ಹಳದಿ ಇಟ್ಟಿಗೆಗಳ ರಸ್ತೆ
ಹಳದಿ ಇಟ್ಟಿಗೆಗಳ ರಸ್ತೆ ಮೂಲ ಹಾಡು: ಬರ್ನಾರ್ಡ್ ಟಾಪಿನ್ ಮತ್ತು ಎಲ್ಟನ್ ಜಾನ್ ನೀನು ಬರುವುದು ಯಾವಾಗ? ಯಾವಾಗ ನೀನು ಬಂದಿಳಿಯುವುದು? ನಾನು ಹೊಲದಲ್ಲೇ ಇರಬೇಕಾಗಿತ್ತು ಅಪ್ಪನ ಮಾತು ಕೇಳಬೇಕಾಗಿತ್ತು ನೀನು ನನ್ನನ್ನು ಸದಾಕಾಲ ಹಿಡಿದಿಡಲಾರೆ ನಾನೇನೂ ನಿನಗೆ ಬರೆದುಕೊಟ್ಟಿಲ್ಲ ನಿನ್ನ ಗೆಳೆಯರು ತೆರೆದು ನೋಡಲು ನಾನೊಂದು ಉಡುಗೊರೆಯಲ್ಲ ಈ ಹುಡುಗನದು ಶೋಕಗೀತೆ ಹಾಡುತ್ತಾ ಕೂಡುವ ವಯಸ್ಸಲ್ಲ ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ ನೀನು ಪೆಂಟ್ ಹೌಸಿನಲ್ಲಿ ನನ್ನನ್ನು ನೆಡಲಾರೆ ಇಗೋ ಮರಳುತ್ತಿರುವೆ ನನ್ನ ನೇಗಿಲಿಗೆ. ಮರಳುತ್ತಿರುವೆ ನಾನು ಗೂಬೆಗಳ ಗುಟುರಿಗೆ ಮರಳುತ್ತಿರುವೆ ನಾನು ಕಪ್ಪೆಗಳ ವಟರಿಗೆ ಹಳದಿ ಇಟ್ಟಿಗೆಗಳ ರಸ್ತೆಗಳ ಆಚೆಗಿದೆ ನನ್ನ ಭವಿಷ್ಯವೆಂದು ನಾನು ನಿರ್ಧರಿಸಿರುವೆ. ನೀನು ಏನು ಮಾಡಬಹುದೆಂದು ಯೋಚಿಸುತ್ತೇನೆ. ವಿಮಾನವನ್ನು ಹೊಡೆದು ಉರುಳಿಸುತ್ತೀಯ ತಾನೇ? ಒಂದೆರಡು ಪೆಗ್ ವೋಡ್ಕಾ ಮತ್ತು ಟಾನಿಕ್ ಮತ್ತೆ ಮೇಲೆದ್ದು ನಿಲ್ಲಲು ನಿನಗೆ ಇಷ್ಟು ಸಾಕು ನನ್ನ ಬದಲಿಗೆ ಹಾಕಿಕೊಳ್ಳುವೆ ಯಾರನ್ನೋ ಬೇರೆ ನನ್ನಂಥವರು ಬೇಕಾದಷ್ಟು ಜನ ಸಿಕ್ಕುತ್ತಾರೆ ಬಿಡಿಗಾಸಿಗೂ ಗತಿ ಇಲ್ಲದ ಬೀದಿನಾಯಿಗಳು ನೆಲದ ಮೇಲೆ ಬಿದ್ದ ನಿನ್ನಂಥ ಚೂರುಪಾರನ್ನು ಹುಡುಕುವವರು ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ...