ಪೋಸ್ಟ್‌ಗಳು

ಪರಿಸರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಶ್ವತ್ಥ ಮತ್ತು ಅಸ್ವಸ್ಥ (ಒಂದು ಅತಿಸಣ್ಣಕತೆ)

ಇಮೇಜ್
"ಅಶ್ವತ್ಥ ಮರಕ್ಕೆ ಐದು ರಂಧ್ರ ಕೊರೆದು ವಿಷ ತುಂಬಿದರಂತೆ." ಎಂದು ಮೂಕಜ್ಜಿ ಪೇಪರ್ ಓದಿ ಹೇಳಿದಳು. "ಅಯ್ಯೋ! ಯಾಕಂತೆ?" ಎಂದು ಮೊಮ್ಮಗ ಸುಬ್ಬರಾಯ ಕೇಳಿದ. "ಅದನ್ನು ಬೀಳಿಸುವ ಪ್ರಯತ್ನ. ಒಳಗಿಂದ ಒಳಗೇ ನಾಶವಾಗಿ ಒಣಗಿಹೋದಾಗ ಅದನ್ನು ಬೀಳಿಸಬಹುದು." "ಯಾಕೆ?" "ಕೆಲವರಿಗೆ ಅದರ ಕಟ್ಟಿಗೆಯ ಮೇಲೆ ಕಣ್ಣು. ಕೆಲವರಿಗೆ ಅದು ಬೆಳೆದ ಸ್ಥಳದ ಮೇಲೆ ಕಣ್ಣು. ಕೆಲವರಿಗೆ ಅವರಿಗೇ ಅರ್ಥವಾಗದ ಅಸಹನೆ. ಕೆಲವರಿಗೆ ಯಾವುದೋ ಹಳೆಯ ಸೇಡು. ಕೆಲವರಿಗೆ ಅದರಲ್ಲಿ ನೆಲೆಸಿರುವ ಮಂಗಗಳನ್ನು ಓಡಿಸುವ ಹುಮ್ಮಸ್ಸು." "ಆಯಿತಲ್ಲ, ಈ ಐದು ವಿಷಗಳೇ ಸಾಕಿತ್ತು." "ಇಲ್ಲ, ಸುಬ್ಬ. ಅಶ್ವತ್ಥದ ಮರ ಹಾಗೆಲ್ಲಾ ಸಾಯುವುದಿಲ್ಲ. ನೀನು ನೋಡಿರಬಹುದು. ಅದು ಅಸಾಧ್ಯವೆನ್ನಿಸುವ ಕಡೆಯಲ್ಲೂ ಕುಡಿಯೊಡೆಯುತ್ತದೆ. ಕಟ್ಟಡದ ಆರನೇ ಮಹಡಿಯ ಗೋಡೆಯಲ್ಲೂ ಬೆಳೆಯಲು ಹವಣಿಸುತ್ತದೆ. ಇವರಿಗೆ ಅದನ್ನು ಕೊಲ್ಲುವ ಒತ್ತಾಸೆ ಎಷ್ಟಿದೆಯೋ ಅದರ ಎರಡು ಪಟ್ಟು ಬದುಕುವ ಆಸೆ ಅಶ್ವತ್ಥದ ಮರಕ್ಕಿದೆ. ಅದು ನೂರಾರು ಕಾಲ ಬದುಕುತ್ತದಂತೆ. ಅಶ್ವತ್ಥದ ಮರದ ಕೆಳಗೆ ಹಗಲಲ್ಲಿ ಕುಳಿತರೆ ನಿನಗೆ ಆಕ್ಸಿಜನ್ ಸಿಕ್ಕುತ್ತದೆ. ನಿನ್ನ ಮನಸ್ಸು ನಿರಾಳವಾಗುತ್ತದೆ. ರಾತ್ರಿ ಅದರ ಕೆಳಗೆ ಮಲಗಿದರೆ ಅಲ್ಲಿ ಆಕ್ಸಿಜನ್ ಸಿಕ್ಕದೆ ಭೂತಪ್ರೇತಗಳೂ ಕಂಡಾವು." "ಇದಕ್ಕೇ ಕೆಲವರು ಈ ಮರದಲ್ಲಿ ಭೂತವಿದೆ ಎ...