ಪೋಸ್ಟ್‌ಗಳು

Silly Poems ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನಸುನಗೆ ಚೆನ್ನ! #1

ಇಮೇಜ್

ಕೋಳಿಗೆ ಕಾಳು

ಇಮೇಜ್
ಸಿ ಪಿ ರವಿಕುಮಾರ್  ನನ್ನ ಮುದ್ದಿನ ಕೋಳಿಗಳೇ ಬನ್ನಿ ನಿಮಗೊಂದು ಕಟ್ಟಿದ್ದೇನೆ ಚಂದದ ಗೂಡು ಪ್ರತಿನಿತ್ಯ ನಿಮಗೆ ತಂದು ಹಾಕುತ್ತೇನೆ ಎಷ್ಟು ಬೇಕಾದರೂ ತಿನ್ನಿ ಬಿಟ್ಟಿಕಾಳು ಬದಲಿಗೆ ನಾನು ಕೇಳುವುದಿಷ್ಟೇ ಓಡಿ ಬರಬೇಕು ನಾನು ಕರೆದಾಗ ಕೊಕ್ ಕೊಕ್ ಎಂದು ಮಾರ್ನುಡಿಯಬೇಕು ನಗಬೇಕು ನಾನು ನಕ್ಕಾಗ ಅಳಬೇಕು ನಾನು ಮುಖ ಹಿಂಡಿದಾಗ ಮೊಟ್ಟೆ ಇಡಬೇಕು ನಾನು ಬೇಡಿದಾಗ ಕಾವು ಕೊಡಬೇಕು ಮರಿ ಮಾಡಬೇಕು ನಿಮ್ಮ ಮರಿಮೊಮ್ಮರಿಗಳಿಗೂ ಕೊಡುತ್ತೇನೆ ಕಾಳು ಬೇಕಾಗಿಲ್ಲ ಕಿಂಚಿತ್ತೂ ಚಿಂತೆ ದೊಡ್ಡ ಸ್ಕ್ರೀನ್ ಟಿ.ವಿ. ಹಾಕಿಸಿದ್ದೇನೆ ನಿಮ್ಮ ಮನರಂಜನೆಗಾಗಿ 24 ಗಂಟೆ ನೋಡುತ್ತಾ ಕಳೆಯಿರಿ ಕಾಲ ಮರಿ ಮಾಡುವಾಗ, ಕಾವು ಕೂತಾಗ ಒಮ್ಮೆಮ್ಮೆ ತರುವೆನು ಚೂರಿ ನನಗಿಷ್ಟ ಚಿಕನ್ ಮಂಚೂರಿ ಹಬ್ಬ ಮಾಡಿದರೆ ಒಮ್ಮೊಮ್ಮೆ ಏನಾಯಿತೀಗ?

ಸಾಸರ್ ನಾಮ

ಇಮೇಜ್
ಸಿ ಪಿ ರವಿಕುಮಾರ್  ಅನೇಕ ಸ್ವಾರಸ್ಯಕರ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇವುಗಳಿಗೆ ಕವಿತಾರೂಪದ ಪ್ರತಿಕ್ರಿಯೆ.  ಸಾಸರ್ ನಾಮ  (ಹಾರಾಡುವ ತಟ್ಟೆಗಳು ಇರಬಹುದೆಂದು ನಾಸಾ ಒಪ್ಪಿದೆ - ಸುದ್ದಿ.) ನಾಸಾ ಹೇಳುತ್ತಿದೆ ಈಗ, ತಡವಾಗಿ, “ಇರಬಹುದು ಹಾರಾಡುವ ಸಾಸರು” ಸಾಸರ ನಾಮದ ವೆಂಕಟರಮಣನ್ನ ಎಂದೋ ಕೊಂಡಾಡಿದರು ದಾಸರು ಸಾವಿರದ ಪ್ರಶ್ನೆ   "ಸಹಸ್ರ" ತದ್ಭವವಾಗಿ ಸಾಸರವಾಗದೆ, ಸಾಸಿರ ಹೇಗಾಯಿತು? ಸಾಸಿರ ಇದ್ದಿದ್ದರೆ ಪರವಾಗಿರಲಿಲ್ಲ, ಸಾವಿರ ಹೇಗಾಯಿತು? ಪರವಾಹ್-1   (ಹಿಂದಿ ಮಾತಾಡುವವರು ಕನ್ನಡಿಗರನ್ನು ಅವಮಾನಿಸಿದರು ಇತ್ಯಾದಿ ಜಗಳ - ಸುದ್ದಿ.) ಹಿಂದಿ ಬರಲ್ಲ ಕನ್ನಡ ಪರವಾಗಿಲ್ವಾ ಅಂತ ಇವನು ಪರವಾಹ್ ನಹೀ ಬೋಲೋ ಅಂತ ಅವನು ಪರವಾಹ್-2  ಕಾರಣವೇನು ಬೆಂದಕಾಳೂರಲ್ಲಿ ಪರರಿಗೇ ವಾಹ್ ಎಂಬುದಕ್ಕೆ? ಇರಬಹುದೇ ಬೆಂದಕಾಳು ತಿಂದೂ ತಿಂದೂ ವಾಹ್ ಕರಿಕೆ ನ-ಕಲಿ  (ತನಿಖೆಗೆ ಹೆದರಿ ಬಿಹಾರದಲ್ಲಿ ನಕಲಿ ಡಿಗ್ರಿ ಪಡೆದ ಶಿಕ್ಷಕರ ರಾಜೀನಾಮೆ - ಸುದ್ದಿ)  ಇದು ಕಲಿಯುಗವೋ  ನಕಲಿಯುಗವೋ ನ-ಕಲಿ ಯುಗವೋ ರೀ? ಮಕ್ಕಳಿಗೆ  ಏನು ಕಲಿಸುತ್ತಾರೆ ಪಾಠ? ಇವರದ್ದೇ ನ-ಕಲಿ ಡಿಗ್ರಿ.

ದ ಕ್ಯಾಟ್ ಅಂಡ್ ದ ಕ್ಯಾನರೀಸ್ (ಬೆಕ್ಕಿಗೆ ಕನ್ನಡ ಪಾಠ)

ಇಮೇಜ್
ದ (1) ಅಲ್ಲ, ನೂಡಲ್ ಕುಣಿಗಲ್ ಕೆರೆ ಅಲ್ಲ, ಮೂಡಲ್! ಮೂಡಲ್ ಕುಣಿಗಲ್ ಕೆರೆ! ಹೌದು ಹೌದು, ಇನ್ನೂ ಜೋರಾಗಿರ್ತಿತ್ತು i - ಭೋಗ ನೂಡಲ್ ಕೆರೆ ಇದ್ದಿದ್ದರೆ (2) ಹುಗ್ಗಿಯ ಹೊಳೆ ಬದಲು ನೂಡಲ್ ಕೆರೆ ನೋಡಲ್ ಅಲ್ಲ ಬರೇ ತಿನ್ನಲ್ ಕೂಡಾ, ಹುರೇ ! (3) ಕನ್ನಡಂ ಕತ್ತರಿಯಲ್ತೆ ಅಲ್ಲವೋ! ಕನ್ನಡಂ ಕತ್ತುರಿಯಲ್ತೆ ಕತ್ತುರಿ ಈಕ್ವಲ್ಸ್ ಕಸ್ತೂರಿ ಪಾಠ ಹೇಳ್ತಾ ಯಾಕೋ ಸುಸ್ತೂರೀ (4) ಇಲ್ಲ ಮರಿ ನರಕ್ಕೆ  ಸ್ತ್ರೀಲಿಂಗ ಪದವಲ್ಲ ನರಿ ನರದ ಸ್ತ್ರೀಲಿಂಗ ನಾರಿ ಹೌದು ಸ್ವಲ್ಪ ಇಲ್ಲಾಜಿಕಲ್, ಸಾರಿ! (5) ಇಲ್ಲ ನನ್ನ ಜಾಣ ಗೃಹಿಣಿ ಪದಕ್ಕೆ ಪುಲ್ಲಿಂಗವಲ್ಲ ಗ್ರಹಣ ಗೃ ಈಸ್ ಡಿಫರೆಂಟ್ ಫ್ರಂ  ಗ್ರ ತಿಳ್ಕೊಂಡವನೇ ಕುಶಾಗ್ರ