ಪೋಸ್ಟ್‌ಗಳು

Philosophical ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನನ್ನ ಸಮಾಧಿಯ ಎದುರು ನಿಂತು ಅಳದಿರು

ಇಮೇಜ್
ಮೂಲ: ಕ್ಲೇರ್ ಹಾರ್ನರ್ ಅನುವಾದ: ಸಿ. ಪಿ. ರವಿಕುಮಾರ್ ನನ್ನ ಸಮಾಧಿಯ ಎದುರು ನಿಂತು ಅಳದಿರು, ನಾನಲ್ಲಿಲ್ಲ,  ನಾನು ನಿದ್ರಿಸುವುದಿಲ್ಲ, ತಿಳಿದಿರು: ಲೀನವಾಗಿದೆ ಬೀಸುವ ಗಾಳಿಗಳಲ್ಲಿ ಸಾವಿರಾರು ವಜ್ರದಂತೆ ಹೊಳೆವ ಹಿಮಕಣದಲ್ಲಿ ನನ್ನುಸಿರು. ಬಲಿತ ಕಾಳಿನ ಮೇಲೆ ಹೊಳೆವ  ಕಿರಣವು ನಾನು, ನಾನು ಶ್ರಾವಣದ ನಿಶಬ್ದ ತುಂತುರು ಮಳೆ. ಶಾಂತ ನಸುಕಿನೊಳು ನಿದ್ದೆಯಿಂದೆದ್ದಾಗ ನೀನು ಯಾವ ಸದ್ದಿನಿಂದ ಪುಳಕಗೊಳ್ಳುವುದೋ ಇಳೆ, ಆ ಇಂಚರಗೈಯುವ ಪಕ್ಷಿವೃಂದವು ನಾನು, ದಿವರಾತ್ರಿಗಳ ಮಾಯಾ ಪರಿವರ್ತನೆ ನಾನು. ಸುರಿಸದಿರು ನನ್ನ ಸಮಾಧಿಯ ಎದುರು  ನಿನ್ನ ಕಣ್ಣುಗಳಿಂದ ಅಶ್ರುಬಿಂದು. ನಾನಲ್ಲಿಲ್ಲ ಎಲ್ಲರೂ ತಿಳಿದಿರುವಂತೆ, ಯಾರು ಹೇಳಿದರು ನಾನು ಇನ್ನಿಲ್ಲವೆಂದು?

ನಿನ್ನದಿದೆಷ್ಟೋ ನನ್ನದೂ ಅಷ್ಟೇ

ಇಮೇಜ್
ಮೂಲ .. ನಿದಾ ಫಾಜಲಿ ಕನ್ನಡಕ್ಕೆ .. ಸಿ.ಪಿ. ರವಿಕುಮಾರ್ ನಮಗಿರುವುದು ಇದು ಒಂದೇ ಭೂಮಿ, ನಿನ್ನದಿದೆಷ್ಟೋ ನನ್ನದು ಅಷ್ಟೇ ಸುಖದುಃಖಗಳ ರಂಗಿನರಾಟೆ ನಿನ್ನದಿದೆಷ್ಟೋ ನನ್ನದು ಅಷ್ಟೇ ಅಕ್ಕಿಬೇಳೆಗಳ ತೂಗುವ ಕೈಯಿ ವಂಚನೆ ಮಾಡಿದರೇನೆನಬಹುದು? ಒಳಗಿರುವುದು ಹೊರಗಿರುವುದು ಎಲ್ಲಾ ನಿನ್ನದಿದೆಷ್ಟೋ ನನ್ನದೂ ಅಷ್ಟೇ ಪ್ರತಿಯೊಬ್ಬರೂ ಪಡೆದುದು ಬಾಳಲ್ಲಿ ಕಂಬನಿ, ಕನಸು, ಕಾಮನೆ, ಕಷ್ಟ ಪ್ರತಿ ಉಸಿರಿನ ಹೊರೆಯೂ ಸಮಭಾರ, ನಿನ್ನದಿದೆಷ್ಟೋ ನನ್ನದೂ ಅಷ್ಟೇ ಉಸಿರುಗಳೆಷ್ಟೋ ಅಷ್ಟೇ ಹರುಷ, ಪ್ರತಿಯೊಂದಕ್ಕೂ ಅದರದೆ ಲೆಕ್ಕ, ಯುಗಯುಗಗಳ ಇತಿಹಾಸ ಸಮುದ್ರ, ನಿನ್ನದದೆಷ್ಟೋ ನನ್ನದೂ ಅಷ್ಟೇ ಸುಖನೆಮ್ಮದಿ ಬಟವಾಡೆಯವರೆಗೆ ಮಾತ್ರವೇ ಮೇಲು-ಕೀಳಿನ ಸೂತ್ರ ಪ್ರಳಯವು ಎಂದೋ ಎನ್ನುವ ಭೀತಿ ನಿನ್ನದದೆಷ್ಟೋ ನನ್ನದೂ ಅಷ್ಟೇ

ರೂಮಿಯ ಮೂರು ರಚನೆಗಳು

ಇಮೇಜ್
ಮೂಲ: ಮೌಲಾನಾ ಜಲಾಲುದ್ದೀನ್ ರೂಮಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ (1) ಕಲ್ಲಾಗಿ ಸತ್ತವನು ಹುಲ್ಲಾಗಿ ಮೇಲೆದ್ದೆ  ಹುಲ್ಲಾಗಿ ಸತ್ತವನು ಎದ್ದೆ ಹುಲ್ಲೆಯಾಗಿ ಹುಲ್ಲೆಯಾಗಿ ಸತ್ತವನು ಪಡೆದಿರುವೆ ಮಾನವ ಜನ್ಮ  ಏತರ ಭಯ?  ಸಾವಿನಿಂದ  ನನಗೇನಾಗಿದೆ   ನಷ್ಟ? (2) ಒಡೆಯನನ್ನು ಕಾಣದೆ ಸವೆಸಿದ ಜೀವನವು  ಮೈಮರೆತ ನಿದ್ರೆ ಅಥವಾ ಭಿನ್ನ ರೂಪದಲ್ಲಿ ಸಾವು  ನಿನ್ನನ್ನು ಕಲುಷಿತಗೊಳಿಸುವ ನೀರು ವಿಷವಾಗಿದೆ  ನಿನ್ನನ್ನು ಶುದ್ಧಗೊಳಿಸುವ ವಿಷವಾಗಿದೆ ನೀರು  (3) ಉದ್ಧಾರವಾಯಿತು ನಿನ್ನ  ಅನುರಾಗಾಮೃತ ಹೀರಿದ ಆತ್ಮ  ಉದಾತ್ತ ಸ್ಥಿತಿಗೇರಿಸಿದೆ ಆ ಜೀವಸಲಿಲ ಬಳಿಬಂದ ಸಾವು ಯಾವಾಗ ಮೂಸಿತೋ ನಿನ್ನ ಸೌರಭ  ನನ್ನಿಂದ ಏನೂ ಅಪೇಕ್ಷೆ ಪಡುವುದಿಲ್ಲ