ಪೋಸ್ಟ್‌ಗಳು

Children ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೊಂದಿಕೆ

ಇಮೇಜ್
 ಮೂಲ: ಡೊರೀನ್ ನಿ ಘ್ರಿಯೋಫಾ ಕನ್ನಡಕ್ಕೆ: ಸಿ ಪಿ ರವಿಕುಮಾರ್   ತಿಂಗಳಾನುಗಟ್ಟಲೆ ಕಲ್ಪಿಸಿಕೊಂಡೆ ಹೇಗಿರಬಹುದು ಎಂದು ನನ್ನ ತೊಗಲಿನ ಕೆಳಗೆ ಕೈಕಾಲುಗಳ ಗಂಟಿನಲ್ಲಿ ಕಾಣಿಸಿದ್ದು  ಹರಿದಾಡುವ ನೆರಳುಗಳು ಮಾತ್ರ. ಭಾಷಾಂತರಿಸಿ ಹೇಳಲು ಅಸಾಧ್ಯ: ಉಬ್ಬಿದ ಹೊಟ್ಟೆಯ ನಡುವೆ ಅಲ್ಲಲ್ಲಿ ವಿರಾಮಚಿಹ್ನೆಗಳ ಹಾಗೆ ಮಂಡಿ ಮೊಳಕಾಲು; ಗೋಲಿಯಂತೆ ಜಾರಿ ಹೋಗಿದ್ದೇನು ಅದು  ಬಿಗಿಯಾಗಿ ಕಟ್ಟಿದ ಮುಷ್ಟಿ ಇರಬಹುದೇ  ಅಥವಾ ಪೃಷ್ಠದ ಅಥವಾ ಪಾದದ ನಿಗೂಢ ಹೊರಳಾಟವೆ? ಆದರೆ ನಸುಕು ಹೊರಗೆ ತಂದಾಗ ನಿನ್ನನ್ನು ಕತ್ತಲಲೋಕದಿಂದ ಮೇಲೆತ್ತಿ  ಹಲವಾರು ತಿಂಗಳು ಪ್ರಯತ್ನಿಸಿದೆ ಚಿತ್ರದ ಹಲವು ಚೂರುಗಳನ್ನು ಒಟ್ಟುಗೂಡಿಸಲು : ನಿನ್ನ ಪಾದದ ಕಮಾನು  ನನ್ನ  ಅಂಗೈಯ ಹಳ್ಳದಲ್ಲಿ  ಹೊಂದಿಕೊಳ್ಳುವುದು ಯಥಾವತ್ತು ಮತ್ತು ನನ್ನ ಕುತ್ತಿಗೆಯ ಸಂದಿಯಲ್ಲಿ ನೀನು ನಿನ್ನ ತಲೆಯನ್ನು ತೂರಿಸಿಕೊಂಡು ಮಲಗುತ್ತಿ ಇದನ್ನೆಲ್ಲ ಕಂಡಾಗ ನನಗೆ ಉಂಟಾಯಿತು  ನಾವಿಬ್ಬರೂ ಹೊಂದಿಕೊಳ್ಳುತ್ತೇವೆ  ಹೇಳಿ ಮಾಡಿಸಿದಂತೆ ಎಂಬ ಜ್ಞಾನೋದಯ. ಅನಂತರ ನೀನು ಬೆಳೆದೆ, ಪುಟ್ಟ ಅಪರಿಚಿತ, ಮತ್ತು ನಿನ್ನನ್ನು ಅರಿಯಲು ನಾನು ಬೆಳೆದೆ.

ಹೂರಣದ ಹೋಳಿಗೆ

ಇಮೇಜ್
  ಮೂಲ: ಪಾದ್ರಾಗ್ ಡ್ಯಾಲಿ ಭಾವಾನುವಾದ: ಸಿ ಪಿ ರವಿಕುಮಾರ್ ನಾವು ಏಳುವ ಮುನ್ನವೇ ನೀನು  ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು. ಇಡೀ ಬೆಳಗ್ಗೆ  ನಾವು ನೋಡಿದೆವು ನೀನು ಕಣಕ ನಾದುವುದನ್ನು  ಅದರೊಂದಿಗೆ ಪಿಸುಗುಟ್ಟುತ್ತಾ ಮಾತಾಡುವುದನ್ನು. ನಾವು ಕೆಳಗೆ ಇಳಿದು ಬಂದಾಗ ಎಲ್ಲಿ  ನಿನ್ನ ಏಕಾಗ್ರತೆಗೆ ಭಂಗವಾದೀತೋ ಎಂದು ಮೆಲ್ಲನೆ ನಡೆದು ಬಂದೆವು. ನಂತರ ನೀನು ಹೂರಣ ತುಂಬಿದ ಉಂಡೆಗಳನ್ನು ಲಟ್ಟಿಸುವುದು ಕಂಡಿತು ಕಪ್ಪು ಕಲ್ಲಿನ ಮೇಲೆ ತೆಳ್ಳಗೆ. ಅಂಚು ಬರಬಾರದು,  ತೆಳ್ಳಗೆ ಇರಬೇಕು ಹರಿಯಬಾರದು, ನಾಜೂಕು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಸಿದ್ಧವಾಯಿತು. ತುಪ್ಪ, ಹಾಲು, ಸೀಕರಣೆ ಇತ್ಯಾದಿ ಮೊದಲೇ ತಯಾರಾಗಿ ಕಾದಿದ್ದವು. ನಿನ್ನ ಹೊಳೆಯುವ ಕಣ್ಣುಗಳ  ಬೆಳಕಿನಲ್ಲಿ ನಾವು ಮೌನವಾಗಿ ತಿನ್ನುತ್ತಾ ಕುಳಿತೆವು ಎಲ್ಲೋ ಮಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವಾಗ.

ನಮ್ಮ ಮಕ್ಕಳು

ಇಮೇಜ್
ನಮ್ಮ ಮಕ್ಕಳು ಮೂಲ: ನಿಕೊಲೆಟ್ ಸೌಡರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಹೇಗಿರಲಿ ನಮ್ಮ ಮಕ್ಕಳ ಪಾಲನೆ  ಅಂದರೆ ಅವರು ಪ್ರೀತಿಸಲಿ ಯಾರೂ ಪ್ರೀತಿಸದ ವಸ್ತುಗಳನ್ನು ಕೂಡಾ. ಉದಾಹರಣೆಗೆ ಕಾಡು ಸೇವಂತಿಗೆ ಹೂವುಗಳು, ಹರಿದಾಡುವ ಹುಳಹುಪ್ಪಟೆ ಮತ್ತು ಜೇಡ. ಅವರಿಗಿರಲಿ ಗುಲಾಬಿಗೆ ಮುಳ್ಳಿನ ಅಗತ್ಯವಿದೆ ಎಂಬ ಪರಿಜ್ಞಾನ, ಮಳೆಗಾಲದ ದಿನಗಳನ್ನೂ ಬೇಸಗೆಯ ದಿನಗಳಷ್ಟೇ ಆನಂದದಿಂದ ಸ್ವೀಕರಿಸುವ ಸ್ವಭಾವ. ಬೆಳೆದು ದೊಡ್ದವರಾದ ನಂತರ  ಬಂದಾಗ ಒಂದು ದಿನ ಧ್ವನಿ ಇಲ್ಲದವರ ಪರವಾಗಿ ಮಾರಾಡುವ ಸರದಿ ಬರಲಿ ಅವರಿಗೆ ಎಳೆಯ ವಸ್ತುಗಳನ್ನು  ಕಾಪಾಡಿದ ನೆನಪು ಮತ್ತು ಮಾತಾಡಲು ತಾವೇ ತೆರೆಯಲಿ ತುಟಿ.

ಪಡಲ್ ಆಟ

ಇಮೇಜ್
  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು!* ಮಳೆ ಬಂದಾಗ ಮೈದಾನದಲ್ಲಿ ನೀರು ನಿಂತಾಗ ನೀನೂ ಬಂದು ಜೊತೆ ಸೇರು ಆಡೋಣ ಅತ್ತಕಡೆಯಿಂದಿತ್ತಕಡೆ ಹಾರಿ ಮತ್ತೆ ಇತ್ತಕಡೆಯಿಂದತ್ತಕಡೆ ಹಾರಿ ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ನೋಡು ನಾನೇ ಹನುಮಂತನಂತೆ ಅದೇ ಲಂಕೆ, ನಡುವೆ ಕಡಲಂತೆ ನೋಡು ಒಂದೇ ಸಲ ಹಾರಿ ಬಂದು ನಿಂತೆ ನೀನೂ ಬಂದರೆ ಜೊತೆಗೇ ಆಡೋಣವಂತೆ  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ಛಪ್ ಎಂದು ಕಡಲಲ್ಲಿ ಹಾರಿಸೋಣ ಕೊಚ್ಚೆ ಅಮ್ಮ ಕರೆಯುವವರೆಗೂ ಮನಸೋ ಇಚ್ಛೆ  ಏನೀಗ ಕೊಳೆಯಾದರೆ ಒಂದಿಷ್ಟು ಬಟ್ಟೆ ಒಗೆದರೆ ಬಿಳಿಯಾಗದೇ ಇರುವುದೇ ಮತ್ತೆ! ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! (*ಪಡಲು - puddle. ಮಳೆ ಬಂದಾಗ ನೀರು ಸೇರಿ ಉಂಟಾಗುವ ಪುಟ್ಟ ಹೊಂಡ) ಸಿ ಪಿ ರವಿಕುಮಾರ್

ವಿನಯ

ಇಮೇಜ್
ಜನ ಕೇಳಿದಾಗ ಪ್ರಶ್ನೆ ಕೊಡುವೆ ಸಿದ್ಧ ಉತ್ತರವನ್ನೇ : "ಓಹೋ ಚೆನ್ನಾಗಿದ್ದೇನೆ, ಎಲ್ಲಾ ನಿಮ್ಮ ಆಶೀರ್ವಾದ" ಮತ್ತೊಬ್ಬರು ಕೇಳಿದಾಗ ಪ್ರಶ್ನೆ ನನ್ನ ಉತ್ತರ ಪುನರಾವರ್ತನೆ: "ನೀವು ಹೇಗಿದ್ದೀರಿ? ನಾನು ಚೆನ್ನಾಗಿದ್ದೇನೆ! ಧನ್ಯವಾದ!" ನಾನು ಉತ್ತರಿಸುವುದು ಖಂಡಿತ ನನ್ನ ಉತ್ತರ ಪೂರ್ವನಿಶ್ಚಿತ ಮತ್ತು ವಿನಯಪೂರ್ವಕ  ಯಾವಾಗಲೂ. ಆದರೆ    ಕೆಲವೊಮ್ಮೆ ಅಂದುಕೊಳ್ಳುತ್ತೇನೆ       ಅವರು ಏನೂ ಕೇಳದಿದ್ದರೆ ಮೇಲು. ಮೂಲ: ಏ ಏ ಮಿಲ್ನ್  ಕನ್ನಡ ಅನುವಾದ: ಸಿ ಪಿ ರವಿಕುಮಾರ್

ಪೇಪರ್ ಗೊಂಬೆ

ಇಮೇಜ್
ಬೊಂಬೆ ಮಾಡಿ ತೋರಿಸೇ ಅಕ್ಕಾ ಇಗೋ ಕತ್ತರಿ, ಕಾಗದ! ಬೇರೆ ಕೆಲಸ ಇಲ್ಲವೇ ನನಗೆ  ನಿನಗೆ ಸುಮ್ಮನೆ ಕೂಡಲು ಆಗದಾ! ಬೇಸಗೆ ರಜೆ ಅಲ್ಲವೇನಕ್ಕಾ ಶಾಲೆಗೆ ಬಿಡುವಿದೆಯಲ್ಲ! ರಜೆಯಲ್ಲೂ ಹೋಮ್  ವರ್ಕ್ ಕೊಟ್ಟಿದ್ದಾರೆ ಮಿಸ್ ಸರಳಾ ನಮಗೆಲ್ಲ! ಹೋಮ್ ವರ್ಕ್ ಅಂದರೆ ಏನೇ ಅಕ್ಕಾ ನನಗಂತೂ ಗೊತ್ತಿಲ್ಲ! ಏನು ಮಾಡಿದಿರಿ ರಜೆಯಲ್ಲೆಂದು ಬರೆಯಬೇಕು ನಾವೆಲ್ಲ! ತಂಗಿಗೆ ಗೊಂಬೆ ಮಾಡಿದ್ದನ್ನೇ  ಬರೆಯಬಹುದಲ್ಲ ನೀನು! ಒಳ್ಳೆಯ ಐಡಿಯಾ ಕಣೇ ಜಾಣಮರಿ! ಬಾ, ಮಾಡಿಕೊಡುವೆ ಪೇಪರ್  ಮೀನು!

ಜೀವನವೊಂದು ಕನಸು

ಇಮೇಜ್
 ಮೂಲ: ಲೂಯಿಸ್ ಕ್ಯಾರಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹೊಳೆಯುವ ಸೂರ್ಯನ ಕೆಳಗೊಂದು ದೋಣಿ ಕನಸೋ ಎಂಬಂತೆ ಮುಂದೆ ಸಾಗುತ್ತಿದೆ ತೇಲಿ ಜುಲೈ ತಿಂಗಳ ಸಾಯಂಕಾಲದಲ್ಲಿ. ಮೂವರು ಮಕ್ಕಳು ಕೂಡುತ್ತಾರೆ ಹತ್ತಿರ ಕಣ್ಣಲ್ಲಿ ಕಿವಿಯಲ್ಲಿ ತುಂಬಿರುವ ಕಾತರ ಕತೆಯೊಂದನ್ನು ಕೇಳಬೇಕೆಂಬ ಆತುರ. ಇಂದು ಪೇಲವವಾಗಿದೆ ಅಂದು ಹೊಳೆದ ಆಕಾಶ ಶಾಂತವಾದಂತೆ ಪ್ರತಿಧ್ವನಿ, ಬರಿದಾದಂತೆ ಸ್ಮೃತಿಕೋಶ ಸತ್ತು ಬಿದ್ದಿದೆ ಜುಲೈ ತಾಳಲಾರದೆ ಶಿಶಿರದ ಆಕ್ರೋಶ. ನನ್ನನ್ನು ಅವಳು ಇನ್ನೂ ಕಾಡುತ್ತಾಳೆ ಭೂತವಾಗಿ, ಆಲಿಸ್, ಮೋಡಗಳಲ್ಲಿ ತೇಲುತ್ತಾ ಸಾಗಿ, ಜಾಗೃತ ಕಣ್ಣುಗಳಿಂದ ನೋಡಲಾಗದ ಹುಡುಗಿ. ಕಥೆ ಎಂದರೆ ಇನ್ನೂ ಆಸೆ ಮಕ್ಕಳಿಗೆ ಕಣ್ಣಲ್ಲಿ ಕುತೂಹಲ, ಅಮೃತ ಕಿವಿಗಳಿಗೆ, ಲಗುಬಗೆಯಿಂದ ಬಂದು ಕೂಡುವರು ಬಳಿಗೆ. ಕೌತುಕಲೋಕದಲ್ಲಿ ವಿಹರಿಸುವರು ಅವರು ಕನಸುಗಳ ಕಾಣುತ್ತ ದಿನವ ಕಳೆಯುವರು ಬೇಸಗೆಗಳು ಬಂದರೂ ಬೇಸಗೆಗಳು ಮುಗಿದರೂ. ತೇಲುತ್ತಾ ಸಾಗುವರು ತೊರೆಯ ಹರಿವಿನಲಿ, ಬಂಗಾರದ ಬೆಳಕನ್ನು ಸ್ವೀಕರಿಸಿ ಅರಿವಿನಲಿ, ಜೀವನವೊಂದು ಕನಸಲ್ಲದೇ ಬೇರೇನು ಹೇಳಿ!

ಕಟ್ಟುವೆನು ನಾನು

ಇಮೇಜ್
ಸ್ಫೂರ್ತಿ: ರಾಬರ್ಟ್ ಲೂಯಿ ಸ್ಟೀವನ್ಸನ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ನೋಡಿ ನಾನು ಮನೆಯಲ್ಲೇ ಏನೇನು ಕಟ್ಟಬಲ್ಲೆ! ಅರಮನೆ, ದೇವಸ್ಥಾನ, ಕೋಟೆ ಕೊತ್ತಲ ಕಿಲ್ಲೆ! ಸುರಿದುಕೊಳ್ಳಲಿ ಎಷ್ಟು ಸುರಿಯುತ್ತದೋ ಮಳೆ, ನಾನಂತೂ ಕಟ್ಟುವ ಆಟ ಆಡುವೆ ಮನೆಯಲ್ಲೇ! ಮೇಜು ಕುರ್ಚಿಗಳೆಲ್ಲ ಆಗಿ ಬೆಟ್ಟದ ಸಾಲು, ಕೆಳಗೆ ಹಾಸಿದ ಚಾಪೆ ಆಗುವುದು ಕಡಲು! ಗೋಡೆ ಕಟ್ಟುವೆ ಸುತ್ತ ಪುಸ್ತಕಗಳ ಪೇರಿಸಿ, ಕಟ್ಟುವೆನು ಗುಡಿಗೋಪುರ, ಧ್ವಜವ ಮೇಲಿರಿಸಿ! ನಾಲ್ಕು ಕಂಬಗಳಿವೆ ನನ್ನ ಪುಸ್ತಕದರಮನೆಗೆ, ಚಾದರದ ಗೋಪುರವನೆಬ್ಬಿಸುವೆ ಕೊನೆಗೆ, ಮೇಲಿಂದ ರಾಜ ಮೆಟ್ಟಿಲು ಇಳಿಯುತ್ತಾ ಬಂದರೆ, ಸಿದ್ಧವಾಗಿದೆ ಕೆಳಗೆ ಜಹಜುಗಳ ಬಂದರೇ! ಅಮ್ಮನ ಪಾತ್ರೆಗಳೆಲ್ಲವೂ ನನ್ನ ಪಾಲು! ಸಾಲಾಗಿ ನಿಂತಿರುವ ಜಹಜುಗಳ ಸಾಲು! ಕಡಲಲ್ಲಿ ತೇಲುತ್ತಿವೆ ಒಂದೆರಡು ಬೋಟು, ಒಂದು ಅಕ್ಕನ ಪರ್ಸ್, ಒಂದು ತಾತನ ಕೋಟು!! ಗುಡಿಯ ಸುತ್ತಲೂ ದೀಪ ಹಚ್ಚಿಟ್ಟ ಹಾಗೆ ಹೇಗೆ ಮಾಡುವುದೆಂದು ಹೊಳೆದದ್ದೇ ನನಗೆ ತಂದು ಅಜ್ಜಿಯ ಭಾರೀ ಜರತಾರಿ ಸೀರೆ ಸುತ್ತಿರುವೆ, ನೋಡೋಣ ಏನನ್ನುತಾರೆ! ಮುಗಿಯಿತಲ್ಲ ಆಟ,ಕಟ್ಟಿದ್ದು ಸಾಕು ಈಗ ಕಟ್ಟಿದ್ದನ್ನು ಕೆಡವಲೇ ಬೇಕು ಕಟ್ಟಲು ಬೇಕಾಯಿತು ಒಂದೆರಡು ಗಂಟೆ ಕೆಡವಲು ಅಷ್ಟೆಲ್ಲಾ ವ್ಯವಧಾನ ಉಂಟೇ! ಕೋಣೆಯ ತುಂಬಾ ಬಿದ್ದಿರುವ ರಾಶಿ  ಸಾಮಾನು, ನೋಡುತ್ತಾ ಕಲ್ಪಿಸಿಕೊಳ್ಳುವೆ ಕಟ್ಟಬಹುದು ಬೇರೇನು, ನಡೆದೇ ಇರುತ್ತದೆ ಕೆಡವಿ ಕಟ್ಟುವ ಆಟ,  ಹೊಟ್ಟೆ ಹಾಕುತ್ತಿದೆ ತಾಳ, ಕರೆಯುತ...

ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ

ಇಮೇಜ್
 ಮೂಲ ಕವಿತೆ: ಶೆಲ್ ಸಿಲ್ವ್ವರ್ಸ್ಟೀನ್ ಅನುವಾದ: ಸಿ. ಪಿ. ರವಿಕುಮಾರ್ ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ ಚಿಟ್ಟೆಹುಳು ಹೇಳಿದ್ದೆಲ್ಲ ಅರ್ಥವಾಗುತ್ತಿತ್ತು ನನಗೆ ಕಾಜಾಣಗಳ ಹರಟೆಗೆ ಸೂಸುತ್ತಿದ್ದೆ ಗುಪ್ತನಗೆ ಮಲಗಿದ್ದಲ್ಲೇ ಹರಟುತ್ತಿದ್ದೆ ನೋಣವೊಂದರ ಜೊತೆಗೆ. ಜೀರುಂಡೆಯ ಎಲ್ಲ ಪ್ರಶ್ನೆಗಳಿಗೂ ಉತ್ತರವಿತ್ತು ನನ್ನಲ್ಲಿ ದನಿಗೂಡಿಸುತ್ತಿದ್ದೆ ಬೀಳುವ ಹಿಮಕಣಗಳ ಆರ್ತನಾದಕ್ಕೆ  ಹಿಂದೊಮ್ಮೆ ನಾನು ಮಾತಾಡುತ್ತಿದ್ದೆ ಹೂಗಳ ಭಾಷೆ ಹೇಗಿತ್ತಪ್ಪ ಅದು, ಹೇಗಿತ್ತಪ್ಪ, ಮರೆತೇಹೋಯ್ತಲ್ಲ ಛೇ!

ಹ್ಯಾಲೋವೀನ್

ಇಮೇಜ್
 ಹ್ಯಾಲೋವೀನ್ ಕಟುಕನ ಭಾರೀ ಗಾತ್ರದ ಚಾಕು ಮೊದಲು ಒಳನುಗ್ಗಿ ಕೊರೆಯುತ್ತದೆ ತೊಟ್ಟುಳ್ಳ ಗುಂಡನೆ ಮುಚ್ಚಳ ಮೇಲುಗಡೆ. ಈಗ ಕೈಹಾಕಿ ಒಳಗೆ ಬಗೆದು ಕೈಗಂಟುವ ಮಾಂಸಲ ಭಾಗ ಚಮಚದಿಂದ ಕೆರೆದು ಶುದ್ಧಗೊಳಿಸಬೇಕು  ಒಳಗೋಡೆ. ಅಂದು ಮಧ್ಯಾಹ್ನವೇ ರೂಪಿಸಿದ ಭಯಾನಕ ಆಕೃತಿ: ಮೊದಲು ಕೆತ್ತಬೇಕು ತ್ರಿಕೋನಾಕಾರದ ಕಣ್ಣು ಅಥವಾ ವಜ್ರಾಕ್ರಾರದವು ಮತ್ತು ಚೌಕಾಕಾರದ ಮೂಗು. ಕೆಳಗೆ ಬಾಗಿದ ಬಾಯಲ್ಲಿ ಮೂರು ಭಯಾನಕ ಹಲ್ಲು.  ಬೇಕೆನಿಸಿದರೆ ಗುಂಡನೆಯ ಕಿವಿ. ಮುಸ್ಸಂಜೆ ಹೊತ್ತು ಒಳಗೆ ಮೋಂಬತ್ತಿ ಇಟ್ಟು ಹಚ್ಚಿದಾಗ ಕಾಣುತ್ತದೆ  ಹಿಂಭಾಗದಲ್ಲಿ ಕತ್ತಲು. ಮುಂದಿನಿಂದ ನೋಡಿದರೆ ಕಾಣುವುದು ಪಕ್ವ ಕುಂಬಳಕಾಯಿ, ಅಷ್ಟೇ. ಹೊರಗೆ ತರಗೆಲೆಗಳುದುರಿದ ಹುಲ್ಲಿನ ಮೇಲೆ ಬಿದ್ದ ನೆರಳು ಕೈ ಮಾಡಿ ಕರೆದಾಗ ಬೆರಳು ಆಗಮಿಸುತ್ತಾರೆ ಮಕ್ಕಳು. "ಟ್ರಿಕ್ ಆರ್ ಟ್ರೀಟ್."  ತೆರೆದ ಬಾಗಿಲಿನ ಮುಂದೆ ನಿಂತ ಕುಂಬಳಕಾಯಿ ಕೊರೆದ ಮಾಯಾವಿ ವೇಷದಾರಿ ಉದುರಿಸುತ್ತಾನೆ ಅವರ ಜೋಳಿಗೆಗಳಲ್ಲಿ ಪೆಪ್ಪರ್ಮಿಂಟು ಅವನಿಗೆ ಗೊತ್ತು ಏನೆಂದು ಚಳಿಗಾಲದ ಸಂದೇಶ: ಭೂತಗಳಂತೆ ನಟಿಸುವ ಮಕ್ಕಳಷ್ಟೇ ವಾಸ್ತವ. ಮೂಲ: ಮ್ಯಾಕ್ ಹ್ಯಾಮಂಡ್ ಅನುವಾದ: ಸಿ. ಪಿ. ರವಿಕುಮಾರ್

ಮಕ್ಕಳ ದಿನ

ಇಮೇಜ್
ಮಕ್ಕಳಿದ್ದವರನ್ನು ಕೇಳಿ ಮಕ್ಕಳ ದಿನ ಯಾವುದೆಂದು ಹುಟ್ಟಿದಾಗ ಅತ್ತರೂ  ಕಣ್ಣಲ್ಲಿ ಮುತ್ತು ತುಂಬಿಕೊಳ್ಳುವ ತಾಯಿ ಎಂದೂ ಹಾಡದ ತಂದೆಯೂ ಕಲಿತು ಹಳ್ಳುಳ್ಳಾಯಿ ಸೀತವಾದರೆ ಕೆಮ್ಮಾದರೆ ರಾತ್ರಿ ಇಡೀ ಜಾಗರಣೆ  ಹೆಗಲಮೇಲೆ ಹೊತ್ತು ರಥಯಾತ್ರೆ ವಿಜೃಂಭಣೆ ರಾತ್ರಿ ಕುಸುಕುಸು ಸದ್ದು ನಿದ್ದೆಯಲ್ಲೇ ಎದ್ದು ಒದ್ದೆಯಾಗಿದೆಯೇ ಬೇಕಾಗಿದೆಯೇ ಹಾಲು ಹೊಟ್ಟೆನೋವೇ ಏನೋ ತಿಳಿಯದೆ ಕಂಗಾಲು ತಾರಮ್ಮಯ್ಯ ಎಂದಾಗ ನಕ್ಕರೆ ಬೀಗಿ ತೂಗಿ ತೂಗಿ ಮಲಗದ ಮಗುವಿಗೆ ರೇಗಿ ಹೆಜ್ಜೆ ಇಟ್ಟರೆ ಸಂಭ್ರಮ ಅಪ್ಪ ಅಮ್ಮ ಎಂದರೆ ವಿಭ್ರಮ ಮೊದಲ ದಿನ ಸ್ಕೂಲಲ್ಲಿ ಹೋ ಎಂದು ಅತ್ತಾಗ ಅಳದಿದ್ದರೂ ಕರುಳು ಕಿತ್ತಂತೆ ಇತ್ತಾಗ  ಎಷ್ಟು ಬೆಳೆಯಿತು ಎಂದು ಹಾಕುತ್ತಾ ಗೀಟು ಏಳು ಏಳು ಶಾಲೆಗೆ ಹೊತ್ತಾಯಿತು ಶಾಲೆಯಲ್ಲಿ ಸಂಭ್ರಮದ ಆನುವಲ್ ಡೇ  ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವ ಮಗು ನಮ್ಮದೇ ಒಂದು ಎರಡು ಶಿಶುಗೀತೆ ಹಾಡು ಮೂರು ನಾಕು ಮಗ್ಗಿ ಉರು ಹಾಕು ಏಳು ಎಂಟು ಆಲ್ಜೀಬ್ರಾ ನಂಟು ಒಂಬತ್ತು ಹತ್ತು ಮೀಸೆ ಬಂದಿತ್ತು ಎನ್ನುತ್ತಾ ಕಳೆಯುತ್ತಾರಲ್ಲ ದಿನವೆಲ್ಲಾ  ಒಂದರ ನಂತರ ಒಂದು ಕೇಳಿ ಅವರನ್ನು ಮಕ್ಕಳ ದಿನ ಯಾವುದೆಂದು ಸಿ ಪಿ ರವಿಕುಮಾರ್ #ಕವಿತಾಸ್ಫೂರ್ತಿ

ಆಟೋಕಾಪ್ಟರ್

ಆಟೋಕಾಪ್ಟರ್ ಮಾಡುವೆನಮ್ಮಾ ಆಟೋಕಾಪ್ಟರ್ ಮಾಡುವೆನು! ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ ಆಗಸದಲ್ಲಿ ಹಾರುವೆನು! ಬೆಂಗಳೂರು ಬರಿ ಟ್ರಾಫಿಕ್ ಊರು ಎನ್ನುತ ಎಲ್ಲರೂ ದೂರುವರು! ಆದರು ಎಲ್ಲರೂ ಇಲ್ಲೇ ಬಂದು ತಮ್ಮಯ ಝಂಡಾ ಊರುವರು! ದಿನದಿನ ಕಳೆಯುತ ಟ್ರಾಫಿಕ್ ಬೆಳೆದು ಆಗುತ್ತಿದೆ ಹನುಮನ ಬಾಲ! ಮೆಟ್ರೋ, ಫ್ಲೈ ಓವರ್ ರಸ್ತೆಗಳಿಂದ ದೂಡಬಹುದೇನೋ ಕೆಲಗಾಲ! ಟ್ರಾಫಿಕ್ ಪ್ರಾಬ್ಲಮ್ಮಿಗೆ ನೋಡಮ್ಮಾ ಕಂಡುಹಿಡಿಯುವೆನು ಸೊಲ್ಯೂಷನ್! ಹೊಸಕಾಲಕೆ ಬೇಕೇ ಬೇಕಮ್ಮಾ ಹೊಸಹೊಸ ಹೊಸಹೊಸ ಇನೊವೇಷನ್! ಆಟೋಕಾಪ್ಟರ್ ಮಾಡುವೆನಮ್ಮಾ ಆಟೋಕಾಪ್ಟರ್ ಮಾಡುವೆನು! ಆಟೋ ಮೇಲ್ಗಡೆ ರೆಕ್ಕೆಯ ಕಟ್ಟಿ ಆಗಸದಲ್ಲಿ ಹಾರುವೆನು! ಕಾಮನ ಬಿಲ್ಲಿನ ರಸ್ತೆಯ ಮೇಲೆ ನನ್ನಯ ಆಟೋ ಓಡುವುದು! ನನ್ನಯ ಅದ್ಭುತ ವಿಮಾನವನ್ನು ಜಗ ಕಣ್ ಬಿಡುತ್ತ ನೋಡುವುದು! - ಸಿ.ಪಿ. ರವಿಕುಮಾರ್

ಬೆಳಕಿನ ಕಾವಲುಗಾರ್ತಿ

ಇಮೇಜ್
ಮೂಲ ಕವಿತೆ - ಮಿಷೆಲ್ ವುಲ್ಫ್  (ಅಮೇರಿಕಾ ಸಂಯುಕ್ತರಾಷ್ಟ್ರ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಪುಟ್ಟವಳು ಕೇಳಿಸಿಕೊಂಡರೂ ಎಂದಿಗೂ ಬಿಟ್ಟುಕೊಡುವುದಿಲ್ಲ  ತನಗೆ ಗೊತ್ತಿರುವುದನ್ನು. ಬೆಳಗಿನ ಹೊತ್ತು   ಅವಳು ನಿಯಂತ್ರಿಸುತ್ತಾಳೆ  ಛಾವಣಿಗಳ ಮೂಲಕ ಸೋಸಿ  ಮರಗಳ ಮೂಲಕ ಹಾದು  ನೆರಿಗೆಗಟ್ಟಿದ ಮುಖಗಳ ಮೇಲೆ ಬಿದ್ದ ಬೆಳಕಿನ ಪ್ರಮಾಣ.  ಒಬ್ಬಂಟಿಯಾಗಿ ಎದ್ದವಳು ತೆರೆಯುತ್ತಾಳೆ ಬೆಳಕಿನ ಪೆಟ್ಟಿಗೆಗಳನ್ನು  ಒಂದೊಂದಾಗಿ.  ಇಂಥವರಿಗೆ ಇಷ್ಟೇ ಎಂದು  ಎಚ್ಚರಿಕೆಯಿಂದ ಹಂಚುತ್ತಾಳೆ.   ಗಂಭೀರ ಮುಖದಿಂದ ಆಲಿಸುತ್ತಾಳೆ   ಇನ್ನಷ್ಟು ಬೆಳಕಿಗಾಗಿ  ಜನರು ನೀಡಿದ ಮೊರೆ. ಎಂಥ ಕೆಲಸವಪ್ಪ.  ಎಷ್ಟು ಜಾಗರೂಕತೆ ವಹಿಸಿದರೂ ಸಾಲದು. ಸ್ವಲ್ಪ ದಿನಗಳ ಹಿಂದೆ ಉತ್ಸಾಹದ ಭರದಲ್ಲಿ  ಇದ್ದಬದ್ದ ಬೆಳಕನ್ನೆಲ್ಲಾ ಹಂಚಿಬಿಡುತ್ತಿದ್ದಳು.  ಫೋನ್ ಗಳು ಒಂದೇ ಸಮನೆ ಬಜಾಯಿಸುತ್ತವೆ. ಅಬ್ಬಾ ಸೋಜಿಗವೇ. ಯಾರೋ ಅವಳಿಗೆ  ಬೆಳಕಿಗಾಗಿ ಧನ್ಯವಾದ ತಿಳಿಸುತ್ತಾರೆ. ಅವಳಿಗೆ ಕೂಡಲೇ ಕಟ್ ಮಾಡಬೇಕಾಗುತ್ತದೆ. ಅವಳ ಗಲ್ಲಗಳು ಬಲೂನುಗಳಂತೆ ಉಫ್ ಎಂದು ಊದಿಕೊಳ್ಳುತ್ತಾ, ಫುಸ್ ಎಂದು ಕುಗ್ಗುತ್ತಾ. ಬೆದರಿದ ಮೀನೋ ಎಂಬಂತೆ. ಪೊರಕೆ ಇಡುವ ಮೂಲೆಗೆ ಹೋಗಿ ಫನಲ್ ಜೋಡಿ...

ನಮ್ಮಂಥ ಹೊಸಬರಿಗೆ ಏನಾದರೂ ಸಲಹೆ

ಮೂಲ : ರಾನ್ ಕಾರ್ಜ್ (ಅಮೆರಿಕಾ ಸಂಸ್ಥಾನ)  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನಿ ಮ್ಮ ಮೇಜಿನ ಮೇಲೆ ಕರ್ತವ್ಯಕ್ಕಾಗಿ ಕುಳಿತುಕೊಳ್ಳುವುದನ್ನು ಬಿಡಿ.  ನಿಮ್ಮ ಮನೆ ಬಿಟ್ಟು ಹೊರಡಿ. ಹೊರಗಿನ ಜಗತ್ತಿಗೆ ಕಾಲಿಡಿ.  ಬೇಕಾದರೆ ಕೈಯಲ್ಲಿ ಒಂದು ನೋಟ್ ಬುಕ್ ಇರಲಿ, ಆದರೆ  ಅಗ್ಗದ ಬೆಲೆಯದಾಗಿರಲಿ, ಪುಟಗಳು ನೀರುನೀರಾದ ಚಹಾ ಬಣ್ಣದ್ದು, ಮೇಲಿನ ಹೊದಿಕೆಯ ಮೇಲೆ ಬೆಕ್ಕಿನಮರಿ ಅಥವಾ ವ್ಯೋಮನೌಕೆ ಇರುವವಂಥದ್ದು.  ಮೂರಕ್ಕಿಂತಲೂ ಹೆಚ್ಚು  ಮಂದಿ ಕುತ್ತಿಗೆ ಮುಚ್ಚುವ ಸ್ವೆಟರ್  ತೊಟ್ಟಿರುವ  ಯಾವುದೇ ಕೋಣೆಯಲ್ಲಿ ಇರಬೇಡಿ.  ಹಿಮದಲ್ಲಿ ಹೂತುಹೋದ ಟೆನಿಸ್ ಕೋರ್ಟಿನ ಮೇಲೆ  ಜಿಂಕೆಯ ಹೆಜ್ಜೆಗಳು ಕಂಡರೆ ಜೋಪಾನ.  ಬರೆಯಲು ಲೈಬ್ರರಿ ಅತ್ಯುತ್ತಮ ಸ್ಥಳವೆಂದು ಹೇಳಬೇಕಾಗಿಲ್ಲ. ಅದರಲ್ಲೂ ಕಿಟಕಿಯಿಂದ ದೂರವಿರುವ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ವಾಸಿ. ಅಲ್ಲೊಂದು ಮಗು, ವರ್ಷದ್ದೋ ಎರಡು ವರ್ಷದ್ದೋ, ಆಡುತ್ತಿದೆ ಮತ್ತು ಅದರ ತಾಯಿ ಸತ್ತು ಸ್ವರ್ಗವಾದ ಲೇಖಕರ ಕೃತಿಗಳನ್ನು ತಿರುವಿಹಾಕುತ್ತಿದ್ದಾಳೆ. ಪುಟ್ಟಮಗು ಕೆಳಗಿನ ಕಪಾಟಿನಿಂದ ಪುಸ್ತಕಗಳನ್ನು ಸೆಳೆದುಕೊಳ್ಳುತ್ತದೆ. ಪುಸ್ತಕದ ಶೀರ್ಷಿಕೆ, ಲೇಖಕನ ಹೆಸರು, ಹಿಂಬದಿಯಲ್ಲಿ ಮುದ್ರಿಸಿದ ಲೇಖಕನ ಆಲೋಚನಾಮಗ್ನ ಪಟ, ಇವು ಯಾವುದೂ ಮುಖ್ಯವಲ್ಲ. ಕೆಂಪು ಪುಸ...

ಮಕ್ಕಳಿಗೊಂದು ಬೇಸಗೆ ತರಬೇತಿ ಶಿಬಿರ

ಇಮೇಜ್
 ಸಿ   ಪಿ ರವಿಕುಮಾರ್ ಬೇಸಗೆ ರಜೆಯಲ್ಲಿ ಈ ವರ್ಷ ಮಕ್ಕಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು “ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್” ಸಂಸ್ಥೆ ಆಯೋಜಿಸಿತ್ತು.  1985ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆಯ ಭಾರತೀಯ ಕಚೇರಿಗೆ ಮೂವತ್ತು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಏಪ್ರಿಲ್ 6-7 ನಡೆದ ಈ ಬೇಸಗೆ ಶಿಬಿರದಲ್ಲಿ ಸಂಸ್ಥೆಯ ಆಧಾರ ಸೇವೆಗಳನ್ನು ಒದಗಿಸುವ ಉದ್ಯೋಗಿಗಳ ಮಕ್ಕಳಿಗಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ 11ರಿಂದ 18 ವರ್ಷದ ಮೂವತ್ತೈದು ಮಕ್ಕಳು ಪಾಲ್ಗೊಂಡರು.  “ಡಿಜಿಟಲ್ ಡಿವೈಡ್” ಎಂಬುದು ಇಂದಿನ ಬಹುದೊಡ್ಡ ಸಮಸ್ಯೆ. ಮನೆಗಳಲ್ಲಿ ಕಂಪ್ಯೂಟರ್  ಮತ್ತು ಇಂಟರ್ ನೆಟ್ ಉಳ್ಳ ಮಕ್ಕಳಿಗೆ ಜ್ಞಾನದ ದೊಡ್ಡ ಭಂಡಾರವೇ ಲಭ್ಯವಾಗುತ್ತದೆ.  ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಮಕ್ಕಳಿಗೆ ಶಾಲೆಗಳಲ್ಲೂ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಬಳಕೆ ದುರ್ಲಭವಾಗಿರುತ್ತದೆ.  ಎರಡು ದಿನಗಳ ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಾಯಿತು.   ಮೊದಲ ದಿವಸ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಕಂಪ್ಯೂಟರ್ ಕುರಿತು ಮೂಲಭೂತ ವಿಷಯಗಳನ್ನು ಹೇಳಿಕೊಡಲಾಯಿತು.  ಪ್ರಶ್ನೆಗಳನ್ನು ಉತ್ತರಿಸಲು ಉತ್ತೇಜನ ನೀಡಿ ಎಲ್ಲರ ಮುಂದೆ ಆತ್ಮವಿಶ್ವಾಸದಿಂದ ಮಾತಾಡುವುದರ ಮೇಲೆ ಒತ್ತು ನೀಡಲಾಯಿತು. ಕಂಪ್ಯೂಟರ್ ಬಳಸಿ ಡ್ರಾಯಿಂಗ್...