ನಾಳೆಯೋ ಇಂದಿಗೋ ಕುಸಿವ ಗೋಡೆ
ಮೂಲ ಗಜಲ್ - ಮಜರೂಹ್ ಸುಲ್ತಾನ್ ಪುರಿ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಈ ಗಜಲ್ "ಮಮತಾ" ಎಂಬ ಹಿಂದಿ ಚಿತ್ರಕ್ಕಾಗಿ ಕವಿ ಮಜರೂಹ್ ಸುಲ್ತಾನ್ ಪುರಿ ಬರೆದಿದ್ದು. ರೋಶನ್ ಅವರ ಸಂಗೀತ ನಿರ್ದೇಶನದಲ್ಲಿ ಇದನ್ನು ಲತಾ ಮಂಗೇಶ್ಕರ್ ಅಮೋಘವಾಗಿ ಹಾಡಿದ್ದಾರೆ. ಈ ಹಾಡಿನಲ್ಲಿ ಒಬ್ಬ ಹೆಣ್ಣಿನ ನೋವಿದೆ. ಒಮ್ಮೆ ಅವಳನ್ನು ಪ್ರೇಮಿಸಿದವನು ವಿದೇಶಕ್ಕೆ ತೆರಳಿದ ಮೇಲೆ ಅವರ ನಡುವೆ ಸಂಪರ್ಕ ಕಡಿದುಹೋಗುತ್ತದೆ. ಬಡತನ ತಾಳಲಾರದೆ ಅವಳ ಅಪ್ಪ ಅವಳನ್ನು ಬೇರೆ ಯಾರಿಗೋ ಮದುವೆ ಮಾಡಿ ತನ್ನ ಜವಾಬ್ದಾರಿ ತೊಳೆದುಕೊಂಡಿದ್ದಾನೆ. ಆದರೆ ಇವಳನ್ನು ಮದುವೆಯಾದವನು ಮದ್ಯವ್ಯಸನ ಉಳ್ಳ ಸಮಾಜಘಾತಕ. ಇವನ ಕಾಟ ತಡೆಯಲಾರದೆ ಅವಳು ಓಡಿಹೋಗುತ್ತಾಳೆ. ಕೊನೆಗೆ ಅವಳು ವೇಶ್ಯೆಯಾಗಿ ಬದುಕಬೇಕಾಗುತ್ತದೆ. ಅವಳನ್ನು ಅರಸುತ್ತಾ ಹಿಂದಿರುಗಿದ ಅವಳ ಪ್ರಿಯಕರನಿಗೆ ಅವಳ ಪಾಡು ಹೀಗಾಗಿದೆ ಎಂದು ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ಬಳಸಿಕೊಂಡ ಈ ಹಾಡನ್ನು ತೆರೆಯ ಮೇಲೆ ಹಾಡಿ ಅಭಿನಯಿಸಿದವರು ಸುಚಿತ್ರಾ ಸೇನ್. ಹಾಡನ್ನು ನೀವು ಇಲ್ಲಿ ಕೇಳಬಹುದು . "ನಾಗರಹಾವು" ಚಿತ್ರದ ಒಂದು ಹಾಡು ನಿಮಗೆ ನೆನಪಾಗಬಹುದು. ಜೀವಿಸುತ್ತಿದ್ದೆವೋ ನಾವು ಯಾರ ಹೃದಯದಲ್ಲಿ ಜೀವಕ್ಕೂ ಹೆಚ್ಚು ಪ್ರಿಯರಂತೆ ಒಮ್ಮೆ ಇಂದು ಕುಳಿತಿದ್ದೇವೆ ಅವರದ್ದೇ ಓಣಿಗಳಲ್ಲಿ ಅಪರಾಧ ಯಾವುದೋ ಮಾಡಿದವರಂತೆ ನಿನ್ನ ನೋವಿನ ಮೇಲೆ ಅ...