ಪೋಸ್ಟ್‌ಗಳು

Maithili Sharan Gupt ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜೀವನಕ್ಕೇ ವಿಜಯ

ಇಮೇಜ್
ಮೂಲ ಹಿಂದಿ ಕವಿತೆ - ಮೈಥಿಲೀಶರಣ ಗುಪ್ತ  ಅನುವಾದ - ಸಿ. ಪಿ. ರವಿಕುಮಾರ್  ವ್ಯರ್ಥ ಮೃತ್ಯುವಿನ ಭಯ ಜೀವನಕ್ಕೇ ವಿಜಯ ಬೇರನು ಸುದೃಢಗೊಳಿಸುತ ಜೀವ  ನಿತ್ಯ ಗಳಿಸುತಿದೆ ಹೊಸವೈಭವವ ಮರುವುಟ್ಟು ಪಡೆಯುವನು  ಮಗುವಲ್ಲಿ ಮಾನವ  ಈ ಆತ್ಮವು ಅಕ್ಷಯ  ಜೀವನಕ್ಕೇ ವಿಜಯ   ಜಾಗೃತಗೊಳುವುದು ಜೀವನ ಕಣ್ಬಿಚ್ಚಿ   ಮರಣವೋ!  ನಿಶ್ಚೇಷ್ಟಿತ,   ಕಣ್ಮುಚ್ಚಿ!  ಒಂದು ಬೀಜ ನೂರಾಗುವ ಸೃಷ್ಟಿ  ಕರ್ತನು ತುಂಬಾ ಸದಯ! ಜೀವನಕ್ಕೇ ವಿಜಯ ಜೀವನಕ್ಕಾಗಿ ಸಾಯಲೂ ನಾ ಸಿದ್ಧ! ಎಲ್ಲಡಗಿಸಲೀ ಧನವನು ಭದ್ರ?  ತಿಳಿಯದೆ ಬಳಸಿದರಿದರೌಚಿತ್ಯ  ಮಾತ್ರ ಖಂಡಿತ ಪ್ರಳಯ!  ಜೀವನಕ್ಕೇ ವಿಜಯ

ನರನಾಗಿ ಏಕೆ ನಿರಾಸೆ, ಮನವು ಅಧೀರ?

ಇಮೇಜ್
ಮೂಲ ಹಿಂದಿ ಕವಿತೆ: ಮೈಥಿಲೀಶರಣ ಗುಪ್ತ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ನರನಾಗಿ ಏಕೆ ನಿರಾಸೆ, ಮನವು ಅಧೀರ?  ಯಾವುದೇ ಕಾರ್ಯದಲ್ಲಿ ತೊಡಗಿಸು ನಿನ್ನುಸಿರು ಜಗತ್ತಿನಲ್ಲಿದ್ದು ಗಳಿಸು ಒಳ್ಳೆಯ ಹೆಸರು ನಿನ್ನ ಜನ್ಮಕ್ಕೂ ಇರುವುದೊಂದು ಅರ್ಥ: ಏನೆಂದು ತಿಳಿದುಕೋ, ಮಾಡದಿರು ವ್ಯರ್ಥ ಹೇಗಾದರೂ ಉಪಯೋಗವಾಗಲಿ ಶರೀರ  ನರನಾಗಿ ಏಕೆ ನಿರಾಸೆ, ಮನವು ಅಧೀರ?  ಸಾವರಿಸಿಕೋ ಸುಯೋಗ ಲುಪ್ತವಾಗುವ ಮೊದಲೇ!   ಸದುಪಾಯವು ಎಂದಾದರೂ ವ್ಯರ್ಥವಾಗಿದೆಯೇ? ಜಗವು ಸಹಕರಿಸೀತೆಂಬ ಸ್ವಪ್ನವನು ತೊರೆದು  ನೀನೇ ಮಾರ್ಗವನ್ನು ಮಾಡಿಕೋ ಕೊರೆದು  ಅಖಿಲೇಶ್ವರನು ಇದ್ದಾನೆ ನಿನಗೆ ಆಧಾರ!  ನರನಾಗಿ ಏಕೆ ನಿರಾಸೆ, ಮನವು ಅಧೀರ?  ನಿನಗೆ ಪ್ರಾಪ್ತವಾಗಿರುವಾಗ ಎಲ್ಲವೂ  ತತ್ತ್ವ ಎಲ್ಲಿ ಹೋಗಲು ಸಾಧ್ಯ ಹೇಳು ಆ ಸತ್ವ? ಮಾಡು ನಿನ್ನದೇ ತತ್ತ್ವಗಳ ಸುಧಾಪಾನ  ಎದ್ದು ಅಮೃತತ್ವದ ಕಡೆಗೆ ಇಡು ಹೆಜ್ಜೆಯನ್ನ  ದಾಟಿ ಬಾ ಮುಂದಕ್ಕೆ ಭವಕಾನನ ಘೋರ  ನರನಾಗಿ ಏಕೆ ನಿರಾಸೆ, ಮನವು ಅಧೀರ? ಆತ್ಮಗೌರವವನ್ನು ಮರೆಯದಿರು ಎಂದೂ  ನೆನಪಿರಲಿ  ಶಕ್ತಿಗಿನ್ನೂ ಬಂದಿಲ್ಲ ಕುಂದು, ಏನು ಕಳೆದರೂ ಕಳೆಯದಿರಲೆಂದೂ ಮಾನ  ಸತ್ತ ಮೇಲೂ ಜನರು ಮಾಡಬೇಕು ಗುಣಗಾನ  ಸಾಗಲಿ ಸಾಧನೆಯತ್ತ ನಿನ್ನ ಸಂಚಾರ  ನರನಾಗಿ ಏ...