ಪೋಸ್ಟ್‌ಗಳು

Pocahontas ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗಾಳಿಯ ಬಣ್ಣಗಳ ವರ್ಣಚಿತ್ರ

ಇಮೇಜ್
ಪೋಕಹಾಂಟಾಸ್ ಎಂಬ ಮೂಲ ಅಮೇರಿಕನ್ (ರೆಡ್ ಇಂಡಿಯನ್) ಮಹಿಳೆಯನ್ನು ಕುರಿತು ಡಿಸ್ನಿ ಚಲಚ್ಚಿತ್ರ ಕಂಪನಿ ತಯಾರಿಸಿದ ಅನಿಮೇಷನ್ ಚಿತ್ರ ಅಪಾರ ಜನಪ್ರಿಯತೆ ಪಡೆದಿದೆ. ಇದರಲ್ಲಿ "ಪೇಂಟ್ ವಿತ್ ಆಲ್ ದ ಕಲರ್ಸ್ ಆಫ್ ದ ವಿಂಡ್" ಎಂಬ ಹಾಡು ತುಂಬಾ ಜನಪ್ರಿಯವಾಯಿತು.  ಯೂಟೂಬ್‍ನಲ್ಲಿ ಈ ಹಾಡನ್ನು ನೀವು ಕೇಳಬಹುದು. ಈ ಹಾಡಿನ ಭಾವಾನುವಾದವನ್ನು ಕೆಳಗೆ ಕೊಟ್ಟಿದ್ದೇನೆ.  ಬ್ರಿಟನ್ನಿನಿಂದ ಬಂದ ವಲಸೆಗಾರರು ಮೂಲ ಅಮೇರಿಕನ್ ಜನಾಂಗದವರನ್ನು ನಾಶಗೊಳಿಸಿ ಅಮೇರಿಕಾ ಭೂಮಿಯ ಮೇಲೆ ತಮ್ಮ ಸ್ವಾಮ್ಯವನ್ನು ಘೋಷಿಸಿಕೊಂಡರು. ರೆಡ್ ಇಂಡಿಯನ್ ಬುಡಕಟ್ಟಿನ ಜನರಲ್ಲಿ ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ಆತ್ಮವಿದೆ ಎಂಬ ನಂಬಿಕೆಯಿದೆ. ಆದರೆ ವಲಸೆ ಬಂದವರಿಗೆ ಇದೆಲ್ಲಾ ಹಾಸ್ಯಾಸ್ಪದ ವಿಷಯ. ಅವರಿಗೆ ಭೂಮಿಯ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸುವುದಷ್ಟೇ ಮುಖ್ಯ. ಪೋಕಹಾಂಟಾಸ್ ಎಂಬ ಮಹಿಳೆ ಜಾನ್ ಎಂಬ ವಲಸೆಗಾರನಲ್ಲಿ ಅನುರಕ್ತಳಾಗುತ್ತಾಳೆ. ಅವನಿಗೆ ನಿಸರ್ಗದ ಶಕ್ತಿಯನ್ನೂ ಮತ್ತು ನಿಸರ್ಗದೊಂದಿಗೆ ನಮ್ಮ ಅವಿನಾ ಸಂಬಂಧವನ್ನೂ ಅವಳು ತಿಳಿಸಿಕೊಡುತ್ತಾಳೆ.  ಮೂಲ ಇಂಗ್ಲಿಷ್ ರಚನೆ - ಆಲನ್ ಮೆಂಕೆನ್ ಮತ್ತು ಸ್ಟೀಫನ್ ಲಾರೆನ್ಸ್ ಶ್ವಾರ್ಜ್  ಕನ್ನಡಕ್ಕೆ - ಸಿ. ಪಿ ರವಿಕುಮಾರ್   ವಿಶ್ವವನ್ನೆಲ್ಲಾ ಸುತ್ತಿದ ನಿನ್ನ ದೃಷ್ಟಿಯಲ್ಲಿ  ಏನೂ ತಿಳಿಯದ ಅನಾಗರೀಕಳು ನಾನು;  ಇರಬಹುದು! ಆದರೂ ಈ ಸೃಷ್ಟಿಯಲ್ಲಿ  ...