ಆರ್ಕಿಮಿಡೀಸನ ಸಾವು
ಸಿ. ಪಿ. ರವಿಕುಮಾರ್ ("ವಿಚಾರದಲ್ಲಿ ಮುಳುಗಿದ ಆರ್ಕಿಮಿಡೀಸ್" - ಚಿತ್ರ - ಡಾಮಿನಿಕೋ ಫೆಟ್ಟಿ (೧೬೨೦), ಕೃಪೆ - ವಿಕಿಪೀಡಿಯಾ) ಯುರೇಕಾ ಎಂದು ಸ್ನಾನದಿಂದ ಮೇಲೆದ್ದು ಬಂದಾಗ ಅವನಿಗೆ ಮೈಮೇಲೆ ಇರಲಿಲ್ಲ ಪರಿವೆ ತಲೆಯಲ್ಲಿ ಕೊರೆಯುತ್ತಿತ್ತು ಒಂದೇ ಹುಳು ಹೇಗೆ ಬೇರ್ಪಡಿಸುವುದು ಸತ್ಯದಿಂದ ಸುಳ್ಳಿನ ಎಳೆ? ರಾಜನಿಗೆ ಅವನ ಮೇಲೆ ಎಷ್ಟೊಂದು ನಂಬಿಕೆ! ಎತ್ತಿಕೊಟ್ಟಿದ್ದಾನೆ ತಲೆಯ ಮೇಲಿನ ಮುಕುಟ - ಆರ್ಕಿಮಿಡೀಸ್! ನೀನು ಕಂಡುಹಿಡಿಯಬಲ್ಲೆಯಾ ಅಕ್ಕಸಾಲಿಯು ಬಂಗಾರದಲ್ಲಿ ಮಾಡಿರುವನೇ ಬೆರಕೆ ? ಎಷ್ಟು ನೀರು ಹೊರಚೆಲ್ಲುವುದು ತೊಟ್ಟಿಯಿಂದ ನೀರಿನಲ್ಲಿ ಮುಳುಗಿಸಿದಾಗ ಬಂಗಾರದ ಮುಕುಟ? ಮತ್ತು ಎಷ್ಟು ನೀರು ಹೊರಚೆಲ್ಲುವುದೋ ಹಂಸಕ್ಷೀರ ನ್ಯಾಯಕ್ಕೊಡ್ಡಿದ ರಾಜನ ಕಿರೀಟ? ಯುರೇಕಾ ಎಂದು ಮೇಲೆದ್ದು ಬಂದಾಗ ಅವನಿಗೆ ಮೈಮೇಲೆ ಇರಲಿಲ್ಲ ಒಂದಾದರೂ ಅರಿವೆ ಚಕಿತರಾಗಿ ನೋಡಿದರು ಮಹಿಳೆಯರು, ಮಹನೀಯರು ಹುಚ್ಚನಂತೆ ಓಡುವುದು ಮೈಮೇಲೆ ಇಲ್ಲದೆ ಅರಿವೇ ಇಂಥ ಆರ್ಕಿಮಿಡೀಸ್ ಮುಳುಗಿದ್ದಾನೆ ಲೆಕ್ಕದಲ್ಲಿ ಹೊತ್ತಿಕೊಂಡು ಉರಿಯುತ್ತಿದೆ ಸಿರಕ್ಯೂಸ್ ಅತ್ತ ಒಳನುಗ್ಗಿ ಬಂದಿದ್ದಾನೆ ಕತ್ತಿ ಹಿರಿದು ಪಕ್ಕದಲ್ಲಿ ರೋಮನ್ ಸೈನಿಕನೊಬ್ಬ ಏದ...