ಪೋಸ್ಟ್‌ಗಳು

Halloween ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹ್ಯಾಲೋವೀನ್

ಇಮೇಜ್
 ಹ್ಯಾಲೋವೀನ್ ಕಟುಕನ ಭಾರೀ ಗಾತ್ರದ ಚಾಕು ಮೊದಲು ಒಳನುಗ್ಗಿ ಕೊರೆಯುತ್ತದೆ ತೊಟ್ಟುಳ್ಳ ಗುಂಡನೆ ಮುಚ್ಚಳ ಮೇಲುಗಡೆ. ಈಗ ಕೈಹಾಕಿ ಒಳಗೆ ಬಗೆದು ಕೈಗಂಟುವ ಮಾಂಸಲ ಭಾಗ ಚಮಚದಿಂದ ಕೆರೆದು ಶುದ್ಧಗೊಳಿಸಬೇಕು  ಒಳಗೋಡೆ. ಅಂದು ಮಧ್ಯಾಹ್ನವೇ ರೂಪಿಸಿದ ಭಯಾನಕ ಆಕೃತಿ: ಮೊದಲು ಕೆತ್ತಬೇಕು ತ್ರಿಕೋನಾಕಾರದ ಕಣ್ಣು ಅಥವಾ ವಜ್ರಾಕ್ರಾರದವು ಮತ್ತು ಚೌಕಾಕಾರದ ಮೂಗು. ಕೆಳಗೆ ಬಾಗಿದ ಬಾಯಲ್ಲಿ ಮೂರು ಭಯಾನಕ ಹಲ್ಲು.  ಬೇಕೆನಿಸಿದರೆ ಗುಂಡನೆಯ ಕಿವಿ. ಮುಸ್ಸಂಜೆ ಹೊತ್ತು ಒಳಗೆ ಮೋಂಬತ್ತಿ ಇಟ್ಟು ಹಚ್ಚಿದಾಗ ಕಾಣುತ್ತದೆ  ಹಿಂಭಾಗದಲ್ಲಿ ಕತ್ತಲು. ಮುಂದಿನಿಂದ ನೋಡಿದರೆ ಕಾಣುವುದು ಪಕ್ವ ಕುಂಬಳಕಾಯಿ, ಅಷ್ಟೇ. ಹೊರಗೆ ತರಗೆಲೆಗಳುದುರಿದ ಹುಲ್ಲಿನ ಮೇಲೆ ಬಿದ್ದ ನೆರಳು ಕೈ ಮಾಡಿ ಕರೆದಾಗ ಬೆರಳು ಆಗಮಿಸುತ್ತಾರೆ ಮಕ್ಕಳು. "ಟ್ರಿಕ್ ಆರ್ ಟ್ರೀಟ್."  ತೆರೆದ ಬಾಗಿಲಿನ ಮುಂದೆ ನಿಂತ ಕುಂಬಳಕಾಯಿ ಕೊರೆದ ಮಾಯಾವಿ ವೇಷದಾರಿ ಉದುರಿಸುತ್ತಾನೆ ಅವರ ಜೋಳಿಗೆಗಳಲ್ಲಿ ಪೆಪ್ಪರ್ಮಿಂಟು ಅವನಿಗೆ ಗೊತ್ತು ಏನೆಂದು ಚಳಿಗಾಲದ ಸಂದೇಶ: ಭೂತಗಳಂತೆ ನಟಿಸುವ ಮಕ್ಕಳಷ್ಟೇ ವಾಸ್ತವ. ಮೂಲ: ಮ್ಯಾಕ್ ಹ್ಯಾಮಂಡ್ ಅನುವಾದ: ಸಿ. ಪಿ. ರವಿಕುಮಾರ್

ಬೆಂಗಳೂರಲ್ಲಿ ಹ್ಯಾಲೋವೀನ್

ಇಮೇಜ್
  ಕೆಲವು ವರ್ಷಗಳ ಹಿಂದೆ ಹ್ಯಾಲೋವೀನ್ ಸಂಜೆ ನಾನು ಮನೆಯಲ್ಲಿ ಒಬ್ಬನೇ ಇದ್ದಾಗ ಕರೆಗಂಟೆ ಬಾಜಿಸಿತು. ತೆರೆದರೆ ಅಲ್ಲೊಬ್ಬಳು ಮರಿ ಮಾಯಾವಿನಿ ಮತ್ತು ಮರಿ ಡ್ರಾಕುಲಾ ನಿಂತಿದ್ದರು. ಟ್ರಿಕ್ ಆರ್ ಟ್ರೀಟ್ ಎಂದು ಬಾಯಲ್ಲಿ ಹೇಳಿದರೂ ಟ್ರೀಟ್ ಪಡೆದುಕೊಳ್ಳಲು ಕೈಯಲ್ಲಿ ಹಿಡಿದಿದ್ದ ಡಬ್ಬವನ್ನು ಮುಂದೆ ಮಾಡಿದರು. ಓಹೋ! ಭಾರತದಲ್ಲಿ ಹೀಗೆ ಟ್ರಿಕ್ ಆರ್ ಟ್ರೀಟ್ ಅಂತ ಬರುವುದು ಯಾವಾಗಿನಿಂದ ಪ್ರಾರಂಭವಾಯಿತು ಎಂದು ಯೋಚಿಸಲು ನನಗೆ ಸಮಯವಿರಲಿಲ್ಲ. ಮಾಯಾವಿನಿ ಮತ್ತು ಡ್ರಾಕುಲಾಗೆ ಅರ್ಜೆಂಟಾಗಿ ಏನಾದರೂ ಟ್ರೀಟ್ ಹೊಂದಿಸಲೇ ಬೇಕಾಗಿತ್ತು.  ಏನಾದರೂ ಟ್ರಿಕ್ ತೋರಿಸಿಬಿಡಲಾ ಎಂದರೆ ಅಂಥ ಹೇಳಿಕೊಳ್ಳುವಂಥ ಟ್ರಿಕ್ ನನಗೇನೂ ಬರದು. ನಾನು ಅವರಿಗೆ ಜೋಕ್ ಏನಾದರೂ ಹೇಳಿ ನಗುಬಂತಾ ಎಂದು ಕೇಳಿಬಿಡೋಣವೇ ಎಂದು ಚಿಂತಿಸಿದೆ. ನನ್ನ ಮಕ್ಕಳು ಇಂಥದಕ್ಕೆ ಹೇಗೆ ಪ್ರತಿಕ್ರಿಯಿಸಬಹುದೆಂದು ಯೋಚಿಸಿದಾಗ ಅಂಥ ಸಾಹಸಕ್ಕೆ ಕೈ ಹಾಕದಿರುವುದೇ ಮೇಲೆಂದು ಅಡಿಗೆಮನೆಗೆ ನುಗ್ಗಿ ಹುಡುಕಿದೆ. ನಮ್ಮ ಮನೆಯಲ್ಲಿ ಚಾಕೊಲೇಟ್ ಇಟ್ಟುಕೊಳ್ಳುವುದಿಲ್ಲ. ಬಿಸ್ಕೆಟ್ ನೀಡೋಣವೆಂದರೆ ಯಃಕಶ್ಚಿತ್ ಮಾರಿ ಬಿಸ್ಕೆಟ್ಟಿಗೆ ಯಾವ ಮಾಯಾವಿನಿಯೂ ಯಾಮಾರಿ ಹೋಗುವುದಿಲ್ಲವೆಂದು ತೋರಿತು.  ಸೇಬಿನ ಹಣ್ಣು ಕಣ್ಣಿಗೆ ಬಿತ್ತು.  ಸ್ನೋವೈಟ್ ಎಂಬ ರಾಜಕುಮಾರಿಗೆ ಹಿಂದೊಮ್ಮೆ ಮಾಯಾವಿನಿ ಮಲತಾಯಿ ಸೇಬನ್ನು ಕೊಟ್ಟಿದ್ದು ನೆನಪಾಗಿ ಯುರೇಕಾ ಎಂದು ಕೂಗುತ್ತಾ ಹೊರಗೆ ಬಂದೆ. ಅಂಕಲ್ ನನ್ನ ಹೆ...