ಯಾವೊಬ್ಬ ಮಾನವನೂ ದ್ವೀಪವಲ್ಲ
ಮೂಲ ಇಂಗ್ಲಿಷ್ ಕವಿತೆ - ಜಾನ್ ಡನ್ ಅನುವಾದ - ಸಿ. ಪಿ. ರವಿಕುಮಾರ್ ಯಾವೊಬ್ಬ ಮಾನವನೂ ದ್ವೀಪವಲ್ಲ ಯಾರೊಬ್ಬನೂ ತಾನೇ ಪೂರ್ಣನಾಗ. ಪ್ರತಿಯೊಂದೂ ಭೂಖಂಡದ ಅಂಶ, ಮೂಲವೊಂದರ ಪುಟ್ಟ ಭಾಗ. ಕಿನಾರೆಯಿಂದ ಒಂದೇ ಒಂದು ಭೂಮಿಯ ಚೂರು ಕೊಚ್ಚಿ ಕೊಂಡೊಯ್ದರೆ ಕಡಲು ಉಂಟಾಗುವುದು ಅಷ್ಟೇ ಚ್ಯುತಿ ಮೂಲಭೂಖಂಡಕ್ಕೆ ಕಳೆದುಕೊಂಡಂತೆ ಇಡೀ ಭೂಶಿರವನ್ನು ಒಡಲು; ಕಳೆದು ಹೋದರೆ ಹೇಗಿದ್ದೀತು ನಿನ್ನ ಗೆಳೆಯನಿಗೋ ನಿನಗೋ ಸೇರಿದ ಜಹಗೀರು. ಪ್ರತಿಯೊಬ್ಬ ಮಾನವನ ಸಾವೂ ಕುಂದಿಸುತ್ತದೆ ನನ್ನನ್ನು ಏಕೆಂದರೆ ನಾನು ಮಾನವತೆಯ ಅಂಗ. ಪ್ರಶ್ನಿಸದಿರು ಯಾರಿಗಾಗಿ ಬಾಜಿಸುತ್ತಿದೆ ಗಂಟೆ ಎಂದು! ಬಾಜಿಸುತ್ತಿದೆ ನಿನಗಾಗಿ ಮೃದಂಗ.