ಪೋಸ್ಟ್‌ಗಳು

ಮೇ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಾರಿಗೆ ಮಾಡ್ತೀ ಮೀಮ್? - ಒಂದು ಮೀಮಾಂಸೆ

ಇಮೇಜ್
ಸಿ.ಪಿ. ರವಿಕುಮಾರ್  "ಯಾರಿಗೆ ಮಾಡ್ತೀ ಮ್ಯಾಮ್" ಎಂಬ ಕನ್ನಡ ನಾಟಕವಿದೆ. "Who are you trying to fool?" ಎಂಬುದು ಈ ವಾಕ್ಯಪ್ರಯೋಗದ ತಾತ್ಪರ್ಯ. ಇಂದಿನ ಫೇಸ್-ಬುಕ್ ಪೀಳಿಗೆಯಲ್ಲಿ "ಯಾರಿಗೆ ಮಾಡ್ತೀ ಮೀಮ್" ಎಂಬುದು ಹೆಚ್ಚು ಪ್ರಸ್ತುತ. ಚಿತ್ರ ಮತ್ತು ಬರಹಗಳನ್ನು ಬಳಸಿ ಯಾವುದಾದರೊಂದು ವಿಷಯದ ಬಗ್ಗೆ ರೋಚಕವಾಗಿ ಮಂಡಿಸುವುದಕ್ಕೆ ಮೀಮ್ (Meme) ಎಂಬ ಹೆಸರಿದೆ.  ಯಾರೋ ಕನ್ನಡಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ ಎಂದು ಮೀಮ್ ಕಳಿಸಿದರು. ಅದನ್ನು ಕೆಳಗೆ ತೋರಿಸಿದ್ದೇನೆ.  ಮೀಮನ್ನು  ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ  ಎಂಟು ಪ್ರಶ್ನೆಗಳನ್ನು ಮಾತ್ರ ಇಲ್ಲಿ ಕಲೆ ಹಾಕಿದ್ದೇನೆ. ಎಂಟು ಪ್ರಶಸ್ತಿಗಳು; ಎಂಟು ಪ್ರಶ್ನೆಗಳು.  ಈ ಪ್ರಶ್ನೆಗಳನ್ನು ನಾನೇನೂ  ವ್ಯಂಗ್ಯಪೂರ್ವಕವಾಗಿ ಕೇಳುತ್ತಿಲ್ಲ.  ಈ ಎಂಟು ಜನ ಸಾಹಿತಿಗಳ ಒಂದಾದರೂ ಕೃತಿಯನ್ನು ಕನ್ನಡದಲ್ಲಿ ಓದಿದವರು ಎಷ್ಟು ಜನ ಇರಬಹುದು?  ಮುಂದೆ ಓದುತ್ತೇನೆ ಎಂಬ ಯೋಜನೆ ಇಟ್ಟುಕೊಂಡವರು ಎಷ್ಟು ಜನ ಇರಬಹುದು?  ನಿಮ್ಮಿಂದಲೇ ಪ್ರಾರಂಭಿಸಿ ನಿಮ್ಮ ಸ್ನೇಹಿತರು-ಬಾಂಧವರಲ್ಲಿ ಈ ಕೃತಿಗಳನ್ನು ಓದಿದವರು ಯಾರಾದರೂ ಇದ್ದಾರೆಯೇ?  ಮುಂದೆ ಓದುತ್ತೇನೆ ಎಂಬ ಯೋಜನೆ ಇಟ್ಟುಕೊಂಡವರು ಎಷ್ಟು ಜನ ಇರಬಹುದು? ಮೂಲ ಕನ್ನಡದಲ್ಲ್ಲಿ ಅಲ್ಲವಾದರೂ ಇಂಗ್ಲಿಷ್ ಅಥವಾ ಹಿಂದಿ ಅನುವಾದವನ್ನು ಓದಿದವರು ಎಷ್ಟು ಜನ ಇರಬಹುದು?  ಓದಬೇಕು ಎನ್ನುವ ಆ

ರಹೀಮನ ಹತ್ತು ದ್ವಿಪದಿಗಳು

ಮೂಲ (ಹಿಂದಿ) : ರಹೀಮ್  ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್  ಅಕ್ಬ್ಹರ್ ಬಾದಶಾಹನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ರಹೀಮನೂ ಒಬ್ಬ. ಅಕ್ಬರನ ಕಾಲದಲ್ಲಿ ಆಸ್ಥಾನದ ಕೆಲಸಗಳ ಮೇಲುಸ್ತುವಾರಿಕೆ ನೋಡಿಕೊಳ್ಳುತ್ತಿದ್ದ ಬೈರಾಮ್ ಖಾನ್ ಎಂಬುವನ ಮಗ ಅಬ್ದುಲ್ ರಹೀಮ್.  ಮುಂದೆ ಗುಜರಾತಿನಲ್ಲಿ ಬೈರಾಮ್ ಖಾನನ ಕೊಲೆಯಾದಾಗ ಅವನ ಹೆಂಡತಿಯನ್ನು ಅಕ್ಬರನೇ ಪತ್ನಿಯಾಗಿ ಸ್ವೀಕರಿಸಿದನಂತೆ. ಹೀಗಾಗಿ ರಹೀಮ ಅಕ್ಬರನ ಮಲಮಗ. ಇಸ್ಲಾಂ ಧರ್ಮದ ಅನುಯಾಯಿಯಾದರೂ ರಹೀಮನು ಶ್ರೀಕೃಷ್ಣನ ಭಕ್ತನಾಗಿದ್ದ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಈ ಶಾಸ್ತ್ರಕ್ಕೆ ಸಂಬಂಧ ಪಟ್ಟಂತೆ ಎರಡು ಗ್ರಂಥಗಳನ್ನು ರಚಿಸಿದ್ದಾನೆ. ದಾನಶೂರನೆಂಬ ಹೆಸರನ್ನು ಪಡೆದುಕೊಂಡಿದ್ದ ರಹೀಮ ಯಾರಿಗಾದರೂ ದಾನ ನೀಡುವಾಗ ದಾನ ಪಡೆಯುವವರ ಕಡೆ ನೇರವಾಗಿ ನೋಡದೆ ದೃಷ್ಟಿಯನ್ನು ಕೆಳಗೆ ಹಾಕುತ್ತಿದ್ದನಂತೆ. ಇದನ್ನು ಅರಿತ ಶ್ರೀ ತುಲಸೀ ದಾಸರು ರಹೀಮನಿಗೆ ಹೀಗೆ ಬರೆದು ಕಳಿಸಿದರಂತೆ: ಎಲ್ಲಿಂದ ಕಲಿತಿರಯ್ಯ ನೀವು ದಾನ ನೀಡುವ ಪರಿಯನ್ನು? ಕೊಡಲೆಂದು ಮೇಲಕ್ಕೆ ಎತ್ತಿದ ಕೈ, ಕೆಳಗೆ ನೋಡುತ್ತಿವೆ ಕಣ್ಣು ॥ ತುಲಸೀದಾಸರಿಗೆ ಉತ್ತರ ಗೊತ್ತಿದ್ದರೂ ತನ್ನನ್ನು ಪರೀಕ್ಷಿಸುತ್ತಿದ್ದಾರೆಂದು ರಹೀಮನಿಗೆ ಗೊತ್ತಿತ್ತು. ಅವನು ಅವರಿಗೆ ಹೀಗೆ ಜವಾಬು ಕಳಿಸಿದನಂತೆ: ಕೊಡುವವನು ಯಾರೋ ಬೇರೆ, ಕೊಡುತಿಹನು ಕೈ ತುಂಬ ದಾನ ಹಗಲಿರುಳೂ ನಾ ಕೊಟ್ಟೆನೆಂದು ಜನರು ಭ್ರಮಿಸುವರೆಂಬ ಲಜ

ಕಬೀರನ ಹತ್ತು ದ್ವಿಪದಿಗಳು (೫೧ - ೬೦)

ಇಮೇಜ್
ಮೂಲ: ಮಹಾತ್ಮಾ ಕಬೀರ್  ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್  ಶೀಲವಂತ ದೊಡ್ಡವನು ಎಲ್ಲರಿಗಿಂತ; ಸಕಲ ರತ್ನಗಳ ಗಣಿ  ಕಬೀರ! ಮೂರು ಲೋಕಗಳ ಸಂಪತ್ತೂ ನೆಲಸಿಹುದು ಶೀಲದಲ್ಲಿ    ॥ ೫೧॥  ರಾಜನಾದರೇನು ಫಕೀರನಾದರೇನು ಬಂದವರು ಹೋಗಲೇ ಬೇಕೊಂದು ದಿವಸ  ಸಿಂಹಾಸನದ ಮೇಲೋ ಸರಪಳಿಗೆ ಬಿಗಿದೋ ಅಷ್ಟು ಮಾತ್ರ ವ್ಯತ್ಯಾಸ   ॥೫೨ ॥  ಕಂಬಳಿ ಹೊದ್ದು ಮಲಗಿರುವೆಯಲ್ಲ ಬಂದ ಕೆಲಸ ಮರೆತು  ಕನ್ನಡಿಯಲ್ಲಿ ಮುಖ ದರ್ಶನ ಸಾಕೆ? ಹಿಡಿಯೋ ನಿನ್ನ ಗುರುತು  ॥೫೩॥  ಮಾಯೆಯೂ ಛಾಯೆಯೂ ಒಂದೇ ವಿಧ - ಇದು ಬಲ್ಲವರು ಬಲ್ಲ ಗುಟ್ಟು  ಓಡಿದವರನ್ನು ಹಿಂಬಾಲಿಸಿ ಓಡುವುದು; ಎದುರಿಸಲು ಹೋಗುವುದು ಬಿಟ್ಟು   ॥೫೪॥  ಅಹಂಕಾರವೆಲ್ಲೋ ಅಲ್ಲಿ ಆಪತ್ತು ಸಂಶಯವೆಲ್ಲೋ ಅಲ್ಲಿ ರೋಗ  ಕಬೀರ!  ಇವು ನಾಲ್ಕಕ್ಕೂ ಪರಿಹಾರವೊಂದೇ - ಧೈರ್ಯವೆಂಬ ಯೋಗ  ॥ ೫೫॥  ಕಬೀರ! ಗರ್ವ ನಿನಗೆ ತಕ್ಕುದಲ್ಲ; ಹೊಂಚು ಹಾಕುತ್ತಿದೆ ಕಾಲ  ನಿನ್ನ ಕತೆಯನ್ನು ಎಲ್ಲಿ ಮುಗಿಸುವುದೋ? ಯಾರಿಗೆ ಗೊತ್ತು ಯಾವಾಗ?   ॥೫೬॥  ಮಾನವ ಜನ್ಮ ದುರ್ಲಭ ಕಬೀರ! ಈ ದೇಹ ದೊರಕದು ಮತ್ತೆ ಮತ್ತೆ  ಉದುರಿ ಬಿದ್ದ ಎಲೆ ಮರಳಿ ಸೇರುವುದೇ ಎಂದಾದರೂ ರೆಂಬೆಗೆ?  ॥೫೭॥  ನಿದ್ರಿಸುವೆಯಲ್ಲೋ ಕಬೀರ! ಎಚ್ಚೆತ್ತು ಹಾಳು ಕೆಲಸ ಮುಗಿಸು  ಯಾವ ಮಾರ್ಗವನ್ನಾರಿಸಿಕೊಂಡೆಯೋ ಅದನ್ನೇ ಮುಂದುವರೆಸು  ॥೫೮॥  ಕಬೀರ ನಿನ್ನ ಗುಡಿಸಲು ಕಟುಕನಂಗಡಿ ಪಕ್ಕಕ್ಕೆ  ಮಾಡಿದಂತೆ ಪಡೆವರೆಲ್ಲ; ಅಂಜಿಕೆ ಏತ

ಕಬೀರನ ಹತ್ತು ದ್ವಿಪದಿಗಳು (೪೧ - ೫೦)

ಮೂಲ: ಮಹಾತ್ಮಾ ಕಬೀರ್  ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್  ಐದು ಪ್ರಹರ ಹೋಯ್ತು ವ್ಯಾಪಾರದಲ್ಲಿ; ಮೂರು ನಿದ್ದೆಯಲ್ಲಿ ಕಳೆಯಿತು  ಒಂದು ಪ್ರಹರವೂ ಹರಿಚಿಂತನೆಯಿಲ್ಲ! ಮುಕ್ತಿಯು ಸಿಕ್ಕುವುದೆಂತು?  ॥೪೧॥  ನಿದ್ದೆಯು ಸಾವಿನ ಲಕ್ಷಣ! ಕಬೀರ, ಮೇಲೆ ಎದ್ದೇಳು! ಬೇರೆ ರಸಾಯನ ಬಿಟ್ಟು ಹಿಡಿಯಯ್ಯಾ ನಾಮ ರಸಾಯನ ಗೀಳು    ॥೪೨॥ ದುರ್ಬಲನನ್ನು ಪೀಡಿಸಬೇಡ! ಗಟ್ಟಿ ಅವನ ನಿಟ್ಟುಸಿರು  ಬಿಸಿಯುಸಿರಿಂದಲೆ ಭಸ್ಮವಾಗುವುದು ಕುಲುಮೆಯಲ್ಲಿ ಅದಿರು   ॥೪೩॥  ದಾನದಿಂದ ಧನ ಕಡಿಮೆಯಾಗದು; ನೀರು ಕುಡಿದರೆ ನದಿಯಾರದು  ನೋಡು ಇದನು ಕಣ್ಣಾರೆ ಕಬೀರ! ಇಷ್ಟರ ಮೇಲೆ ಮಾತು ಬಾರದು   ॥೪೪॥  ನವದ್ವಾರದ ಪಂಜರದೊಳಗೆ ಇರುವ ಹಕ್ಕಿ ಯಾವುದು? ಅದು ಒಳಗಿದ್ದರೆ ಆಶ್ಚರ್ಯ; ಹಾರಿದರೆ ಏನಿಹುದು ಮೋಜು? ॥೪೫॥  ತಣ್ಣಗಿಟ್ಟುಕೋ ಮನಸ್ಸನ್ನು! ಜಗದೊಳಗೆ ವೈರಿ  ಇಲ್ಲ  ನಿನಗಾರೂ  ಅಹಂಕಾರ ಬಿಟ್ಟು ನೋಡು; ದಯೆ ಕಾಣುವುದೆಲ್ಲೆಡೆಗೂ  ॥೪೬॥  ಮಂಗವಿದ್ದಂತೆ ಆಟದವನ ಬಳಿ ಜೀವ-ಮನಸುಗಳ ನಂಟು  ನಾನಾ ಕುಣಿತವ ತೋರುತ್ತಲಿದೆ ತನ್ನೊಂದಿಗೆ ಇಟ್ಟುಕೊಂಡು  ॥೪೭॥  ತಲೆ ಬೋಳಿಸಿಕೊಳ್ಳುತ ದಿನಗಳು ಕಳೆದವು! ದೊರಕಲಿಲ್ಲವೋ ರಾಮ  ರಾಮನಾಮ ಜಪಿಸಿದರೇನು? ಮನದೊಳಗೆ ಬೇರೆ ವ್ಯಾಪಾರ  ॥೪೮॥ ಕೇಶದಲ್ಲೇನಿತ್ತು ದೋಷ? ಬೋಳಿಸಿಕೊಂಡಿ ಒಂದು ನೂರು ಸಲ  ಮನವನ್ನು ಬೋಳಿಸಿಕೊಳ್ಳಬಾರದೆ? ಅಲ್ಲಿದೆ ನೂರು ವಿಕಾರ  ॥೪೯॥  ಇನ್ನೆಷ್ಟು ನಿದ್ದೆಯೋ ಕಬ

ಕಬೀರನ ಹತ್ತು ದ್ವಿಪದಿಗಳು (೩೧ - ೪೦)

ಮೂಲ: ಮಹಾತ್ಮಾ ಕಬೀರ್  ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್   ಕಬೀರ! ಮಾಡಿದರೇನೂ ಆಗದು! ಆಗುವುದು ಮಾಡದೇ ಹೋದರೂ  ಮಾಡಿದ್ದರಿಂದ ಆಯಿತೆನ್ನುವೆಯಾ ? ಮಾಡಿದ್ದು ಯಾರೋ ಬೇರೆಯವರು  ॥೩೧ ॥  ಕಣ್ಣಿನ ಪಾಪೆಯು ಹೇಗೋ ಹಾಗೆ ದೇವರು ನಮ್ಮೊಳಗಿಹನು  ಅರಿಯದ ಮೂರ್ಖರು ಹೊರಗಡೆ ಹುಡುಕಿ ನಿರಾಶರಾಗುತ್ತಿಹರು  ॥೩೨ ॥ ಮೊದಲು ವಿರಹದ ಬೆಂಕಿ ಸುಡುವುದು; ಪ್ರೇಮ ತಂಪೆರೆಯುವುದು  ನಂತರ ಇದನ್ನು ಅನುಭವಿಸಿದವನಿಗೇ ಗೊತ್ತು ಮಿಲನದಾಸೆಯ ಸಂಕಟ  ॥೩೩॥   ಸಾಗರಕ್ಕೆ ಬೆಂಕಿ ಇಟ್ಟರೆ ಪ್ರಕಟವಾಗದು ಹೊಗೆ ಸುಟ್ಟವನಿಗೇ ಗೊತ್ತು! ಪ್ರೇಮ ಅಂತಹ ಧಗೆ  ॥ ೩೪ ॥  ಅಂಥ ಧನ ಸಂಗ್ರಹಿಸು ಕಬೀರ! ಮುಂದಕ್ಕೂ ಆಗಿ ಬರಬೇಕು ಹಣದ ಗಂಟು ತಲೆ ಮೇಲಕ್ಕೆ ಹೊತ್ತು ಹೋದವರಾದರೂ ಯಾರು? ॥  ೩೫ ॥  ಆಸೆಗೆ ಸಾವಿಲ್ಲ ಜಗತ್ತು ಮುಳುಗಿದರೂ; ಜನರೋ ಸತ್ತು ಸಾಯುತ್ತಿಹರು  ಮೇಲೆ ಹೋಗಿ ತಿನ್ನುವರೋ ಎಂಬಂತೆ ಧನವನ್ನು ಬಾಚುತ್ತಿಹರು  ॥೩೬॥  ಒಂದು ಮಾತಾಡಿದರೆ ಬೆಲೆಯಿಲ್ಲ; ಎರಡು ಮಾತಾಡಿದರೆ ಬೈಗುಳವೇ! ಯೋಚಿಸಿ ಹೇಳುತ್ತಾನೆ ಕಬೀರ - ಎಲ್ಲವೂ ಹೇಗಿದೆಯೋ ಸರಿಯಾಗಿದೆ ಹಾಗೇ  ॥ ೩೭ ॥  ಕಬೀರ ಇದು ಪ್ರೇಮದ ಮನೆ - ಸೋದರತ್ತೆಯ ಮನೆಯಲ್ಲ ತಲೆ ಬಾಗಿಸಿ ಬಂದವನು ಮಾತ್ರ ಬಾಗಿಲೊಳಗೆ ಬರಬಲ್ಲ  ॥೩೮॥  ಕೈಯೊಳು ಮಾಲೆ ಸುತ್ತುತ್ತಿಹುದು; ಬಾಯೊಳು ನಾಲಗೆ ಸುತ್ತುತ್ತಿಹುದು ಮನಸ್ಸು ಹತ್ತೆಡೆ ಸುತ್ತುತ್ತಿಹುದು; ಸ್ಮರಣೆ ಇದೆಂಥದೋ ಬಂಧು?   ॥೩೯

ಕಬೀರನ ಹತ್ತು ದ್ವಿಪದಿಗಳು (೨೧ - ೩೦)

ಮೂಲ: ಮಹಾತ್ಮಾ ಕಬೀರ್  ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್  ಕಲ್ಲು ಪೂಜೆಗೇ ಹರಿ ದೊರಕಿದರೆ ಪೂಜಿಸುವೆನು ನಾ ಬೆಟ್ಟ  ಬೀಸುವಕಲ್ಲೇ ಎಷ್ಟೋ ಮೇಲು ಕುಟ್ಟಿ ತಿನಬಹುದು ಬತ್ತ   || ೨೧॥  ಮನದ ಹಮ್ಮು ಕಳೆಯಬೇಕು ಹಾಗಿರಲಿ ನಿನ್ನ ಮಾತು  ನಿನ್ನ ಹೊಟ್ಟೆಯೂ ತಂಪು  ಕೇಳಿದವನಿಗೂ ಇಂಪು   || ೨೨ ॥ ಎಳ್ಳಿನಲ್ಲಿರುವಂತೆ ಎಣ್ಣೆ ಕಲ್ಲಿನಲ್ಲಿರುವಂತೆ ಬೆಂಕಿ   ನಿನ್ನೊಳಗೆ ನಿನ್ನ ದೇವರುಎಚ್ಚೆತ್ತು ನೋಡು ಮಂಕೆ   || ೨೩  ॥ ಮಾಯೆಗೂ ಸಾವಿಲ್ಲ ಮನಸ್ಸಿಗೂ ಸಾವಿಲ್ಲ  ಸಾಯುವುದೊಂದೆ ಶರೀರ  ಆಸೆಗೂ ಸಾವಿಲ್ಲ ತೃಷ್ಣೆಗೂ ಸಾವಿಲ್ಲ ಹೇಳಿಹೋಗಿದ್ದಾನೆ ದಾಸ ಕಬೀರ || ೨೪ ॥  ನಿರ್ಮಲವಾಯ್ತು ಕಬೀರನ ಮನಸು ಗಂಗೆಯ ನೀರಿನ ಹಾಗೆ ಕಬೀರ ಕಬೀರ ಎಂದು ಕರೆಯುತ್ತ ಹರಿಯೂ ಬರುವನು ಹಿಂದೆ   || ೨೫ ॥ ಗುರುವೇ ಧೋಬಿ ಶಿಷ್ಯನೆ ಅರಿವೆ ಅರಿವೇ ಸಾಬೂನು ತುಂಡು ಗ್ರಂಥಗಳೆಂಬ ಬಂಡೆಯ ಮೇಲೆ ತಿಕ್ಕಿ ತೊಳೆದು ಹೊಳಹೊಳಪು ॥ ೨೬ ॥  ಅರಿವಿರುವುದು ಜೀವಿಗೇ ತಿಳಿವಿರುವುದು ಜೀವಿಗೇ ಆಸೆಯೂ ಜೀವಂತ ಪ್ರಾಣಿಗೆ ಕರ್ಮದ ಬಂಧನ ಕಳೆಯದೆ ಜೀವಿಯೆ! ಮುಕ್ತಿಗೆ ಆಸೆಯ ಪಡುವೆ!    || ೨೭  ॥ ಪ್ರೇಮವೆಂದರೇನೆಂದರೆ ಬರೆಯಲು ಯಾರಿಗೆ ಸಾಧ್ಯ? ಮೂಕ ಮುಗುಳುನಗೆ ನಗುತಿಹ ನೋಡು ತಿನ್ನುತ ಸಿಹಿಸಿಹಿ ಖಾದ್ಯ    || ೨೮ ॥ ಚಿಂತೆಎಂಬುದೊಂದು ಡಾಕಿಣಿ! ಕರುಳೇ ಕತ್ತರಿಸಿ ತಿನ್ನುವಳು ಆಕೆ ಪಾಪ ವೈದ್ಯನೇನು ಮಾಡಿಯಾನು ಔಷಧ ಆರೈಕೆ? 

ಕಬೀರನ ಹತ್ತು ದ್ವಿಪದಿಗಳು (೧೧ -೨೦)

ಮೂಲ: ಮಹಾತ್ಮಾ ಕಬೀರ್  ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್  ಆಸೆಯಳಿದರೆ ಚಿಂತೆ ಹರಿಯಿತು! ಮನಸುಗೊಂಡಿತು ನಿರ್ಮಲ! ಯಾರಿಗೇನೂ ಬೇಡವೋ ಈ ಭೂಮಂಡಲವೇ ಅವನ ಪದತಲ   ॥೧೧॥  ನಿರಾಸೆಗೆ ಒಳಗಾದವನು ತನ್ನ ಜೀವನವೇ ಮುಗಿದುಹೋಯಿತು ಎಂದು ತಿಳಿದುಕೊಳ್ಳುತ್ತಾನೆ. ಇಂಥವನಿಗೆ ಕಬೀರನ ಸಾಂತ್ವನ ಹೀಗೆ: "ನಿನ್ನ ಆಶಾಗೋಪುರ ಬಿದ್ದುಹೋಯಿತೆ? ಚಿಂತೆ ಹರಿಯಿತು! ನಿನ್ನ ಮನಸ್ಸು ಈಗ ನಿರ್ಮಲವಾಯಿತು. ಯಾರಿಗೆ ಆಸೆಗಳಿಲ್ಲವೋ ಇಡೀ ಭೂಮಿಯೇ ಅವರ ಪಾದದ ಕೆಳಗೆ ಬಿದ್ದಿರುತ್ತದೆ!" ಕೆಟ್ಟದೇನೆಂದು ಅರಸಿ ಹೊರಟೆ; ನನಗೆ ಕೆಟ್ಟದ್ದು ಏನೂ ಸಿಕ್ಕಲಿಲ್ಲ  ನನ್ನೊಳಗೆ ಇಣುಕಿ ನೋಡಿದರೆ ಇನ್ನಷ್ಟು ಕೆಟ್ಟವರು ಇನ್ನೊಬ್ಬರಿಲ್ಲ    ॥೧೨॥  ಬೇರೊಬ್ಬರಲ್ಲಿ ತಪ್ಪು ಹುಡುಕಲು ಹೊರಡುವುದು ಮನುಷ್ಯನ ಸಹಜ ಸ್ವಭಾವ.  "ಇತರರಲ್ಲಿ ದೋಷ ಹುಡುಕಲು ಹೊರಟಾಗ ಏನೂ ಸಿಕ್ಕದಿದ್ದಾಗ ನಿನ್ನೊಳಗೆ ನೋಡಿಕೋ - ದೋಷ ನಿನ್ನಲ್ಲೇ ಇದೆ" ಎಂದು ಕಬೀರ ಎಚ್ಚರಿಸುತ್ತಾನೆ. ಒಬ್ಬ ಗೃಹಿಣಿ ತನ್ನ ಮನೆಯ ಕಿಟಕಿಯಿಂದ ಪ್ರತಿದಿನ ಪಕ್ಕದ ಮನೆಯ ಗೃಹಿಣಿ ಬಟ್ಟೆ ಒಣಗಿಹಾಕುವುದನ್ನು ನೋಡುತ್ತಾ "ಅಯ್ಯೋ, ಅಷ್ಟೊಂದು ಕಲೆಗಳಿದ್ದರೂ ಆಕೆಯ ಕಣ್ಣಿಗೆ ಕಾಣಲಿಲ್ಲವೇ?" ಎಂದು ತನ್ನ ಗಂಡನ  ಬಳಿ ಹೇಳಿಕೊಳ್ಳುತ್ತಿದ್ದಳಂತೆ. ಒಂದು ದಿನ ಅವಳ ಮನೆಯ ಕಿಟಕಿ ತೆರೆದು ನೋಡಿದಾಗ ಹರವಿಡ ಬಟ್ಟೆಗಳು ಶುಭ್ರವಾಗಿದ್ದುದು ಅವಳಿಗೆ ಕಾಣುತ್ತದೆ. ಕಲೆ ಇದ್ದದ್ದು ತನ

ಕಬೀರನ ಹತ್ತು ದ್ವಿಪದಿಗಳು (೧-೧೦)

ಮೂಲ: ಮಹಾತ್ಮಾ ಕಬೀರ್  ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್  ಇಸವಿ ೧೩೯೮. ಇಂದಿನ ಕಾಶಿಗೆ (ಬನಾರಸ್) ಹತ್ತಿರದಲ್ಲಿರುವ ಲಹರ್ತಾರಾ ಎಂಬ ಸ್ಥಳದಲ್ಲಿ ಒಬ್ಬ ಬ್ರಾಹ್ಮಣ ವಿಧವೆಯ ಹೊಟ್ಟೆಯಲ್ಲಿ ಒಂದು ಗಂಡು ಮಗು ಜನಿಸಿತು. ಸಮಾಜದ ನಿಂದೆಗೆ ಹೆದರಿದ ಆಕೆ ಮಗುವನ್ನು ತೊರೆದು ಹೋದಳು. ನೀರೂ ಮತ್ತು ನೀಮಾ ಎಂಬ ಬಡ, ಅನಕ್ಷರಸ್ಥ ಮುಸಲ್ಮಾನ ದಂಪತಿಗಳು ಈ ಮಗುವನ್ನು ಸಾಕಿದರು. ಈ ಮಗುವೇ ಮುಂದೆ ಮಹಾತ್ಮಾ ಕಬೀರ್ ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಸಾಕು ತಂದೆ ತಾಯಿಯರು ವೃತ್ತಿಯಲ್ಲಿ ನೇಕಾರರು. ಈ ಮಗುವನ್ನು ಸಂತ ರಾಮಾನಂದರು ಶಿಷ್ಯನನ್ನಾಗಿ ಸ್ವೀಕರಿಸಿದರು. ಶ್ರೀ ರಾಮಾನಂದರು ದೇಹತ್ಯಾಗ ಮಾಡಿದಾಗ ಕಬೀರನಿಗೆ ೧೩ ವರ್ಷ ವಯಸ್ಸು.  ಕಬೀರನಿಗೆ ದೊರೆತ ಶಿಕ್ಷಣ ಯಾವ ಬಗೆಯದು ಎಂಬುದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಅವನು ಸನ್ಯಾಸ ಸ್ವೀಕರಿಸಲಿಲ್ಲ. ಒಬ್ಬ ಗೃಹಸ್ಥನಾಗಿ, ನೇಕಾರನಾಗಿ, ಚಿಂತಕನಾಗಿ ಸಮನ್ವಯದ ಬದುಕನ್ನು ಜೀವಿಸಿದ.  ಭಗೋದಾಸ ಮತ್ತು ದರ್ಮದಾಸ ಎಂಬ ಅವನ ಇಬ್ಬರು ಶಿಷ್ಯರು ಅವನ ವಾಣಿಯನ್ನು ಬರೆದಿಟ್ಟರು ಎಂಬ ಪ್ರತೀತಿ ಇದೆ.  ಆದರೆ ಅವನ ದ್ವಿಪದಿಗಳು ಮತ್ತು ಭಜನೆಗಳು ಬಾಯಿಂದ ಬಾಯಿಗೆ ಸಾಗಿ ಬಂದಿದ್ದೆ ಹೆಚ್ಚು.  ಅವನ ದ್ವಿಪದಿಗಳನ್ನು ಶ್ಲೋಕಗಳೆಂದೂ, ಸಾಖಿಗಳೆಂದೂ ಕರೆಯುತ್ತಾರೆ. ಸಾಖಿ ಎಂದರೆ ಸಾಕ್ಷಿ. ಅವನ ಅನುಯಾಯಿಗಳಿಗೆ ಅವನ ವಾಣಿಯು ಸತ್ಯದ ಸಾಕ್ಷಿಯಾಗಿ ಕಂಡಿವೆ. ಕಬೀರನ ರಚನೆಗಳು - ಕಬೀರ ಗ್ರಂಥಾವಲಿ, ಸಾಖೀಗ್ರಂಥ

ತುಲಸೀದಾಸರ ದ್ವಿಪದಿಗಳು

ಇಮೇಜ್
ಸಿ.ಪಿ. ರವಿಕುಮಾರ್   ವಾಲ್ಮೀಕಿ ರಾಮಾಯಣವನ್ನು ಅವಧಿ ಭಾಷೆಯಲ್ಲಿ "ಶ್ರೀರಾಮಚರಿತಮಾನಸ" ಎಂಬ ಗ್ರಂಥದ ರೂಪದಲ್ಲಿ ಪುನರ್ಸೃಷ್ಟಿಸಿ ತುಲಸೀದಾಸರು ಭಾರತೀಯ ಸಾಹಿತ್ಯಲೋಕದಲ್ಲಿ ಮೇರುವಿನಂತೆ ನಿಂತಿದ್ದಾರೆ.  ರಾಮನ ಚರಿತ್ರೆಯನ್ನು ಜನರ ಆಡುಭಾಷೆಯಲ್ಲಿ ಮನೋಹರವಾಗಿ ಸೃಷ್ಟಿಸಿ ಭಕ್ತಿಪಂಥಕ್ಕೆ ಅಮೂಲ್ಯವಾದ ಕಾಣಿಕೆಯನ್ನು ತುಲಸೀದಾಸರು ನೀಡಿದರು. ರಾಮಚರಿತ ಮಾನಸದ ಪಂಕ್ತಿಗಳು ಇಂದು ನಮ್ಮ ಸಂಸ್ಕೃತಿಯ ಭಾಗಗಳಾಗಿ ಹೋಗಿವೆ.  ಈ ಗ್ರಂಥವನ್ನು (ಕನ್ನಡದಲ್ಲಿ ಕುಮಾರವ್ಯಾಸನ ಭಾರತವನ್ನು ಪ್ರತಿನಿತ್ಯ ಓದುತ್ತಿದ್ದ ಹಾಗೆ) ಉತ್ತರಭಾರತದಲ್ಲಿ ಇಂದಿಗೂ ಪ್ರತಿನಿತ್ಯ ಪಠಿಸುವ ಪದ್ಧತಿ ಇದೆ.   ಅವರು ರಚಿಸಿದ "ಶ್ರೀರಾಮಚಂದ್ರ ಕೃಪಾಳು ಭಜಮನ" ಎಂಬ ರಾಮಸ್ತುತಿ ಹಾಗೂ "ಹನುಮಾನ್ ಚಾಲೀಸಾ"  ಪ್ರತಿದಿವಸವೂ ಕೋಟ್ಯಾಂತರ ತುಟಿಗಳ ಮೇಲೆ ಇಂದಿಗೂ ನಲಿದಾಡುತ್ತವೆ.  ಅವರು ಪ್ರಾರಂಭಿಸಿದ "ರಾಮಲೀಲಾ" ಎಂಬ ಜಾನಪದ ನಾಟಕ ಪರಂಪರೆ ಉತ್ತರಭಾರತದಲ್ಲಿ ಇಂದಿಗೂ ಜೀವಂತವಾಗಿದೆ. ಗೋಸ್ವಾಮಿ ತುಲಸೀದಾಸರನ್ನು ವಾಲ್ಮೀಕಿಯ ಅವತಾರವೆಂದು ನಂಬುತ್ತಾರೆ. ಶಿವನು ಪಾರ್ವತಿಗೆ "ಕಲಿಯುಗದಲ್ಲಿ ವಾಲ್ಮೀಕಿಯು ಅವತಾರ ತಳೆದು ತುಲಸಿದಾಸ ಎಂಬ ಹೆಸರಿನಲ್ಲಿ ಜನರ ಭಾಷೆಯಲ್ಲಿ ರಾಮನ ಕಥೆಯನ್ನು ರಚಿಸುತ್ತಾನೆ" ಎಂದು ಭವಿಷ್ಯ ನುಡಿದನಂತೆ. ಇದಕ್ಕೆ ಸಂಬಂಧಿಸಿದ ಇನ್ನೊಂದು ಕಥೆ ಹೀಗಿದೆ. ಹನುಮಂತನು ಅನೇಕ

ನಮ್ಮ ದೇಶ

ಇಮೇಜ್
ಮೂಲ ಹಿಂದಿ ಕವಿತೆ: ಅಜ್ಞೇಯ  ಕನ್ನಡಕ್ಕೆ ಸಿ.ಪಿ. ರವಿಕುಮಾರ್  ಹಳ್ಳಿಗಳಲ್ಲಿ  ಹುಲ್ಲುಗರಿ ಹೊದ್ದಿಸಿದ ಈ ಹರಕು ಮುರುಕು ಜೋಪಡಿಗಳಲ್ಲಿ  ವಾಸವಾಗಿದೆ ನಮ್ಮ ದೇಶ.  ತಮಟೆಗಳಲ್ಲಿ  ಬಿದುರಿನ ಕೊಳಲುಗಳಲ್ಲಿ  ಹೊರಟ ಸ್ವರಗಳಲ್ಲಿದೆ  ನಮ್ಮ ಸಾಧನೆಯ ಸಾರ ವಿಶೇಷ.  ಇದರ ಅಂತರಾಳವನ್ನು  ಗೊತ್ತಾಗದಂತೆ ಬಂದು ಕಚ್ಚುತ್ತದೆ  ನಗರಗಳ ವಾಸನಾಮಯ  ಮುಖಹೀನ ವಿಷಪೂರ್ಣ ನಾಗಶೇಷ.  ಇವರಲ್ಲೇ ಹಾಸುಹೊಕ್ಕಾದ  ತನ್ನ ಅಮಾಯಕ ಸಂಸ್ಕೃತಿಯ  ದುರ್ದೆಶೆಯನ್ನು ಕಂಡು  ಸಭ್ಯತೆಯ ಭೂತದ ಅಟ್ಟಹಾಸ.  Kannada Translation by C.P. Ravikumar of a Hindi Poem by the famed poet Ajneya

ನನ್ನನೆಲ್ಲಿ ಅರಸುವೆ?

ಇಮೇಜ್
ಕವಿತೆ ಓದುವ ಮುನ್ನ ಸಂತ ಕವಿ ಕಬೀರನ ಈ ರಚನೆಯನ್ನು ಭಜನೆಯ ರೂಪದಲ್ಲಿ ಬಹಳ ಸುಂದರವಾಗಿ ಭೂಪೇಂದ್ರ ಎಂಬ ಹಾಡುಗಾರ ಹಾಡಿದ್ದಾರೆ. ಈ ಕವಿತೆಯಲ್ಲಿ ಒಂದು ವಿಶೇಷವಿದೆ - ಇಲ್ಲಿ ಭಗವಂತನೇ ಭಕ್ತನೊಂದಿಗೆ ಮಾತಾಡುತ್ತಿದ್ದಾನೆ! ಇಂಥದೊಂದು ರಚನೆಯನ್ನು ಮಾಡಲು ಕಬೀರನಲ್ಲಿದ್ದ ಆತ್ಮವಿಶ್ವಾಸವಾದರೂ ಎಷ್ಟಿದ್ದಿರಬೇಕು! ತನಗಾಗಿ ಎಲ್ಲಾ ಕಡೆ ಹುಡುಕಾಡುವ ಭಕ್ತನಿಗೆ ಭಗವಂತ ತಾನು ಎಲ್ಲೆಲ್ಲಿ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾನೆ. "ಪುಣ್ಯಕ್ಷೇತ್ರಗಳಲ್ಲಿ ನನ್ನನ್ನು ಹುಡುಕಬೇಡ - ಅಲ್ಲಿರುವ  ಕಲ್ಲಿನ ಶಿಲ್ಪಗಳಲ್ಲಿ ನಾನು ವಾಸ ಮಾಡುತ್ತಿಲ್ಲ! ನನ್ನನ್ನು ಕಾಬಾದಲ್ಲಿ, ಕೈಲಾಸಪರ್ವತದಲ್ಲಿ ಹುಡುಕಬೇಡ!" ಎಂಬ ಮಾತಿನ ತೂಕ ಬಹಳ ದೊಡ್ಡದು. ಇಂದು ಪುಣ್ಯ ಕ್ಷೇತ್ರಗಳಲ್ಲಿ ವ್ಯಾಪಾರಿ ಧರ್ಮವೇ ಪ್ರಧಾನವಾಗಿ ಕಾಣುತ್ತದೆ. ಭಕ್ತರು ಅರ್ಪಿಸಿದ  ಕಾಣಿಕೆಯನ್ನು ಕದಿಯುವ ಪೂಜಾರಿಯನ್ನು ನಾನು ನೋಡಿದ್ದೇನೆ.  ಉತ್ತರ ಭಾರತದ ಕ್ಷೇತ್ರಗಳಲ್ಲಿ ಪಂಡಾ ಎಂಬ ಪೂಜಾರಿಗಳ ಹಾವಳಿಯನ್ನು ನಾವೆಲ್ಲರೂ ಕೇಳಿದ್ದೇವೆ. ಇಷ್ಟಾಗಿ "ಪೂಜಾರಿ" ಎಂಬ ಪದದ ಗುಟ್ಟು ನನಗೆ ಇನ್ನೂ ಗೊತ್ತಾಗಿಲ್ಲ; ಅವನು  ಪೂಜೆಯ ಶತ್ರು ಎಂಬ ತಾತ್ಪರ್ಯವೇ?! ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ ಎಂಬ ಗಾದೆ ಇದೆ. ವರ ಕೊಡದಿದ್ದರೆ ಪರವಾಗಿಲ್ಲ, ಶಾಪ ಕೊಡದಿದ್ದರೆ ಅದು ಪುಣ್ಯ! ಇಂಥ ಅನುಭವ ನನಗೆ ಅಲಾಹಾಬಾದ್ ನ ಸಂಗಮದಲ್ಲಿ ಆಗಿದೆ! ಪೂಜಾರಿ ಇರುವ ಕಡೆ ಪ

ನಿನ್ನನ್ನು ಕಂಡಾಗ

ಇಮೇಜ್
ಮೂಲ ಹಿಂದಿ ಕವಿತೆ (ಗಜಲ್): ಜಾವೇದ್ ಅಖ್ತರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ನಿನ್ನನ್ನು ಕಂಡಾಗ ಮನದಲ್ಲಿ ಹೊಳೆದದ್ದು ಬಾಳು ಕಡುಬಿಸಿಲು, ನೀನು ದಟ್ಟ ನೆರಳು ಇಂದು ಮತ್ತೊಮ್ಮೆ ಬಯಕೆ ಹುಟ್ಟಿ ಎದೆಯೊಳಗೆ  ಹೃದಯಕ್ಕೆ ಮತ್ತೆ ಹೇಳಬೇಕಾಯ್ತು ತಿಳುವಳಿಕೆ  ನೀನು ತೆರಳಿದ ಬಳಿಕ ಯೋಚಿಸುವೆ ನಾನು  ಪಡೆದುದೇನನ್ನೋ ನಾನು ಕಳೆದುದೇನನ್ನು? ಗುನುಗಲಾರೆನೋ ನಾನಾವ ಗೀತೆಯನ್ನು ಕಾಲ ಹಾಡಿತೇಕೋ ಅಂಥ ರಾಗವನ್ನು  (ಈ ಕವಿತೆಯನ್ನು ಒಬ್ಬ ಪ್ರಸಿದ್ಧ ಗಜಲ್ ಗಾಯಕ ಹಾಡಿದ್ದಾರೆ ... ಯಾವ ಗಾಯಕ? ಯಾವ ಗೀತೆ?) Kannada translation by C.P. Ravikumar of a gazal by Javed Akhtar.

ಹಾದಿಗಳು

ಇಮೇಜ್
ಹಾದಿಗಳು  ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಗುಲ್ಜಾರ್ ಅವರು ಬರೆದ ಈ ಕವಿತೆಯನ್ನು ಆಂಧಿ ಚಿತ್ರದಲ್ಲಿ ಯುಗಳಗೀತೆಯಾಗಿ ಬಳಸಿಕೊಳ್ಳಲಾಗಿದೆ.  ಇದನ್ನು ಗುಲ್ಜಾರ್ ಚಿತ್ರಕ್ಕಾಗಿ ಬರೆದರೋ ಅಥವಾ ಅವರದೇ ಕವಿತೆಯನ್ನು ಚಿತ್ರಗೀತೆಯಾಗಿ ಅಳವಡಿಸಿಕೊಳ್ಳಲಾಯಿತೋ ಹೇಳುವುದು ಕಷ್ಟ. ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಪ್ರೀತಿಸಿ ಮದುವೆಯಾದರೂ ತದನಂತರ ಭಿನ್ನಾಭಿಪ್ರಾಯ ಉಂಟಾಗಿ ಬೇರಾಗಿದ್ದಾರೆ. ಅವರ ರಸ್ತೆಗಳು ಬೇರಾಗಿವೆ.  ನಾಯಕಿಯ ರಸ್ತೆ ಬಿರುಗಾಳಿಯಂತೆ ಹಾದು ಹೋಗುವ ರಸ್ತೆ. ನಾಯಕನದ್ದು ನಾಚಿ ಮೆಲ್ಲನೆ ಕೆಳಗಿಳಿಯುವ ರಸ್ತೆ. ನಾಯಕಿಯದು ತೀವ್ರಗತಿಯ ರಸ್ತೆ. ನಾಯಕನದ್ದು  ಆಲಸ ಹೆಜ್ಜೆಯ ರಸ್ತೆ.  ನಾಯಕಿಯದು ಗಾಜಿನ ಅರಮನೆಗೆ ಹೋಗುವ ರಸ್ತೆ. ನಾಯಕನದ್ದು ಕಡ್ಡಿಗಳ ಪುಟ್ಟ ಗೂಡಿಗೆ ಹೋಗುವ ರಸ್ತೆ ...  ಆದರೆ ಈ ರಸ್ತೆಗಳು ಕೂಡಾ ಒಂದು ತಿರುವಿನಲ್ಲಿ ಮತ್ತೆ ಬಂದು ಸೇರಬಹುದು.  ಯಾವುದೋ ಒಂದು ರಸ್ತೆ ಅವರನ್ನು ಪರಸ್ಪರರತ್ತ ಕೊಂಡೊಯ್ಯಬಹುದು ಎನ್ನುವ ಕ್ಷೀಣ ಆಶಯದೊಂದಿಗೆ ಕವಿತೆ ಮುಗಿಯುತ್ತದೆ.  ಈ ಗೀತೆಯನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅದ್ಭುತವಾಗಿ ಹಾಡಿದ್ದಾರೆ.  ಈ ತಿರುವಿನಲ್ಲಿ ಹೊರಳುತ್ತವೆ  ಕೆಲವು ಆಲಸ ಹೆಜ್ಜೆಯ ದಾರಿಗಳು  ಕೆಲವು ತೀವ್ರಗತಿಯ ರಸ್ತೆಗಳು  ಕಲ್ಲು ಗೋಪುರಗುಡಿಗೆ  ಗಾಜಿನ ಅರಮನೆಗೆ  ಕಡ್ಡಿಗಳ ಪುಟ್ಟ ಗೂಡಿಗೆ  ಇದೇ ತಿರುವಿನಿಂದ ಸಾಗುತ್ತ

ನಿನ್ನ ನಗು

ಇಮೇಜ್
ಮೂಲ ಹಿಂದಿ ಕವಿತೆ: ಕುಸುಮ್ ಸಿನ್ಹಾ  ಕನ್ನಡಕ್ಕೆ: ಸಿ.ಪಿ. ರವಿಕುಮಾರ್   ನಿನ್ನ ನಗು ಹೇಗಿದೆ ಗೊತ್ತಾ? ಕಲಕಲ ಸದ್ದು ಮಾಡುತ್ತ  ಮೇಲಿಂದ ಧುಮುಕುವ ನೀರಿನಂತೆ  ಚಕಿತಳಾಗಿ ನಾ ನೋಡುತ್ತ ನಿಂತೆ ಕೊಚ್ಚಿಕೊಂಡು ಹೋಯ್ತು ನಿನ್ನ ನಗೆಯೊರತೆ  ಸುತ್ತಲೂ ಕವಿದಿದ್ದ ವಿಷಾದ-ನೀರವತೆ  ನಿನ್ನ ನಗು ಹೇಗಿದೆ ಗೊತ್ತಾ? ಶ್ರಾವಣದ ಜಡಿಯಂತೆ  ಬಿದ್ದು ಪಟಪಟ ಹನಿ ಒದ್ದೆಯಾಗಿ ಮೂಲೆಮೂಲೆ  ಮನೋ ಮರುಭೂಮಿಯ ನೀರಸತನದ ಮೇಲೆ  ಹಸಿರು ಒಮ್ಮೆಲೇ ಅವತರಿಸಿದಂತೆ  ಹೇಗಿದೆ ಎಂದರೆ ನಿನ್ನ ನಗು  ಅಮಾವಾಸ್ಯೆ ತರುವಾಯ ಚಂದ್ರಕಾಂತಿ ಸುರಿದಂತೆ ಹಾಲು ಒಣನೆಲದಿಂದ ಪುಟಿದಂತೆ ಕಾರಂಜಿ ಸಿಹಿನೀರು  ಉದಾಸ ಮನದಲ್ಲೆದ್ದಂತೆ ಮಧುರ ಪ್ರೇಮಭಾವನೆ  ಕಂಡಂತೆ ದಾರಿ ಅತ್ತಿತ್ತ ಸುತ್ತಿ ದಣಿದವನಿಗೆ  ಬೇಸಗೆಯ ಮಧ್ಯಾಹ್ನ ಬೀಸಿದಂತೆ ತಂಗಾಳಿ  ಕೊಂಪೆಯಲ್ಲಿ ಕೇಳಿದಂತೆ ಕೋಕಿಲವಾಣಿ  ಶ್ರಾವಣದ ಮೊದಲ ಕಪ್ಪು ಮೋಡದ ಹಾಗೆ   ಹೌದು ಹೀಗೇ ಇದೆ ನಿನ್ನ ನಗೆ  ಹೇಗೆ ಉಳಿಸಿಕೊಂಡೆ ನೀನು  ಈ ನಿರ್ಮಮ ಜಗತ್ತಿನಲ್ಲಿ  ನಿನ್ನ ನಗೆ? ಮೂಲ ಹಿಂದಿ ಕವಿತೆ: ಕುಸುಮ್ ಸಿನ್ಹಾ  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  

ಹಕ್ಕಿಹಾಡು

ಇಮೇಜ್
ಮೂಲ ಹಿಂದಿ ಕವಿತೆ: ಶಿವಮಂಗಲ್ ಸಿಂಗ್ ಸುಮನ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್   ಮುಕ್ತ ಗಗನದ ಬಾನಾಡಿಗಳು  ಪಂಜರದೊಳಗೆ ಬಾಳಲಾರೆವು!  ಚಿನ್ನದ ಶರಗಳು ಮೃದು ಮೈತಾಕಿ  ರೆಕ್ಕೆ ಪುಕ್ಕಗಳು ಕ್ಷತಗೊಳ್ಳುವುವು!   ಹರಿವ ತಂಪು ಜಲ ಕುಡಿಯುವ ನಾವು ಬಳಲಿ ಬಾಯಾರಿ ಸಾವುದೆ  ಮೇಲು ಬೇವಿನ ಹಣ್ಣೇ ಸವಿಯೆನಿಸುವುದು ಬೇಡ ಬೆಳ್ಳಿ ಬಟ್ಟಲಿನೊಳು ಹಾಲು! ಚಿನ್ನದ ಬೇಡಿಯ ಬಂಧನದಲ್ಲಿ ಹಾರಾಟದ ಸವಿ ಮರೆಯುತಿದೆ ಸಿಕ್ಕದಿನ್ನು ಅಯ್ಯೋ! ಬರಿ ಕನಸು ಸುಂದರ ಲತೆಗಳ ತೂಗುಯ್ಯಾಲೆ  ಎಂಥ ಆಸೆಗಳು ಎದೆಯೊಳಗಿದ್ದವು! ಬಾನಂಚನ್ನೇ ಹುಡುಕುವ ಹುಚ್ಚು! ಕೆಂಪು ಕಿರಣದಂತೆಮ್ಮ ಕೊಕ್ಕಿನಲ್ಲಿ ಹೊಳೆವ ಹೊನ್ನ ದಾಳಿಂಬೆಯ ಕುಚ್ಚು! ಕ್ಷಿತಿಜವನ್ನು ಮೊದಲಾರು ಸೇರುವರು ಒಬ್ಬರಿಗೊಬ್ಬರು ಪಂದ್ಯವ ಕಟ್ಟಿ ಹಾರಿದೆವೆಂದರೆ ಹಠವೆಂತಹುದು ನಿಂತರೆ ಕೊನೆಗೂ ಗುರಿಯನು ಮುಟ್ಟಿ ರೆಂಬೆಗಳಾಶ್ರಯ ಬೇಡುವುದಿಲ್ಲ ಮುರಿದು ಹಾಕು ಬೇಕಾದರೆ ಗೂಡು ಕಸಿಯದಿರೋ ಹಾರಾಟದ ಆನಂದ ಇರುತಿರೆ ಭುಜದೊಳು ರೆಕ್ಕೆಗಳೆರಡು 

ಕದಂಬ ವೃಕ್ಷ

ಇಮೇಜ್
ಕದಂಬ ವೃಕ್ಷ  ಮೂಲ ಹಿಂದಿ ಕವಿತೆ: ಸುಭದ್ರಾ ಕುಮಾರಿ ಚೌಹಾನ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಈ ಕದಂಬ ವೃಕ್ಷವು, ಏನಮ್ಮಾ, ಇರುತಿರೆ ಯಮುನಾ ತೀರದಲಿ! ನಾನೂ ಏಕಾಗೆನು ಶ್ರೀಕೃಷ್ಣ, ವೃಕ್ಷದ ರೆಂಬೆಗಳಲ್ಲಿ? ಎರಡೇ ಕಾಸಿನ ಕೊಳಲಮ್ಮಾ! ಕೊಂಡು ಕೊಟ್ಟು ನೀ ನೋಡು!  ಮಾಯೆಯಲ್ಲಿ  ಮರ ಕರೆವುದೆನ್ನನು ಕೆಳಗಿಳಿಸುತ ತನ್ನಯ ತೋಳು! ನಿನ್ನ ಕಣ್ಣು ತಪ್ಪಿಸಿ ನಾನಾಗ ಹೋಗುವೆನಮ್ಮಾ ಅಲ್ಲಿ! ಕೆಳಗಿನ ರೆಂಬೆಯ ಮೇಲ್ಗಡೆ ಕುಳಿತು ಸೇರುವೆ ನಾ ತುತ್ತತುದಿ! ಅಲ್ಲೇ ಎಲೆಗಳ ಮರೆಯಲ್ಲಾಗ ಮೆಲ್ಲನೆ ಉದುವೆ ಕೊಳಲು ಅಮ್ಮಾ! ಅಮ್ಮಾ! ಸ್ವರವನ್ನೂದುತ ನಿನ್ನನು ಮೋಹದಿ ಕರೆದು! ನನ್ನಯ ಮುರಳೀಗಾನವ ಕೇಳಿ ನೀ ತಡೆಯದೆ ಆನಂದ  ಓಡೋಡುತ್ತಾ ಬರುವೆ, ಲೆಕ್ಕಿಸದೆ ಕೆಲಸ-ಕಾರ್ಯಗಳ ಬಂಧ! ನೀ ಬರುವುದು ಕಾಣುತಲೇ ಅಮ್ಮಾ! ಅಡಗುವೆ ಎಲೆಮರೆಯಲ್ಲಿ! ಅಲ್ಲಿಂದಲೆ ಮೆಲುನಾದವ ಮಾಡುತ ನಗುವೆನು ನಾ ಮನದಲ್ಲಿ! ಎಷ್ಟೇ ಕರೆದರೂ ಬಾರೆನು! ಆನಂದಿಸುವೆನು ನಿನ್ನ ಪ್ರತೀಕ್ಷೆ!  ನಿನ್ನಯ ಸಹನೆಗೆ ನಿನ್ನಯ ಪ್ರೀತಿಗೆ ಕೊಡುವೆನು ನಾನು ಪರೀಕ್ಷೆ! ಬಾರೋ ಕಂದ! ಬಾ ಎಲ್ಲಿರುವೆ! ಎನ್ನುತ ನನ್ನನು ಕರೆವೆ! ಚಕ್ಕುಲಿ ತರುವೆನು!  ಉಂಡೆಯ ಕೊಡುವೆನು! ಎನ್ನುತ ನೀ ಗೋಗರೆವೆ! ನಿನ್ನನು ಇನ್ನೂ ಆಡಿಸುವಾಸೆಗೆ ಏರುವೆ ಇನ್ನೂ ಮೇಲೆ! ಅಯ್ಯೋ ನನಗೇನಾಗುವುದೋ ಎಂದು ಹೆದರುವೆ ನೀ ಮರಿಹುಲ್ಲೆ! ವ್ಯಾಕುಲಗೊಳ್ಳುತ ಅಲ್ಲೇ ಮರದಡಿ ಕುಳಿತು ಬಿಡುವೆ ಸ

ಅಮ್ಮಾ ಹೇಳೊಂದು ಕಥೆ!

ಇಮೇಜ್
ಅಮ್ಮಾ ಹೇಳೊಂದು ಕಥೆ! ಮೂಲ ಹಿಂದಿ ಕವಿತೆ: ಮೈಥಿಲಿಶರಣ ಗುಪ್ತ  ಕನ್ನಡಕ್ಕೆ: ಸಿ.ಪಿ. ರವಿಕುಮಾರ್   (ಹಿಂದಿಯಲ್ಲಿ ಮೈಥಿಲಿಶರಣ ಗುಪ್ತ ಅವರದ್ದು ದೊಡ್ಡ ಹೆಸರು. ಗೌತಮ ಬುದ್ಧನ ಜೀವನದಲ್ಲಿ ಬರುವ ಕಥೆಯನ್ನು ಆಧರಿಸಿದ ಈ ಕಥನ ಕವನ ಅವರ ಪ್ರಸಿದ್ಧ ರಚನೆ. ಗೌತಮನ ಮಗ ರಾಹುಲ ತನ್ನ ತಾಯಿ ಯಶೋಧರೆಯನ್ನು ಕಥೆಗಾಗಿ ಪೀಡಿಸುತ್ತಾನೆ. ಅಮ್ಮಾ ಹೇಳೊಂದು ಕತೆ! ಈ ಕವಿತೆಯ ಛಂದಸ್ಸು ವಿಶಿಷ್ಟವಾಗಿದೆ.) "ಅಮ್ಮಾ ಹೇಳೊಂದು ಕತೆ!" ಅಜ್ಜಿ ಎಂದುಕೊಂಡೆಯೋ ಏನು ಕತೆ? "ಅಜ್ಜಿಯಲ್ಲ! ಅಜ್ಜಿಯ ಮಗಳು!  ದಾದಿಯೇ ಈ ಸಂಗತಿ ಹೇಳಿದಳು!  ತಲೆದಿಂಬಾಗಿದೆ ನಿನ್ನಯ ತೋಳು   ಹೀಗೇ ಮಲಗಿರುವಾಗಲೆ ಹೇಳು   ರಾಜನದೋ ರಾಣಿಯದೋ ಗಾಥೆ!  ಅಮ್ಮಾ ಹೇಳೊಂದು ಕತೆ!" ನಿನ್ನ ಹಠವೇ ನಡೆಯಲಿ ಇಂದು! ಉಪವನದಲ್ಲಿ ಬೆಳಗಾಗಂದು  ನಿನ್ನ ತಂದೆ ಹೊರಟಿದ್ದರು ಮಿಂದು  ಬೆಳಗಿನ ವಾಯುಭ್ರಮಣಕ್ಕೆಂದು ...  ಎಲ್ಲೆಡೆ ಹೂ-ಪರಿಮಳ-ಮಾದಕತೆ! "ಹರಡಿದ ಹೂ-ಪರಿಮಳ-ಮಾದಕತೆ! ಮನೋಹರವಾಗಿದೆ  ನಿನ್ನ ಕತೆ!" ಬಣ್ಣಬಣ್ಣಗಳ ಹೂಗಳು ಅರಳಿ  ಹಿಮಬಿಂದುಗಳಿವೆ ಕುಸುಮಗಳಲ್ಲಿ ಮೆಲ್ಲನೆ ಬೀಸುತ್ತಿದೆ ತಂಗಾಳಿ  ಹರಿಯುತ್ತಿದೆ ತೊರೆ, ಜುಳುಜುಳು ವಾಣಿ! ಬಣ್ಣಿಸಲಾರೆನು ಮೋಹಕತೆ! "ಓಹೋ! ಹರಿಯುವ ತೊರೆಯಂತೆ!  ನನಗಾಗಲೇ ಇಷ್ಟವಾಯ್ತು ಕತೆ!" ನಭದಲಿ ಖಗಗಳ ಕಲರವವಿತ್ತು ಒಮ್ಮೆಲೇ ಮೇಲಿಂದೇನೋ ಬಿತ್

ದುಃಖಿ ಮನಸ್ಸಿನ ಪತ್ರಗಳು

ಇಮೇಜ್
ದುಃಖಿ ಮನಸ್ಸಿನ ಪತ್ರಗಳು  ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಪಾತ್ರೆಗಳನ್ನು ಹೀಗೆ ಕುಕ್ಕುವುದು  ಮಾತುಮಾತಿಗೂ ಸಿಡುಕುವುದು  ಇವು ಯಾವುದೋ ದುಃಖಿ ಮನಸ್ಸಿನ ಪತ್ರಗಳು  ಸುಸ್ತು ದೇಹದ ಮೇಲೆ ಕಾರ್ಯಭಾರ ಹೊತ್ತು  ಒಬ್ಬರಿಗೆ ಕೆಮ್ಮು ಇನ್ನೊಬ್ಬರಿಗೆ ಜಡ್ಡು  ಎಷ್ಟು ಪಗಾರವೋ ಸಾಲವೂ ಅಷ್ಟು  ಪ್ರತಿಸಲವೂ ಮಕ್ಕಳ ಮೇಲೆ ತೆಗೆದು ಸಿಟ್ಟು  ಕೈ ಎತ್ತಿ ಅನಂತರ ಪರಿತಪಿಸುವುದು ಅತ್ತು  ಯಾವುದೋ ದುಃಖಿ ಮನಸ್ಸಿನ ಪತ್ರಗಳು ಎಷ್ಟೊಂದು ಬಗೆಯ ವ್ಯಾಪಾರ  ವಿವಶವಾಗಿ ಮಾಡುತ್ತಿದೆ ದುರ್ಬಲ ಶರೀರ  ತಾನೇ ಸಮಸ್ಯೆ ತಾನೇ ಪರಿಹಾರ  ಇಷ್ಟರಲ್ಲೇ ಬಂದ ಅತಿಥಿಗಳ ಸತ್ಕಾರ  ಹೇಗೋ ಬರಿಸಿಕೊಂಡು ನಗುವ ಚಮತ್ಕಾರ  ಯಾವುದೋ ದುಃಖಿ ಮನಸ್ಸಿನ ಪತ್ರಗಳು

ಏರು ಎತ್ತರಕ್ಕೆ!

ಇಮೇಜ್
ಏರು ಎತ್ತರಕ್ಕೆ!  ಮೂಲ ಹಿಂದಿ ಕವಿತೆ: ದ್ವಾರಕಾ ಪ್ರಸಾದ್ ಮಹೇಶ್ವರಿ   ಕನ್ನಡಕ್ಕೆ: ಸಿ.ಪಿ. ರವಿಕುಮಾರ್   ಏರು ಎತ್ತರಕ್ಕೆ! ಎಷ್ಟೆಂದರೆ ಎಷ್ಟು ಎತ್ತರವೋ ಗಗನ! ನೋಡು ಇಡೀ ವಿಶ್ವವನ್ನು ಒಂದೇ ದೃಷ್ಟಿಯಿಂದ  ಸಿಂಚಿಸು ಧರೆಯನ್ನು ಸಮತಾವೃಷ್ಟಿಯಿಂದ  ಜಾತಿ ದ್ವೇಷಗಳ, ಧರ್ಮ ವೇಷಗಳ  ಕಪ್ಪು-ಬಿಳುಪು ರಾಗ ರೋಷಗಳ  ಜ್ವಾಲೆಯಲ್ಲಿ ಹೊತ್ತುರಿಯುವ ಜಗದಲ್ಲಿ  ಹರಿದು ಬಾ ತಣ್ಣಗೆ! ಹೇಗೆಂದರೆ ಹೇಗೆ ಹರಿಯುವುದೋ ಮಲಯ ಪವನ! ಹೊಸ ಕೈಗಳಿಂದ ರೂಪಿಸು ವರ್ತಮಾನವನ್ನು  ತುಂಬಿಸು ಹೊಸ ಕುಂಚದಿಂದ ಚಿತ್ರಗಳಿಗೆ ಬಣ್ಣ  ಹೊಸರಾಗಕ್ಕೆ ನವಸ್ವರವನ್ನಿತ್ತು  ಭಾಷೆಗೆ ಹೊಸ ಅಕ್ಷರವನ್ನಿತ್ತು  ಯುಗದ ಹೊಸ ರೂಪರಚನೆಯಲ್ಲಿ  ಮೌಲಿಕವಾಗು! ಎಷ್ಟೆಂದರೆ ಎಷ್ಟು ಮೌಲಿಕವಾಗಿದೆಯೋ ಸೃಜನ! ಅತೀತದಿಂದ ಅಷ್ಟೇ ತೆಗೆದುಕೋ ಎಷ್ಟು ಪೋಷಕವೋ ಜೀರ್ಣ ಶೀರ್ಣದ ಮೋಹ ಮೃತ್ಯುವಿನದೇ ದ್ಯೋತಕವೋ! ಮುರಿದು ಹಾಕು ಬಂಧನ  ನಿಲ್ಲದಿರಲಿ ಚಿಂತನ  ಶಾಶ್ವತ ಜೀವನದ ಚಿರಂತನ ಪ್ರವಾಹದಲ್ಲಿ  ಗತಿಮಯವಾಗು! ಎಷ್ಟೆಂದರೆ ಎಷ್ಟು ಗತಿಮಯವಾಗಿದೆಯೋ ಪರಿವರ್ತನ! ಧರೆಯನ್ನು ಸ್ವರ್ಗಸಮಾನ ಮಾಡಲು ಹೊರಟಿದ್ದೇವೆ  ಕಟ್ಟಲು ಹೊರಟಿದ್ದೇವೆ ಸ್ವರ್ಗಕ್ಕೂ ಧರೆಗೂ ಸೇತುವೆ  ಸೂರ್ಯ ಚಂದ್ರ ಬೆಳದಿಂಗಳು ತಾರೆ  ನಮಗೆ ಪ್ರತಿಕ್ಷಣವೂ ಆಸರೆ  ನೀಡು  ಕುರೂಪಕ್ಕೂ ಸ್ಫುರದ್ರೂಪವನ್ನು  ಸುಂದರನಾಗು! ಎಷ್ಟೆಂದರೆ ಎಷ್ಟು ಸುಂದರವೋ ಆಕರ್ಷಣ! 

ಮೈಲುಗಳ ತನಕ!

ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಹೀಗೇ ಉರಿಯಿತು ಬದುಕು, ಹೀಗೇ ಮೈಲುಗಳ ತನಕ!  ಬೆಳದಿಂಗಳು ನಾಲ್ಕು ದಿನ, ಬಿಸಿಲು ಮೈಲುಗಳ ತನಕ!  ಪ್ರೇಮವೆಂಬುವ ಗ್ರಾಮ ಎಂಥ ವಿಚಿತ್ರವೋ ಗೆಳೆಯ! ಇಲ್ಲಿ ದುಃಖದ ಹಾದಿ ಸವೆಯದು ಮೈಲುಗಳ ತನಕ! ಹೊರಟರೆ ಮನೆಬಿಟ್ಟು ಜೊತೆಯಾಯ್ತು ಮಗಳ ನಗೆಮುಗುಳು!  ಪರಿಮಳ ನೀಡುತಿತ್ತು ನಗೆಯ ಮೊಗ್ಗು ಮೈಲುಗಳ ತನಕ!  ತಾಯ ಸೆರಗಲ್ಲಿ ಮುಖವನಿಟ್ಟೆ, ಒಡನೆ ಸುರಿಯಿತು ಧೋ  ನನ್ನ ಕಣ್ಣೊಳಗಿದ್ದ ನೋವು ಮೈಲುಗಳ ತನಕ  ಸುಮ್ಮನಾದರೆ ನಾನು ಅಲ್ಲಿನ್ನಾರೋ ನುಡಿದರು ಆಗ  ನೀನು ನಿಂತರೂ ನಿನ್ನ ಮಾತು ಮೈಲುಗಳ ತನಕ  ನಿನ್ನವಳು ನಾನೆಂಬ ಅವಳ ಮಾತು ಮನದಲ್ಲಿ  ಕಲ್ಲು ಸಕ್ಕರೆಯಂತೆ ಕರಗುತ್ತಿತ್ತು ಮೈಲುಗಳ ತನಕ!