ಪೋಸ್ಟ್‌ಗಳು

Poetry ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪದಗಳು ಮಾಂತ್ರಿಕ ದಂಡಗಳು

ಇಮೇಜ್
  ಮೂಲ: ವಾಲ್ಟ್ ವ್ಹಿಟ್ಮನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ನಾವು ಪದ್ಯ ಬರೆಯುವುದು ಮತ್ತು ಓದುವುದು  ಅದೊಂದು ಆಕರ್ಷಕ ಕೆಲಸ ಎಂದಲ್ಲ. ನಾವು ಪದ್ಯ ಬರೆಯುವುದು ಮತ್ತು ಓದುವುದು  ನಾವು ಮನುಷ್ಯವರ್ಗಕ್ಕೆ ಸೇರಿದ ಕಾರಣ. ಭಾವೋದ್ರೇಕ ಮನುಷ್ಯನಿಗೆ ಸಹಜ ಗುಣ. ವೈದ್ಯಕೀಯ, ಇಂಜಿನಿಯರಿಂಗ್, ಲಾಯರಿ ಇವೆಲ್ಲ ಶ್ರೇಷ್ಠ ಕೆಲಸಗಳೇ, ನಿಸ್ಸಂದೇಹ, ಮತ್ತು ಮನುಷ್ಯ ಬದುಕಿರಲು ಇವೆಲ್ಲ ಬೇಕು. ಆದರೆ ಪದ್ಯ, ಪ್ರೇಮ, ಸೌಂದರ್ಯ ಇವೆಲ್ಲ ಮನುಷ್ಯ ಬದುಕಿರಲು ಕಾರಣ.

ಪ್ರಾಸವಿಲ್ಲದ ಕವಿತೆ

ಇಮೇಜ್
  ಇದು ಕೂಡಾ ಅಂಥದ್ದೊಂದು ಕವಿತೆ ಯಾವ ಕವಿತೆಗಳಲ್ಲಿ ಇರುವುದಿಲ್ಲವೋ ಪ್ರಾಸ ಪ್ರಸಿದ್ಧ ಸಾಹಿತ್ಯಕ ಪತ್ರಿಕೆಯಲ್ಲಿ  ಪ್ರಕಟವಾಗುತ್ತವಲ್ಲ ಪ್ರತಿ ಮಾಸ ತಿಂಗಳು. ಇದು ಕೂಡಾ ಅಂಥದೊಂದು ಸಾಚಾ ಕವನ ಅಂಥ ಕವನಗಳಲ್ಲಿ ಪ್ರಾಸವು ತುತ್ತಿನಲ್ಲಿ ಸಿಕ್ಕ ಕಲ್ಲು ಗಂಭೀರವಾದದ್ದನ್ನು ಹೇಳುತ್ತಿರುವಾಗ ಪ್ರಾಸಪದ ಕಟಂ ಎಂದು ಎದುರಾಗಿ ಹೆದರುವುದು ಹಲ್ಲು ದಂತ. ನೋಡಿ ಪ್ರಾಸವು ಬಹಳ ಅಗ್ಗದ ಸರಕು ಪ್ರಾಸಬದ್ಧ ಕವಿತೆಗಳಿಗೆ ಸ್ವಲ್ಪ ತೂಕ ಕಡಿಮೆ. ಪ್ರಾಸಕ್ಕೆ ಕಟ್ಟುಬಿದ್ದರೆ ಕವಿತೆಯಲ್ಲಿ ಹೇಗಿದ್ದೀತು ಸ್ವೋಪಜ್ಞತೆ, ಅಸ್ಮಿತೆ ಮತ್ತು ಪ್ರೌಢಿಮೆ ಕಲಾತ್ಮಕ ಅಭಿವ್ಯಕ್ತಿ. ಇದು ಕೂಡಾ ಅಂಥದೊಂದು ಕವಿತೆ, ಯಾವುದು ಮನುಷ್ಯನ ಸ್ಥಿತಿಯನ್ನು ಕುರಿತು ಏನಾದರೂ ಗಂಭೀರವಾದವನ್ನು ಹೇಳಲು ಹೊರಟು ಒಮ್ಮೆಲೇ ಏಕಾಏಕಿ ಕೊನೆಗೊಳ್ಳುತ್ತದಲ್ಲ, ಅಂಥದ್ದು. ಮೂಲ : ಬ್ರಯಾನ್  ಬಿಲ್ಸ್ಟನ್  ಕನ್ನಡಕ್ಕೆ : ಸಿ ಪಿ ರವಿಕುಮಾರ್ 

ಕವಿತೆಯ ಆರಂಭ

ಇಮೇಜ್
ಕವಿತೆ ಪ್ರಾರಂಭವಾಗುವುದು ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡ  ಅನುಭವದಲ್ಲಿ ದೂರವಿದ್ದಾಗ ಕಾಡುವ ಮನೆಯ ನೆನಪಿನಲ್ಲಿ ಅಥವಾ ವಿರಹದ ಜ್ವರದಲ್ಲಿ. ಹೊರಬರಲು ತವಕಿಸುವ ಭಾವನೆ, ಕವಿತೆ. ಕೃತಾರ್ಥ ಭಾವನೆಯ ಶೋಧನೆ, ಕವಿತೆ. ಭಾವನೆಗೆ ಸಿಕ್ಕಿದಾಗ ಅದರ ಆಲೋಚನೆ  ಮತ್ತು ಆಲೋಚನೆಗೆ ದಕ್ಕಿದಾಗ ಮಾತು ಆಗ ಕವಿತೆಗೆ ದೊರಕುವುದು ಪೂರ್ಣತೆ. ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್

ಕಾವ್ಯಕಲೆಯ ಮೇಲೊಂದು ಟಿಪ್ಪಣಿ

ಇಮೇಜ್
ಮೂಲ: ಡೈಲಾನ್ ಥಾಮಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕನಸಿನಲ್ಲೂ ನಾನು ಎಣಿಸಿರಲಿಲ್ಲ: ಪುಸ್ತಕಗಳ ಹೊದ್ದಿಕೆಗಳ ನಡುವಣ ಜಗತ್ತಿನಲ್ಲಿ  ನಡೆಯುತ್ತಿರಬಹುದು ಏನೆಲ್ಲ, ಪದಗಳ ಉಷ್ಣ-ಶೈತ್ಯ ಬಿರುಗಾಳಿಗಳು, ಅದೆಂಥ ಪರಮಶಾಂತಿ, ಅದೆಂಥ ಗಟ್ಟಿಯಾದ ನಗು, ಇನ್ನೂ ಇಂಥವೇ ಮತ್ತು ಕಣ್ಣುಕುಕ್ಕುವ ಬೆಳಕು ಪುಟಗಳ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ, ಚೂರುಚೂರಾಗಿ ಪದ, ಪದ, ಮತ್ತು ಇನ್ನಷ್ಟು ಪದಗಳಾಗಿ ಪ್ರತಿಯೊಂದೂ ಪಡೆದುಕೊಂಡು ಅಮರತ್ವ ಬಾಳುತ್ತಾ ಅನಂತಕಾಲಕ್ಕೂ, ಪ್ರತಿಯೊಂದಕ್ಕೂ ತನ್ನದೇ ಆನಂದ, ವೈಭೋಗ,ವೈಚಿತ್ರ್ಯ,ಬೆಳಕು.

ಕವಿತಾವಾಚನಗಳು (ಚಾರ್ಲ್ಸ್ ಬ್ಯುಕೋವ್ಸ್ಕಿ)

ಇಮೇಜ್
 ಕವಿತಾವಾಚನಗಳು ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ಕವಿತಾವಾಚನಗಳಿಗಿಂತಲೂ ಹ್ಯಾಪಮೋರೆಯ ವಸ್ತುಗಳು ಇಲ್ಲವೇನೋ. ಗುಂಪಣ್ಣ ಮತ್ತು ಗುಂಪಕ್ಕಗಳು ಒಂದೆಡೆ ಸೇರಿ ವಾರವಾರವೂ ತಿಂಗಳು ತಿಂಗಳೂ ವರ್ಷವರ್ಷವೂ ವಯಸ್ಸಿನಲ್ಲಿ ದೊಡ್ಡವರಾಗುತ್ತಾ ಸಣ್ಣ ಸಭಿಕಸಮೂಹಕ್ಕೆ ಓದುತ್ತಾ ತಮ್ಮ ಮೇಧಾವೀ ವ್ಯಕ್ತಿತ್ವವನ್ನು ಒಂದುದಿನ  ಗುರುತಿಸಲಾಗುವುದೆಂದು ಇನ್ನೂ ಆಸೆ ಇಟ್ಟುಕೊಂಡವರು ಧ್ವನಿಮುದ್ರಿಕೆ ಕ್ಯಾಸೆಟ್ ಇತ್ಯಾದಿ ಮಾಡುತ್ತಾ ಚಪ್ಪಾಳೆಗಾಗಿ ಕಾಯುತ್ತಾ ಇವರು ಓದುವುದು ಪರಸ್ಪರರಿಗಾಗಿ ಇವರು ಯಾರಿಗೂ ಸಿಕ್ಕಿಲ್ಲ ನ್ಯೂಯಾರ್ಕಿನ ಯಾವ ಪ್ರಕಾಶಕ ಅಥವಾ ಮೈಲುಗಳ ದೂರದಲ್ಲೂ ಬೇರೊಬ್ಬ. ಆದರೂ ಅವರು ಓದಿದ್ದೂ ಓದಿದ್ದೇ ಅಮೆರಿಕದ ಕಾವ್ಯಬಿಲಗಳಲ್ಲಿ ಎಂದೂ ಧೃತಿಗೆಡದೆ. ಅವರಿಗೆ ಎಂದೂ ಸಂದೇಹ ಬಂದಿಲ್ಲ ತಮ್ಮ ಪ್ರತಿಭೆ ತೀರಾ ತೆಳುವಿರಬಹುದು ಕಣ್ಣಿಗೆ ಕಾಣಿಸದಷ್ಟು ಎಂದು. ಓದಿಯೇ ಓದುವರು ಅಮ್ಮಂದಿರ ಮುಂದೆ ಅಕ್ಕಂದಿರ ಮುಂದೆ ಗಂಡಂದಿರ ಮುಂದೆ ಹೆಂಡತಿಯರ ಮುಂದೆ ಗೆಳೆಯಗೆಳತಿಯರ ಮುಂದೆ ಒಡನಾಡಿ ಕವಿಗಳ ಮುಂದೆ ಮತ್ತು ಎಲ್ಲಿಂದಲೋ ಹೇಗೋ ಇತ್ತ ಅಡ್ಡಾಡುತ್ತಾ ಬಂದ ಒಂದಿಬ್ಬರು ಅಡನಾಡಿಗಳ ಮುಂದೆ. ನನಗೆ ನಾಚಿಕೆಯಾಗುತ್ತದೆ ಇವರನ್ನು ಕಂಡು ಇವರು ಒಬ್ಬರಿನ್ನೊಬ್ಬರ ಬೆನ್ನು ತಟ್ಟುವುದನ್ನು ಕಂಡು ಇವರ ತೊದಲುವ ಅಸ್ಮಿತೆಯನ್ನು ಕಂಡು ಇವರ ಧೈರ್ಯಗೇಡಿತನವನ್ನು ಕಂಡು. ಇವರು ನಮ್ಮ ಸೃಜನಶೀಲರಾದರೆ ದಯವಿಟ್ಟು ಬೇರೆ ಯಾರಾದರನ್...

ನಾನು ಓದಿದ ಕವಿತೆ

ನಾನು ಓದಿದ ಮತ್ತು ನನಗೆ ಇಷ್ಟವಾದ ಕವಿತೆಗಳನ್ನು ಹಂಚಿಕೊಳ್ಳಲು ನಾನೊಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದೇನೆ.  ಈಗ ಈ ಚಾನೆಲಿನಲ್ಲಿ ಲಭ್ಯವಾದವು ೧. ಅಡಿಗರ "ನನ್ನ ಅವತಾರ" ೨. ಅಡಿಗರ "ಅಲಸನ ಹಾಡು" ೩. ಕೆ. ಎಸ್. ನರಸಿಂಹಸ್ವಾಮಿ ಅವರ "ದೇವರ ಹೆಜ್ಜೆ" ೪. ಬಾಬ್ ಡಿಲನ್ ಅವರ "ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?" ೫. ಮೈಥಿಲಿ ಶರಣ ಗುಪ್ತ ಅವರ "ಜೀವನಕ್ಕೇ ವಿಜಯ" ೬. ಮಾಯಾ ಏಂಜೆಲೋ ಅವರ "ವಸುಧೈವ ಕುಟುಂಬಕಮ್" ೭. ರಾಬರ್ಟ್ ಫ್ರಾಸ್ಟ್ ಬರೆದ "ನಾನು ತುಳಿಯದ ಹಾದಿ" ನಿಮ್ಮ ಅನ್ನಿಸಿಕೆಗಳನ್ನು ತಿಳಿಯಲು ಕುತೂಹಲಿಯಾಗಿದ್ದೇನೆ. ಸಿ. ಪಿ. ರವಿಕುಮಾರ್

ಕಾವ್ಯ

ಇಮೇಜ್
ಒಳ್ಳೆಯ ಕಾವ್ಯ ಹೇಗಿರುತ್ತದೆ? ಡಾನ್ ಪ್ಯಾಟರ್ಸನ್ ಅವರ ಉತ್ತರ ಒಂದು ಕವಿತೆಯ ರೂಪದಲ್ಲಿದೆ! ವಜ್ರದಲ್ಲಿ ಬಂಧಿತವಾಗಿರುವ ಬೆಳಕಿನ ಕಿಡಿ ಭೂಮಿಯ ಮೊದಲ ಬೆಂಕಿಯದು. ಹಾಗೇ ಕವಿತೆಯಲ್ಲಿ ಬಂಧಿಸಲು ಸಾಧ್ಯವಾಗುವುದು ಪ್ರೇಮದ ಉತ್ಕಟತೆಯನ್ನಲ್ಲ, ಪ್ರೇಮದ ಮೊದಲ ಕಿಡಿಯನ್ನು ಮಾತ್ರ ಎಂಬುದು ಕವಿಯ ನಿಲುವು. ಯಾವಾಗ (ಕಾವ್ಯದ) ಕೆಂಡವು ನಿಗಿನಿಗಿ ಎಂದು ದಹಿಸುತ್ತದೋ ಆಗ ಅದರಲ್ಲಿ ಕಾವ್ಯದ ಅಂಶವೂ ಸುಟ್ಟುಹೋಗುತ್ತದೆ. ಅದು ಮಂದವಾಗಿ ಉರಿದಾಗ ಮಾತ್ರ ಅದು ಕಾವ್ಯವಾಗುತ್ತದೆ. ಉದಾ. ಗಟ್ಟಿ ಘೋಷಣೆಗಳು ಕಾವ್ಯವಾಗುವುದಿಲ್ಲ. ಅಂತ ಘೋಷಣೆಗಳು ಕೇಳಿದಾಗ ಪಿಟೀಲುಗಳ ಸದ್ದಿನಲ್ಲಿ ಕಾವ್ಯದ ಧ್ವನಿ ಎಲ್ಲೋ ಕಳೆದುಹೋಗುತ್ತದೆ. ಕವಿಗೆ ಇದು ಗೊತ್ತು. ತನ್ನ ಕಾವ್ಯವು ಘೋಷಣೆಯಾದಾಗ ತನ್ನ ಧ್ವನಿಯಲ್ಲಿರುವ ಬಲವಂತವನ್ನು ಅವನು ಗುರುತಿಸಬಲ್ಲ. ತನಗೆ ಪರಿಶುದ್ಧ ಕಾವ್ಯ ಬೇಕೆಂದರೆ ತಾನು ಕಾಯಬೇಕೆಂದು ಕೂಡಾ ಅವನಿಗೆ ಗೊತ್ತು. ಅಂತ ಕಾವ್ಯವು ಬೆಟ್ಟದ ತೊರೆಯಂತೆ. ಅದರ ಶುದ್ಧನೀರಿನಲ್ಲಿ ಯಾವುದೇ ಬಣ್ಣವಿಲ್ಲ. ಯಾರದೇ ಹೆಸರಿಲ್ಲ.

ಕಾವ್ಯ ಪರಿಚಯ

ಇಮೇಜ್
ಮೂಲ: ಬಿಲ್ಲಿ ಕಾಲಿನ್ಸ್ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   (ಚಿತ್ರಕೃಪೆ - ವಿಕಿಪೀಡಿಯಾ) ನಾನು ಅವರಿಗೆ ಹೇಳಿದೆ: ಬಣ್ಣದ ಸ್ಲೈಡ್ ನೋಡಿದ ಹಾಗೆ ಕವಿತೆಯನ್ನು ತೊಗೊಂಡು ಬೆಳಕಿಗೆ ಹಿಡಿದು ನೋಡಿರಪ್ಪಾ ಅಂತ.  ಅಥವಾ ಅದರ ಗೂಡಿಗೆ ಕಿವಿ ಹಚ್ಚಿ ಕೇಳಿ. ಇಲ್ಲವೇ ಕವಿತೆಯೊಳಗೆ ಒಂದು ಇಲಿಯನ್ನು ಇಳಿಬಿಟ್ಟು ಅದು ಹೇಗೆ ಹೊರಬರುತ್ತದೋ ಗಮನಿಸಿ. ಇಲ್ಲವೇ ಕವಿತೆಯ ಕೋಣೆಯನ್ನು ಹೊಕ್ಕು ಅದರ ಗೋಡೆಗಳನ್ನು ಸವರುತ್ತಾ ಲೈಟ್ ಸ್ವಿಚ್ ಏನಾದರೂ ಕೈಗೆ ಹತ್ತುತ್ತದೋ ನೋಡಿ. ಕವಿತೆಯ ತರಂಗಗಳ ಮೇಲೆ ವಾಟರ್-ಸ್ಕೀ ಮಾಡುತ್ತಾ ದಡದಲ್ಲಿರುವ ಕವಿಯ ಹೆಸರಿನತ್ತ ಕೈ ಬೀಸಿ.  ಆದರೆ ಅವರೋ ಕವಿತೆಯನ್ನು ಹಗ್ಗದಿಂದ ಕಟ್ಟಿ ಒಂದು ಕುರ್ಚಿಗೆ ಅದಕ್ಕೆ ಚಿತ್ರಹಿಂಸೆ ಕೊಟ್ಟು ಅದರ ಬಾಯಿಂದ ಹೇಳಿಸಲು ಹೊರಟಿದ್ದಾರೆ ತಪ್ಪೊಪ್ಪಿಗೆ. ಒಂದು ಪೈಪ್ ತೊಗೊಂಡು  ಹೊಡೆಯುತ್ತಿದ್ದಾರೆ ಕವಿತೆಗೆ ರಪರಪ  ಏನೆಂದು ಬಗೆಯಲು  ಅದರ ನಿಜವಾದ ಅರ್ಥ. ಕವಿತೆಯ ಸ್ವಾರಸ್ಯ:  ಕವಿತೆಯಲ್ಲಿ ನಿಮಗೆ ಬೇಕಾದದ್ದು ಹುಡುಕಬಹುದು! ನಿಜವಾದ ಅರ್ಥಕ್ಕಾಗಿ ವ್ಯರ್ಥ ಹಿಂಸೆ ಕೊಡುವುದು (ಅಥವಾ ಕೊಟ್ಟುಕೊಳ್ಳುವುದು) ಬೇಡ ಎಂಬುದನ್ನು ಕವಿ ಹಾಸ್ಯಮಯವಾಗಿ ನಿರೂಪಿಸಿದ್ದಾನೆ. ಇದೊಂದು  ಮಕ್ಕಳಿಗಾಗಿ  ಬರೆದ ಕವಿತೆ.

ಕವಿತೆ

ವಿಯೋಗಿಯೇ ಆಗಿರಬೇಕು  ಮೊದಲ ಕವಿ  ವ್ಯಾಕುಲತೆಯಲ್ಲೇ ಹುಟ್ಟಿರಬಹುದು ಗೀತೆ  ನಯನಗಳಿಂದ ಹೊರಟು ಮೌನವಾಗಿ  ಅರಿವಿಲ್ಲದೇ ಹರಿದ ಧಾರೆಯೇ ಕವಿತೆ  - ಸುಮಿತ್ರಾನಂದನ್ ಪಂತ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ಬೈರನ್! ನಿನ್ನ ಕಾವ್ಯದಲ್ಲಿರುವ ನೋವದೆಷ್ಟು ಮಧುರ!

ಇಮೇಜ್
ಸಮಕಾಲೀನ ಕವಿ ಜಾರ್ಜ್ ಬೈರನ್ (1788-1824) ಕುರಿತು ಇನ್ನೊಬ್ಬ ಕವಿ ಜಾನ್ ಕೀಟ್ಸ್ (1795-1821) ರಚಿಸಿದ ಸಾನೆಟ್ಟಿನ ಅನುವಾದ.  ಮೂಲ ಸಾನೆಟ್ : ಜಾನ್ ಕೀಟ್ಸ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್    ಬೈರನ್! ನಿನ್ನ ಕಾವ್ಯದಲ್ಲಿರುವ ನೋವದೆಷ್ಟು ಮಧುರ! ಆತ್ಮವನು ಇನ್ನಷ್ಟು ಮಿದುಗೊಳಿಸಲು  ಸುಮಕೋಮಲ ಕರುಣೆ ನಡುಗುವ ಕೈಯಲ್ಲೆತ್ತಿಕೊಂಡು ತನ್ನೆದೆಗಿಂತ ಭಾರ ರುದ್ರವೀಣೆ   ಶಕ್ತಿಮೀರಿ ಮೀಟಿದಾಗ ಉಂಟಾದ ಆರ್ತ ಸ್ವರಸಂಚಾರ  ಸನಿಹದಲ್ಲಿದ್ದ ನೀನು ಹಿಡಿದಿಟ್ಟುಕೊಂಡಂತಿದೆ ಲಯವಾಗದಂತೆ.  ಬಿದ್ದಿದ್ದರೂ ನಿನ್ನ ಕಾವ್ಯದ ಮೇಲೆ ಗಾಢ ದುಃಖದ ನೆರಳು  ಕ್ಷತವಾಗದು ಅದರ ಹರ್ಷಗುಣ: ನಿನ್ನ ಶೋಕಗಳೂ  ದೇದೀಪ್ಯಮಾನವಾಗಿವೆ, ಪ್ರಜ್ವಲಿಸುತ್ತಿದೆ ಮೇಲೊಂದು ಪ್ರಭೆ! ಚಂದ್ರಮನ ಆವರಿಸಿಕೊಂಡರೂ ಕಾರ್ಮುಗಿಲ ಸೆರಗು  ಮುಗಿಲಂಚು ಕಂಗೊಳಿಸುವಂತೆ ಜರಿಯಂಚಿನ ಹಾಗೆ  ಅಮೃತಶಿಲೆಯಲ್ಲಿ ಹಾಸುಹೊಕ್ಕಾದ ಗೆರೆಗಳು ಹೇಗೆ  ಹಾಡುತ್ತವೋ ಕ್ಷೀಣದನಿಯಲ್ಲಿ ಸಂಗೀತ ಕೊನೆವರೆಗೂ  ಹೇಗೆ ಹಂಸೆಯು ಹಾಡುವುದೋ ಕೊನೆಯುಸಿರೆಳೆಯುವ ಮುನ್ನ  ಉಲಿಯುತ್ತಿದೆ ಹಾಗೆ ನಿನ್ನ ಸಾಲುಗಳು ಶೋಕಕಥೆಯ ಸವಿಯನ್ನ! (c) 2017, ಸಿ.ಪಿ. ರವಿಕುಮಾರ್ 

ಕುವೆಂಪು ಅವರ ವೀಣಾವಂದನೆ

ಇಮೇಜ್
ಸಿ ಪಿ ರವಿಕುಮಾರ್  ಕುವೆಂಪು ಅವರ ಶ್ರೀರಾಮಾಯಣದರ್ಶನಂ ಪ್ರಾರಂಭದಲ್ಲಿ ಬರುವ ಸರಸ್ವತೀ ವಂದನೆಯನ್ನು ಕೆಳಗೆ ಕೊಟ್ಟಿದ್ದೇನೆ, ಓದಿ. ಮಹಾಕಾವ್ಯದ ರಚನೆಗೆ ಮುಂಚೆ ಕವಿಗಳು ಸರಸ್ವತಿಯನ್ನು, ಗಣೇಶನನ್ನು ಪ್ರಾರ್ಥಿಸುವುದು ಒಂದು ಸಂಪ್ರದಾಯ. ಮಹಾಕಾವ್ಯ ರಚಿಸಲು ಅನೇಕ ವರ್ಷಗಳೇ ಬೇಕಾಗಬಹುದು. ಈ ಅವಧಿಯಲ್ಲಿ ಕಾವ್ಯಸ್ಫೂರ್ತಿ ನಿರಂತರವಾಗಿ ಹರಿಯಬೇಕು. ಬೇರೆ ಯಾವ ಕಾರಣಕ್ಕಾಗಿಯೂ ಕಾವ್ಯರಚನೆಯಲ್ಲಿ ಬಾಧೆಯಾಗಬಾರದು. ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ ತ್ರೈಭುವನ ಸಮ್ಮೋಹಿನಿಯೆ, ಕವನ ಕಮನೀಯೆ! ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್ ! ನಾರಣಪ್ಪಂಗಂತೆ ರನ್ನಂಗೆ ಮೇಣ್ ಪಂಪರಿಗೆ, ನಾಗವರ್ಮಗೆ ರಾಘವಾಂಕಗೆ ಲಕುಮಿಪತಿಗೆ, ವಾಲ್ಮೀಕಿ ವ್ಯಾಸರಿಗೆ ಹೋಮರಗೆ ಮಿಲ್ಟನಗೆ ದಾಂತೆ ಮೊದಲಹ ಮಹಾಕವಿಗಳಿಗೆ ನೀನೊಸೆದು                      ೧೦ ಕೃಪೆಗೈದ ವೈದ್ಯುತಪ್ರತಿಭೆಯಂ, ಹೇ ದೇವಿ, ಕಲ್ಪನಾಶಕ್ತಿಯಂ ವಾಙ್ಮಂತ್ರದುಕ್ತಿಯಂ ಆಯುರಾರೋಗ್ಯಮಂ ಶಾಂತಿ ಸೌಭಾಗ್ಯಮಂ ದಯಪಾಲಿಸೌ ನಿನ್ನ ಕನ್ನಡ ಕಂದನೀತಂಗೆ, ಸುರುಳಿಗುರುಳಂದಮೆಸೆವಾತ್ಮಸೌಂದರ್ಯಮಂ ಮುಡಿಪನರ್ಚಿಸಿ ಮಣಿಯುವೀ ಕವಿ ಕುವೆಂಪುವಿಗೆ ! ...

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಇಮೇಜ್
ಸಿ ಪಿ ರವಿಕುಮಾರ್  "ಬಾರಿಸು ಕನ್ನಡ ಡಿಂಡಿಮವ" ಎನ್ನುವುದು ಕನ್ನಡ ಪ್ರಚಾರಗೀತೆ ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕವಿತೆಯನ್ನು ಪೂರ್ಣವಾಗಿ ಓದಿದರೆ ಅದು ಕುವೆಂಪು ಅವರು ಕನ್ನಡಿಗರ ಜಾಯಮಾನಕ್ಕೆ ನೊಂದು, ಬದಲಾವಣೆಗಾಗಿ ಪ್ರಾರ್ಥನಾರೂಪದಲ್ಲಿ  ಬರೆದ ಪದ್ಯ ಎಂಬ ತಿಳುವಳಿಕೆ ಮೂಡುತ್ತದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ! ಕರ್ನಾಟಕದ ಹೃದಯ ಮಿಡಿಯಬೇಕಾದದ್ದು ಕನ್ನಡಕ್ಕೆ. ಆದರೆ ಅಲ್ಲಿ ಬೇರೆ ಭಾಷೆಗಳ ಮಿಡಿತವೇ ಹೆಚ್ಚು. ಕುವೆಂಪು ಅವರ ಕಾಲದಲ್ಲೂ ಇದು ಹಾಗೇ ಇತ್ತು, ಈಗಲೂ ಹಾಗೇ ಇದೆ!    ಹೇಗೆ ಶಿವ ತನಗೆ ಸಹಜವಾದ ಡಿಂಡಿಮ ಬಾರಿಸಬೇಕೋ ಹಾಗೇ ಕರ್ನಾಟಕದ ಹೃದಯ-ಶಿವ ಕನ್ನಡವೆಂಬ ಡಿಂಡಿಮ ಬಾರಿಸಬೇಕು ಎಂಬುದು ಕವಿಯ ನೊಂದ ಮನದ ಮೊರೆ. "ಬಾರಿಸು ಕನ್ನಡ ಡಿಂಡಿಮವ "ಎಂಬಲ್ಲಿ "ಕನ್ನಡ" ಶಬ್ದಕ್ಕೆ ಒತ್ತು.  ಸತ್ತಂತಿಹರನು ಬಡಿದೆಚ್ಚರಿಸು! ಕಚ್ಚಾಡುವರನು ಕೂಡಿಸಿ ಒಲಿಸು! ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು! ಒಟ್ಟಿಗೆ ಬಾಳುವ ತೆರದಲಿ ಹರಸು! ಕನ್ನಡ ಜನರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು  ಕುವೆಂಪು ಮನಗಂಡಿದ್ದರು. ಏಕೀಕರಣದ ಸಮಯದಲ್ಲಿ ಕೂಡಾ ಒಡಕು ಧ್ವನಿಗಳಿದ್ದವು.  "ಅಖಂಡ ಕರ್ನಾಟಕ" ಪದ್ಯದಲ್ಲಿ ಇಂಥ ಒಡಕು ಧ್ವನಿಗಳನ್ನು ಎತ್ತುವ ಜನನಾಯಕರ ಬಗ್ಗೆ ಕುವೆಂಪು "ಮುಚ್ಚು ಬಾಯಿ" ಎಂಬ ರೀತಿಯಲ್ಲಿ ಗುಡುಗಿದ್ದಾರೆ. ಆದರೆ ...

ಕಾವ್ಯಾಸ್ವಾದನೆ

ಸಿ ಪಿ ರವಿಕುಮಾರ್ ಅವತ್ತು ಭಾನುವಾರ ಜಿಆರ್ ಸಭೆಗೆ ಬಂದಾಗ ಎಂದಿನಂತೆ  ಅವರದ್ದು ಅಚ್ಚಬಿಳಿ ಉಡುಪು. ಸಭಿಕರು: ಈಗ ನಿಜವಾಗಲೂ ಹಳಬರಾದ ಅವರ ಹಳೇ ವಿದ್ಯಾರ್ಥಿಗಳ ಗುಂಪು. ವಿಶೇಷ ಇಷ್ಟೇ: ಜಿಆರ್ ಒಬ್ಬರೇ ಬರಲಿಲ್ಲ; ಜಾನ್ ಕೀಟ್ಸ್ ಬಂದಿದ್ದ ಅವರ ಜೊತೆಗೆ. ವಿಲಿಯಮ್ ಬ್ಲೇಕ್ ಅಲ್ಲೇ ಪಕ್ಕದಲ್ಲಿ ಕೂತಿದ್ದ ಮುಖದಲ್ಲಿ ಸೂಸುತ್ತಾ  ಸ್ನಿಗ್ಧ ನಸುನಗೆ. ಜಾನ್, ಇಪ್ಪತ್ತಾರರ ತರುಣ, ಕ್ಷಯರೋಗಿ, ಕೈಯಲ್ಲಿ ಕಾಸಿಲ್ಲದಿದ್ದರೂ ಕವಿತೆ ಬರೆಯುವ ಖಯಾಲಿ; ಅಸುನೀಗಿದ ತಮ್ಮನ ದುಃಖದ ನಡುವೆ ತ್ಯಜಿಸಿ ಹೋಗಿದ್ದಾಳೆ ಪ್ರೀತಿಸಿದ ಗೆಳತಿ ಬ್ರಾನ್! ಮನೆ-ಮನಗಳೆಲ್ಲಾ ಖಾಲಿ-ಖಾಲಿ. ವಿಷಾದದ ನೋಟ ಬೀರುತ್ತಿದ್ದಾನೆ  ಜಾನ್ ಅಮೃತಶಿಲೆ ಭರಣಿ ಮೇಲೆ ಅಂದದ ಕಲೆ-ಕುಸುರಿ. ಕಿವಿಗೆ ಕೇಳುತ್ತಿದೆ ನಿಶ್ಶಬ್ದ ಮೋಹನ ಮುರಳಿ; ಗೌತಮದೃಷ್ಟಿ ನೋಡುತ್ತಿದೆ ಹಬ್ಬಕ್ಕೆ ತಂದ ಕೊಬ್ಬಿದ ಹರಕೆಯ ಕುರಿ. ಹೊಂಚು ಹಾಕುತ್ತಿದೆ ಮೆಕ್ಯಾನಿಕಲ್ ಹುಲಿಯೊಂದು (ಫ್ರೆಂಚ್ ಸೇನೆ ಟಿಪ್ಪುವಿಗಿತ್ತ ಉಡುಗೊರೆಯಂಥದೇ.) ಕಣ್ಣುಗಳಲ್ಲಿ ಕಾಡುಗತ್ತಲು ಕಿಚ್ಚಾಗಿ ಉರಿಯುತ್ತಿದೆ! ಸುರಿಯುತ್ತಿದೆ ದಾರ್ಶನಿಕ ಬ್ಲೇಕ್  ಕಣ್ಣುಗಳಲ್ಲಿ ಹೆದರಿಕೆ.  ನಡುನಡುವೆ ಬಂದು ಹೋಗುತ್ತಾರೆ ಜಿಆರ್ ಕರೆದಾಗ  ಆಡೆನ್, ಶೇಕ್ಸ್ ಪಿಯರ್, ರಾಮಾನುಜ, ವಾಲ್ಮೀಕಿ!  ಬೀಗುತ್ತಾರೆ ತಮ್ಮ ಸಾಲುಗಳನ್ನು ಜಿಆರ್ ಉದ್ಧರಿಸಿದಾಗ  ಎಪ್ಪತ್ತ...

ಭಾವಗೀತೆಯ ಗುಂಗು

ಇಮೇಜ್
ಸಿ  ಪಿ ರವಿಕುಮಾರ್  "ಸಂವಾದ" ಟ್ರಸ್ಟ್ ಪ್ರತಿ ತಿಂಗಳು ಆಯೋಜಿಸುವ 'ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಮಾತುಗಳನ್ನು ಕೇಳುವ ಅವಕಾಶ ಇವತ್ತು ಸಿಕ್ಕಿತು. ಬಿ ಆರ್ ಲಕ್ಷ್ಮಣರಾವ್ ತಮ್ಮ ಕಾವ್ಯದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಸ್ವಾರಸ್ಯವಾಗಿ ಮಾತಾಡಿದರು. ಕೇವಲ ಒಂದೂವರೆ ಗಂಟೆಯ ಕಾರ್ಯಕ್ರಮದಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಪ್ರಶ್ನೆ ಕೇಳಬಹುದು - ಹೀಗಾಗಿ ಸಮಯ ನಿಯಂತ್ರಿಸುವುದು ಒಂದು ಕಲೆ. ಇದನ್ನು ಕವಿ ಲಕ್ಷ್ಮಣರಾವ್ ಚೆನ್ನಾಗಿ ಮಾಡಿದರು ಎನ್ನಿಸಿತು. ಅನೌಪಚಾರಿಕವಾಗಿದ್ದರೂ ಕಾರ್ಯಕ್ರಮದಲ್ಲಿ ಆಯೋಜಕರು ಒಂದು ರೂಪರೇಷೆಯನ್ನು ಇಟ್ಟುಕೊಂಡಿದ್ದರು.  ಮೊದಲು ಕವಿ ತಾವು ಕಾವ್ಯಜೀವನಕ್ಕೆ ಹೇಗೆ ಬಂದರು ಎಂಬ ಬಗ್ಗೆ ಮಾತಾಡಿದರು. ಅವರ ಕೆಲವು ಗೀತೆಗಳನ್ನು ಉಪಾಸನಾ ಮೋಹನ್ ಮತ್ತು ವರ್ಷಾ ಎಂಬ ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಕವಿ ತಮ್ಮ ಕೆಲವು ಕವಿತೆಗಳನ್ನು ಓದಿದರು. ಪ್ರಶ್ನೋತ್ತರಕ್ಕೂ ಅವಕಾಶವಿತ್ತು. ಪೂರ್ವನಿಯೋಜಿತವಲ್ಲದ ಒಂದು ದಿಢೀರ್ ವಿಮರ್ಶೆ ಕೂಡಾ ನಡೆಯಿತು - ಪ್ರೊ ಸಿ ಎನ್ ರಾಮಚಂದ್ರನ್ ಅವರನ್ನು ಕವಿ ಕೆಲವು ಮಾತುಗಳನ್ನು ಆಡಬೇಕೆಂದು ಕೇಳಿಕೊಂಡಿದ್ದು ಒಂದಿಷ್ಟು ಒಳ್ಳೆಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಹೀಗೆ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವುದು ಮತ್ತು ನಿರ್ವಹಣೆ ಮಾಡುವುದು ಕೂಡಾ ಅಪರೂಪದ ಕಲೆ. 'ಸಂ...

ಕವಿ ತೆರೆದ ಬಾಗಿಲು

ಇಮೇಜ್
ಸಿ. ಪಿ. ರವಿಕುಮಾರ್    ಕೆ. ಎಸ್. ನರಸಿಂಹಸ್ವಾಮಿ ಅವರ ನೂರನೇ ಹುಟ್ಟುಹಬ್ಬವನ್ನು ಇವತ್ತು ಆಚರಿಸಲಾಗುತ್ತಿದೆ. ಅವರನ್ನು ನಾನು ಸ್ವಲ್ಪ ಹತ್ತಿರದಿಂದ ನೋಡಿದ್ದರಿಂದ ಕೆಲವು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸುತ್ತಿದೆ.  ನ ನ್ನ ತಂದೆ ಸಿ.ಎಚ್. ಪ್ರಹ್ಲಾದರಾವ್ ಅವರಿಗೆ ಕೆ. ಎಸ್. ನ. ಅವರ ಪರಿಚಯವಿತ್ತು. ನಾವು ಆಗ ಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು; ನಮ್ಮ ತಂದೆ ತಮ್ಮ ಕೆಲಸದಿಂದ ನಿವೃತ್ತಿಯಾಗುವ ಕೆಲವು ವರ್ಷಗಳ ಹಿಂದೆ ಸ್ವಂತ ಮನೆ ಕಟ್ಟಿಸುವ ಯೋಚನೆ ಮಾಡಿದರು. ಮನೆಯ ಕೆಲಸ ಪ್ರಾರಂಭವಾಗಿತ್ತು.   ಕೆ. ಎಸ್. ನ. ಕೂಡಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಏಜೀಸ್ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ನಮ್ಮ ತಂದೆ ಕಾಫಿ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು.  ಇಬ್ಬರೂ ಪ್ರತಿದಿನ ಬಸ್ ನಲ್ಲಿ  ಪ್ರಯಾಣ ಮಾಡುತ್ತಿದ್ದರು. ಆಗ ಸರಕಾರೀ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಒಂದು ವಿಶೇಷ ಬಸ್ ಹೊರಡುತ್ತಿತ್ತು. ನಮ್ಮ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಸಂಜೆ ಕೆ. ಎಸ್. ನ. ಮತ್ತು ಇನ್ನೊಬ್ಬ ಕವಿ-ಮಿತ್ರರಾದ ಹಿ. ಮ. ನಾಗಯ್ಯ ಇಬ್ಬರೂ ಬಂದಿದ್ದು ನನಗೆ ನೆನಪಿದೆ. ಕೆ. ಎಸ್. ನ. ಅವರದ್ದು ಯಾವಾಗಲೂ ಒಂದೇ ಬಗೆಯ ಉಡುಗೆ. ಬಿಳಿ ಜುಬ್ಬಾ, ಬಿಳಿ ಪಂಚೆ.  ನೆರೆಯುತ್ತಿದ್ದ ದಟ್ಟವಾದ ಕೂದಲು. ಕನ್ನಡ...