ಪೋಸ್ಟ್‌ಗಳು

Memoir ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಫ್ರೊ ಮೆಲ್ವಿನ್ ಬ್ರೂವರ್

 ನಾನು ಪಿಎಚ್ ಡಿ ಮಾಡುತ್ತಿದ್ದಾಗ ಅನೇಕ ಶ್ರೇಷ್ಠ ಅಧ್ಯಾಪಕರ ಪಾಠ ಕೇಳುವ ಮತ್ತು ಕೆಲವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ವಿದ್ಯಾರ್ಥಿಯಾಗಿ ಸೇರಿದ್ದು ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಲ್ಲಿ ಮತ್ತು  ಕಂಪ್ಯೂಟರ್ ಇಂಜಿನಿಯರಿಂಗ್ ಎಂಬ ಶಾಖೆಯಲ್ಲಿ.  ಶಾಖೆಯಲ್ಲಿದ್ದ ಎಲ್ಲ ಪ್ರಾಧ್ಯಾಪಕರೂ ತಮ್ಮ ತಮ್ಮ ಸಂಶೋಧನಾ ರಂಗಗಳಲ್ಲಿ ಪ್ರಸಿದ್ಧರು. ಪ್ರೊ ಮೆಲ್ವಿನ್ ಬ್ರೂವರ್ ಅವರ ಸಂಶೋಧನಾ ಲೇಖನಗಳನ್ನು ನಾನು ಎಂ ಈ ಅಧ್ಯಯನದ ಸಂದರ್ಭದಲ್ಲಿ ಓದಿಕೊಂಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕೆಂಬ ಇಚ್ಛೆ ನನ್ನಲ್ಲಿತ್ತು. ನಾನು ಅವರಿಗೆ ಪತ್ರ ಬರೆದು ವಿನಂತಿಸಿಕೊಂಡೆ. ಆಗ ಇಂಟರ್ನೆಟ್ ಇರಲಿಲ್ಲ. ಹೀಗಾಗಿ ಪ್ರಾಧ್ಯಾಪಕರು ಸದ್ಯ ಯಾವ ರಂಗದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸುಲಭವಾಗಿರಲಿಲ್ಲ. ಪ್ರೊ.ಬ್ರೂವರ್ ವಿಎಲ್ ಎಸ್ ಐ ರಂಗದಲ್ಲಿ ಫಿಸಿಕಲ್ ಡಿಸೈನ್ ಎಂಬ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ನನಗೆ ತಿಳಿದಿತ್ತು. ಆದರೆ ನಾನು ಅವರಿಗೆ ಪತ್ರ ಬರೆದಾಗ ಅವರು ಈ ಕ್ಷೇತ್ರದಿಂದ ಮುಂದುವರಿದು ಟೆಸ್ಟಿಂಗ್ ಎಂಬ ಕ್ಷೇತ್ರವನ್ನು  ಪ್ರವೇಶಿಸಿ ಅಲ್ಲಿ ಸಕ್ರಿಯರಾಗಿದ್ದರು! ಹೀಗಾಗಿ ಅವರು ನನಗೆ ಮಾರೋಲೆ ಕಳಿಸಿ "ನಾನು ಈಗ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯನಾಗಿಲ್ಲ.  ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶರ್ಮಾ ಶಾಸ್ತ್ರಿ ಎಂಬುವರಿಗೆ ನಿಮ್ಮ...

ಎನ್ ಆರ್ ಎನ್ - ನೆನಪುಗಳು

ಇಮೇಜ್
  ಭಾರತಕ್ಕೆ ಮರಳಿ ಬಂದಾಗ ಇನ್ಫೋಸಿಸ್ ಕಚೇರಿಯಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ಡೈರೆಕ್ಟರ್ ಆಫೀಸಿನಲ್ಲಿ ನಾರಾಯಣ ಮೂರ್ತಿ ಕೂಡುತ್ತಿದ್ದರು. ಅವರಿಗೆ ಮುಂಗೋಪ ಹೆಚ್ಚು. ಒಮ್ಮೊಮ್ಮೆ ಸೆಕ್ರೆಟರಿಯ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದರು. ಅವರ ಆಲೋಚನೆಯ ರೀತಿ ವಿಭಿನ್ನವಾಗಿತ್ತು.  ಭಾರತದಿಂದ ಪ್ರತಿಭಾವಂತರನ್ನು ಹೊರದೇಶಕ್ಕೆ ಕಳಿಸಿ ಅಲ್ಲಿ ಪ್ರಾಜೆಕ್ಟ್ ಮಾಡಿಸಿ ಹಣ ಮಾಡುವ ಕಂಪನಿಗಳಿಗೆ ಬಾಡಿ ಶಾಪರ್ಸ್ ಎಂದು ವ್ಯಂಗ್ಯದಿಂದ ಮಾತಾಡುತ್ತಿದ್ದ ಕಾಲದಲ್ಲಿ ಭಾರತದಲ್ಲೇ ಪ್ರಾಜೆಕ್ಟ್ ಮಾಡಿಸಬೇಕು ಎಂಬ ಆಸೆಯನ್ನು ಮೂರ್ತಿ ಹೊಂದಿದ್ದರು.   ಕೆ.ಎಸ್.ಆರ್.ಟಿ.ಸಿ.ಗೆ ಟಿಕೆಟಿಂಗ್ ವ್ಯವಸ್ಥೆಯ ತಂತ್ರಾಂಶವನ್ನು ಅವರು ನಿಶ್ಶುಲ್ಕವಾಗಿ ತಯಾರಿಸಿಕೊಟ್ಟರು. ಟ್ರಾಕ್ಸ್ ಎಂಬ ಹೆಸರಿನ ಈ ತಂತ್ರಾಂಶವನ್ನು ನಿರ್ಮಿಸಲು ಸಾಕಷ್ಟು ಇಂಜಿನಿಯರುಗಳು ಅನೇಕ ತಿಂಗಳು ದುಡಿದರು.  ಬಹುಶಃ ಇಂಥ ಪ್ರಯತ್ನಗಳು ಬೇರೆಡೆ ನಡೆದಿರಲಾರವು.   ಸುಧಾ ಮೂರ್ತಿ ಒಮ್ಮೊಮ್ಮೆ ಆಫೀಸಿಗೆ ಬರುತ್ತಿದ್ದರು. ಬಹುಶಃ ಎರಡು ವರ್ಷ ವಯಸಾಗಿದ್ದ ಮಗನನ್ನು ಎತ್ತಿಕೊಂಡು ಬರುತ್ತಿದ್ದರು. ನಾವು ಮಗುವನ್ನು ಮಾತಾಡಿಸಿದರೆ ಮೂರ್ತಿ "ಇವನ ಜೊತೆ ಹುಷಾರು, ಇವನು ಮಹಾ ಅಪಾಯಕಾರಿ ವ್ಯಕ್ತಿ" ಎಂದು ತಮಾಷೆ ಮಾಡುತ್ತಿದ್ದರು.  ಅಂದು ಗಣಕಯಂತ್ರಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಅಮೇರಿಕಾ ಮತ್ತು ಜಪಾನ್ ಮಾತ್ರ ಗಣಕಗಳನ್ನು ತಯಾರಿಸುತ್ತಿದ್ದವು. ಭ...

ವಾರ್ಡನ್ ಕಥನ

ಇಮೇಜ್
ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ...

ನೆನಪುಗಳು - ಮೊದಲ ಉದ್ಯೋಗ

 ಕೋಬಾಲ್ ಪ್ರೋಗ್ರಾಮಿಂಗ್ ನಾನು ಕಲಿತ ಮೊದಲ ಕಂಪ್ಯೂಟರ್ ಕೌಶಲ್ಯ. ಆಗ ಫೋರ್ಟ್ರಾನ್, ಬೇಸಿಕ್ ಮತ್ತು ಕೋಬಾಲ್ ಎಂಬ ಮೂರು ಪ್ರೋಗ್ರಾಮಿಂಗ್ ಭಾಷೆಗಳದ್ದೇ ರಾಜ್ಯ. ವೈಜ್ಞಾನಿಕ ಸಮಸ್ಯೆಗಳಿಗೆ ಫೋರ್ಟ್ರಾನ್, ಗೇಮಿಂಗ್ ಮುಂತಾದ ಹವ್ಯಾಸಗಳಿಗೆ ಬೇಸಿಕ್, ಮತ್ತು ಬಿಸಿನೆಸ್ ಸಂಬಂಧಿಸಿದ ಸಮಸ್ಯೆಗಳಿಗೆ ಕೋಬಾಲ್. ಕೋಬಾಲ್ ಭಾಷೆಯನ್ನು ಅಭಿವೃದ್ಧಿ ಪಡಿಸಿದ ಶ್ರೇಯಸ್ಸು ಗ್ರೇಸ್ ಹಾಪರ್ ಎಂಬ ಮಹಿಳೆಗೆ ಸಲ್ಲುತ್ತದೆ. ಆಕೆ ಅಮೆರಿಕದ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವಾಗ ಫ್ಲೋಮ್ಯಾಟಿಕ್ ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನು ಅಭಿವೃದ್ಧಿ ಪಡಿಸಿದರಂತೆ. ಅದು ಕೋಬಾಲ್ ಭಾಷೆಗೆ ಪ್ರೇರಣೆ. ಪ್ರೋಗ್ರಾಮಿಂಗ್ ಕಲಿಯಲು ಇದು ಖಂಡಿತಾ ಸೂಕ್ತ ಭಾಷೆಯಲ್ಲ. ಆದರೆ ನಮಗೆ ಇದನ್ನು ಕಲಿಯದೆ ಬೇರೆ ದಾರಿಯಿರಲಿಲ್ಲ.  ಆಗ ನಾವು ಕೆಲಸ ಮಾಡುತ್ತಿದ್ದುದು ಒಂದು ಮಿನಿ ಕಂಪ್ಯೂಟರ್ ಮೇಲೆ. ಡೇಟಾ ಜೆನೆರಲ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿದ ಎಂವಿ 10000 ಎಂಬ ಕಂಪ್ಯೂಟರ್. ಆಗ ಕಂಪ್ಯೂಟರ್ ಕ್ಷೇತ್ರದಲ್ಲಿ ಐಬಿಎಂ ಮುಂಚೂಣಿಯಲ್ಲಿತ್ತು. ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್ ಎಂಬ ಕಂಪನಿ ಐಬಿಎಂಗೆ ಪ್ರತಿಸ್ಪರ್ಧಿ. ಈ ಸಂದರ್ಭದಲ್ಲಿ ಡೇಟಾ ಜೆನೆರಲ್ ಎಂಬ ಕಂಪನಿ ಈ ಕ್ಷೇತ್ರವನ್ನು ಪ್ರವೇಶಿಸಿ ಸಾಕಷ್ಟು ಕ್ರಾಂತಿಕಾರಕ ಸಾಧನೆಗಳನ್ನು ಮಾಡಿತು. ದ ಸೋಲ್ ಆಫ್ ಎ ನ್ಯೂ ಮೆಷೀನ್ ಎಂಬ ಪುಸ್ತಕದಲ್ಲಿ ಡೇಟಾ ಜೆನೆರಲ್ ಕಂಪನಿಯಲ್ಲಿ ಕಂಪ್ಯೂಟರ್ ಅಭಿವೃದ್ಧಿ ಪಡಿಸಿದ ಕಥೆ ಇದೆ. ಆಗ...

ನೆನಪುಗಳು - ಸಸ್ಯಾಹಾರದ ಶೋಧನೆ

  ನಾವು ಭಾರತೀಯರು ಮೌಂಟನ್ ಹೋಮಿನಂಥ ಗ್ರಾಮಕ್ಕೆ ಹೋದಾಗ ಊಟ ತಿಂಡಿಗೆ ಸಹಜವಾಗಿ ಕಷ್ಟ ಪಡಲೇಬೇಕು. ಅದರಲ್ಲೂ ಸಸ್ಯಾಹಾರಿಗಳಾದರೆ ಅವರಿಗೆ ಇನ್ನೂ ಹೆಚ್ಚು ತೊಂದರೆ. ಹೆಲಿಕಾಪ್ಟರಿನಲ್ಲಿ ಬಂದಿಳಿದ ನಮ್ಮನ್ನು ಎದುರುಗೊಳ್ಳಲು ರಾನ್ ಎಂಬ ಅಧಿಕಾರಿ ಇನ್ನೂ ಕೆಲವರು ಸಹೋದ್ಯೋಗಿಗಳೊಂದಿಗೆ ಬಂದಿದ್ದ.  ಅವರು ತಮ್ಮ ಕಾರುಗಳಲ್ಲಿ ನಮ್ಮನ್ನು ಹಿಲ್ ಕ್ರೆಸ್ಟ್ ಗಾರ್ಡನ್ ಅಪಾರ್ಟ್ಮೆಂಟ್ಸ್ ಎಂಬಲ್ಲಿಗೆ ಕರೆದೊಯ್ದರು. ಅಲ್ಲಿ ಕೆಳಗಿನ ಅಪಾರ್ಟ್ಮೆಂಟಿನಲ್ಲಿ ನಮ್ಮ ಡೈರೆಕ್ಟರ್ ಮತ್ತು ಮೇಲಿನ ಅಪಾರ್ಟ್ಮೆಂಟಿನಲ್ಲಿ ನಾವು ಇಂಜಿನಿಯರ್ಸ್ ತಂಗುವುದು ಎಂಬ ನಿರ್ಧಾರವಾಗಿತ್ತು. ಅಪಾರ್ಟ್ಮೆಂಟ್ ಹೊಸದು. ಬಹುಶಃ ನಾವೇ ಅದರ ಮೊದಲ ವಾಸಿಗಳು. ಮೊದಲೇ ಫರ್ನಿಚರ್ ಎಲ್ಲವನ್ನೂ ಸಜ್ಜುಗೊಳಿಸಿದ್ದರು.  ಫ್ರಿಜ್ ಕೂಡಾ ಇತ್ತು. ಆಗ ಬೆಂಗಳೂರಿನಲ್ಲಿ ಫ್ರಿಜ್ ಬಳಸುವ ರೂಢಿಯೇ ಇರಲಿಲ್ಲ. ಹೀಗಾಗಿ ನಮಗೆ ಇದು ಹೊಸ ಅನುಭವ. ಅದೇ ಸಂಜೆ ನಮ್ಮನ್ನು ಊಟಕ್ಕೆ ಕರೆದೊಯ್ಯಲು ರಾನ್ ಮತ್ತಿತರ ಅಧಿಕಾರಿಗಳು ಬಂದರು. ಹಾಲಿಡೇ ಇನ್ ರೆಸ್ಟೋರಾಂದಲ್ಲಿ ನಮಗೆ ಆತಿಥ್ಯವಿತ್ತು. ಎಲ್ಲರೂ ತಮ್ಮ ಹೆಂಡತಿಯರನ್ನೂ ಕರೆದುಕೊಂಡು ಬಂದಿದ್ದರು. ಹೀಗಾಗಿ ನಮಗಾಗಿ ದೊಡ್ಡ ಮೇಜುಗಳನ್ನು ಜೋಡಿಸಿ ಸುತ್ತಲೂ ಕೂಡುವ  ವ್ಯವಸ್ಥೆ ಇತ್ತು. ವೇಟ್ರೆಸ್ ನಮಗೆ ಕುಡಿಯಲು ಏನು ಬೇಕೆಂದು ಕೇಳಿದಳು. ನನಗೆ ಆಲ್ಲಿಯವರೆಗೂ ಒಗ್ಗಿದ ಏಕಮಾತ್ರ ಪೇಯವೆಂದರೆ ಆರೆಂಜ್ ಜೂಸ್.  ಬೇರೆಯವರು ವೈನ್...

ಹೋಮಿಯೋಪತಿ ಔಷಧ (ನೆನಪು)

ಇಮೇಜ್
  ಆಗ ನನಗೆ ಹನ್ನೊಂದೋ ಹನ್ನೆರಡೋ ವಯಸ್ಸು. ನಾವು ಆಗ ದೆಹಲಿಯಲ್ಲಿದ್ದೆವು.  ಆಗ ಅಷ್ಟೊಂದು ಕ್ಲಿನಿಕ್ ಗಳು ಇರಲಿಲ್ಲ. ಜನ ಚಿಕಿತ್ಸೆಗಾಗಿ ಸರಕಾರೀ ಡಿಸ್ಪೆನ್ಸರಿಗೆ ಹೋಗುತ್ತಿದ್ದರು.  ನಾವಿದ್ದ ಮನೆಯ ಬೀದಿಯಲ್ಲೇ ಒಬ್ಬ ಪ್ರಸಿದ್ಧ ವೈದ್ಯರು ಮನೆಯಲ್ಲೇ ಕ್ಲಿನಿಕ್ ಹಾಕಿಕೊಂಡಿದ್ದರು. ಡಾ| ಘೋಷಾಲ್ ಎಂಬುದು ಅವರ ಹೆಸರು. ಅವರನ್ನು ಕಾಣಲು ದೂರದೂರದಿಂದ ಜನ ಬರುತ್ತಿದ್ದರು. ದಿನಬೆಳಗಾದರೆ ಅವರ ಮನೆಯ ಮುಂದೆ ದೊಡ್ಡ ಕ್ಯೂ  ನಿಲ್ಲುತ್ತಿತ್ತು. ಕೆಲವು ಸಲ ಸರಿರಾತ್ರಿಯ ಹೊತ್ತು ಯಾರಾದರೂ ಅವರನ್ನು ಕಾಣಲು ಬಂದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. "ಡಾಕ್ಟರ್ ಸಾಬ್! ಡಾಕ್ಟರ್ ಸಾಬ್!" ಎಂದು ಅವರು ಕೂಗಿಕೊಳ್ಳುತ್ತಿದ್ದುದು ನಮ್ಮ ಮನೆಗೂ ಕೇಳುತ್ತಿತ್ತು.  ಡಾಕ್ಟರ್ ಸಾಹೇಬರು ಇದನ್ನು ಕಿವಿಗೇ ಹಾಕಿಕೊಳ್ಳದೆ ಇದ್ದುಬಿಡುತ್ತಿದ್ದರು. ಕೆಲವೊಮ್ಮೆ ಅವರು ಬೈದು "ನಾಳೆ ಬೆಳಗ್ಗೆ ಬನ್ನಿ" ಎಂದು ಹೇಳುವುದು ಕೇಳುತ್ತಿತ್ತು.  ಒಂದು ಸಲ ಯಾರದೋ ಮನೆಗೆ ಹೋದಾಗ ಅಲ್ಲಿ ಅವಲಕ್ಕಿ ತಿಂದದ್ದಕ್ಕೋ ಏನೋ ನನಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಈ ಹೊಟ್ಟೆ ನೋವು ಬಂದಾಗ ಒಂದು ಅರ್ಧ ಗಂಟೆ ತುಂಬಾ ಕಷ್ಟವಾಗುತ್ತಿತ್ತು. ಕ್ರಮೇಣ ಹೊಟ್ಟೆ ನೋವು ಕಡಿಮೆಯಾಗುತ್ತಿತ್ತು.  ದಿನಕ್ಕೆ ಹೀಗೆ ಒಂದೆರಡು ಸಲ ಆಗತೊಡಗಿತು. ಮೊದಲು ಮನೆವೈದ್ಯ ಮಾಡಿದರು. ಗುಣವಾಗಲಿಲ್ಲ. ನಾನು ಒದ್ದಾಡುವುದು ನೋಡಿ ಅಷ್ಟು ಹತ್ತಿರದಲ್ಲಿದ್ದ ಡಾ. ಘೋಷಾಲ್...

ಯುದ್ಧದ ನೆನಪು

 ನಾನಾಗ ದೆಹಲಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಒಮ್ಮೆಲೇ ಬಾಂಗ್ಲಾದೇಶದ ವಿಮೋಚನೆಗಾಗಿ ಯುದ್ಧಘೋಷಣೆಯಾಯಿತು.  ಯಾರಿಗೂ ಈ ಕುರಿತು ಸುಳಿವೂ ಇರಲಿಲ್ಲ. ಯುದ್ಧಘೋಷಣೆಯಾದ ಸಂದರ್ಭವನ್ನು ನಾನು ಮರೆಯಲಾರೆ. ನಮ್ಮ ತಂದೆ ಸ್ಥಳೀಯ ಪತ್ರಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಮರ್ಶೆ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಇವುಗಳನ್ನು ಬರೆಯುತ್ತಿದ್ದರು. ಕನ್ನಡದ ಅನೇಕಾನೇಕ ಕಲಾವಿದರು, ಲೇಖಕರು ಮತ್ತು ಪರಿಣಾಮಿ ವ್ಯಕ್ತಿಗಳನ್ನು ಕುರಿತು ಅವರು ದ ಹಿಂದೂಸ್ತಾನ್ ಟೈಮ್ಸ್, ದ ಈವನಿಂಗ್ ನ್ಯೂಸ್, ದ ಇಂಡಿಯನ್ ಎಕ್ಸ್ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ವಿಪುಲವಾಗಿ ಬರೆದರು. ಅವರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿತ್ತು. ಕೆಲವು ಕಾರ್ಯಕ್ರಮಗಳಿಗೆ ನಮ್ಮನ್ನೂ ಕರೆದುಕೊಂಡುಹೋಗುತ್ತಿದ್ದರು. ಇಂಥದೇ ಒಂದು ಸಂದರ್ಭ. ಅವತ್ತು ಪೂರಬ್ ಔರ್ ಪಶ್ಚಿಮ್ ಎಂಬ ಹಿಂದಿ ಚಿತ್ರದ ಸ್ಕ್ರೀನಿಂಗ್ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಸಿನಿಮಾ ಸ್ಕ್ರೀನಿಂಗ್ ಆದ ಕಾರಣ ನಾನು ಮತ್ತು ನನ್ನ ಅಣ್ಣ ಮರುಮಾತಿಲ್ಲದೆ ನಮ್ಮ ತಾಯಿತಂದೆಯರೊಂದಿಗೆ ಹೋಗಲು ಒಪ್ಪಿದೆವು.  ಬೇರೆ ಸಂಗೀತ, ನ್ಯತ್ಯ ಕಾರ್ಯ ಕ್ರಮಗಳಿಗೆ ಹೋಗಲು ನಾವು ಮೂಗು ಮುರಿಯುತ್ತಿದ್ದೆವು.  ಹೀಗಾಗಿ ಅನೇಕ ಅದ್ಭುತ ಕಲಾವಿದರ ಕಾರ್ಯಕ್ರಮಗಳನ್ನು ನೋಡುವ ಅವಕಾಶದಿಂದ ತಪ್ಪಿಸಿಕೊಂಡ ನನ್ನ ಪೆದ್ದುತನಕ್ಕೆ ಈಗಲೂ ಬೇಸರವಾಗುತ್ತದೆ.  ದೆಹಲಿಯ ಚಳಿಗಾಲದಲ್...

ಹಾಲನು ಮಾರಲು ಹೋಗುವ ಬಾರೇ ಬೇಗ ಸಖೀ

 ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾ...

ನಾನು ಮೌಂಟನ್ ಹೋಂಗೆ ಹೋಗಿದ್ದು

 ಅಮೆರಿಕಾದಲ್ಲಿ ಒಂದು ವರ್ಷ ವೃತ್ತಿ ಜೀವನ ನಡೆಸಿ ಹಿಂದಿರುಗಿದ ಮೇಲೆ ಓದುವುದನ್ನು ಮುಂದುವರೆಸುವ ಅದಮ್ಯ ಬಯಕೆ ನನ್ನಲ್ಲಿ ಎದ್ದಿತು. ಮೌಂಟನ್ ಹೋಮಿನಲ್ಲಿದ್ದಾಗ ವೀಕೆಂಡ್ ಮಾಡಲು ಏನೂ ತೋರುತ್ತಿರಲಿಲ್ಲ. ಆಗ ಇಂದಿನಂತೆ ಪರ್ಸನಲ್ ಕಂಪ್ಯೂಟರ್ ಇರಲಿಲ್ಲ.  ಭಾರತದ ಸಮಾಚಾರ ತಿಳಿದುಕೊಳ್ಳಲು ಇಂದಿನಂತೆ ಇಂಟರ್ನೆಟ್ ಇರಲಿಲ್ಲ. ಆಗ ಹಿಂದೂ ಪತ್ರಿಕೆಯ ಒಂದು ಇಂಟರ್ ನ್ಯಾಷನಲ್ ಆವೃತ್ತಿ ಬರುತ್ತಿತ್ತು. ನಮ್ಮ ತಂದೆ ಅದನ್ನು ಕಳಿಸುವ ವ್ಯವಸ್ಥೆ ಮಾಡಿದ್ದರು. ನಾಲ್ಕು ಪುಟಗಳ ಈ ನ್ಯೂಸ್ ಪೇಪರ್ ಓದಲು ನನ್ನ ಸಹೋದ್ಯೋಗಿಗಳು ಕಾದಿರುತ್ತಿದ್ದರು. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿ.ಇ. ಪದವಿ ಗಳಿಸಿದ ನಂತರ ನಾನು ಮಾಡುತ್ತಿದ್ದ ಕೆಲಸಕ್ಕೂ ನಾನು ಓದಿದ ವಿಷಯಗಳಿಗೂ ಏನೇನೂ ಸಂಬಂಧ ಇಲ್ಲವಲ್ಲ ಎಂದು ನನಗೆ ವ್ಯಥೆಯಾಗುತ್ತಿತ್ತು. ಮೌಂಟನ್ ಹೋಮಿನ ಪಬ್ಲಿಕ್ ಲೈಬ್ರರಿಯಲ್ಲಿ ಎಲೆಕ್ಟ್ರಾನಿಕ್ಸ್ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿದೆ. ಸಿಕ್ಕಲಿಲ್ಲ.  ಮುಂದೆ ಕ್ಲಿಯರ್ ವಾಟರಿಗೆ ಬಂದಾಗ ನನ್ನ ಮಿತ್ರ ರವಿಚಂದ್ರನ್ ಯೂನಿವರ್ಸಿಟಿ ಆಫ್ ಸೌತ್ ಫ್ಲಾರಿಡಾದಲ್ಲಿ ಓದುತ್ತಿದ್ದುದನ್ನು ನೋಡಿ ನನ್ನ ಆಸೆ ಮತ್ತೆ ಜಾಗೃತವಾಯಿತು. ಅವನು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂ.ಎಸ್.  ಮಾಡುತ್ತಿದ್ದ. ಅವನ ಪುಸ್ತಕಗಳನ್ನು ನೋಡಿದಾಗ ನಾನು ಅಕಾಡೆಮಿಕ್ಸ್ ನಿಂದ ಎಷ್ಟು ದೂರ ಇದ್ದೇನೆ ಎಂದು ವ್ಯಥೆಯಾಗುತ್ತಿತ್ತು.   ಗೇಟ್ ಪರೀಕ್ಷೆಯಲ್ಲಿ...

ಜಿಯಾಸರಾಯ್

ಇಮೇಜ್
  ಐಐಟಿಯಲ್ಲಿ ನಡೆಯುತ್ತಿದ್ದ ಪೂಜೆ ಎಂದರೆ ವಿಶ್ವಕರ್ಮ ಡೇ ಮಾತ್ರ ಎಂದು ನನ್ನ ನೆನಪು. ನಮ್ಮ ಡಿಪಾರ್ಟ್ಮೆಂಟಿನ ಕಂಟ್ರೋಲ್ ಲ್ಯಾಬಿನಲ್ಲೋ ಅಥವಾ ಪವರ್ ಸಿಸ್ಟಮ್ಸ್ ಲ್ಯಾಬಿನಲ್ಲೋ ಇದನ್ನು ಆಯೋಜಿಸುತ್ತಿದ್ದರು.  ಬಹುಶಃ ದಕ್ಷಿಣದಲ್ಲಿ ಆಯುಧಪೂಜೆ ಇದ್ದಂತೆ ಉತ್ತರದಲ್ಲಿ ವಿಶ್ವಕರ್ಮ ಡೇ. ವಿಶ್ವಕರ್ಮ ಒಬ್ಬ ಇಂಜಿನಿಯರ್ ಎಂಬ ನಂಬಿಕೆಯಿಂದಲೋ ಏನೋ ಈ ರೂಢಿ ನಡೆದುಬಂದಿದೆ.  ಎಲ್ಲರಿಗೂ ಆಹ್ವಾನವಿರುತ್ತಿತ್ತು. ಬರುತ್ತಿದ್ದವರು ಕಡಿಮೆ.  ನಮ್ಮ ಡಿಪಾರ್ಟ್ಮೆಂಟಿನ ಕ್ಲಾಸ್ ಡಿ ನೌಕರರಾದ ಪಂಡಿತ್ ಜೀ ಪೂಜೆ ಸಲ್ಲಿಸುತ್ತಿದ್ದರು. ಎಲ್ಲ ಲ್ಯಾಬ್ ಸಹಾಯಕ ಸಿಬ್ಬಂದಿಯೂ ಜರೂರಾಗಿ ಸೇರುತ್ತಿದ್ದರು. ಪೂಜೆಯ ನಂತರ ಎಲ್ಲರಿಗೂ ಸಿಹಿತಿಂಡಿ ಪ್ರಸಾದ ಸಿಕ್ಕುತ್ತಿತ್ತು.  ಪೂಜೆಗೆ ಬೇಕಾದ ಹಣವನ್ನು ಡಿಪಾರ್ಟ್ಮೆಂಟಿನ ಸಿಬ್ಬಂದಿಯಿಂದ ಚಂದಾ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು.  ಐಐಟಿಯಲ್ಲಿದ್ದ ಕನ್ನಡ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಗಣೇಶನ ಹಬ್ಬ ಆಚರಿಸುವುದು ಕೂಡಾ ರೂಢಿಯಾಗಿತ್ತು. ಪ್ರೊ ಇಂದಿರೇಶನ್ ಅವರು ಐಐಟಿಯಲ್ಲಿ ಇದ್ದಷ್ಟು ದಿವಸವೂ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.  ಏನಿಲ್ಲವೆಂದರೂ ಐವತ್ತು ಜನ ಸೇರುತ್ತಿದ್ದರು. ಹಾಡು, ಭಜನೆ ಕಾರ್ಯಕ್ರಮಗಳ ನಂತರ ಎಲ್ಲರಿಗೂ ಪ್ರಸಾದ ಸಿಕ್ಕುತ್ತಿತ್ತು. ಇದಕ್ಕೆ ಚಂದಾ ಕೇಳುವ ಸಂಪ್ರದಾಯ ಇರಲಿಲ್ಲ.  ಪ್ರೊ ಇಂದಿರೇಶನ್ ಅವರು ನಿವೃತ್ತರಾದ ನಂತರ...

ಕ್ಲಿಯರ್ ವಾಟರ್ ನೆನಪುಗಳು

 ವಾಲ್ಟ್ ಡಿಸ್ನಿ ವರ್ಲ್ಡ್, ಎಪ್ಕಾಟ್ ಸೆಂಟರ್ ಮತ್ತು ಸೀ ವರ್ಲ್ಡ್ ಇವುಗಳನ್ನು ಒಂದಲ್ಲ ಎರಡು ಸಲ ನೋಡುವ ಅದೃಷ್ಟ ನನಗೆ ಬಂತು. ಮೈಸೂರಿನಲ್ಲಿದ್ದವರಿಗೆ ಹೇಗೆ ದಸರಾ ನೋಡಲು ಬಂದ ಅತಿಥಿಗಳ ಜೊತೆಗೆ ದಸರಾ ವೈಭವ ನೋಡಲು ಅನೇಕಾನೇಕ ಅವಕಾಶಗಳು ಬರುತ್ತವೋ ಹಾಗೇ ಫ್ಲಾರಿಡಾ, ಕ್ಯಾಲಿಫೋರ್ನಿಯಾ ಇಂಥ ಕಡೆ ವಾಸವಿದ್ದವರಿಗೆ ಇದೇ ರೀತಿಯ ಅವಕಾಶಗಳು ಬರುತ್ತಿರುತ್ತವೆ. ಮುಂದೆ ನಾನು ಪಿಎಚ್.ಡಿ. ಮಾಡಲು ಕ್ಯಾಲಿಫೋರ್ನಿಯಾಗೆ ಹೋದಾಗ ಡಿಸ್ನಿ ಲ್ಯಾಂಡ್, ಸೀ ವರ್ಲ್ಡ್ ಮುಂತಾದವನ್ನು ಇದೇ ರೀತಿ ಹಲವು ಸಲ ಸುತ್ತಿದ್ದೇನೆ.  ಡಿಸ್ನಿ ವರ್ಲ್ಡ್ ನಮ್ಮಲ್ಲಿನ ಮುಗ್ಧ ಮಗುವನ್ನು ಮತ್ತೊಮ್ಮೆ ಜಾಗೃತಗೊಳಿಸುತ್ತದೆ. ಎಲ್ಲಿ ನೋಡಿದರೂ ಬಣ್ಣ, ಎಲ್ಲಿ ನೋಡಿದರೂ ಕಾರ್ಟೂನ್ ಪಾತ್ರಗಳು, ಎಲ್ಲಿ ನೋಡಿದರೂ ಮ್ಯಾಜಿಕ್. ಅದೇನು ಸಿಂಡರೆಲ್ಲಾ ಅರಮನೆ! ಎಲ್ಲರೊಂದಿಗೆ ಕೈಕುಲುಕುವ ಮಿಕಿ ಮೌಸ್! ಅದೇನು ಮ್ಯೂಸಿಕ್ ಬ್ಯಾಂಡ್! ಎಲ್ಲಕ್ಕಿಂತ ಹೆಚ್ಚಾಗಿ ಸುತ್ತಲೂ ಉಲ್ಲಾಸದಲ್ಲಿರುವ ಜನಸ್ತೋಮ! ನಾನು ನೋಡಿದಾಗಲೂ ಮತ್ತು ಈಗಲೂ ಡಿಸ್ನಿ ವರ್ಲ್ಡ್ ಸಾಕಷ್ಟು ಬದಲಾಗಿರಲು ಸಾಧ್ಯ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಲ್ಲಿ ಇನ್ನೂ ಹೊಸ ಬಗೆಯ ಅನುಭವಗಳನ್ನು ಅತಿಥಿಗಳಿಗೆ ನೀಡುತ್ತಿರಬಹುದು. ಅಮೆರಿಕಾದಲ್ಲಿ ಯಾವುದೇ ಸ್ಥಳವು ಕಾಲ ಕಳೆದಂತೆ ಬದಲಾಗುತ್ತಲೇ ಇರುತ್ತದೆ.  ಒಮ್ಮೆ ನನ್ನ ಪೂರ್ವ ಸಹೋದ್ಯೋಗಿ  ಜೀನ್ ಫ್ರಾಂಜ್ ಜೊತೆಗೆ ದೆಹಲಿ, ಚೆನ್ನೈ, ಕೋಲ್ಕತಾ ...

ಮೌಂಟನ್ ಹೋಂ ನಿರ್ಗಮನ

 ಮೌಂಟನ್ ಹೋಮ್ ಬಿಟ್ಟು ಹೊರಡುವ ಸಮಯ ಬಂತು. ಯೋಜನೆಯ ಪ್ರಕಾರ ನಾನು ಅಲ್ಲಿ ಒಂದು ವರ್ಷ ಪೂರ್ತಿ ಕಳೆಯಬೇಕಾಗಿತ್ತು.  ಆದರೆ  ಫ್ಲಾರಿಡಾದಲ್ಲಿ ನಡೆಯುತ್ತಿದ್ದ ಬೇರೊಂದು ಪ್ರಾಜೆಕ್ಟಿನಲ್ಲಿ ಜನ ಬೇಕಾಗಿದ್ದರು. ಹೀಗಾಗಿ ನನ್ನನ್ನು ಸ್ಥಳಾಂತರ ಮಾಡಲು ಕಂಪನಿಯ ಮ್ಯಾನೇಜ್ಮೆಂಟ್ ನಿರ್ಧರಿಸಿತು. ನನಗೆ ಮತ್ತು ನಮ್ಮ ಇಡೀ ತಂಡಕ್ಕೆ ಫ್ಯಾಕ್ಟರಿಯ ಪರವಾಗಿ ಒಂದು ಶರ್ಟ್ ಉಡುಗೊರೆ ಕೊಡಲು ಸ್ಥಳೀಯ ಕಂಪನಿಯವರು ನಿರ್ಧರಿಸಿದರು. ವಿಶೇಷವೆಂದರೆ ಆದು ಫ್ಯಾಕ್ಟರಿಯಲ್ಲಿ ತಯಾರಾದ ಶರ್ಟ್ ಅಲ್ಲ, ನಮ್ಮ ಅಳತೆಗೆ ವಿಶೇಷವಾಗಿ ತಯಾರಿಸಿದ್ದು. ಇದಕ್ಕಾಗಿ ಒಬ್ಬ ಟೇಲರ್ ಬಂದು ನಮ್ಮ ಅಳತೆ ತೆಗೆದುಕೊಂಡ. ಬಟ್ಟೆಯ ವಿನ್ಯಾಸವನ್ನು ಅವರೇ ನಿರ್ಧರಿಸಿ ಎಲ್ಲರಿಗೂ ಒಂದೆರಡು ವಾರದಲ್ಲಿ ಉಡುಗೊರೆಗಳನ್ನು ವಿತರಿಸಿದರು.  ನನಗೆ ತೆಳು ನೀಲಿ ಬಣ್ಣದ ಶರ್ಟ್ ಕೊಟ್ಟರು. ಈ ಶರ್ಟ್ ನನಗೆ ಬಹಳ ಒಪ್ಪುತ್ತದೆ ಎಂದು ರಾಫವನ್ ಹೊಗಳಿದರು. ನಾನು ಹೊರಡುತ್ತೇನೆಂದು ತಿಳಿದ ಜೀನ್ ನನಗೆ ತಾವು ಮಾಡಿದ ಪುಟ್ಟ ಸ್ಟೇನ್ ಗ್ಲಾಸ್ ಹಕ್ಕಿಯನ್ನೂ ಮತ್ತು  ಒಂದು ಕಪ್ಪುಬಣ್ಣದ ಸ್ಯಾಟಿನಿ ಟೈ ಕೊಟ್ಟರು. ನನ್ನನ್ನು ತಮ್ಮ ಎಂದಿನ.ಶೈಲಿಯಲ್ಲಿ ಬಿಗಿಯಾಗಿ ಅಪ್ಪಿಕೊಂಡು ""ನಿನ್ನ ಈ ಅಮ್ಮನನ್ನು ಮರೆತು ಬಿಡಬೇಡ" ಎಂದರು. ತಮ್ಮನ್ನು ಅವರು ನಮ್ಮ ಅದರ್ ಮದರ್ ಎಂದೇ ಹೇಳಿಕೊಳ್ಳುತ್ತಿದ್ದರು.  ನಾನು ಫ್ಲಾರಿಡಾಗೆ ಹೊರಟೆ. ಮತ್ತೊಮ್ಮೆ ಹೆಲಿಕಾಪ್ಟರಿನಲ್ಲಿ ಕೂತು ಜಾರ್ಜ...

ಮೌಂಟನ್ ಹೋಂ ಎಂಬ ದೂರದ ಗ್ರಾಮದಲ್ಲಿ

 ಮೌಂಟನ್ ಹೋಮಿನಲ್ಲಿ ಸಮಯ ಕಳೆಯುವುದು ಕಷ್ಟವಾಗಿತ್ತು.  ಶನಿವಾರ ಮತ್ತು ಭಾನುವಾರ ಎಲ್ಲೂ ಹೋಗುವ ಕಾರ್ಯಕ್ರಮವಿಲ್ಲದಿದ್ದರೆ ಮನೆಯಲ್ಲಿ ನಮಗಿದ್ದ ಒಂದೇ ಮನರಂಜನೆ ಎಂದರೆ ಟಿವಿ. ನಾನು ಪತ್ರಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದೆ.  ಸ್ಥಳೀಯ ಲೈಬ್ರರಿಯಲ್ಲಿ ಪುಸ್ತಕ  ಎರವಲು ಪಡೆಯಲು ಶನಿವಾರ ಹೋಗುತ್ತಿದ್ದೆವು.  ನಮ್ಮ ಆಫೀಸ್ ಸಹೋದ್ಯೋಗಿಗಳು ಗುರುವಾರದಿಂದಲೇ ವೀಕೆಂಡ್ ಕಾರ್ಯಕ್ರಮವನ್ನು ಕುರಿತು ಮಾತಾಡಿಕೊಳ್ಳುತ್ತಿದ್ದರು. ಸೋಮವಾರ ತಮ್ಮ ವೀಕೆಂಡ್ ಹೇಗಿತ್ತು ಎಂದು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.   ಆಗ ಅಮೆರಿಕನ್ ಟಿವಿ ಈಗಿನಂತೆ ಕೆಟ್ಟುಹೋಗಿರಲಿಲ್ಲ. ಒಳ್ಳೆಯ ಕಾರ್ಯಕ್ರಮಗಳು ಬರುತ್ತಿದ್ದವು. ಎನ್.ಬಿ.ಸಿ, ಎ.ಬಿ.ಸಿ., ಪಿ.ಬಿ.ಎಸ್. ಇವು ಒಳ್ಳೆಯ ಕಾರ್ಯಕ್ರಮಗಳನ್ನು ತಯಾರಿಸುತ್ತಿದ್ದವು. ಸಿಕ್ಸ್ಟಿ ಮಿನಿಟ್ಸ್, ವಿಷನ್ 20/20 ಮುಂತಾದ ಕಾರ್ಯಕ್ರಮಗಳು ಬಹಳ ಚೆನ್ನಾಗಿದ್ದವು.  ಜಾನಿ ಕಾರ್ಸನ್ ಶೋ ಆಗ ಹೊಸತು. ಸ್ಯಾಟರ್ಡೆ ನೈಟ್ ಲೈವ್ ಕೂಡಾ. ಮರ್ಡರ್ ಶೀ ರೋಟ್, ನೈಟ್ ರೈಡರ್, ಸ್ಟಾರ್ ಟ್ರೆಕ್, ಮಿಷನ್ ಇಂಪಾಸಿಬಲ್ ಮುಂತಾದ ಕಾರ್ಯಕ್ರಮಗಳು ಆಗ ಎಲ್ಲರ ಕುತೂಹಲವನ್ನು ಕೆರಳಿಸುತ್ತಿದ್ದವು. ನೈಟ್ ರೈಡರ್ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ಅದರಲ್ಲಿ ಕಿಟ್ ಎಂಬ ಒಂದು ಕಾರಿನ ಪಾತ್ರವಿದೆ. ಇದು ಅತ್ಯುನ್ನತ ತಂತ್ರಜ್ಞಾನ ಹೊಂದಿದ ಅದ್ಭುತ ಕಾರ್. ಇದೇ ರೀತಿ ಮಿಷನ್ ಇಂಪಾಸಿಬಲ...

ಮೌಂಟನ್ ಹೋಂ ಜೀವನ (ನೆನಪು)

 ಕೋಬಾಲ್ ಪ್ರೋಗ್ರಾಮಿಂಗ್ ನಾನು ಕಲಿತ ಮೊದಲ ಕಂಪ್ಯೂಟರ್ ಕೌಶಲ್ಯ. ಆಗ ಫೋರ್ಟ್ರಾನ್, ಬೇಸಿಕ್ ಮತ್ತು ಕೋಬಾಲ್ ಎಂಬ ಮೂರು ಪ್ರೋಗ್ರಾಮಿಂಗ್ ಭಾಷೆಗಳದ್ದೇ ರಾಜ್ಯ. ವೈಜ್ಞಾನಿಕ ಸಮಸ್ಯೆಗಳಿಗೆ ಫೋರ್ಟ್ರಾನ್, ಗೇಮಿಂಗ್ ಮುಂತಾದ ಹವ್ಯಾಸಗಳಿಗೆ ಬೇಸಿಕ್, ಮತ್ತು ಬಿಸಿನೆಸ್ ಸಂಬಂಧಿಸಿದ ಸಮಸ್ಯೆಗಳಿಗೆ ಕೋಬಾಲ್. ಕೋಬಾಲ್ ಭಾಷೆಯನ್ನು ಅಭಿವೃದ್ಧಿ ಪಡಿಸಿದ ಶ್ರೇಯಸ್ಸು ಗ್ರೇಸ್ ಹಾಪರ್ ಎಂಬ ಮಹಿಳೆಗೆ ಸಲ್ಲುತ್ತದೆ. ಆಕೆ ಅಮೆರಿಕದ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವಾಗ ಫ್ಲೋಮ್ಯಾಟಿಕ್ ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನು ಅಭಿವೃದ್ಧಿ ಪಡಿಸಿದರಂತೆ. ಅದು ಕೋಬಾಲ್ ಭಾಷೆಗೆ ಪ್ರೇರಣೆ. ಪ್ರೋಗ್ರಾಮಿಂಗ್ ಕಲಿಯಲು ಇದು ಖಂಡಿತಾ ಸೂಕ್ತ ಭಾಷೆಯಲ್ಲ. ಆದರೆ ನಮಗೆ ಇದನ್ನು ಕಲಿಯದೆ ಬೇರೆ ದಾರಿಯಿರಲಿಲ್ಲ.  ಆಗ ನಾವು ಕೆಲಸ ಮಾಡುತ್ತಿದ್ದುದು ಒಂದು ಮಿನಿ ಕಂಪ್ಯೂಟರ್ ಮೇಲೆ. ಡೇಟಾ ಜೆನೆರಲ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿದ ಎಂವಿ 10000 ಎಂಬ ಕಂಪ್ಯೂಟರ್. ಆಗ ಕಂಪ್ಯೂಟರ್ ಕ್ಷೇತ್ರದಲ್ಲಿ ಐಬಿಎಂ ಮುಂಚೂಣಿಯಲ್ಲಿತ್ತು. ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್ ಎಂಬ ಕಂಪನಿ ಐಬಿಎಂಗೆ ಪ್ರತಿಸ್ಪರ್ಧಿ. ಈ ಸಂದರ್ಭದಲ್ಲಿ ಡೇಟಾ ಜೆನೆರಲ್ ಎಂಬ ಕಂಪನಿ ಈ ಕ್ಷೇತ್ರವನ್ನು ಪ್ರವೇಶಿಸಿ ಸಾಕಷ್ಟು ಕ್ರಾಂತಿಕಾರಕ ಸಾಧನೆಗಳನ್ನು ಮಾಡಿತು. ದ ಸೋಲ್ ಆಫ್ ಎ ನ್ಯೂ ಮೆಷೀನ್ ಎಂಬ ಪುಸ್ತಕದಲ್ಲಿ ಡೇಟಾ ಜೆನೆರಲ್ ಕಂಪನಿಯಲ್ಲಿ ಕಂಪ್ಯೂಟರ್ ಅಭಿವೃದ್ಧಿ ಪಡಿಸಿದ ಕಥೆ ಇದೆ. ಆಗ...

ಮೌಂಟನ್ ಹೋಮಿನಲ್ಲಿ ನಳಪಾಕ

 ನಾವು ಭಾರತೀಯರು ಮೌಂಟನ್ ಹೋಮಿನಂಥ ಗ್ರಾಮಕ್ಕೆ ಹೋದಾಗ ಊಟ ತಿಂಡಿಗೆ ಸಹಜವಾಗಿ ಕಷ್ಟ ಪಡಲೇಬೇಕು. ಅದರಲ್ಲೂ ಸಸ್ಯಾಹಾರಿಗಳಾದರೆ ಅವರಿಗೆ ಇನ್ನೂ ಹೆಚ್ಚು ತೊಂದರೆ. ಹೆಲಿಕಾಪ್ಟರಿನಲ್ಲಿ ಬಂದಿಳಿದ ನಮ್ಮನ್ನು ಎದುರುಗೊಳ್ಳಲು ರಾನ್ ಎಂಬ ಅಧಿಕಾರಿ ಇನ್ನೂ ಕೆಲವರು ಸಹೋದ್ಯೋಗಿಗಳೊಂದಿಗೆ ಬಂದಿದ್ದ.  ಅವರು ತಮ್ಮ ಕಾರುಗಳಲ್ಲಿ ನಮ್ಮನ್ನು ಹಿಲ್ ಕ್ರೆಸ್ಟ್ ಗಾರ್ಡನ್ ಅಪಾರ್ಟ್ಮೆಂಟ್ಸ್ ಎಂಬಲ್ಲಿಗೆ ಕರೆದೊಯ್ದರು. ಅಲ್ಲಿ ಕೆಳಗಿನ ಅಪಾರ್ಟ್ಮೆಂಟಿನಲ್ಲಿ ನಮ್ಮ ಡೈರೆಕ್ಟರ್ ಮತ್ತು ಮೇಲಿನ ಅಪಾರ್ಟ್ಮೆಂಟಿನಲ್ಲಿ ನಾವು ಇಂಜಿನಿಯರ್ಸ್ ತಂಗುವುದು ಎಂಬ ನಿರ್ಧಾರವಾಗಿತ್ತು. ಅಪಾರ್ಟ್ಮೆಂಟ್ ಹೊಸದು. ಬಹುಶಃ ನಾವೇ ಅದರ ಮೊದಲ ವಾಸಿಗಳು. ಮೊದಲೇ ಫರ್ನಿಚರ್ ಎಲ್ಲವನ್ನೂ ಸಜ್ಜುಗೊಳಿಸಿದ್ದರು.  ಫ್ರಿಜ್ ಕೂಡಾ ಇತ್ತು. ಆಗ ಬೆಂಗಳೂರಿನಲ್ಲಿ ಫ್ರಿಜ್ ಬಳಸುವ ರೂಢಿಯೇ ಇರಲಿಲ್ಲ. ಹೀಗಾಗಿ ನಮಗೆ ಇದು ಹೊಸ ಅನುಭವ.  ಅದೇ ಸಂಜೆ ನಮ್ಮನ್ನು ಊಟಕ್ಕೆ ಕರೆದೊಯ್ಯಲು ರಾನ್ ಮತ್ತಿತರ ಅಧಿಕಾರಿಗಳು ಬಂದರು. ಹಾಲಿಡೇ ಇನ್ ರೆಸ್ಟೋರಾಂದಲ್ಲಿ ನಮಗೆ ಆತಿಥ್ಯವಿತ್ತು. ಎಲ್ಲರೂ ತಮ್ಮ ಹೆಂಡತಿಯರನ್ನೂ ಕರೆದುಕೊಂಡು ಬಂದಿದ್ದರು. ಹೀಗಾಗಿ ನಮಗಾಗಿ ದೊಡ್ಡ ಮೇಜುಗಳನ್ನು ಜೋಡಿಸಿ ಸುತ್ತಲೂ ಕೂಡುವ  ವ್ಯವಸ್ಥೆ ಇತ್ತು. ವೇಟ್ರೆಸ್ ನಮಗೆ ಕುಡಿಯಲು ಏನು ಬೇಕೆಂದು ಕೇಳಿದಳು. ನನಗೆ ಆಲ್ಲಿಯವರೆಗೂ ಒಗ್ಗಿದ ಏಕಮಾತ್ರ ಪೇಯವೆಂದರೆ ಆರೆಂಜ್ ಜೂಸ್.  ಬೇರೆಯವರು ...

ಫೋನ್ - ಅಂದು, ಇಂದು

 ನಾನು ಮೊದಲ ಸಲ ಅಮೆರಿಕಾಗೆ ಹೋದಾಗ ನಮ್ಮ ಮನೆಯಲ್ಲಿ ಫೋನ್ ಇರಲಿಲ್ಲ. ಆಗ ಫೋನ್ ಕನೆಕ್ಷನ್ ಸುಲಭವಾಗಿ ಸಿಕ್ಕುತ್ತಿರಲಿಲ್ಲ. ನಾಲ್ಕೈದು ಬೀದಿಗಳಲ್ಲಿ ಹುಡುಕಿದರೆ ಒಬ್ಬರ ಮನೆಯಲ್ಲಿ ಫೋನ್ ಇದ್ದರೆ ಹೆಚ್ಚು.   ನಾನು ನ್ಯೂಯಾರ್ಕ್ ತಲುಪಿದ್ದು ಸಂಜೆ. ನಮ್ಮನ್ನು ಕರೆದೊಯ್ಯಲು ಬಂದಿದ್ದ ದಿನೇಶ್ ನಮ್ಮನ್ನು ನೇರವಾಗಿ ಊಟಕ್ಕೆ ಕರೆದುಕೊಂಡು ಹೋಗಿ ನಂತರ ನಾವು ತಂಗಬೇಕಾಗಿದ್ದ ಹೋಟೆಲಿಗೆ ಕರೆದುಕೊಂಡು ಹೋಗಿ ಬಿಟ್ಟರು. ಆಗಲೇ ಕತ್ತಲಾಗಿತ್ತು.  ಆಯಾಸವಾದರೂ ನಿದ್ದೆ ಸರಿಯಾಗಿ ಬರಲಿಲ್ಲ.  ಹೊರಗೆ ಹಿಮಪಾತವಾಗುತ್ತಿತ್ತು. ಅದನ್ನು ಕಿಟಕಿಯ ಮೂಲಕ ನೋಡುತ್ತಾ ನಿಲ್ಲುವುದೇ ಒಂದು ಅಪೂರ್ವ ಅನುಭವ.  ಮರುದಿನ ಬೆಳಗ್ಗೆ  ನಾನು ಮತ್ತು ನನ್ನ ಸಹೋದ್ಯೋಗಿಗಳು ಪೋಸ್ಟ್ ಆಫೀಸ್ ಹುಡುಕಿಕೊಂಡು ಹೋಗಿ ಕ್ಷೇಮವಾಗಿ ತಲುಪಿದೆವೆಂದು ಟೆಲಿಗ್ರಾಮ್ ಕೊಟ್ಟು ಬಂದೆವು.  ಮುಂದೆ ಅಪಾರ್ಟ್ಮೆಂಟಿನಲ್ಲಿ ವಾಸ ಪ್ರಾರಂಭವಾದ ನಂತರ ಮನೆಗೆ ಪತ್ರ ಬರೆಯುವ ಸಂಪ್ರದಾಯ ಪ್ರಾರಂಭವಾಯಿತು.   ಬೆಂಗಳೂರಿನಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಕೃಷ್ಣಮೂರ್ತಿ ಎನ್ನುವವರ ಮನೆಯಲ್ಲಿ ಫೋನ್ ಇತ್ತು. ಬಹುಶಃ ಅದು ಅವರ ಆಫೀಸ್ ನೀಡಿದ ಫೋನ್. ಅವರ  ಬಾಡಿಗೆ ಮನೆ ಬಹಳ ಚಿಕ್ಕದು. 30x30 ಸೈಟಿನಲ್ಲಿ ಮಾಲೀಕ ಎರಡು ಮನೆ ಕಟ್ಟಿಸಿ ಬಾಡಿಗೆ ಕೊಟ್ಟಿದ್ದ. ಮನೆಯಲ್ಲಿ ಒಂದು ಅಡುಗೆ ಮನೆ, ಒಂದು ಕೋಣೆ ಮತ್ತು ಹಾಲ್ ಎಂದು ಕರೆಸಿಕೊಳ್ಳುವ...

ನಿಸಾರ್ ಅಹಮದ್ ಅವರ ನೆನಪು

ನಿ ಸಾರ್ ಅಹ್ಮದ್ ಅವರೊಂದಿಗೆ ಒಮ್ಮೆ ಪ್ರಯಾಣಿಸುವ ಮತ್ತು ಅವರೊಂದಿಗೆ ಕಾವ್ಯವಾಚನದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಬಂದಿತ್ತು. ಅದು ಆದದ್ದು ಹೀಗೆ. ಶ್ರೀ ಎಂ. ಎಸ್. ಭಾರದ್ವಾಜ್ ಅವರು ನನ್ನ ತಂದೆಯವರ ಹತ್ತಿರದ ಮಿತ್ರರು. ಅವರಿಗೆ ವಾರ್ತಾ ಇಲಾಖೆಯಲ್ಲಿ ಉನ್ನತ ಹುದ್ದೆ. ನಿರಂಜನ, ಭಾರದ್ವಾಜ್, ನಮ್ಮ ತಂದೆ ಇವರು ಮೂವರೂ ಹತ್ತಿರದ ಮಿತ್ರರು. ನನ್ನ ತಂದೆ ದೆಹಲಿಗೆ ಹೋದಾಗ ಭಾರದ್ವಾಜ್ ಅವರೂ ದೆಹಲಿಯಲ್ಲಿದ್ದರು. ಅವರ ಮನೆಗೆ ನಾವು ಹೋದ ನೆನಪು ಹಸಿರಾಗಿದೆ. ಅವರ ಹೆಂಡತಿ ಶ್ರೀಮತಿ ವೃಂದಾ ಭಾರದ್ವಾಜ್ ಸಣ್ಣ ಕತೆಗಳನ್ನು ಬರೆಯುತ್ತಿದ್ದರು. ಮಕ್ಕಳು ಮಾಯಾ ಮತ್ತು ಮಮತಾ. ನಮ್ಮ ತಂದೆ ದೆಹಲಿಯಲ್ಲಿ 5 ವರ್ಷ ಕೆಲಸ ಮಾಡಿ ಬೆಂಗಳೂರಿಗೆ ಮರಳಿದರು. ಮುಂದೆ ಭಾರದ್ವಾಜ್ ಕೂಡಾ ಬೆಂಗಳೂರಿಗೆ ಮರಳಿ ಬಂದರು. ಅವರ ಮನೆ ನಮ್ಮ ಮನೆಯ ಪಕ್ಕದ ಬೀದಿಯಲ್ಲೇ ಇತ್ತು. ಅವರು ಈಗ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ನನ್ನನ್ನು ಅವರು ತಮ್ಮ ಮಗನಷ್ಟೇ ಪ್ರೀತಿಸುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ನಾನೂ ಒಂದಿಷ್ಟು ಬರೆಯುತ್ತೇನೆ ಎಂದು ನನ್ನ ತಂದೆ ಅವರಿಗೆ ಹೇಳಿದ್ದೇ ಅವರಿಗೆ ಸಾಕಾಯಿತು. ಒಂದು ದಿನ ಬಂದು "ಚಿತ್ರದುರ್ಗದಲ್ಲಿ ಒಂದು ಕವಿಗೋಷ್ಠಿ ಇದೆ. ರವಿಯನ್ನೂ ಕಳಿಸಿಕೊಡಿ, ನನ್ನ ಜೊತೆ ಬರುತ್ತಾನೆ, ಅವನೂ ಒಂದು ಕವಿತೆ ಓದಲಿ" ಎಂದರು. ಹಿಂದೆಂದೂ ಕವಿಗೋಷ್ಠಿಯಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಹೀಗಾಗಿ ನನಗೆ ಇದು ಹೊಸ ಅನುಭವ. ನಾನು ಒಂದು ಕವಿತ...

ಗ್ರಂಥಾಲಯದಲ್ಲಿ ಕವನವಾಚನ

ಇಮೇಜ್
ಸಿ. ಪಿ. ರವಿಕುಮಾರ್ (17 ನವೆಂಬರ್, 2016) ಗ್ರಂಥಾಲಯ ಸಪ್ತಾಹ ಆಚರಣೆಯ ಪರವಾಗಿ ಒಂದು ಕಾವ್ಯವಚನ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೆಳೆಯ ಅಭಿನವ ರವಿಕುಮಾರ್ ಕರೆ ಮಾಡಿದರು. ಸಾಲದೆಂಬಂತೆ "ತೊಗೊಳ್ಳಿ, ಶ್ರೀನಿವಾಸ್ ಅವರೂ ನಿಮ್ಮ ಜೊತೆ ಮಾತಾಡುತ್ತಾರೆ," ಎಂದು ಫೋನ್ ವರ್ಗಾಯಿಸಿದರು. "ರವಿಕುಮಾರ್, ನೀವು ಖಂಡಿತ ಬರಬೇಕಪ್ಪ." ಎಂದು ಆತ್ಮೀಯವಾಗಿ ಕರೆದವರು "ಶೂದ್ರ" ಶ್ರೀನಿವಾಸ್.  ಅವರು ನನ್ನ ಹಿತೈಷಿಗಳು.   ನ್ಯಾಷನಲ್ ಕಾಲೇಜಿನಲ್ಲಿ ನನಗೆ ಕನ್ನಡ ಪಾಠ ಹೇಳಿದ  ಕೆ.ಎನ್.ಎನ್. ಮತ್ತು ಎಚ್.ಎಸ್.ಎಂ.ಆರ್. ಇವರಿಬ್ಬರೂ ನನ್ನನ್ನು ಕುರಿತು ಆಡಿರಬಹುದಾದ ಒಳ್ಳೆಯ ಮಾತುಗಳು ನನಗೆ ಎಷ್ಟೋ ಜನ ಹಿತೈಷಿಗಳನ್ನು ಸಂಪಾದಿಸಿಕೊಟ್ಟಿದೆ! ಕಾವ್ಯವಾಚನದಲ್ಲಿ ಮುಖ್ಯ ಅತಿಥಿಯಾಗಿ ಬಂದವರು ಪ್ರಸ್ತುತ ಕನ್ನಡ ಕಾವ್ಯ ಸಂದರ್ಭದಲ್ಲಿ ಅತ್ಯಂತ ಮುಖ್ಯ ಕವಿಯೆಂದು ಗುರುತಿಸಲ್ಪಡುವ ಎಚ್.ಎಸ್. ವೆಂಕಟೇಶಮೂರ್ತಿ.  ಎಚ್ಚೆಸ್ವಿ ಅವರ ಕಾವ್ಯದ ಹರಹು ಬಹಳ ದೊಡ್ಡದು. ಮಕ್ಕಳ ಕವಿತೆಯಿಂದ ಹಿಡಿದು ಮಹಾಕಾವ್ಯದವರೆಗೆ. ಅವರನ್ನು ಮತ್ತೊಮ್ಮೆ ನೋಡುವ ಮತ್ತು ಅವರ ಮಾತು ಕೇಳುವ ಅವಕಾಶ ನನಗೆ ಸಿಕ್ಕಿತು. ಜಯನಗರದ ನಗರ ಕೇಂದ್ರ ಗ್ರಂಥಾಲಯದೊಂದಿಗೆ ತಮಗಿರುವ ಸಂಬಂಧವನ್ನು ಎಚ್.ಎಸ್.ವಿ. ನೆನೆಸಿಕೊಂಡರು. "ನಾನು ಬೆಂಗಳೂರಿಗೆ ಬಂದಾಗ ಮೊದಲು ನೆಲೆಸಿದ್ದು ಜಯನಗರದಲ್ಲಿ. ಪಾಠ ಹೇಳಿ ಮನೆಗೆ ಬಂದ ಮೇಲೆ ಸಂಜೆ ವಾಕಿಂಗ್ ಹೊರಟು ಇಲ...