು ಒಪ್ಪಿಕೊಂಡ ಜಾರ್ಜಿಯಾ ದೇಶದ ಶಾಂತಿಯನ್ನು ಕುರಿತೂ ಲೇಖಕಿ ಬರೆದಿರಬಹುದು.  ಶಾಂತಿ  ಮೂಲ: ಡಯಾನಾ ಆನ್ಫಿಮಿಯಾಡಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಶಾಂತಿ ಎಂಬ ಪದವನ್ನು ನನಗೆ ನಾನೇ  ಹೇಗೆ ಒಗ್ಗಿಸಿಕೊಂಡೆ ಎಂಬುದೇ ಒಂದು ಸೋಜಿಗ ನನಗೆ.  ಕೈಗವಸಿನ ಹಾಗೆ ಎಳೆದುಕೊಂಡೆ ನನ್ನತ್ತ.  ಸ್ಕಾರ್ಫ್ ಹಾಗೆ ಹೊದ್ದು ಸರಿಪಡಿಸಿಕೊಂಡೆ.  ನನ್ನ ಹಾ...