ಪೋಸ್ಟ್‌ಗಳು

Masti Venkatesha Iyengar ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಾಸ್ತಿ, ಪ್ರೇಮ್ ಚಂದ್ ಮತ್ತು ಕಾಸ್ಮಿಕ್ ಎನರ್ಜಿ

ಇಮೇಜ್
ಸಿ ಪಿ ರವಿಕುಮಾರ್ ಗುಲ್ಜಾರ್ ಅವರ ನಿರ್ದೇಶನದಲ್ಲಿ ಪ್ರೇಮ್ ಚಂದ್ ಅವರ ಕತೆಗಳು ಹೊಳಪು ಮಾಡಿದ ವಜ್ರಗಳ ಹಾಗೆ ಕಂಗೊಳಿಸುತ್ತಿವೆ. ಮಾಸ್ತಿ ಅವರ ಕತೆಗಳನ್ನೂ ಇಂದಿನ ಪೀಳಿಗೆಗೆ ಇದೇ ರೀತಿ ಅತ್ಯುತ್ತಮ ರೀತಿಯಲ್ಲಿ ಸಮರ್ಥ ನಿರ್ದೇಶಕರ ಕೈಯಲ್ಲಿ ಸಿದ್ಧಗೊಳಿಸಿ ಸುಲಭವಾಗಿ ಸಿಕ್ಕುವ ಹಾಗೆ ಮಾಡುವುದು ಇಂದಿನ ಅಗತ್ಯ. ಕೆಲವು ದಿನಗಳ ಹಿಂದೆ ನನಗೆ ಒಂದು ಈ-ಮೇಲ್ ಸಂದೇಶ ಬಂತು. ಕನ್ನಡ ಲೇಖಕ ಶ್ರೀ ಕೆ ಸತ್ಯನಾರಾಯಣ ಅವರ ಪತ್ರ. ಇದಕ್ಕೆ ಒಂದು ಹಿನ್ನೆಲೆ ಹೀಗೆ.  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂದಿಗೂ ಪ್ರಸ್ತುತರೇ ಎಂಬ ಬಗ್ಗೆ  ಅವರು ನೀಡಿದ ಭಾಷಣದ ಬಗ್ಗೆ ನಾನು ಹಿಂದೆ ಬರೆದಿದ್ದೆ. ಅದನ್ನು ನೀವು ಇಲ್ಲಿ ಓದಬಹುದು . ನನ್ನ ಗುರುಗಳಾದ ಶ್ರೀ ಎಚ್ ಎಸ್ ಮಾಧವರಾವ್ ಈ ಬ್ಲಾಗನ್ನು ಓದಿ ಕೆ ಎಸ್ ಅವರಿಗೆ ಆ ವಿಷಯ ಹೇಳಿದರಂತೆ. ತಮ್ಮ ಪತ್ರದಲ್ಲಿ ನನ್ನ ತಂದೆಯವರು ಹಿಂದೂ ಪತ್ರಿಕೆಯಲ್ಲಿ ಬರೆಯುತ್ತಿದ್ದ ಕಾಲಂ "Between You and Me" ತಾವು ಓದುತ್ತಿದ್ದರೆಂದು  ನೆನೆಸಿಕೊಂಡಿದ್ದರು. ನಾನು ಮಾಸ್ತಿ ಅವರನ್ನು ಕುರಿತು ಬರೆದದ್ದು ಅವರಿಗೆ ತುಂಬಾ ಸಂತೋಷವಾಗಿತ್ತು. ತಾವು ಬರೆದ "ಮಾಸ್ತಿಗನ್ನಡಿ" ಎಂಬ ಕತೆಯನ್ನು ನನಗೆ ಓದಲು ಕಳಿಸಿದರು. ಕೆ ಎಸ್ ಅವರ ಭಾಷಣ ಕೇಳಿದ ನಂತರ ನಾನು ನನ್ನಲ್ಲಿದ್ದ ಮಾಸ್ತಿ ಅವರ ಸಣ್ಣಕತೆಗಳ ಸಂಗ್ರಹವನ್ನು ಮತ್ತೆ ಹೊರತೆಗೆದೆ. ಪ್ರಿಸಂ ಪ್ರಕಾಶಕರು ಪ್ರಕಟಿಸಿದ ಪುಸ್ತಕದಲ್ಲಿ ಕನ್ನಡ...

ನಮ್ಮ ಆಸ್ತಿಯ ಬೆಲೆ

ಇಮೇಜ್
ಸಿ ಪಿ ರವಿಕುಮಾರ್  ಜೂ ನ್ 6 "ಕನ್ನಡದ ಆಸ್ತಿ" ಎಂದೇ ಪ್ರಸಿದ್ಧರಾದ ದಿವಂಗತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ.  ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು "ಚಿಕವೀರ ರಾಜೇಂದ್ರ" ಕಾದಂಬರಿಗಾದರೂ ಅವರು ತಮ್ಮ ಸಣ್ಣ ಕತೆಗಳಿಗಾಗಿ ಪ್ರಸಿದ್ಧರು.  ನಾನು ಹತ್ತನೇ ತರಗತಿ ಓದುತ್ತಿದ್ದಾಗ ನಮಗೆ ಅವರ ಕತೆ "ನಿಜಗಲ್ಲಿನ ರಾಣಿ" ಪಾಠವಾಗಿತ್ತು.  ಇದೊಂದು ಐತಿಹಾಸಿಕ ಕತೆ. ಕತೆಯಲ್ಲಿ ಬರುವ ರಾಮರಸ ನಾಯಕ, ಲಕುಮವ್ವೆ, ಗಿರಿಜವ್ವೆ, ಕಸ್ತೂರಿ - ಈ ಪಾತ್ರಗಳು ಎಂದಿಗೂ ನೆನಪಿನಲ್ಲಿ ಉಳಿಯುವಂಥವು. ಈ ಕತೆಯನ್ನು ನಾನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದು ನನ್ನ ಬ್ಲಾಗ್ ನಲ್ಲಿ ಲಭ್ಯವಾಗಿದೆ ( ಇಲ್ಲಿ ಓದಿ ). ಮಾಸ್ತಿ ಅವರನ್ನು ಭೇಟಿ ಮಾಡಿದ ಸುಸಂದರ್ಭ ನನ್ನ ಜೀವನದಲ್ಲೂ ಬಂದಿತ್ತು! ನಾನು ನವಕರ್ನಾಟಕ ಪಬ್ಲಿಕೇಷನ್ಸ್ ಅವರು ಹೊರತಂದ ವಿಶ್ವಕಥಾಕೋಶ ಎಂಬ ದೊಡ್ಡ ಪ್ರಾಜೆಕ್ಟ್ ನಲ್ಲಿ "ಕಾಡಿನಲ್ಲಿ ಬೆಳದಿಂಗಳು" ಎಂಬ ವಿಯೆಟ್ನಾಮ್ ಕಥೆಗಳ ಸಂಕಲನವನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಈ ಪ್ರಾಜೆಕ್ಟ್ ನನಗೆ ಕೊಟ್ಟವರು ದಿವಂಗತ ನಿರಂಜನ. ಆಗ ನಾನು ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ ಹೊಸದು. "ಕುರಿ" ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ವಿಷಯ ನಿರಂಜನ ಅವರಿಗೆ ತಿಳಿದಿತ್ತು. ಹೀಗಾಗಿ ಅವರಿಗೆ ನಾನು ಈ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸ ಬಂದಿ...