ಪೋಸ್ಟ್‌ಗಳು

Translation of a Gazal ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ

ಇಮೇಜ್
ಮೂಲ - ಮಿರ್ಜಾ ಗಾಲಿಬ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ('ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ'  - ಗಾಲಿಬ್ ಅವರ ಈ ಗಜಲ್ ಅನೇಕ ಗಾಯಕರಿಂದ ಹಾಡಲ್ಪಟ್ಟಿದೆ. ಕರ್ನಾಟಕ ಗಾಯನ ಶೈಲಿಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿಯವರೂ ಇದನ್ನು ಹಾಡಿದ್ದಾರೆ!  ತನ್ನ ಪ್ರೇಮಿಕೆಯಿಂದ ಯಾವುದೋ ಕಾರಣದಿಂದ ಬೇರಾದ ಪ್ರೇಮಿಯೊಬ್ಬನ ಅಳಲು ಈ ಕವಿತೆಯಲ್ಲಿದೆ.) ಸಿಂಧುವಿನಲ್ಲಿ ಕೊನೆಗಾಣುವುದರಲ್ಲಿದೆ ಬಿಂದುವಿನ ಆನಂದ ತಿಂದ ನೋವು ಮಿತಿ ಮೀರಿದಾಗ ಅದೇ ಆಗುತ್ತದೆ ದಿವ್ಯೌಷಧ ಬೀಗ ಮತ್ತದರ ಕೀಲಿಯಂತಾಯಿತಲ್ಲ ನನ್ನ ನಿನ್ನ ಸಂಬಂಧ ಎಲ್ಲ ನೇರವಾಯಿತು ಎನ್ನುವಾಗ ಕಳಚಿ ಬಿದ್ದಿತು ಬಂಧ ಕಷ್ಟಗಳಿಗಿಂತಲೂ ಪರಿಹಾರಗಳಿಂದ  ತತ್ತರಿಸಿದೆ  ಎದೆ  ಗಂಟು ಬಿಡಿಸಲು ಹೋಗಿ ಎಲ್ಲಾ  ಗೋಜಲುಗೋಜಲಾಗಿದೆ  ದೈವವೇ! ಹಿಂಸೆಯಿಂದಲೂ ವಂಚಿತವಾಗುತ್ತಿದೆ  ಮನಸ್ಸು ತನ್ನ  ಆರಾಧಕನ  ಮೇಲೆ ಅವಳಿಗೇಕೆ ಇಷ್ಟೊಂದು ಸಿಟ್ಟು? ಬಿಸಿ ನಿಟ್ಟುಸಿರುಗಳು  ಕಂಬನಿಯ ಸ್ಥಳವನ್ನಾಕ್ರಮಿಸಿದಾಗ ನೀರೂ ಆವಿಯಾಗಬಹುದೆಂದು ನಂಬಿಕೆ ಬಂತು ಆವಾಗ ಮದರಂಗಿ ಚಿತ್ತಾರದ ನಿನ್ನ ಮೃದು ಹಸ್ತಗಳ ನೆನಪು ಎದೆಯಿಂದ ಬೇರ್ಪಡಿಸುವುದಿದೆಯಲ್ಲ, ಕಿತ್ತಂತೆ ಉಗುರು ನಿನ್ನ ಮನೆ ಓಣಿಯನು ತಲುಪಲೊಲ್ಲದ  ಕುಸುಮದ ಗಂಧ ಬೀಸುಗಾಳಿಗೆ ಕಾದು ಕುಳಿತಿದೆ ಏತಕೆ  ಧೂಳಿ...

ಉಪವನ

ಇಮೇಜ್
ಮುಳ್ಳಿನಲ್ಲಿ ಎಂದೂ ಸಿಲುಕಿಲ್ಲವೋ ಯಾರ ಸೆರಗು ಉಪವನದ ರಹಸ್ಯವನ್ನು ಅವರೇನು ಬಲ್ಲರು? ಏಕಾಏಕಿ ನೀನು ಬಂದು ಬಿಡಬೇಡ ನನ್ನೆದುರು ನಿಂತು ಹೋದೀತು ಒಮ್ಮೆಲೇ ನನ್ನ ಉಸಿರು ಹೂವು ಹಾಗಿರಲಿ ಮುಳ್ಳುಗಳನ್ನೇ ಆಯ್ದುಕೊಂಡರೂ ತುಂಬಿಲ್ಲ ಇನ್ನೂ ಹೂವಾಡಿಗನ ಸೆರಗು ಹಕ್ಕಿಗೂಡಿಗೆ ಅದೇಕಷ್ಟು ಅಲಂಕಾರ ಬಿದ್ದುಹೋದರೆ ರೆಂಬೆ ತಾಳದೇ ಭಾರ ಉಪವನದ ಚೆಲುವನ್ನು ಬೆಳಗಿತಲ್ಲ ಕೋಲ್ಮಿಂಚು ಬಂಧುವೋ ಶತ್ರುವೋ ಏನು ಹೇಳುವುದು? ಹೂವುಗಳಿಗಿಂತ ಮುಳ್ಳುಗಳೇ ಎಷ್ಟೋ ಮೇಲು ಮುಳ್ಳು ಉಪವನಕ್ಕಿಟ್ಟ ದೃಷ್ಟಿಬೊಟ್ಟು ಮೂಲ: ಫನಾ ನಿಜಾಮಿ ಕಾನ್ಪುರಿ ಅನುವಾದ: ಸಿ. ಪಿ. ರವಿಕುಮಾರ್

ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ

ಇಮೇಜ್
ಮೂಲ - ಶಕೀಲ್ ಬದಾಯೂನಿ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ (ಐ ಮುಹಬ್ಬತ್ ತೇರೇ ಅಂಜಾಮ್ ಪೇ ರೋನಾ ಆಯಾ ಎಂದು ಪ್ರಾರಂಭವಾಗುವ ಈ ಗಜಲ್ ತುಂಬಾ ಪ್ರಸಿದ್ಧ. ಇದನ್ನು ಬೇಗಂ ಅಖ್ತರ್ ಅವರ ಧ್ವನಿಯಲ್ಲಿ ನೀವು ಕೇಳಬಹುದು ) ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ ಯಾವುದೋ ಮಾತಿಗೆ ನೋವಾಯಿತು, ಕಂಬನಿ ಮಿಡಿದೆ ಹೇಗೋ ಭರವಸೆಯಲ್ಲಿ ಕಳೆಯುತಿತ್ತು ಪ್ರತಿಸಂಜೆ ಇಂದು ಸಂಜೆ ಅದೇನಾಯಿತೋ ಕಂಬನಿ ಮಿಡಿದೆ ಇತ್ತ ಒಲಿಯದ ಭಾಗ್ಯ, ಅತ್ತ ಜನರಿಂದ ಕಡುಟೀಕೆ, ಪ್ರೇಮಪಥದ ಪ್ರತಿ ಹೆಜ್ಜೆಗೂ ಕಂಬನಿ ಮಿಡಿದೆ ಬಂದಿತೇತಕೆ ನನ್ನದೇ ಮಡಿಲಿಗೆ ಪ್ರತಿ ವೇದನೆಯೂ ಹಾ ವಿಧಿಯೇ! ನಿನ್ನ ಅಟ್ಟಹಾಸಕೆ ಕಂಬನಿ ಮಿಡಿದೆ ತೆಗೆಯುವೆ ಏತಕೆ ಪ್ರೀತಿಪ್ರೇಮಗಳ ಮಾತು ನನ್ನೆದೆಯ ಸೋಲನ್ನು ನೆನೆದು ಕಂಬನಿ ಮಿಡಿದೆ

ಒರೆಹಚ್ಚಿ ನೋಡಬಾರದೇನು ನನ್ನನ್ನು

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಒಮ್ಮೆ ಒರೆಹಚ್ಚಿ ನೋಡಬಾರದೇನು ನನ್ನನ್ನು ನನ್ನವಳಾಗು ಇಲ್ಲ ನಿನ್ನವನಾಗಗೊಡು ನನ್ನನ್ನು ತೋಡಿಕೊಳ್ಳುವೆ ಅಂತರಂಗವನ್ನೆ ನಿನ್ನ ಬಳಿ ಆಡಿ ಮಾತೆರಡು, ಕೇಳಲೊಪ್ಪಿದರೆ ಮಾತನ್ನು ಸೋಲುವೆನು ನನ್ನ ಹೃದಯವನ್ನೆ ನಿನ್ನ ಪ್ರೇಮದೊಳು ಗೆಲ್ಲು ನನ್ನನ್ನು, ಒಮ್ಮೆ ಸೋಲಿಸು ಬಾ ನನ್ನನ್ನು

ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ

ಇಮೇಜ್
ಮೂಲ ... ನಂದ್ ಸಾರಸ್ವತ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಡೆಯೋಣ ನಮ್ಮ ಧೋರಣೆಗಳ ಮೇಳವಿಸಿ ನಡೆಯೋಣ ದುಃಖಗಳ ಅಧ್ಯಾಯ ಕೊನೆಗೊಳಿಸಿ ಸಹಿಸಿಕೊಂಡದ್ದು ಸಾಕು ನೋವು ಪರಿತಾಪ ನಡೆ ಮುನ್ನಡೆಯೋಣ ಇವುಗಳನಿಲ್ಲೇ ತ್ಯಜಿಸಿ ಎಷ್ಟು ಸಹಿಸುವುದು ಏಕೆ ಸಹಿಸುವುದು ದುರಾಚಾರ ನಡೆ ಮುಂದೆ ರಕ್ತ ಕಣ್ಣೀರುಗಳನೊರೆಸಿ ನಡುಗುವುದೇಕೆ ಹೇಳು ಜಗದ ಭೀತಿಯಲ್ಲಿನ್ನೂ ಮುನ್ನಡೆಯೋಣ ಜಗದ ಪಂಥವನ್ನು ಸ್ವೀಕರಿಸಿ ಅಲ್ಲಿ ಇಲ್ಲೆಂದು ಎಲ್ಲ ಕಡೆಗೂ ಅಲೆದಾಡಿದೆವು ಬಾ, ನಡೆ, ಗುರಿಸೇರುವ ಮಾರ್ಗವನ್ನು ಅನುಸರಿಸಿ ಸಾಕು ಓದಿದ್ದು ಅಮರಪ್ರೇಮಗಳ ಕಹಿಕಥನ ನಡೆ ಪುಟವನ್ನು ತಿರುವಿ ಹೊಸ ಅಧ್ಯಾಯವನರಸಿ!

ಕಟ್ಟುತ್ತಿರುವೆ ಗಾಜಿನ ಮನೆಯನ್ನು ನಾನು

ಇಮೇಜ್
ಮೂಲ: ಕತೀಲ್ ಶಿಫಾಯಿ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ತತ್ತರಿಸಿಹೋಗಿ ಪರಿಸ್ಥಿತಿಯಿಂದ ನಾನು ಕಟ್ಟುತ್ತಿರುವೆ ಗಾಜಿನ ಮನೆಯನ್ನು ನಾನು ನನ್ನ ಎದೆಗೂಡೊಳಗೆ ಇರುವ ಮೇಣದ ಹೃದಯವನ್ನು ರಕ್ಷಿಸಲು ಸೂರ್ಯನನ್ನು ಹೊದ್ದಿಹೆನು ಕಣ್ಣ ದೃಷ್ಟಿ ಕಳೆದುಕೊಂಡು ಕುರುಡಾದ ಸಮಾಜಕ್ಕೆ ಕನ್ನಡಿಯನ್ನು ತೋರುತ್ತಲಿರುವೆ ನಾನು ಸಖನಿಗೆ ದ್ರೋಹ ಬಗೆಯುತ್ತ ಗುಟ್ಟಾಗಿ ಮುಖದಲ್ಲಿ ಮುಗುಳುನಗೆ ತಂದುಕೊಂಡಿಹೆನು ನೀರು ತುಂಬಿದ ನದಿಯಂತೆ ಜಗತ್ತು ತೀರದೇ ದಾಹ ಮರಳಿ ಬರುತಿಹೆನು ಅಭಾವವಿದೆ ಕಲ್ಲುಗಳಿಗೆ ಶಹರಿನಲಿ ಭಾವಗಳ ಹೊಡೆತಕ್ಕೆ ತತ್ತರಿಸುತಿಹೆನು ಓಗೊಡಬಹುದು ಒಳಗಿನಿಂದ ಉದಾಸೀನತೆ ಬಾಗಿಲು ನನ್ನದೇ ನಾನು ತಟ್ಟುತ್ತಿರುವೆನು ಬರಲಿಲ್ಲ 'ಕತೀಲ್' ಒಬ್ಬನೂ ಗೆಳೆಯ ನೆರಳನ್ನೇ ನಾನು ಆಲಂಗಿಸಿಕೊಳ್ಳುತ್ತಿಹೆನು

ಎಷ್ಟಿರಬಹುದು ಕಾಲದ ವಯಸ್ಸೆಂದು ಕೇಳುವೆಯಾ

ಇಮೇಜ್
ಮೂಲ ... ಸಾಗರ್ ಸಿದ್ದಿಕಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಎಷ್ಟಿರಬಹುದು ಕಾಲದ ವಯಸ್ಸೆಂದು ಕೇಳುವೆಯಾ ಪ್ರಿಯೇ! ನನ್ನ ಉತ್ತರ 'ನಿನ್ನ ಮಿಲನದ ಗಳಿಗೆ' ತಟ್ಟುತಿರುವರು ಯಾರು ರೆಪ್ಪೆಗಳ ಬಾಗಿಲು? ಇರುಚಲಿರಬಹುದು ಸುರಿಯುತ್ತಿಹ ಮಳೆಗೆ ನನಗೆ ಗೊತ್ತಿರಲಿಲ್ಲ ಕೂರಲುಗಿನ ಖಡ್ಗವೂ ವೇಷ ತೊಟ್ಟಿರಬಹುದು ಹೂರೆಂಬೆಯ ಹಾಗೆ ಹಾರಾಡುತ್ತಿವೆ ಹಣೆಯ ಮೇಲೆ ಮುಂಗುರುಳು ಜಗಳವಾಗಿರಬಹುದು ತಂಗಾಳಿಗೆ ತಿಂಗಳಿಗೆ ಪರಲೋಕವನ್ನೇ ಹುಡುಕಿ ಹೊರಟವರೇ ಜೋಕೆ ದಾರಿಯಲ್ಲಿ ಜೀವನವು ಬೆಳೆಸೀತು ಸಲಿಗೆ ಏಕೆ ಬಿಗಿದಿರುವೆ ಕೇಶವನ್ನು ಗಂಟಿನೊಳು ಹೂವೊಂದರ ಜೀವ ಇದ್ದೀತು ಅದರೊಳಗೆ ಏಕೆ ಚಿಂತಿಸುವೆ ಕಾಮನೆಯು ಕಳೆದುಹೋಯ್ತೆಂದು ಅಲ್ಲೇ ಬಿದ್ದಿರಬಹುದು ಅವಳ ಬಾಗಿಲ ಬಳಿಗೆ ಮೃತ್ಯುವೆಂಬ ವಸ್ತು ಇದೆಯಲ್ಲ 'ಸಾಗರ್' ಮತ್ತೊಂದು ಕೊಂಡಿ ಜೀವನದ ಸರಪಳಿಗೆ

ನಮ್ಮ ವಿಳಾಸವಿನ್ನೂ ಅದುವೇ, ಬದಲಾಗಿಲ್ಲ

ಇಮೇಜ್
ಮೂಲ ... ಅಹ್ಮದ್ ಮುಶ್ತಾಕ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಮ್ಮ ವಿಳಾಸವಿನ್ನೂ ಅದುವೇ, ಬದಲಾಗಿಲ್ಲ ಮನೆಯಾಗಲಿ ನಮ್ಮ ಕತೆಯಾಗಲಿ ಬದಲಾಗಿಲ್ಲ ಪಯಣಕ್ಕಾಗಿದೆ ಇನ್ನೂ ಅದುವೇ ಮುರುಕಲು ನಾವೆ ನಿಂತ ನೀರಿನ ನದಿಯೂ ಅದುವೇ, ಬದಲಾಗಿಲ್ಲ ಇದುವೇ ವಧಾಸ್ಥಾನ, ಕರುಣಾಶ್ರಯವೂ ಇದುವೇ ನಾಮಶೇಷವೂ ಇಲ್ಲದ ಹೃದಯವೂ ಬದಲಾಗಿಲ್ಲ ಯಾವ ಗುರಿಗೂ ಕೊಂಡೊಯ್ದು ನಾವು ಹಿಡಿದ ಈ ಹಾದಿ ಇಕ್ಕೆಡೆಗೂ ತೆರೆಯದ ಕಿಟಕಿಯೂ ಬದಲಾಗಿಲ್ಲ ನಮ್ಮ ಬಿಸಿಲಿನಲಿ ನಾವು ಕುಳಿತಿರುವೆವು 'ಮುಶ್ತಾಕ್' ನಮ್ಮ ಹಿಂಬಾಲಿಸುವ ನೆರಳೂ ಬದಲಾಗಿಲ್ಲ |

ನಾ ಸಾಗಿದೆನು ಬದುಕಿನ ಜೊತೆ ರಾಜಿಯಾಗುತಾ

ಇಮೇಜ್
ಮೂಲ ... ಸಾಹಿರ್ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್ (ಹಮ್ ದೋನೋ ಚಿತ್ರದಲ್ಲಿ ಬಳಸಿಕೊಳ್ಳಲಾದ ಈ ಗೀತೆಯನ್ನು ಮೊಹಮ್ಮದ್ ರಫಿ ಹಾಡಿದ್ದಾರೆ. ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ ಎಂದು ಪ್ರಾರಂಭವಾಗುವ ಈ ಹಾಡನ್ನು ತೆರೆಯ ಮೇಲೆ ದೇವ್ ಆನಂದ್ ನಿರೂಪಿಸಿದ್ದಾರೆ.) ನಾ ಸಾಗಿದೆನು ಬದುಕಿನ ಜೊತೆ ರಾಜಿಯಾಗುತಾ! ಚಿಂತೆಯನ್ನು ಧೂಮದಲ್ಲಿ ಮಾಯ ಮಾಡುತಾ! ಹಾಳಾದುದಕ್ಕೆ ವ್ಯರ್ಥ ಶೋಕದಾಚರಣೆಗಳು! ಹಾಳಾದುದಕ್ಕೆ ಸಾಗಿದೆ ನಾ ಹಬ್ಬ ಮಾಡುತಾ ಗುರಿಯೆಂದು ಬಗೆದೆ ನಾನು ಕೈಗೆ ಪ್ರಾಪ್ತವಾದುದು ಸಾಗಿದೆ ನಾ ಕಳೆದುಹೋದುದನ್ನು ಮರೆಯುತ ನೋವು ನಲಿವುಗಳಲ್ಲಿ ಎಲ್ಲಿ ಭೇದವಿಲ್ಲವೋ ನಾ ಸಾಗಿದೆ ಮನವನತ್ತ ಕಡೆಗೆ ದೂಡುತ

ಮತ್ತೆ ಮಾತಾಡುತಿರುವೆ ಹೂಗಳದು

ಇಮೇಜ್
ಮೂಲ ಉರ್ದೂ - ಮಖ್ಡೂಮ್ ಮಹಿಉದ್ದೀನ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಮತ್ತೆ ಮಾತಾಡುತಿರುವೆ ಹೂಗಳದು ರಾತ್ರಿಯೋ ಜಾತ್ರೆ ಇದೋ ಹೂಗಳದು ಹೂವಿನದೇ ಹಾರ, ದಂಡೆ ಹೂಗಳದು ಸಂಜೆಯೂ ಹೂವು ರಾತ್ರಿ ಹೂಗಳದು ನಿನ್ನ ಒಡನಾಟ ಹೂವಿನೊಡನಾಟ ನಿನ್ನ ಮಾತೂನೂ ಮಾತು ಹೂಗಳದು ಸೇರುವುವು ಕಣ್ಣು, ಮದಿರೆ ಸೇರುವುದು, ಸೇರುತಿವೆ  ಜೀವನಾಡಿ  ಹೂಗಳದು  ಯಾರು ಬಿಡುತಾರೆ ಪ್ರಾಣ ಹೂಗಳಿಗೆ  ಯಾರು ಮಾತಾಡುತಾರೆ ಹೂಗಳದು  ಸಹೃದಯವೆಲ್ಲಿ ಎಲ್ಲಿ  ಸಜ್ಜನಿಕೆ  ನಷ್ಟವಾಯ್ತು ಜಗತ್ತು  ಹೂಗಳದು ಸಹಿಸುವರಾರು ಪ್ರೀತಿಯಾರೋಪ  ಕೇಳುವವರಾರು ಮಾತು ಹೂಗಳದು ನಸುಕಿನ ಮಾಟ ನನ್ನ ಕಣ್ಣಲ್ಲಿ  ನಿನ್ನ ಕಣ್ಣಲ್ಲಿ ಇರುಳು ಹೂಗಳದು   ಮುಂದೆಯೂ ಹೂವು ನಗುವುವು ಬಿರಿದು  ನಿತ್ಯ ಉಲ್ಲೇಖ, ಮಾತು  ಹೂಗಳದು ಸೌರಭವ ಬೀರುತಿರುವ ಈ ಹಾಡು  ಪಾಳುಬೀಡಲ್ಲಿ ರಾತ್ರಿ ಹೂಗಳದು

ಒಂದು ಗಜಲ್ ಹಸಿರಾಗಿಸುತ್ತದೆ ಎಲ್ಲ ಹಳೆಯ ನೋವು

ಇಮೇಜ್
ಮೂಲ ... ಶಕೀಲ್ ಜಮಾಲಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಪಾಳು ಬಿದ್ದ ನೆನಪುಗಳೂ ಪಡೆದುಕೊಳ್ಳುತ್ತವೆ ಮರುಜೀವ ಒಂದು ಗಜಲ್ ಹಸಿರಾಗಿಸುತ್ತದೆ ಎಲ್ಲ ಹಳೆಯ ನೋವ ಪಡೆವ ಆಸೆಯಿಂದ ದೂರವಿರುವುದೆ ಮೇಲು ಜೋಕೆ! ಕೊ ರಗೆಂಬ ರೋಗ ಅಂಟಿಕೊಳ್ಳುವುದು ದುಃಖವನು ಹಿಂಬಾಲಿಸಿ ವ್ಯರ್ಥ ಅಲೆಯುವುದೇಕೆ? ತಲುಪುತ್ತದೆ ಈ ಸಂಪತ್ತು ಮನೆಯ ವಿಳಾಸಕ್ಕೇ ಕೂಡಿಟ್ಟುಕೊಳ್ಳಿ ದಿನದ ಗೊಂದಲಗಳನ್ನು ಮನದೊಳಗೆ ಅನೇಕ ನಿಶ್ಯಬ್ದಗಳನ್ನು ರಾತ್ರಿ ಕರೆತರುವುದು ಜೊತೆಗೆ ತುಂಬಿಕೊಳ್ಳಬಹುದು ಸೆರಗನ್ನು ಕಪಟವಂಚನೆಗಳಿಂದ ಕಹಿಯಾದೀತು ತಿನ್ನುವ ಎರಡು ತುತ್ತು ಕೂಡಾ ಸಿನಿಮಾ ಓಡುತ್ತದೆ ಪರದೆಯ ಮೇಲೆ ಸರಿರಾತ್ರಿಯವರೆಗೂ ಸುಪ್ರಭಾತದ ಪ್ರಾರ್ಥನೆ ಸಾಯುತ್ತದೆ ಪ್ರತಿ ಮುಂಜಾವು

ಮುಳ್ಳಿನಲ್ಲೊಂದು ಹೂವು

ಇಮೇಜ್
ಮೂಲ ... ಅಂಜುಮ್ ಲುಧಿಯಾನವಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಮುಳ್ಳಿನಲ್ಲೊಂದು ಹೂವು ಅರಳಿದೆಯಲ್ಲ ನಗುತ್ತಿರುತ್ತದೆ ನಾನು ನೋಡಿದಾಗಲೆಲ್ಲಾ ಗಮನಿಸುತ್ತೇನೆ ಅಲ್ಲೇ ಒಂದು ಹಳದಿ ಎಲೆ ಎಣಿಸುತ್ತಾ ಬಿಡಿಸುತ್ತಿದೆ ಏನೋ ಸಮಸ್ಯೆ ತೋಡಿಕೊಂಡಿತು ಹೂವು ನನ್ನಲ್ಲಿ ದುಃಖ ಗಾಳಿ ಕದ್ದಿತು ನನ್ನ ಗಂಧವನು ಅಕ್ಕಾ ಹರಿವ ನೀರಿನ ತರಂಗಗಳ ಮೇಲೆ ಹುಚ್ಚನಾರೋ ಗೀಚುತಿಹ ವರ್ಣಮಾಲೆ ಚಿನ್ನಬೆಳ್ಳಿಗಳ ಕೋರೈಸುವ ಬೆಳಕಿಗೆ ಎಲ್ಲರೂ ಕಣ್ ನೋಟ ಕಳೆದುಕೊಂಡಿದ್ದಾರೆ ಹಕ್ಕಿಯೊಂದು ಅಂಗಳ ಹೊಕ್ಕು ಎಲ್ಲೆಡೆಗೂ ಓಡಾಡಿ ಅಂಗಳವನು ಮಂಗಳ ಮಾಡಿರುವುದು ನೋಡಿ

ಸಾಲದಲ್ಲಿ ಸ್ವರ್ಗ

ಇಮೇಜ್

ನಡುಕ ಹುಟ್ಟಿಸುವ ಚಳಿ ಇಂದು ಬೆಳಗು

ಇಮೇಜ್

ಅಪರಾಧನಗರಿ

ಇಮೇಜ್

ಸೋಲಿಸು ಬಾ ನನ್ನನ್ನು

ಇಮೇಜ್

ಇಡೀ ರಾತ್ರಿ

ಇಮೇಜ್
ಮೂಲ ಗಜಲ್ - ಮಖದೂಮ್ ಮುಹಿಯುದ್ದೀನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ (ಇದನ್ನು "ಗಮನ್" ಹಿಂದಿ ಚಿತ್ರಕ್ಕಾಗಿ ಛಾಯಾ ಗಂಗೂಲಿ ಹಾಡಿದ್ದಾರೆ .) ಬರುತಲಿತ್ತು ನಿಮ್ಮದೇ ನೆನಪು ಇಡೀ ರಾತ್ರಿ ಒದ್ದೆಕಣ್ಣು ಮುಗುಳುನಗುತಲಿತ್ತು ಇಡೀ ರಾತ್ರಿ ಇಡೀ ರಾತ್ರಿ ಉರಿಯುತಿತ್ತು ನೋವಿನ ಕಿರುಹಣತೆ ದುಃಖದ ಹೊಗೆ ನರಳಿ ನಡುಗುತಿತ್ತು ಇಡೀ ರಾತ್ರಿ ಕೊಳಲ ಕೊರಳಿನಿಂದ ಹೊರಟ ಮಧುರ ನಾದವೊಂದು ನೆನಪಿನಂತೆ ಮರುಕಳಿಸುತಲಿತ್ತು ಇಡೀ ರಾತ್ರಿ ಎದೆಗೆ ಇಳಿಯುತ್ತಿತ್ತು ನೆನಪು ಚಂದ್ರಬಿಂಬದಂತೆ ಬೆಳದಿಂಗಳು ಜಗಮಗಿಸುತ್ತಿತ್ತು ಇಡೀ ರಾತ್ರಿ ಹುಚ್ಚನಂತೆ ಬೀದಿ ಬೀದಿ ಅಲೆಯುತಿದ್ದನಾರೋ ಸದ್ದು ಯಾವುದೋ ಕೇಳುತಿತ್ತು ಇಡೀ ರಾತ್ರಿ

ದುಃಖ ಉಮ್ಮಳಿಸಿತು

ಇಮೇಜ್
ಮೂಲ ಗಜಲ್ - ಶಕೀಲ್  ಬದಾಯೂನಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ದುಃಖ ಉಮ್ಮಳಿಸಿತು ಓ ಪ್ರೇಮವೇ  ನಿನ್ನ ಪ್ರತಿಫಲ ನೆನೆದು ದುಃಖ ಉಮ್ಮಳಿಸಿತು ಯಾಕೋ ನಿನ್ನ  ಹೆಸರನು ನೆನೆದು ಸಂಜೆಗಳು ಕಳೆವುವು ಹಾಗೂ ಹೀಗೂ ಭರವಸೆಗಳ ಮೇಲೆ ಇಂದದೇನಾಯಿತೋ  ದುಃಖ ಉಮ್ಮಳಿಸಿತು ಸಂಜೆಯ ನೆನೆದು ಅತ್ತ   ಭವಿಷ್ಯವು ನಿರ್ನಾಮ, ಇತ್ತ  ಜಗದೊಳೆಲ್ಲರ  ಮುನಿಸು ಪ್ರತಿ ಹೆಜ್ಜೆಗೂ ದುಃಖ ಉಮ್ಮಳಿಸಿತು ಪ್ರೇಮದ ದಾರಿಯ ಹಿಡಿದು ಹಾಳು ಈ ಗೋಳ ಕರೆ ತೊಡರಿತು ನನ್ನದೇ ಕಾಲಿಗೆ ಏಕೆ? ದುಃಖ ಉಮ್ಮಳಿಸಿತು ನನ್ನ ವಿಧಿ ಲಿಖಿತವ  ನೆನೆದು ಯಾರೇ ಹಾಡಲಿ  ಪ್ರೇಮದ ಮಾತನ್ನು ತೆಗೆದು  ದುಃಖ ಉಮ್ಮಳಿಸಿತು ನನ್ನ ಭಗ್ನ ಹೃದಯವ ನೆನೆದು  (ಚಿತ್ರ ಕೃಪೆ - ವಿಕಿಮೀಡಿಯಾ)