ಪೋಸ್ಟ್‌ಗಳು

Translation ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶತಪದಿ

ಇಮೇಜ್
ಮೂಲ: ಜೂಲಿ ಹೋಲ್ಡರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಬಹಳ ಜೋರಾಗಿ ಓಡಬಲ್ಲದು ಜರಿಹುಳು  ಏಕೆಂದರೆ ಅದಕ್ಕಿವೆ ಇನ್ನೂರು ಕಾಲು ಆದರೂ, ಇನ್ನೂರು ಕ್ಲಿಪ್ ಹೊಂದಿಸಿಕೊಂಡು  ಸಾಕ್ಸ್ ಒಣಗಿ ಹಾಕುವುದು ದೊಡ್ದ ಸವಾಲು ಉಡುಗೊರೆ ಕೊಟ್ಟರು ಯಾರೋ ಅದಕ್ಕೆ ವೆಲ್ಲಿಂಗ್ ಟನ್ ಬೂಟು ಐವತ್ತು ಜೊತೆ ಎಡಬಲ ಸಮ ಮಾಡುವ ತನಕ ಪುಟ್ಟ ಮಿದುಳು  ಪಾಪ ಮಳೆಗಾಲ ಮುಗಿದೇ ಹೋಗಿರುತ್ತೆ ನೂರು ಕಾಲಿದೆ ಜರಿಗೆ, ನನಗೆ ಎರಡೇ ಎರಡು ಹಾಗಂತ ನನಗೇನೂ ಹೊಟ್ಟೆಕಿಚ್ಚಿಲ್ಲಪ್ಪ, ಸದ್ಯಕ್ಕೆ. ಎಲ್ಲಿಗೆ ಹೋಗುತ್ತಿದ್ದೇನೆಂದು ಗೊತ್ತಾದಾಗ ಮುಂದಿನ ಕಾಲಿಗೆ ಹಿಂದಿನ ಕಾಲು ಇನ್ನೂ ಅದೇ ಸ್ಥಳದಲ್ಲಿರುತ್ತೆ.

ಪಂಡಿತರು

ಪದಾತಿ ಸೈನಿಕರು, ದೋಷಗಳ ವಿರುದ್ಧ ಸಮರದಲ್ಲಿ  ನಮ್ಮನ್ನು ನಮ್ಮಿಂದಲೇ ರಕ್ಷಿಸುವುದು ಇವರ ಗುರಿ ಸಜ್ಜಿತರಾಗಿ ಬಂದಿದ್ದಾರೆ ಇವರ ಕೈಯಲ್ಲಿದೆ ಶಸ್ತ್ರ  ಶಬ್ದಮಣಿ ರೆವರೆಂಡ್ ಕಿಟ್ಟೆಲ್ ಡಿಕ್ಷನರಿ ನಾವು ಬರೆದ ಪ್ರತಿ ಪದ ಪ್ರತಿ ಸಾಲು ಇವರ ಕೂಲಂಕಷ ಅವಗಾಹನೆಗೆ ಪಾಲು ತಿದ್ದುವರು ಅದು ಹಾಗಲ್ಲ ಹೀಗೆ ಎಂದು ಮಾಡುತ್ತ ಅವಹಾಲು ಹಲ್ಲು ಕಡಿಯುವರು, ಛೇ ಎಂದು ಹಲುಬುವರು  ನಾವು ದಾಟಿದ ಗೆರೆಯನ್ನು ಕೆಕ್ಕರಿಸಿ ನೋಡಿ  ಇನ್ನೇನು ಗತಿ ನಮ್ಮ ಭಾಷೆಗೆ ನಾಡಿಗೆ ಎಂದು ಪರೀಕ್ಷಿಸುವರು ಹಿಡಿದು ನಾಡ ನಾಡಿ. ಕನ್ನಡದ ಭಂಡಾರಕ್ಕೆ ಪಾಲಕರು ಇವರು ಅದನ್ನು ಶುದ್ಧವಾಗಿಡುವುದೇ ಇವರ ಕಾರ್ಯ. ಗರಿಷ್ಠ ಮೂರು ತಪ್ಪುಗಳ ವಿನಾಯಿತಿ ಕೊಟ್ಟಿದ್ದಾರೆ ಎಂಬುದೇ ಸಮಾಧಾನಕರ ವಿಷಯ. ತಿದ್ದುವ ಕೆಲಸದಲ್ಲಿ ಮೂಗು ಕೊಯ್ದರೂ ಓಕೆ  ಆಡಿಸುವರು ಇವರು ಚಕಚಕ ಕತ್ತರಿ ಚಾಕು. ಏನು ಹೇಳಿದ್ದೀರಿ ಲೇಖನದಲ್ಲಿ ನೋಡುವುದಿಲ್ಲ ವ್ಯಾಕರಣ ದೋಷ ಇರದಿದ್ದರೆ ಸಾಕು. ಮೂಲ : Brian Bilston  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಗೋಸುಂಬೆಯ ಸಮಸ್ಯೆ

ಇಮೇಜ್
  ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ. ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು.  ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ. ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು. ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ.  ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ.  ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು. ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು.  ಏನೋ ಬಹಳ ವಿಚಿತ್ರ...

ವಿಠ್ಠಲ್ ಪದಕೋಶ

ಇಮೇಜ್
ಬೆಳೆಸಿಕೊಳ್ಳಲು, ವಿಕಸಿಸಿಕೊಳ್ಳಲು, ಹಿಗ್ಗಿಸಲು ತನ್ನ ಕನ್ನಡ ಪದಗಳ ಭಂಡಾರ, ಖಜಾನೆ, ಕೋಶ, ಕೊಂಡನು, ಖರೀದಿಸಿದನು, ಕ್ರಯಕ್ಕೆ ತಂದನು ವಿಠಲ  ಕನ್ನಡ ಕನ್ನಡ ಸಮಾನಾರ್ಥಕ ಪದಕೋಶ. ಇದಾದ ಕೆಲ ಕಾಲದಲ್ಲಿ, ನಂತರ, ತರುವಾಯ, ಅನಂತರ, ಇರಲೇ ಇಲ್ಲ ಅವನಿಗೆ ಪದಗಳಿಗೆ ದುರ್ಭಿಕ್ಷ, ಕ್ಷಾಮ, ಬರ  ಮನಸ್ಸಿಗೆ ತೋರಿದ್ದನ್ನು, ಅನ್ನಿಸಿದ್ದನ್ನು, ತೋಚಿದ್ದನ್ನು ಪ್ರಕಟಿಸಲು, ಆಡಲು, ಪ್ರದರ್ಶಿಸಲು ಪದಗಳ ತತ್ವಾರ ಇದೆಲ್ಲಾ ಸರಿಯೇ, ಒಳ್ಳೆಯದೇ, ಚೆನ್ನವೇ, ಲಾಯಕ್ಕಾದುದೇ, ಮಂಗಳವೇ, ಮೆಚ್ಚುವಂಥದ್ದೇ, ಸ್ತುತ್ಯರ್ಹವೇ, ಆದರೆ ಅವನ ಗೆಳೆಯರಿಗೆ ಪಾಪ ಬೋರಾಗತೊಡಗಿತು, ಬೈರಿಗೆಯಾಯಿತು, ಕೊರೆತ ಎನ್ನಿಸತೊಡಗಿತು ವಿಠಲನನ್ನು ಕಂಡರೆ  ನಿಮಗೆ ಇದು ಆಗಲಿ ಪಾಠ, ಒಂದು ನಿದರ್ಶನ, ಒಂದು ಕಲಿಕೆ, ಒಂದು ಉದಾಹರಣೆ, ಒಂದು ಜೀವನ ಶಿಕ್ಷಣ: ಕಲಿತದ್ದನ್ನು, ಪಡೆದ ಶಿಕ್ಷಣವನ್ನು, ಗಳಿಸಿದ ಪಾಂಡಿತ್ಯವನ್ನು  ಮೆರೆಸಬಹುದು, ತೋರಬಹುದು, ಮಾಡಬಹುದು ಪ್ರದರ್ಶನ  ಆದರೆ ದಯವಿಟ್ಟು, ಕೃಪೆ ಮಾಡಿ, ನಿಮ್ಮ ದಮ್ಮಯ್ಯ, ಕೇಳಿಸಿಕೊಳ್ಳಿ ನನ್ನದೊಂದು ಸಲಹೆ, ಕಿವಿಮಾತು, ಬುದ್ಧಿವಾದ, ಹಿತವಚನ: ಎಂದೂ ಮರೆಯದಿರಿ ಸಂಕ್ಷಿಪ್ತ, ಸಾರಾಂಶ, ರುಚಿಗೆ ತಕ್ಕಷ್ಟು, ಹೃಸ್ವ, ಅಡಕ, ಸಂಗ್ರಹ ಎಂಬ ಪದಗಳನ್ನ. .... Brian Bilston  ಅವರ Roger's Thesaurus ಎಂಬ ಕವಿತೆಯ ಕನ್ನಡ ರೂಪ,  ಭಾವಾನುವಾದ, ರೂಪಾಂತರ. ಇದನ್ನು ಮಾಡಿದ್ದು ನಾನು, ನಿಮ್ಮ ವಿಶ್...

ನಮ್ಮ ತರುವಾಯ

ಇಮೇಜ್
 ಮೂಲ : ಕಾನೀ ವಾನೆಕ್  (ಅಮೇರಿಕಾ ಸಂಸ್ಥಾನ) ಅನುವಾದ : ಸಿ. ಪಿ. ರವಿಕುಮಾರ್ "ಇದು ಆರಂಭದ ಘಟ್ಟದಲ್ಲಿದ್ದೇವೋ ಅಂತ್ಯದ ಘಟ್ಟದಲ್ಲೋ ನಾನರಿಯೆ." -- ಟೋಮಾಸ್  ಟ್ರಾನ್ಸ್‌ಫಾರ್ಮರ್ ಮಳೆ ಬೀಳತೊಡಗಿದೆ ಸೂರಿನ ಮೂಲಕ. ನೇಸರಿನ ಕೆಳಗೆ ಬೆಳೆದು ತೊಳಗಿದ ಪ್ರತಿಯೊಂದರ ಮೂಲಕ, ಬೆಳಗ್ಗೆ ತೆರೆದು, ಇರುಳು ಮುಚ್ಚಿ, ಇಡೀ ದಿವಸ ತಮ್ಮ ಪುಟಗಳನ್ನು ಬೆಳಕಿಗೆ ಒಡ್ಡಿದ ಪುಸ್ತಕಗಳು, ನೌಕೆಗಳ ಚಿತ್ರಗಳು, ಅಲ್ಲಿ ಬಲಿಷ್ಠ ತೋಳುಗಳು, ಜಾಣ್ಮೆಯಿಂದ ಹೊಳೆವ ಮುಖಗಳು, ಹೊಲಗಳು, ಕೊಟ್ಟಿಗೆಗಳು, ಮೊಟ್ಟೆಗಳನ್ನು ತುಂಬಿಸಿಟ್ಟ ಬುಟ್ಟಿ, ಪಿಯಾನೋ ಬಳಿ ಬಿದ್ದಿರುವ ಬೆಳ್ಳಿಯ ಕೊಳಲು, ಕಲ್ಪಿಸಿಕೊಂಡದ್ದು, ಕಂಡುಹಿಡಿದದ್ದು ಎಲ್ಲವನ್ನೂ ಪಿಸುಗುಟ್ಟಿದ್ದು, ಹಾಡಿದ ಪ್ರತಿಯೊಂದನ್ನೂ ನಿಶಬ್ದಗೊಳಿಸಿದೆ  ಕೊರೆಯುವ ಮಳೆ.  ಸಮಾಧಿಯ ಕಲ್ಲುಗಳ ಬಣ್ಣ ತೊಟ್ಟಿದೆ ಆಗಸ, ಬೀಳುವ ಮಳೆಗೆ ಉಪ್ಪಿನ ರುಚಿಯಿದೆ, ಮೇಲೇಳುತ್ತಿದೆ ಬೀದಿಗಳಲ್ಲಿ ವಿನಾಶಕ ಹೆದ್ದೆರೆಯಂತೆ. ಲಕ್ಷ, ಕೋಟಿ ವರ್ಷಗಳ ಮಾತಾಡುತ್ತಿದ್ದೆವಲ್ಲವೇ ನಾವು, ಮಾತಾಡಿ ಆಡಿ ಇನ್ನಷ್ಟು ಆಡಿದೆವು. ಅನಂತರ ಬಿತ್ತು ಒಂದು ಹನಿ ಗಿಟಾರ್ ಶಬ್ದರಂಧ್ರದೊಳಗೆ, ನಂತರ ಮತ್ತೊಂದು ಇನ್ನೂ ಸರಿಪಡಿಸದ ಹಾಸಿಗೆಯ ಮೇಲೆ.  ನಮ್ಮ ತರುವಾಯ ಮಳೆ ನಿಲ್ಲಬಹುದು ಅಥವಾ ಬೀಳುತ್ತಲೇ ಇರಬಹುದು ಸ್ವಯಂ ತನ್ನ ಮೇಲೆ ಕೂಡಾ. ಕವಿತೆಯ ಸ್ವಾರಸ್ಯ: ಪ್ರಳಯದ ದೃಶ್ಯವನ್ನು...

ನಡೆ ಮುಂದೆ ನೀನೊಬ್ಬನೇ!

ಮೂಲ ಕವಿತೆ: ರಬೀಂದ್ರನಾಥ  ಟ್ಯಾಗೋರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ? ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ, ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ನಿನ್ನ ಮಾತಿಗೆ ಯಾರೂ ಉತ್ತರಿಸಲಿಲ್ಲವೇ? ಅವರು ತಳೆದರೆ ಮೌನ? ಬಾಯ್ಬಿಡಲು ಹೆದರಿದರೆ? ಮುಕ್ತಕಂಠದಿಂದ ನೀನು ಮಾತಾಡಲು ಬಾಯ್ತೆರೆ! ಮೌನದಲ್ಲಿ ನಿನಗೆ ನಿನ್ನ ದನಿಯೇ ಆಸರೆ! ಕಾಡುದಾರಿಯಲ್ಲಿ ಎಲ್ಲ ನಿನ್ನ ಬಿಟ್ಟು ಅಗಲಿದರೆ? ಕಗ್ಗತ್ತಲಿನಲ್ಲಿ ನಿನ್ನ ಒಂಟಿ ಬಿಟ್ಟು ನಡೆದರೆ? ಮುಳ್ಳುಹಾದಿಯಲ್ಲಿ ಪಾದರಕ್ಷೆ ಇಲ್ಲದಿದ್ದರೆ  ರಕ್ತಸಿಕ್ತ ಪಾದದಿಂದ ತುಳಿದು ಮುಳ್ಳು ನಡೆ! ಸುರಿವ ಮಳೆಯ ಕಾಳರಾತ್ರಿ, ದೀಪವಿಲ್ಲ, ಕತ್ತಲೆ! ಸುಸ್ವಾಗತ ಕೋರದಂತೆ ಬಾಗಿಲುಗಳು ಮುಚ್ಚಿವೆ! ನಿನ್ನ ನೋವು ಸಿಡಿಲಿನಂತೆ, ಅದರೊಳಗಡೆ ಕಿಚ್ಚಿದೆ! ಹಚ್ಚಿ ನಿನ್ನ ಹೃದಯ-ದೊಂದಿ ಬೆಳಕಿನಲ್ಲಿ ನಡೆ! ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ? ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ, ಮೇಲೆದ್ದು ನಡೆ ಮುಂದೆ ನೀನೊಬ್ಬನೇ!

ಲಾಟ್ ಮಹಾಶಯನ ಹೆಂಡತಿ

ಇಮೇಜ್
ಮೂಲ: ಆನಾ ಅಹ್ಮತೋವಾ  (ರಷ್ಯಾ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕಪ್ಪು ಪರ್ವತದ ಮೇಲೆ ಕಡುಕಷ್ಟದ ದಾರಿಯಲ್ಲಿ  ಅವನು ಹೊರಟಿದ್ದ ದೇವಸೇವಕರನ್ನು ಹಿಂಬಾಲಿಸಿ.  ನಿಯತ್ತಿನ ಮನುಷ್ಯ; ಆದರವನ ಹೆಂಡತಿಗೆ ಯಾಕೋ "ಹಿಂತಿರುಗಿ ನೋಡೆಂದು" ಒಳದನಿಯ ಕಸಿವಿಸಿ.  "ನೋಡು ಸೊಡೋಮ್ ನಗರದ ಕೆಂಪು ಮೀನಾರಗಳು,  ಅಗೋ ನೀನು ಹಾಡುತ್ತಿದ್ದ ಸಭಾಮೈದಾನ.  ನಿನ್ನ ಮನೆಯ ಕಿಟಕಿಗಳು ಕಾಣುತ್ತಿವೆ ಇನ್ನೂ,  ಈ ಮನೆಯಲ್ಲೇ ಅಲ್ಲವೇ ಹಡೆದದ್ದು ನಿನ್ನೆಲ್ಲ ಮಕ್ಕಳನ್ನ?"  ಒಮ್ಮೆ ಹಿಂದಿರುಗಿ ನೋಡಿಯೇ ಬಿಟ್ಟಳು! ಕೂಡಲೇ ದೇಹದಲ್ಲಿ  ಎದ್ದಿತು ನೋವು, ಕಡಿಮೆಯಾಗಿತ್ತು ಕಚ್ಚಿದಂತೆ ಚೇಳು. ಹೊಲೆದುಕೊಂಡು ಕಣ್ಣು, ಉಪ್ಪಿನ ಹೊರೆಯಾಯ್ತು ದೇಹ, ನಿಂತಲ್ಲೇ ಮರಗಟ್ಟಿದವು ಅವಳ ಕಾಲು.  ಈ ಹೆಂಗಸಿಗಾಗಿ ಯಾರು ಅಳುವರು ಹೇಳಿ?  ತೀರಾ ಯಃಕಶ್ಚಿತ್ ಅನಿಸುವುದಲ್ಲವೇ ಅವಳ ಸಂಗತಿ? ನನ್ನ ಹೃದಯದಲ್ಲಂತೂ ಅವಳಿಗೆ ಸದಾ ಇರುವುದು ಸ್ಥಾನ, ತಿರುಗಿದ್ದಕ್ಕೆ ಪಡೆದಳಲ್ಲ ಸಾವಿನ ದುರ್ಗತಿ! ಆನಾ ಅಹ್ಮತೋವಾ ರಷ್ಯಾ ದೇಶದ ಪ್ರಸಿದ್ಧ ಕವಯಿತ್ರಿ. ಪ್ರಸ್ತುತ ಕವಿತೆಯಲ್ಲಿ ಬೈಬಲ್ ಗ್ರಂಥದಲ್ಲಿ ಬರುವ ಒಂದು ಕಥೆಯ ಉಲ್ಲೇಖವಿದೆ. ಲಾಟ್ಸ್ ಎಂಬುವನು ಸೊಡೋಮ್ ನಗರದ ನಿವಾಸಿ. ಆ ನಗರದ ನಿವಾಸಿಗಳೆಲ್ಲರೂ ಪಾಪಕ್ಕೆ ಮುಡಿಪಾದವರು; ಇವನೊಬ್ಬನೇ ಸದಾಚಾರಿ. ಒಮ್ಮೆ ಇವನ ಮನೆಗೆ ಇಬ್ಬರು ಅಪ್ಸರೆಯರ...

ಶ್ರಾವಣ ಸುರಿಸುವ ಮಳೆಯ ಹನಿ

ಇಮೇಜ್
ಮೂಲ - ಮೀರಾ ಬಾಯಿ  ಕನ್ನಡ ಭಾವಾನುವಾದ - ಸಿ. ಪಿ. ರವಿಕುಮಾರ್  (ಶ್ರಾವಣದ ಮಳೆಯ ಹನಿಗಳು ಮೈಮೇಲೆ ಬಿದ್ದಾಗ ಮೀರಾಬಾಯಿಯ ಮನಸ್ಸು ಕೃಷ್ಣನ ಸ್ಮರಣೆಯಿಂದ ತೊಯ್ಯುತ್ತದೆ.  ಬೇಸಗೆಯ ನಂತರ ತಂಗಾಳಿ ಮಳೆಯನ್ನು ತಂದ ಶ್ರಾವಣ ಅವಳಲ್ಲಿ ಉಲ್ಲಾಸ ತುಂಬುತ್ತದೆ. ಅವಳ ಮನಸ್ಸು ಗಿರಿಧರ ನಾಗರನನ್ನು ನೆನೆದು ಆನಂದದಿಂದ ತುಂಬುತ್ತದೆ.) ನೆನೆಸುತ್ತಿದೆ ಮನಮೋಹನನ  ಶ್ರಾವಣ ಸುರಿಸುವ ಮಳೆಯ ಹನಿ  ಶ್ರಾವಣ ತಂದಿತು  ಹರ್ಷೋಲ್ಲಾಸ   ಕೇಳಿದಂತೆ ಹರಿ ಗೆಜ್ಜೆ ದನಿ  ಕವಿದು ಮುಗಿದು ನಾಲ್ಕೂ ದೆಸೆಯಿಂದ  ಗುಡುಗುಮಿಂಚು ನಡುಗುವ ಅವನಿ ಪುಟ್ಟಪುಟ್ಟ ಹನಿಗಳ ಸುರಿಸುವ ಮೋಡ  ಶೀತಲ ಪವನ ಜೀವ ಸಂಚಯಿನಿ      ಪ್ರಭು ಗಿರಿಧರ ನಾಗರನನು ನೆನೆದು  ಮಂಗಳ ಹಾಡುವ ಮೀರಾ ಉನ್ಮಾದಿನಿ 

ಇನ್ಫರ್ಮೆಶನ್ ಟೆಕ್ನಾಲಜಿ

ಇಮೇಜ್

ದಾರಿ ತೋರುವ ಚಪ್ಪಲಿಗಳು

ಇಮೇಜ್
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್ ಇರಾಕ್) ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ (ಇರಾಕ್ ದೇಶ ಅನೇಕ ರಾಷ್ಟ್ರಗಳಿಂದ ಬಹಿಷ್ಕಾರಕ್ಕೆ ಒಳಗಾದ ದೇಶ. ಬಹಳಷ್ಟು ದೇಶಗಳು ವ್ಯಾಪಾರ-ವಹಿವಾಟುಗಳ ವಿಷಯದಲ್ಲಿ ಇರಾಕ್ ದೇಶವನ್ನು ದೂರ ಇಟ್ಟಿವೆ. ಅನೇಕ ಯುವಕ-ಯುವತಿಯರು ತಮ್ಮ ದೇಶವನ್ನು ತೊರೆದು ಹೊರಡಲು ಸನ್ನದ್ಧರಾಗುವುದನ್ನು ಕಂಡಾಗ ಕವಯಿತ್ರಿಯ ಮನಸ್ಸು ಪ್ರತಿಕ್ರಯಿಸುತ್ತದೆ. ಹಿಂದೊಮ್ಮೆ ಬೆಟ್ಟಗಳನ್ನು ತೊರೆದು ನಗರಗಳಿಗೆ ಹೊರಟ ಜನರಂತೆಯೇ ತಾಯ್ನಾಡನ್ನು ತೊರೆದು ಜನ ಇನ್ನಿತರ ದೇಶಗಳಿಗೆ ಹೊರಟಿದ್ದಾರೆ. ಹಾಗೆ ಹೊರಟಾಗ ತಾಯ್ನಾಡಿನ ಹೃದಯದ (ರಾಜಧಾನಿ) ಮೂಲಕವೇ ವಿಮಾನ ಹತ್ತಿ ಹಾರಿಹೋಗಬೇಕು. ಹಾಗೆ ಹೋದ ಜನ ಪರದೇಶದಲ್ಲಿ ಸ್ವತಂತ್ರರಾಗಿ ತಲೆ ಎತ್ತಿ ಬದುಕುತ್ತಾರೆಯೇ? ಯಾರದೋ ಮನೆಯ ನೆಲಮಾಳಿಗೆಯಲ್ಲಿ ಗುಪ್ತವಾಗಿ ಬದುಕಬೇಕಾದ ಸಂದರ್ಭದಲ್ಲಿ ಸಿಲುಕಿಕೊಳ್ಳುವರೇ? ಅವರು ಕನಸಿದ ಬಣ್ಣಬಣ್ಣದ ಕಿಟಕಿಗಳ ಜಗತ್ತು ಅವರದ್ದಾದೀತೇ? ತಮ್ಮದೇ ದೇಶದಲ್ಲಿ ಅವರು ಇಂತಹ ಕನಸುಗಳನ್ನು ಕಾಣಲು ಸಾಧ್ಯವಿಲ್ಲವೇ?) ಅವನು ಬೆಟ್ಟಗಳಿಗೆ ಹೋಗುತ್ತಿದ್ದ ಕಾಲದಲ್ಲಿ ಶೂಗಳನ್ನು ಕಳಚಿಟ್ಟಾಗ ಅವು ನಗರದ ಕಡೆ ಮುಖ ಮಾಡುತ್ತಿದ್ದವು. ತನ್ನ ತಾಯ್ತಾಡು ಸ್ವತಂತ್ರವಾಗಲಿದೆ ಎಂಬುದೇ ಇದರರ್ಥ ಎಂದೇನೂ ಅವನು ಭ್ರಮಿಸಲಿಲ್ಲ. ಈಗ ಅವನು ನಗರದಲ್ಲೇ ವಾಸವಾಗಿದ್ದಾನೆ. ಶೂಗಳನ್ನು ಕಳಚಿಟ್ಟಾಗ ಅವು ಮುಖ ಮಾಡುತ್ತವೆ ದೂರದ ಯಾವುದೋ ನಾಡಿ...

ಏಕಾಂಗಿನಿ ಭೂಮಿ

ಇಮೇಜ್
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್, ಇರಾಕ್) ಕನ್ನಡಕ್ಕೆ ... ಸಿಪಿರವಿಕುಮಾರ್ (ಕವಿತೆಯ ಸ್ವಾರಸ್ಯ: ಇರಾಕ್ ಅನೇಕ ರಾಷ್ಟ್ರಗಳಿಂದ ಬಹಿಷ್ಕೃತವಾದ ದೇಶ. "ಶ್ವೇತಕಾಯ" ಎನ್ನುವುದು ಇಲ್ಲಿ ಯಾವ ಅರ್ಥ ಹೊಮ್ಮಿಸುತ್ತಿದೆ ಎಂದು ಯೋಚಿಸಿ. ಇದೇ ರೀತಿ "ತಾರೆ" ಎನ್ನುವ ಪದದಲ್ಲೂ ನಿಮಗೆ ವಿಶಿಷ್ಟ ಅರ್ಥ ಗೋಚರಿಸಬಹುದು. ತಮ್ಮ ದೇಶದ ವಿರುದ್ಧ ಎಷ್ಟೆಲ್ಲಾ ನಿಂದನೆ/ಬಹಿಷ್ಕಾರಗಳು ಇದ್ದರೂ ದೇಶದ ಜನರಿಗೆ ತಾಯಿನಾಡನ್ನು ಕುರಿತು ಅಭಿಮಾನ ಇದ್ದೇ ಇರುತ್ತದೆ. ತಮ್ಮ ತಾಯಿನಾಡು ಏಕಾಂಗಿನಿ ಕನ್ಯೆಯಂತೆ ಕವಯಿತ್ರಿಗೆ ಕಾಣುತ್ತಾಳೆ. ಎಲ್ಲ ಕಿರಣಗಳನ್ನೂ ತಾನೇ ಕದಿಯುವ ಸೂರ್ಯ ಚಂದ್ರನ ಮೂಲಕ ಒಂದಿಷ್ಟು ಬೆಳಕನ್ನು ದಯಪಾಲಿಸುವುದು ಏನನ್ನು ಸೂಚಿಸುತ್ತದೆ?) ವಿಶ್ವದ ಒಂದಾದರೂ ಶ್ವೇತಕಾಯ ಅವಳಿಗೆ ಆನ್ನುವುದಿಲ್ಲ ಕ್ಯಾರೇ. ನಕ್ಕು ಮಾತಾಡಿಸುವುದಿಲ್ಲ ಒಂದಾದರೂ ತಾರೆ. ಅದೆಷ್ಟೋ ಗುಲಾಬಿ ಅದೆಷ್ಟೋ ಸುಂದರ ಭಾವನೆ ದಫನವಾಗಿದ್ದರೂ ಹಾತೊರೆಯುತ್ತಾಳೆ ಒಂದು ನೋಟಕ್ಕಾಗಿ, ಒಂದು ಗಂಧಕ್ಕಾಗಿ. ಏಕಾಂಗಿನಿಯಾಗಿದ್ದಾಳೆ ಧೂಳಿನ ಗೋಳವಾಗಿದ್ದಾಳೆ ವಸುಂಧರೆ. ಚಂದ್ರನ ತೇಪೆ ಹಾಕಿದ ಅಂಗಿ ನೋಡಿ ಅವಳಿಗೆ ತಿಳಿಯುತ್ತದೆ ಸೂರ್ಯನ ವಂಚನೆ. ಎಲ್ಲ ಕಿರಣಗಳನ್ನೂ ತಾನೇ ಕದ್ದು ತಮ್ಮನ್ನು ಬಾಡಿಗೆದಾರರಂತೆ ಕಾಣುತ್ತಾನೆ.

ಹಣ್ಣು ವ್ಯಾಪಾರಿಯ ಫಿಲಾಸಫಿ

ಇಮೇಜ್
ಮೂಲ ಕವಯಿತ್ರಿ ... ಕಾಜಲ್ ಅಹ್ಮದ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಓ ಗೆಳೆಯಾ, ನೀನು ನೇರಳೆಯ ಹಾಗೆ ಒಂದೇ ಸಲ ಕಚ್ಚಿದರೂ ಉಗಿದುಬಿಡುತ್ತೇನೆ ಒಳಗಿನ ಹೂರಣವನ್ನಷ್ಟೂ. ಓ ನನ್ನ ಪೂರ್ವದ ಪ್ರೇಮಾಗ್ನಿಯೇ, ನೀನು ಒಂದು ಕಿತ್ತಳೆಯ ಹಾಗೆ, ಸಲೀಸಾಗಿ ಕಳಚಿಬಿಡುವೆ. ಕೆಲವೊಮ್ಮೆ ನೀನು ಸೇಬಿನ ಹಾಗೆ. ಸಿಪ್ಪೆ ಸಮೇತವಾದರೂ ಸರಿ ಸಿಪ್ಪೆ ಇಲ್ಲದೆಯೂ ಓಕೆ. ಪಕ್ಕದ ಮನೆಯವರೇ! ನೀವು ಹಣ್ಣಿನ ಚಾಕುವಿನಂತೆ. ನಮ್ಮ ಊಟದ ಮೇಜಿಗೂ ನಿಮಗೂ ಬಿಡಿಸಲಾರದ ನಂಟು. ಬೇಸರಿಸಬೇಡಿ ಹೀಗೆ ಹೇಳಿದೆನೆಂದು: ಹಣ್ಣಿನ ಚಾಕು ನಿಷ್ಟ್ರಯೋಜಕ ವಸ್ತು ಓ ತಾಯ್ನಾಡೇ! ನೀನು ನಿಂಬೆಹಣ್ಣಿನ ಹಾಗೆ. ನಿನ್ನ ಹೆಸರು ಹೇಳಿದಾಗ ಎಲ್ಲರ ಬಾಯಲ್ಲಿ ಊರುತ್ತದೆ ನೀರು. ನನ್ನ ಮೈಮೇಲೆ ಏಳುತ್ತದೆ ಮುಳ್ಳು. ಓ ಅಪರಿಚಿತ! ಕಲ್ಲಂಗಡಿಯಂತೆ ನೀನು, ಖಂಡಿತ. ನಾನು ಚೂರಿಯ ಅವತಾರ ತಾಳದೇ ತಿಳಿಯದು ನಿನ್ನ ಅಂತರಂಗ.

ಕಾವ್ಯ

ಇಮೇಜ್
ಒಳ್ಳೆಯ ಕಾವ್ಯ ಹೇಗಿರುತ್ತದೆ? ಡಾನ್ ಪ್ಯಾಟರ್ಸನ್ ಅವರ ಉತ್ತರ ಒಂದು ಕವಿತೆಯ ರೂಪದಲ್ಲಿದೆ! ವಜ್ರದಲ್ಲಿ ಬಂಧಿತವಾಗಿರುವ ಬೆಳಕಿನ ಕಿಡಿ ಭೂಮಿಯ ಮೊದಲ ಬೆಂಕಿಯದು. ಹಾಗೇ ಕವಿತೆಯಲ್ಲಿ ಬಂಧಿಸಲು ಸಾಧ್ಯವಾಗುವುದು ಪ್ರೇಮದ ಉತ್ಕಟತೆಯನ್ನಲ್ಲ, ಪ್ರೇಮದ ಮೊದಲ ಕಿಡಿಯನ್ನು ಮಾತ್ರ ಎಂಬುದು ಕವಿಯ ನಿಲುವು. ಯಾವಾಗ (ಕಾವ್ಯದ) ಕೆಂಡವು ನಿಗಿನಿಗಿ ಎಂದು ದಹಿಸುತ್ತದೋ ಆಗ ಅದರಲ್ಲಿ ಕಾವ್ಯದ ಅಂಶವೂ ಸುಟ್ಟುಹೋಗುತ್ತದೆ. ಅದು ಮಂದವಾಗಿ ಉರಿದಾಗ ಮಾತ್ರ ಅದು ಕಾವ್ಯವಾಗುತ್ತದೆ. ಉದಾ. ಗಟ್ಟಿ ಘೋಷಣೆಗಳು ಕಾವ್ಯವಾಗುವುದಿಲ್ಲ. ಅಂತ ಘೋಷಣೆಗಳು ಕೇಳಿದಾಗ ಪಿಟೀಲುಗಳ ಸದ್ದಿನಲ್ಲಿ ಕಾವ್ಯದ ಧ್ವನಿ ಎಲ್ಲೋ ಕಳೆದುಹೋಗುತ್ತದೆ. ಕವಿಗೆ ಇದು ಗೊತ್ತು. ತನ್ನ ಕಾವ್ಯವು ಘೋಷಣೆಯಾದಾಗ ತನ್ನ ಧ್ವನಿಯಲ್ಲಿರುವ ಬಲವಂತವನ್ನು ಅವನು ಗುರುತಿಸಬಲ್ಲ. ತನಗೆ ಪರಿಶುದ್ಧ ಕಾವ್ಯ ಬೇಕೆಂದರೆ ತಾನು ಕಾಯಬೇಕೆಂದು ಕೂಡಾ ಅವನಿಗೆ ಗೊತ್ತು. ಅಂತ ಕಾವ್ಯವು ಬೆಟ್ಟದ ತೊರೆಯಂತೆ. ಅದರ ಶುದ್ಧನೀರಿನಲ್ಲಿ ಯಾವುದೇ ಬಣ್ಣವಿಲ್ಲ. ಯಾರದೇ ಹೆಸರಿಲ್ಲ.

ಸ್ನೇಹಿತ

ಇಮೇಜ್
ಮೂಲ: ಹೆಕ್ಟರ್ ರೋಜಾಸ್ ಹೆರಾಜೋ (ಸ್ಪಾನಿಷ್ ಭಾಷೆ, ಕೊಲಂಬಿಯಾ ರಾಷ್ಟ್ರ) ಇಂಗ್ಲಿಷ್ ಭಾಷೆಗೆ: ನಿಕೋಲಾಸ್ ಸೂಸ್ಕುನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ನನ್ನ ಕಡೆಗೆ ಅವನು ಒಮ್ಮೆಲೇ ನೋಡಿದ  ಎಲ್ಲರಿಗಿಂತ ಹೆಚ್ಚು ಏಕಾಂತದಲ್ಲಿ.  ಅವನು ನನ್ನ ಕಡೆ ನೋಡಿದ ತನ್ನ ಕಣ್ಣುಗಳಿಂದ, ತನ್ನ ಮೂಳೆಗಳಿಂದ, ಪಾದರಕ್ಷೆಗಳೊಳಗಿನ ತನ್ನ ಬರಿಪಾದಗಳಿಂದ.  ನನಗೆ ತಡೆದುಕೊಳ್ಳಲಾಗಲಿಲ್ಲ.  (ನಾವು ತಡೆಯಲಾರೆವು  ನಮ್ಮ ಆಳಕ್ಕೆ ಇಣುಕುವ ಯಾವುದನ್ನೂ.) ಅವನ ಹಿಂದೆ ಇತ್ತು ಸ್ವರ್ಗ  ಅಲ್ಲಿದ್ದರು ರಾಕ್ಷಸರು,  ಕೊತಕೊತ ಕುಡಿಯುವ ಎಣ್ಣೆಯ ಕೊಪ್ಪರಿಗೆ ಮತ್ತು ಸಾಬೂನಿನ ಗುಳ್ಳೆಗಳನ್ನು ಊದುತ್ತಿರುವ ದೇವಪಿತ.  ಈ ಕಡೆ ಇತ್ತು ಕಂಪ್ಯೂಟರ್ ಮೇಜು, ಫರ್ನಿಚರ್ ಸಾಮಾನು, ಕೋಣೆಯ ಮತ್ತೆಲ್ಲಾ ಸಾಕ್ಷಿಗಳು.  ಸ್ನೇಹಿತನು ಕುಳಿತಿದ್ದ ಪುಟ್ಟ ಕುರ್ಚಿಯ ಮೇಲೆ,  ನನ್ನ ಕಡೆ ನೋಡುತ್ತಾ, ಕುಳಿತುಕೊಂಡು, ಉಸಿರಾಡುತ್ತಾ.  ಕವಿತೆಯ ಸ್ವಾರಸ್ಯ: ಇಲ್ಲಿ ಕವಿತೆಯ ನಾಯಕನಿಗೆ ಕಾಣುವ ಸ್ನೇಹಿತ ಬೇರೊಬ್ಬನೇ ಆಗಿರಬೇಕಾಗಿಲ್ಲ. ಸ್ವತಃ ನಾಯಕನೇ ಆಗಿರಬಹುದು ಎಂಬ ಸುಳಿವಿನೊಂದಿಗೆ ಕವಿತೆಯನ್ನು ಮತ್ತೊಮ್ಮೆ ಓದಿ. ಕಂಪ್ಯೂಟರ್ ತೆರೆಯ ಹಿಂದೆ ಕಾಣುತ್ತಿರುವ "ಸ್ವರ್ಗ"ದಲ್ಲಿ  ನರಕವಾಸಿಗಳಾದ ರಾಕ್ಷಸರು, ಎಣ್ಣೆಯ ಕೊಪ್ಪರಿಗೆ ಇವೆಲ್ಲಾ ಯಾಕಿವೆ? ...

ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು

ಇಮೇಜ್
ಮೂಲ ರಚನೆ : ಮಹಾತ್ಮಾ ಕಬೀರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಓದುವ ಮುನ್ನ: ಕಬೀರನ ಈ ರಚನೆಯನ್ನು "ಭಜನೆ" ಅಥವಾ "ಕೀರ್ತನೆ" ಎಂದು ಕರೆಯುವುದು ಅಷ್ಟು ಒಪ್ಪುವುದಿಲ್ಲ. ಏಕೆಂದರೆ ಕಬೀರ ಇಲ್ಲಿ ಯಾವುದೇ ದೇವರನ್ನು ಭಜಿಸುತ್ತಿಲ್ಲ, ಯಾರ ಕೀರ್ತಿಯನ್ನೂ ಹೊಗಳುತ್ತಿಲ್ಲ.  ಅವನು ಇಲ್ಲಿ ಹೇಳುತ್ತಿರುವುದು ಜೀವನದ ಕಹಿ ಸತ್ಯಗಳನ್ನು.  ಎಲ್ಲರೂ ಹೊಟ್ಟೆಪಾಡಿನ ಧಂಧೆಯಲ್ಲಿ ತೊಡಗಿಕೊಂಡು ಜೀವನದ ಸತ್ಯಗಳನ್ನು ಮರೆತಿರುವುದು ಅವನಿಗೆ ಸೋಜಿಗ ತರುತ್ತಿದೆ. "ಎಷ್ಟು ಜನರಿಗೆ ತಿಳಿಸಿ ಹೇಳುವುದು, ಒಬ್ಬಿಬ್ಬರಾದರೆ ಎಬ್ಬಿಸಿ  ಹೇಳಬಹುದಾಗಿತ್ತು!" ಎಂದು ಅವನು ಮರುಗುತ್ತಾನೆ. ಅವನು ತಿಳಿಸಿ ಹೇಳಬೇಕಾಗಿರುವುದು ನಮ್ಮ ಬದುಕು ನಶ್ವರ ಎಂಬ ಸತ್ಯ. ನಮ್ಮ ಶರೀರದಲ್ಲಿರುವುದು ನೀರು. ಅದರಲ್ಲಿ ಹರಿಯುತ್ತಿರುವುದು ವಾಯು. ಹೇಗೆ ಮಂಜಿನ ಹನಿಯನ್ನು ಗಾಳಿ ಆರಿಸಿ ಕೊಂಡೊಯ್ಯುವುದೋ ಹಾಗೆ ಒಂದು ದಿನ ನಮ್ಮ ಶರೀರವೂ ನಾಶವಾಗುವುದು ಖಂಡಿತ ಎಂಬುದು ಕಬೀರನ ವಾಣಿ.  ಜೀವನವು ಒಂದು ಅನಾದಿ ಅನಂತ ನದಿ. ಹೊಳೆಯ ಆಳ-ಹರಿವು ಇವುಗಳ ಅರಿವೇ ಇಲ್ಲದೆ ಹೊರಟ ಅಂಬಿಗನಿಗೆ ಮೃತ್ಯು ಕೊರಳಿಗೆ ಕಟ್ಟಿದೆ. ದೋಣಿಗೆ ಹಗ್ಗ ಕಟ್ಟಿದ ಹಾಗೆ ಅಂಬಿಗನ ಕೊರಳಿಗೆ ಹಗ್ಗ ಕಟ್ಟಿದೆ ಎಂಬ ರೂಪಕ ಕೂಡಾ ಸುಂದರವಾಗಿದೆ.   ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು  ಎಲ್ಲ   ಮರೆಸಿದೆ  ಹೊಟ್ಟೆಪಾಡು ಎಲ್ಲರಿಗ...

ಕಠಿಣ ಪ್ರೇಮದ ನಿಯಮ

ಇಮೇಜ್
ಮೂಲ ಉರ್ದೂ : ನಕ್ಷ್ ಲಾಲ್ ಪುರಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  "ರಸ್ಮೆ ಉಲ್ಫತ್ ಕೋ ನಿಭಾಯೇo ತೋ ನಿಭಾಯೇo ಕೈಸೇ" ಎಂದು ಪ್ರಾರಂಭವಾಗುವ ಈ ಗೀತೆಯ ರಚನೆ ನಕ್ಷ್ ಲಾಲ್ ಪುರಿ ಅವರದ್ದು. ಇದನ್ನು "ದಿಲ್ ಕೀ ರಾಹೇಂ" ಚಿತ್ರದಲ್ಲಿ ಬಳಸಲಾಗಿದೆ. ಮದನ್ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿದ್ದಾರೆ. ಕಠಿಣ ಪ್ರೇಮದ ನಿಯಮ ಪಾಲಿಸುವುದಾದರೂ ಹೇಗೆ ಪಾಲಿಸಲಿ  ಸುತ್ತಲೂ ಹರಡಿರುವಾಗ ಬೆಂಕಿ ಸೆರಗನ್ನು ಹೇಗೆ ಕಾಪಾಡಲಿ? ಎಬ್ಬಿಸುತ್ತಾರಲ್ಲ ಜನರು ಹೃದಯದ ಹಾದಿಯಲ್ಲಿ  ಗೋಡೆಗಳನ್ನು ಉರುಳಿಸುವುದು ಹೇಗೆಂದು ಯಾರಾದರೂ ಹೇಳುವಿರೇನು? ಹಾಡುಗಳು ಸಾವಿರಾರಿವೆ ದುಃಖದಲ್ಲಿ ಅದ್ದಿದ್ದು, ಆದರೂ  ಮುರಿದ ಹೃದಯದ ವೀಣೆಯಲ್ಲಿ ನುಡಿಸುವುದದೆಂತು? ಎತ್ತಿಕೊಳ್ಳಬಹುದಾಗಿತ್ತು ಹೇಗೋ ದುಃಖಗಳ ಹೊರೆಯನ್ನಾದರೂ  ಬದುಕೇ ಹೊರೆಯಾದಾಗ ಮೇಲೆತ್ತಿ ಹೇಗೆ ನಡೆಯುವುದು?

ರೂಮಿಯ ಮೂರು ರಚನೆಗಳು

ಇಮೇಜ್
ಮೂಲ: ಮೌಲಾನಾ ಜಲಾಲುದ್ದೀನ್ ರೂಮಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ (1) ಕಲ್ಲಾಗಿ ಸತ್ತವನು ಹುಲ್ಲಾಗಿ ಮೇಲೆದ್ದೆ  ಹುಲ್ಲಾಗಿ ಸತ್ತವನು ಎದ್ದೆ ಹುಲ್ಲೆಯಾಗಿ ಹುಲ್ಲೆಯಾಗಿ ಸತ್ತವನು ಪಡೆದಿರುವೆ ಮಾನವ ಜನ್ಮ  ಏತರ ಭಯ?  ಸಾವಿನಿಂದ  ನನಗೇನಾಗಿದೆ   ನಷ್ಟ? (2) ಒಡೆಯನನ್ನು ಕಾಣದೆ ಸವೆಸಿದ ಜೀವನವು  ಮೈಮರೆತ ನಿದ್ರೆ ಅಥವಾ ಭಿನ್ನ ರೂಪದಲ್ಲಿ ಸಾವು  ನಿನ್ನನ್ನು ಕಲುಷಿತಗೊಳಿಸುವ ನೀರು ವಿಷವಾಗಿದೆ  ನಿನ್ನನ್ನು ಶುದ್ಧಗೊಳಿಸುವ ವಿಷವಾಗಿದೆ ನೀರು  (3) ಉದ್ಧಾರವಾಯಿತು ನಿನ್ನ  ಅನುರಾಗಾಮೃತ ಹೀರಿದ ಆತ್ಮ  ಉದಾತ್ತ ಸ್ಥಿತಿಗೇರಿಸಿದೆ ಆ ಜೀವಸಲಿಲ ಬಳಿಬಂದ ಸಾವು ಯಾವಾಗ ಮೂಸಿತೋ ನಿನ್ನ ಸೌರಭ  ನನ್ನಿಂದ ಏನೂ ಅಪೇಕ್ಷೆ ಪಡುವುದಿಲ್ಲ 

ಗಡಿ

ಇಮೇಜ್
ಮೂಲ ಉರ್ದೂ : ಜಾಹೀದ್ ಇಮ್ರೋಜ್ (ಪಾಕೀಸ್ತಾನಿ ಯುವಕವಿ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಗಡಿಯ ಮೇಲೆ ಬರಿಹೊಟ್ಟೆಯಲ್ಲೇ ನಮಗೆ ಕಟ್ಟಲಾಗದು ಬೇಲಿ. ರಾತ್ರಿಗಳನ್ನು ಒಣಗಿಸಿಬಿಡುತ್ತದೆ ಹಸಿವು. ದಾಹ ತೀರಿಸದು ನಮ್ಮ ಕಣ್ಣೀರು. ಧಾರ್ಮಿಕ ಸಂಗೀತಕ್ಕೆ ರಣಗೀತೆಯ ರಾಗ ದೊರೆತಾಗ ಫಲವಂತಿಕೆಯಲ್ಲೂ ಬೆಳೆಯುತ್ತದೆ ಬರಗಾಲ. ಮಕ್ಕಳು ತಾಯಿಎದೆಯಿಂದ ರಕ್ತ ಹೀರತೊಡಗುತ್ತಾರೆ. ಮುಖಗಳ ಮೇಲೆ ಯಾರೂ ಬಾವುಟಗಳನ್ನು ತೊಡುವುದಿಲ್ಲ, ಸ್ವಾತಂತ್ರ್ಯದಿನದಂದು ಜನ ತಮ್ಮ ಸಂತೋಷವನ್ನು ಸುಡುತ್ತಾರೆ, ನಕ್ಷತ್ರಕಡ್ಡಿಯನ್ನಲ್ಲ. ಸಿಪಾಯಿಗಳು ಹೊಲ ನಾಶಮಾಡುವ ಯಂತ್ರಗಳೆಂಬ ಹಾಡನ್ನು ಸೇನೆಯು ಎಂದೂ ಗುಣುಗುಣಿಸುವುದಿಲ್ಲ. ಹೂವುಗಳು ನವವಧುವಿನ ಹೆರಳಲ್ಲಿ ಮತ್ತು ಮಕ್ಕಳ ಸಮವಸ್ತ್ರಗಳ ಮೇಲೆ ಮಾತ್ರ ಭೂಷಣವಾಗುತ್ತವೆಯೇ? ಗಡಿಗಳ ರೇಖೆಗಳನ್ನು ಗುರುತಿಸಲು ಮುಳ್ಳುತಂತಿಯ ಬದಲು ಹೂಗಿಡಗಳ ಸಾಲನ್ನು ಕಟ್ಟಲಾಗದೆ?

ಹತ್ತು ಉರ್ದು ಶೇರ್

ಇಮೇಜ್
೧  ಮುಳ್ಳಿಂದಲೇ ತೆಗೆದೆ ಕಾಲಿಗೆ ಚುಚ್ಚಿದ ಮುಳ್ಳು ಏಕೆಂದರೆ ನೋಡಿ ಹೂವಿಗೆ ಬರಗಾಲ ಎಲ್ಲೆಲ್ಲೂ (ಆಕೀಲ್ ಶಾದಾಬ್) ೨ ಹೇಗೆ ಬದುಕಿದ್ದೇನೆ ಭೂಮಿಯ ಮೇಲೆ ಗೊತ್ತೇ? ಶತ್ರುವಿನ ಮನೆಯಲ್ಲಿ ಅತಿಥಿ ರಾತ್ರಿ ಕಳೆದಂತೆ (ಭಗವಾನ್ ದಾಸ್ ಏಜಾಜ್) ೩ ಮನೆಯಲ್ಲೇ ಆಗುಬಹುದು ಭಗವಂತನ ದರ್ಶನ ಮಕ್ಕಳೊಂದಿಗೆ ಮಗುವಾಗಿ ಆಡಿದರೆ ಎರಡು ಕ್ಷಣ (ಬಿಸ್ಮಿಲ್ ನವಶ್ ಬಂದಿ ) ೪ ಎಲ್ಲರ ಮನೆಗೆ ಹೋಗಿ ಕೊಚ್ಚುತ್ತಾರಲ್ಲ ಅವರಿವರ ಬಗ್ಗೆ ಹರಟೆ ಗಮ್ಮತ್ತು ತಮ್ಮ ಮನೆಯಲ್ಲೇ ಅವರಿಗೆ ಸಿಕ್ಕುವುದಿಲ್ಲ ಸವಕಲು ಕಾಸಿನ ಕಿಮ್ಮತ್ತು (ಅಸಿಮ್ ಶಹನಾಜ್ ಶಿಬ್ಲಿ) ೫ ಪ್ರತಿಯೊಂದು ವಿಷಯಕ್ಕೂ ಹಿಂದೂ ಮುಸ್ಲಿಂ ಎನ್ನುವೆಯಲ್ಲ ಕರ್ಮ! ಗೊತ್ತಿಲ್ಲವೇ ನಿನಗೆ ಸುಂದರಿ, ಪ್ರೇಮವೆಂಬುದೇ ಬೇರೆ ಧರ್ಮ (ಜಮಾಲುದ್ದೀನ್ ಆಲಿ) ೬ ಹೇಗೆ ಕೂಡಿಬಂದೀತು ಮಾತು? ಪ್ರತಿಯೊಂದೂ ಇಜ್ಜೋಡು ಕಣ್ಣಿಗಿಂತಲೂ ದೊಡ್ಡದು ಕನಸು, ನಿದ್ದೆಗಿಂತ ರಾತ್ರಿಯೇ ದೊಡ್ಡದು (ಶಾಹಿದ್ ಮೀರ್) ೭ ತೆರಳುವ ಮುನ್ನ ಕಾಲ ಉಳಿಸುವುದು ನೆನಪು ಮಾತ್ರ ಹಲವಾರು ಹಾರಿಹೋದರೂ ಹಕ್ಕಿ ಉಳಿದಂತೆ ಪಂಜರದಲ್ಲದರ ನೆರಳು (ನರೇಶ್) ೮ ಕಿಸೆ ಖಾಲಿಯಾದಾಗ ಹೇಗೆ ತೆಪ್ಪಗಾಗುತ್ತಾನೆ ಮನುಷ್ಯ ನೀರಿಲ್ಲದೇ ಹೋದಾಗ ಹೇಗೆ ತೆಪ್ಪಗಾಗುತ್ತದೋ ಮತ್ಸ್ಯ (ಜಹೀರ್ ಆತಿಶ್) ೯ ಬದುಕಿನುದ್ದಕ್ಕೂ ದೊಡ್ಡ ಮರಗಳನ್ನೇ ಹುಡುಕುತ್ತ ಹಾರಾಡಿದ ಹಕ್ಕಿ ಯಾವುದೋ ಬಳ್ಳಿಯ ತೊಡರಿನಲ್ಲಿ ನೆನ್ನೆ ಅದರ ಮೃತದೇಹ ಸಿಕ್ಕಿ...

ಏನು ಹಾಡುತ್ತಿವೆ ಹಕ್ಕಿ?

ಸಂತ ಕಬೀರನ  ಈ ಭಜನೆಯನ್ನು ಅನೇಕ ಗಾಯಕರು ಹಾಡಿದ್ದಾರೆ. ವೀಣಾ ಸಹಸ್ರಬುದ್ಧೆ ಎಂಬ ಗಾಯಕಿಯ ದನಿಯಲ್ಲಿ ನೀವು ಇಲ್ಲಿ ಕೇಳಬಹುದು.  ಈ ಕವಿತೆಯಲ್ಲಿ ಭಗವಂತನು ಎಲ್ಲೆಡೆ ಕಾಣುವುದನ್ನು ಕವಿ ವಿವರಿಸುತ್ತಾನೆ. "ತಾನೇ ಮಾಲಿ, ಉಪವನವೂ ತಾನೇ, ತಾನೇ ಬಿಡಿಸುವನು ಹೂವು" ಎಂಬ ಸಾಲುಗಳಲ್ಲಿ ಸೃಷ್ಟಿ, ಸ್ಥಿತಿ ಮತ್ತು ಸಾವು  ಈ ಮೂರರಲ್ಲೂ ಭಗವಂತನ ಸಾಕ್ಷಾತ್ಕಾರವನ್ನು  ಕವಿ ನಮಗೆ ತೋರಿಸುತ್ತಾನೆ.  ಮೂಲ : ಮಹಾತ್ಮಾ ಕಬೀರ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಏನು ಹಾಡುತ್ತಿವೆ ಹಕ್ಕಿ  ಪ್ರತಿಯೊಂದು ಕಾಯದಲ್ಲಿ ಕೇಳಿಸಿಕೋ ಎರಡು ಕ್ಷಣ ಮೌನವಾಗಿ ತಾನೇ ಕೋಲಾಗಿ ತಾನೇ ತಕ್ಕಡಿಯಾಗಿ  ತಾನೇ ಕುಳಿತು ತೂಗುತ್ತಿಹನು ನೋಡಲ್ಲಿ  ತಾನೇ ಮಾಲಿ, ಉಪವನವೂ ತಾನೇ  ತಾನೇ ಬಿಡಿಸುವನು ಹೂವು ನೋಡಲ್ಲಿ  ವನದಲ್ಲಿ ಎಲ್ಲೆಡೆಗೂ ತಾನೇ ತಾನಾಗಿ  ಮೆರೆಯುವನು ಜಡದಲ್ಲಿ ಚೈತನ್ಯದಲ್ಲಿ  ಸಾಧುಗಳೇ ಕೇಳಿ, ಹೇಳುವನು ಕಬೀರ  ಮನಸ್ಸಿನ ಗಂಟು ಬಿಡಿಸುವ ಈ ವಾಣಿ