ಹಳ್ಳಿ ಶಾಲೆ ಮೇಷ್ಟ್ರು
ಕವಿತೆ ಓದುವ ಮುನ್ನ ... ಆ ಲಿವರ್ ಗೋಲ್ಡ್ ಸ್ಮಿತ್ ಮೂಲತಃ ಐರ್ ಲ್ಯಾಂಡ್ ನಲ್ಲಿ ಹುಟ್ಟಿ ನಂತರ ಇಂಗ್ಲೆಂಡ್ ಗೆ ಬಂದು ನೆಲೆಸಿದ ಕವಿ, ನಾಟಕಕಾರ, ಕಾದಂಬರಿಕಾರ. ಸಾಮ್ಯುಯೆಲ್ ಜಾನ್ಸನ್ ಎಂಬ ಖ್ಯಾತ ಬರಹಗಾರನ ಮೈತ್ರಿಯನ್ನು ಪಡೆದುದು ಇವನ ಹೆಮ್ಮೆ - ಏಕೆಂದರೆ ಜಾನ್ಸನ್ ಗೆ ಐರ್ ಲ್ಯಾಂಡ್ ಮತ್ತು ಐರಿಷ್ ಜನರ ಬಗ್ಗೆ ಅತೀವ ಅಸಹನೆಯಿತ್ತು. ಗೋಲ್ಡ್ ಸ್ಮಿತ್ ಬರೆದ "ವಿಕರ್ ಆಫ್ ವೇಕ್ ಫೀಲ್ಡ್" ಕಾದಂಬರಿಯನ್ನು ಕುರಿತು ಒಂದು ಸ್ವಾರಸ್ಯಕರ ಘಟನೆಯಿದೆ.ಒಂದು ಮುಂಜಾನೆ ಜಾನ್ಸನ್ ಗೆ ಯಾರೋ ಗೋಲ್ಡ್ ಸ್ಮಿತ್ ಕಳಿಸಿದ ಸಂದೇಶವನ್ನು ತಂದುಕೊಟ್ಟರು - "ನಾನು ಬಹಳ ಕಷ್ಟದಲ್ಲಿ ಸಿಲುಕಿದ್ದೇನೆ; ನಾನು ಖುದ್ದಾಗಿ ನಿಮ್ಮಲ್ಲಿ ಬರಲಾರೆ. ನೀವೇ ದಯಮಾಡಿ ನನ್ನ ಮನೆಗೆ ಬಂದರೆ ಬಹಳ ಉಪಕಾರವಾಗುತ್ತದೆ" ಎಂಬ ಒಕ್ಕಣೆ ಇದ್ದ ಪತ್ರ. ಜಾನ್ಸನ್ ಕೂಡಲೇ ಮಿತ್ರನಿಗೆ ತಾನು ಖಂಡಿತ ಬರುತ್ತೇನೆಂಬ ಭರವಸೆ ಕೊಟ್ಟು ಪತ್ರಕ್ಕೆ ಉತ್ತರ ಕಳಿಸಿ; ಜೊತೆಗೆ . ಒಂದು ಗಿನಿಯಷ್ಟು ಹಣ ಕಳಿಸಿಕೊಟ್ಟ. ಬಟ್ಟೆ ತೊಟ್ಟ ನಂತರ ಜಾನ್ಸನ್ ಮಿತ್ರನ ಮನೆಗೆ ಬಂದಾಗ ಆತ ಬಾಡಿಗೆ ಇದ್ದ ಮನೆಯ ಒಡತಿ ಬಾಡಿಗೆ ಹಣ ಕೊಡದ ಆರೋಪವನ್ನು ಹೊರಿಸಿ ಗೋಲ್ಡ್ ಸ್ಮಿತ್ ನನ್ನು ಬಂಧನಕ್ಕೆ ಒಳಪಡಿಸಿದ್ದಳು. ಇದರಿಂದ ವಿಪರೀತ ನೊಂದ ಗೋಲ್ಡ್ ಸ್ಮಿತ್ ನ ಕೋಪ-ತಾಪಗಳು ತಾರಕ್ಕೇರಿದ್ದವು. ತಾನು ಕಳಿಸಿದ್ದ ಗಿನಿಯನ್ನು ಮಿತ...