ಪೋಸ್ಟ್‌ಗಳು

ಲಿಮರಿಕ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೊರೋನಾ ಕೊರೋನಾ - ಭಾಗ ೨ (ಚುಟುಕಗಳು)

ಇಮೇಜ್
ಕನಕಾ  ********* ಪ್ರತಿ ರಾಮನವಮಿಗೆ ಪಾನಕ ತಪ್ಪದೆ ಹಂಚುವಳು ಮಿಸ್ ಕನಕಾ ಈ ಸಲ ಯುಗಾದಿಗೇ ಏನು ಸ್ಫೂರ್ತಿ ಇವಳಿಗೆ ಹಂಚುತಿಹಳು ನೆಟ್ ಮೇಲೆ ಕೊರೋನಾ ಪ್ಯಾನಿಕ ಶಾರ್ವರಿ  ******* ಓ ಸಂವತ್ಸರ ಶಾರ್ವರಿ! ಎಷ್ಟಂತಾ ಮಾಡೋದು ವರಿ? ಕೊರೊನಾ ಕೋವಿಡ್ ಮೂರನೇ ಹಂತ ಮುಗಿಯುವ ಮುನ್ನವೇ ಬಂತೇ ಹಂತಾ ತಿಳಿಸವರಿಗೆ, ವೀ ಆರ್ ಇನ್ ನೋ ಹರಿ! ಬೋರಸ್  ********** ಬಂತು  ಕರೋನಾ ವೈರಸ್ ಮನೇಲಿರಿ ಅಂತ ಕೋರಸ್ ಲಾಕ್ ಡೌನ್ ಅಂತೆ ಕ್ಯಾನ್ಸಲ್ ಸಂತೆ ನ್ಯೂಸ್ ಚಾನೆಲ್ಸ್ ಡೋಂಟ್ ಬೋರಸ್ ಇಳಿಮುಖ  *********** ಎಲ್ಲದರಲ್ಲೂ ಈಗ ಇಳಿಮುಖ ಎಂದು ಬೇಸರಿಸಿದರು ಶ್ರೀಮತಿ ರೇಖಾ ಹಾಕೋದು ಕೇಳಿದ್ದೆ ಲಾಕಪ್ನಲ್ಲಿ ಕೈದಿಗಳ್ನ ಅದಕ್ಕೂ ಸಂಚಕಾರ ತಂತು ಕರೋನಾ ಲಾಕಪ್ ಹೋಗಿ ಲಾಕ್ ಡೌನ್ ಬರಬೇಕಾ? ಮಾರ್ಚ್ ೨೨ - ಸಂಜೆ  *********************** ಸಂಜೆ ಕೇಳಿದೆ  ಇವಳನ್ನು "ಏನು, ತಿಂಡಿ ಮಾಡಿದ್ಯಾ?" ಪಾತ್ರೆ ಕುಕ್ಕುವ ಸದ್ದು! "ಏನೂ ಆಗಲಿಲ್ಲ ತಾನೇ ಸದ್ಯ?" ಮುಂದುವರೆಯಿತು ತಾಲಿ, ಜೊತೆಗೆ ಢಣಢಣಾ ಸದ್ದು ಅಬ್ಬಾ ಏನೋ ವಿಶೇಷವೇ ಇರಬಹುದೆಂದು ಖುದ್ದು ಹೋಗಿ ನೋಡಿದರೆ ಥಾಲೀ ಪೀಟ್ ಎಂಬ ರುಚಿಕರ ಖಾದ್ಯ! ಸಂಕಷ್ಟಿ  ********* ಹೊರಗೆ ಹೋಗಲು ಸಂಕಷ್ಟ ಎದುರಾಗಿ ಮನೆಯಲ್ಲೇ ಗಣಪತಿಯ ಫೋಟೋಗೆ ಎರಗಿ ಅದೂ ಇಲ್ಲದಿದ್ದರೂ ಚಿಂತೆ ಇಲ್ಲ ಎಲ್ಲದಕ್ಕೂ ವಾಟ್ಸಾಪ್ ಇದೆಯಲ್ಲ ಭಜೇಹಂ ಶ್...

ಇನ್ನೂ ಹತ್ತು ಲಿಮರಿಕ್

ಇನ್ನೂ ಹತ್ತು ಲಿಮರಿಕ್  ಸಿ. ಪಿ. ರವಿಕುಮಾರ್  ೧. ಡಬ್! ಹಾಲಿವುಡ್ ಸಿನಿಮಾದಲ್ಲಿ ಹಾರರ್ ದೃಶ್ಯ ಕನ್ನಡಕ್ಕೆ ಅನುವಾದಿಸಿದ ಸ್ಕ್ರೀನ್ ರೈಟರ್ ಶಿಷ್ಯ ಕಟ್ ಎಂದು ಕೂಗಿದರು ನಿರ್ದೇಶಕರು ಒಮ್ಮೆಲೇ "ಎದೆ ಡಬ್ ಡಬ್ ಅಂತಿದೆ ಅಂತ ಬರೀಬಹುದೇನಲೇ? ಡಬ್ಬಿಂಗ್ ಇದೆಯೋ ಇಲ್ವೋ ಮೊದ್ಲು ತಿಳ್ಕೋ ವಿಷ್ಯಾ" ೨. ಅನುವಾದ  ಇದ್ದಳೊಬ್ಬಳು ಅನುರೂಪಾ ಅಂತ ಅಟೆಂಡ್ ಮಾಡಿದಳು ಅನುವಾದ ಕಮ್ಮಟ ಈಗ ಗಂಡನ ಜೊತೆಗೆ ಬರಿಯ ವಾಗ್ವಾದ ಅವನು "ಮಸಾಲೆ" ಎಂದರೆ ಇವಳು "ಬೇಡ, ಸಾದಾ" ಇದು ಅನು-ವಾದ ಕಮ್ಮಟದ ಪುಟ್ಟ ಅಪಘಾತ ೩. ಡಬ್ಬಿ  ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಲೈನು ನಿಂತಿದ್ದನು ಕವಿಯೊಬ್ಬ ಕ್ಯೂನಲ್ಲಿ ತಾನೂ ಸರದಿ ಬಂದಾಗ ತಟ್ಟೆಯಲ್ಲಲ್ಲದೇ ಡಬ್ಬಿಯಲ್ಲೂ ಕೊಂಡೊಯ್ದ ನಾಲಕ್ಕು ಫೇಡೆ "ಡಬ್ಬಿಂಗಿಗೆ ಈಗ ಪರವಾಗಿದೆ ಕಾನೂನು" ೪. ಜಾಹೀರಾತು  ಕುಡಿತದ ಸಮಸ್ಯೆಯೇ? ಚಿಂತಿಸದಿರಿ! ನಮ್ಮಲ್ಲಿ ಪರಿಹಾರವಿದೆ, ಡೋಂಟ್ ವರಿ! ಕೆಳಗೆ ಕೊಟ್ಟಿದೆ ನೋಡಿ ಮೊಬೈಲ್ ಸಂಖ್ಯೆ ವಾರಕ್ಕೆ ಏಳು ದಿನ ಇಪ್ಪತ್ನಾಲಕ್ಕು ಗಂಟೆ ಕಾಲ್ ಮಾಡಿದರೆ ಮನೆಗೇ ಮಾಡುವೆವು ಡೆಲಿವರಿ" ೫. ಸಂತಾ  ಸಂತಾಸಿಂಗ್ ಮನೆಗೆ ಬಂದಾಗ ಬಂತಾ ತನ್ನ ಇಂಗ್ಲಿಷ್ ಸ್ವಲ್ಪ ತೋರಿಸೋಣ ಅಂತಾ "ಐ ಆಮ್ ಸರ್ದಾರ್ ಅಂಡ್ ಶೀ ಈಸ್ ಸರದಾರ್ನೀ ಹೀ ಈಸ್ ಮೈ ಕಿಡ್ ಅಂಡ್ ಶೀ ಈಸ್ ಮೈ ಕಿಡ್ನೀ" ಎಂದು ಹೆಂಡತಿ ಮಕ್ಕಳ ಜೊತೆಗೆ ಹಲ್...

ಲಿಮರಿಕ್ ಅಥವಾ ಸಿಲ್ಲಿಪದ್ಯಗಳು - ೧

(೧) ಮಿಸ್ಟರ್ ಅಂಡ್ ಮಿಸೆಸ್ ಗುಪ್ತ  ವೇಕೇಷನ್ ಸ್ಪಾಟ್ ಐಗುಪ್ತ  ನೋಡ್ತಾ ನೋಡ್ತಾ ಪಿರಮಿಡ್ಡು  ಮಗನಿಗೆ ಹೇಳಿದ್ಲು "ಗುಡ್ಡು! ಇನ್ಮೇಲೆ ಕರೀಬೇಡ ಮಮ್ಮಿ ಅಂತ!" (ಐಗುಪ್ತ = ಈಜಿಪ್ಟ್) (೨) ಕಲಿಯಕ್ ಆಗ್ದೇ Excel ಮಂಜು ಮಾಡ್ದ ಎಗ್ ಸೆಲ್ ಲೆಕ್ದಲ್ ಸಿಕ್ರೂ ಮೊಟ್ಟೆ ಭಾರೀ ಬಿಸಿನೆಸ್ ಕೊಟ್ಟೆ ಅಂತ ಅದ್ರಲ್ಲೇ ಎಕ್ಸೆಲ್ (೩) ಕದ್ಗೊಂಡ್ ಮುದ್ದೆ ಬೆಣ್ಣೆ ತಿಂತಿದ್ದಾಗ ಒಬ್ನೇ  ಯಾರೋ ಬಂದ್ ಹಾಗ್ ಸದ್ದು! ಗಾಬ್ರೀಗ್ ಮುದ್ದೆ ಬಿದ್ದು  ಎತ್ಕೊಂಡ್ ತಿಂತಿದ್ನತೆ ಮಣ್ಣೆ! (೪) ಮುಂಚೆ ಆಗಿದ್ನಲ್ಲ ಸಂತ  ಯಾಕ್ ಆಗ್ ಹೋದ ಸಂತಾ? "ಏ" - ಸಹವಾಸ ದೋಷ ಅಂತ  ನಕ್ ಬಿಟ್ನಂತೆ ಬಂತಾ  ನಿಮಗೂ ನಗು ಬಂತಾ? (೫) ಬ್ರೂಸ್ ಲೀ ತಮ್ಮ ಚಕ್ ಲೀ  ತಿಂತಿದ್ನಂತೆ ಚಕ್ಲೀ  ಆಡ್ತಾ ಇದ್ದಾಗ್ ಕುಸ್ತಿ  ಹಲ್ಲುದುರಿಸ್ ಬಿಡ್ತು ಮುಷ್ಟಿ  ಪಾಪ! ಹಾಕ್ಕೋತಾನೆ ನಕ್ಲಿ