ಮೋದಕೋಪಾಖ್ಯಾನ
ಮೋದಕೋಪಾಖ್ಯಾನ ಸಿ. ಪಿ. ರವಿಕುಮಾರ್ ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕಿದಂತೆ ಎನ್ನುವ ಮುದ್ದಣನ ಮಾತನ್ನು ಕೇಳಿದಾಗ ನಾನು ಕರಿಗಡುಬನ್ನು ಯಾರೋ ನನ್ನ ಗಂಟಲಿಗೆ ತುರುಕುತ್ತಿರುವ ದೃಶ್ಯ ಕಲ್ಪಿಸಿಕೊಂಡು ಭೀತನಾಗಿದ್ದೇನೆ. ಬಹುಶಃ ಮುದ್ದಣನು ಕಡುಬು ಎನ್ನುವ ಬದಲು ಮೋದಕ ಎನ್ನುವ ಪದವನ್ನು ಬಳಸಿದ್ದರೆ ಹೀಗೆ ಆಗುತ್ತಿರಲಿಲ್ಲ. ಮೋದಕವನ್ನು ತಿನ್ನಲು ಬೇರೆ ಯಾವ ವಿಧಾನವೂ ಇಲ್ಲ. ಇಡೀ ಮೋದಕವನ್ನು ಬಾಯೊಳಗೆ ತುರುಕುವುದೇ ಏಕಮಾತ್ರ ವಿಧಾನ. ಮೋದಕದ ಗಾತ್ರವನ್ನು ನಮ್ಮ ಬಾಯಿಯ ಗಾತ್ರದಷ್ಟೇ ವಿರಚಿಸಿರುವುದು ಬೇರೇತಕ್ಕೆ ಎಂದು ತಿಳಿದಿರಿ! ನೀವು ಗಮನಿಸಬೇಕಾದದ್ದು ಮೋದಕವು ಇಡೀ ಮುಖಕ್ಕೆ ಎಕ್ಸರ್ಸೈಸ್ ನೀಡುತ್ತದೆ ಎಂಬ ವಿಷಯ. ಮೃದು ಕವಚವಿದ್ದರೂ ಮೋದಕವನ್ನು ಮೆಲ್ಲಲು ಹಲ್ಲುಗಳು ತಮ್ಮ ಕೆಲಸ ಮಾಡಲೇ ಬೇಕು. ಗಲ್ಲಗಳು ಮತ್ತು ತುಟಿಗಳು ಒಳಗೂ ಹೊರಗೂ ಚಲಿಸಬೇಕು. ಬಾಯಿ ಮುಚ್ಚಿದ್ದರೂ ಹೂರಣದಲ್ಲಿರುವ ಕೊಬ್ಬರಿ ಬೆಲ್ಲ ಏಲಕ್ಕಿ ಇತ್ಯಾದಿಗಳ ನಾಜೂಕು ಘಮವನ್ನು ನಮ್ಮ ನಾಸಿಕವು ಆಘ್ರಾಣಿಸಬೇಕು. ಇನ್ನು ಗಂಟಲಿನಲ್ಲಿ ತುರುಕುವ ಕೆಲಸವನ್ನು ನಾಲಗೆ ಮಾಡಬೇಕು. ಇಪ್ಪತ್ತೊಂದು ಮೋದಕ ತಿನ್ನುವಷ್ಟರಲ್ಲಿ ಮುಖಕ್ಕೆ ಎಷ್ಟು ವ್ಯಾಯಾಮ ಆಗುತ್ತದೆಂದು ಯೋಚಿಸಿ! ಈಚೆಗೆ ಎಲ್ಲೆಲ್ಲೂ ಜನಪ್ರಿಯವಾದ ಮೋಮೋ ಎಂಬ ಖಾದ್ಯವು ನಮ್ಮ ಮೋದಕದ ಕಾಪಿಯೇ ಎಂದು ನನ್ನ ಬಲವಾದ ನಂಬಿಕೆ. ಹಿಂದೆ ನಮ್ಮ ದೇಶಕ್ಕ...