ಪೋಸ್ಟ್‌ಗಳು

William Wordsworth ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವೆಸ್ಟ್ ಮಿನ್ಸ್ಟರ್ ಆಬೀ ಚರ್ಚ್ ಮೇಲೆ ರಚಿಸಿದ್ದು

ಇಮೇಜ್
ಮೂಲ: ವಿಲಿಯಂ ವರ್ಡ್ಸ್ವರ್ತ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಧರೆಯ ಮೇಲಿರಲಾರದು ಇದನ್ನು ಮೀರಿದ ಚೆಲುವು! ಅ ರಸಿಕನೇ ಆಗಿರಬೇಕು ಇತ್ತ ಬೆಳೆಸಿದರೂ ಪಾದ ಅರೆತಾಸು ನಿಂತು ಬೆರಗಾಗದವನು ಈ ನೋಟಕ್ಕೆ! ಪುರವು ಹೊದ್ದಿರುವುದು ನಸುಕಿನ ಚೆಲುವನ್ನೀಗ ಜರತಾರಿಯ ಮೇಲುದೆಯಂತೆ; ಮೌನ ಹಬ್ಬಿದೆ. ಗೋ ಪುರಗಳು, ಮಂದಿರ, ರಂಗಸ್ಥಳ, ದೋಣಿಗಳು, ಎಲ್ಲವೂ ತೆರೆದುಕೊಂಡಿವೆ ಮುಖಮಾಡಿ ಹೊಲಗಳಿಗೆ ಮೇಣ್ ಗಗನಕ್ಕೆ! ಕೋರೈಸುತ್ತಿವೆ ಜಾಜ್ವಲ್ಯಮಾನವಾಗಿ ನಿಷ್ಕಲ್ಮಶ ಗಾಳಿಯಲ್ಲಿ. ವಿರಮಿಸಿರಲಾರ ಹಿಂದೆಂದೂ ಹೀಗೆ ಬಾಲರವಿ ಗಿರಿಗಳಲ್ಲಿ, ಕಣಿವೆಗಳಲ್ಲಿ, ಕಲ್ಲುಬಂಡೆಗಳ ಮೇಲೆ, ಎಲ್ಲೂ! ಅರಿಯೆ ನಾನೂ ಅನುಭವಿಸಿ ಇಷ್ಟು ಆಳದ ಶಾಂತಿ! ತೊರೆಯು ಹರಿಯುತ್ತಿದೆ ತನ್ನದೇ ಮಧುರಗತಿಯಲ್ಲಿ: ಮೈ ಮರೆತು ಮಲಗಿದಂತೆ ತೋರುತ್ತಿವೆ ಮನೆಗಳ ಸಾಲುಗಳು; ಧೀರೋದಾತ್ತ ಆ ಹೃದಯವೂ ಮಲಗಿಹುದು ಸ್ತಬ್ಧವಾಗಿ!

ಕನಸು

ಇಮೇಜ್
 ಮೂಲ ಕವಿತೆ:  ವಿಲಿಯಂ ವರ್ಡ್ಸ್ವರ್ತ್ ಅನುವಾದ: ಸಿ. ಪಿ. ರವಿಕುಮಾರ್ ಎನ್ನೆದೆ ಕುಣಿದಾಡುವುದು ಕಂಡಾಗ ಕಾಮನಬಿಲ್ಲು! ಇದೇನು ಇಂದಿನ ಮಾತಲ್ಲ, ಚಿಕ್ಕಂದಿನಿಂದಲೂ ಮುಂದುವರೆದಿದೆ ನಾನೀಗ ಎತ್ತರದ ಆಳಾದರೂ ಇದು ಹೀಗೇ ಇರಲಿ ನೆರೆತಾಗ ತಲೆಗೂದಲು: ಇಲ್ಲದಿದ್ದರೆ ದೇವ ಕರುಣಿಸಲಿ ಸಾವು! ಮಾನವನ ತಂದೆಯಲ್ಲವೆ ಶಿಶು? ನನ್ನೆದೆಯಲ್ಲಿ ಬೆಳಕು ಬೀರುವುದೊಂದು ಕನಸು:  ಬೆಸೆದುಕೊಂಡಿರಲಿ ನನ್ನ ದಿನಗಳು ಒಂದಕ್ಕೊಂದು ಮಾನವಸಹಜ ಭಕ್ತಿಯಿಂದ ಎಂದು.

ಕುಣಿವುದೆನ್ನ ಮನ

ಇಮೇಜ್
ಮೂಲ ಇಂಗ್ಲಿಷ್  ಕವಿತೆ: ವಿಲಿಯಂ ವರ್ಡ್ಸ್‌‌ವರ್ತ್   ಕನ್ನಡಕ್ಕೆ: ಸಿ. ಪಿ. ರವಿಕುಮಾರ್   ಕುಣಿವುದೆನ್ನ ಮನ ಗರಿಗೆದರಿ ಕಂಡಾಗ ಕಾಮನಬಿಲ್ಲು ಬಾನಲ್ಲಿ! ಬಾಲ್ಯದಲ್ಲಿ ಹೇಗೆ ಚಿಮ್ಮುತ್ತಿತ್ತೋ ಸೋಜಿಗದ ಹೊನಲು ಹಾಗೇ ಹೊಮ್ಮುವುದು ಮಾನವನಾಗಿ ಬೆಳೆದು ನಿಂತಾಗಲೂ ಚಿಮ್ಮುತ್ತಿರಲಿ ಹೀಗೆಯೇ ಮುಂದೆಯೂ! ಇಲ್ಲದಿರೆ ನನಗೆ ಕೊಟ್ಟುಬಿಡು ಸಾವು! ಮಗುವಲ್ಲವೇ ಮಾನವನ ಜನಕ: ಬೇಡಿಕೊಳ್ಳುವೆ ದೈವದಲ್ಲಿ ನಾನನಕ! ಉರುಳುತ್ತ ಹೋದಂತೆ ನನ್ನ ದಿನಗಳು ಪರಸ್ಪರ ಸಹಜಭಕ್ತಿಯಿಂದ ಬೆಸೆದುಕೊಂಡಿರಲೆಂಬ ವರ!

ಅವಳ ಹಾಡು

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ವಿಲಿಯಂ ವರ್ಡ್ಸ್ ವರ್ತ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನೋಡಲ್ಲಿ! ಕಾಣಿಸಿತೆ? ಹೆಣ್ಣುಮಗಳೊಬ್ಬಳು, ಮೇಡುಗಳ ಮೇಲಿರುವ ಹೊಲದಲ್ಲಿ ಒಬ್ಬಳೇ ಹಾಡುತ್ತ ಏನೋ ತನ್ನ ಪಾಡಿಗೆ ತಾನೇ, ಕಡಿಯುತ್ತ ಪೈರನ್ನು, ಕಟ್ಟುತ್ತ ತೆನೆ! ನಿಲ್ಲು ಒಂದೆರಡು ಕ್ಷಣ! ಕೇಳಿಸಿಕೋ! ಏನವಳು ಸೊಲ್ಲೆತ್ತಿ ಹಾಡುತಿಹ ದುಃಖಗೀತೆ? ಎಲ್ಲೆಡೆಗೆ ಹರಡುತಿದೆ, ಕಣಿವೆಯೊಳು ತುಂಬುತಿದೆ ಮೆಲ್ಲಮೆಲ್ಲನೆ ಅವಳ ಗಾನದೊರತೆ ಮರಳುಗಾಡಿನಲೊಬ್ಬ ಬಸವಳಿದ ಯಾತ್ರಿಕನು ನೆರಳನ್ನು ಕಂಡು ಮೈಚಾಚಿ ಮಲಗಿರಲು ಕೊರಳೆತ್ತಿ ಹಾಡಿ ಕಾಜಾಣವೊಂದು ತರುವ ಸುಖವನ್ನೂ ಮೀರಿಸುವ ಹಾಡು ಯಾವ ಕೋಗಿಲೆ ಕೂಡಾ ಕುಹೂ ಕೂಹೂ ಎನ್ನುತ್ತ ನವವಸಂತನು ಬಂದ ಸಂಭ್ರಮಕ್ಕೆ ದಿವ್ಯಕಂಠದಿ ಹೀಗೆ ಹಾಡಿರಲು ಸಾಧ್ಯವೇ ಭಾವಪೂರ್ಣತೆಯಿಂದ ಇವಳು ಹಾಡಿದಂತೆ ನಾನರಿಯೆ ಇವಳಾವ ಹಾಡು ಹಾಡುತ್ತಿಹಳೋ ಮನವ ಕಲಕುತ್ತಿದೆ ಇವಳ ಆರ್ತಗಾನ ನೆನೆದು ಹಾಡುವಳೇನೋ ಹಳೆಯ ಕತೆ ಯಾವುದೋ ರಣರಂಗದಲ್ಲೆಂದೋ ನಡೆದ ಯುದ್ಧ ಇವಳದೇ ಬಾಳಿನಲಿ ನಡೆದಿರುವ ಯಾವುದೋ ನೋವಿಂದು ಹಾಡಾಗಿ ಹರಿಯುತಿಹುದೇ? ನಾವೆ ಮುಳುಗಿರಬಹುದು, ಇನಿಯ ಮುನಿದಿರಬಹುದು, ಸಾವುನೋವಿನ ನೆನಪು ಕಣ್ಣಲ್ಲಿ ತುಳುಕಿತೇ? ಕಾಡುತ್ತಿರುವ ನೋವು ಯಾವುದಾದರೂ ಇರಲಿ ಹಾಡುತ್ತಿಹಳು ಇವಳು ಕೊನೆಯಿಲ್ಲದಂತೆ ನಡುಬಗ್ಗಿಸಿ ಕೈಯಲ್ಲಿ ಹಿಡಿದು ಕುಡುಗೋಲನ್ನು ದುಡಿಯುತ್ತ ಹೊಲದಲ್ಲಿ ಜೊತೆಗಾರರಿಲ್ಲದೆ...

ಡೇರೆ ಹೂಗಳು

ಇಮೇಜ್
ಕವಿತೆ ಓದುವ ಮುನ್ನ ...  ವಿಲಿಯಂ ವರ್ಡ್ಸ್ ವರ್ತ್ ಒಬ್ಬ ನಿಸರ್ಗಪ್ರಿಯ ಕವಿ. ಪ್ರಕೃತಿಯ ದೃಶ್ಯದಲ್ಲಿ ಅನಾದೃಶವಾದ ದರ್ಶನವನ್ನು ಕಂಡುಕೊಳ್ಳುವುದು ರೊಮ್ಯಾಂಟಿಕ್ ಕವಿಗಳ ಪ್ರಥೆ. ಕನ್ನಡದಲ್ಲಿ ರೊಮ್ಯಾಂಟಿಕ್ ಕಾವ್ಯ ಮಾರ್ಗದಲ್ಲಿ ಬರೆದ ಕುವೆಂಪು ಬೆಳ್ಳಕ್ಕಿಗಳ ಸಾಲನ್ನು ನೋಡಿ ಅದರಲ್ಲಿ ದೇವರ ರುಜುವನ್ನು ಕಾಣುತ್ತಾರೆ. ವರ್ಡ್ಸ್ ವರ್ತ್ ಕವಿಯ ಡ್ಯಾಫೊಡಿಲ್ಸ್ ಕವಿತೆಯನ್ನು ಮಕ್ಕಳ ಪಠ್ಯಪುಸ್ತಕದಲ್ಲಿ ಸೇರಿಸುವುದು ಸಾಮಾನ್ಯ. ಡ್ಯಾಫೊಡಿಲ್ಸ್ ಎಂದರೆ ಡೇರೆ ಹೂವಲ್ಲ - ಆದರೆ ಅನುವಾದದ ಅನುಕೂಲಕ್ಕೆ ನಾನು ಅದನ್ನು ಡೇರೆ ಹೂವು ಎಂದು ಭಾವಿಸಿದ್ದೇನೆ. ಈ ಕವಿತೆಯಲ್ಲಿ ಕವಿ ನಿಸರ್ಗದ ಸುಂದರ ಸೃಷ್ಟಿ ನಮಗೆ ಹೇಗೆ ಸಾಂತ್ವನ ನೀಡಬಲ್ಲದು ಎಂಬುದನ್ನು ಕುರಿತಾಗಿ ಬರೆದಿದ್ದಾನೆ. ಸೋಷಿಯಲ್ ಮೀಡಿಯಾ ಬಳಸುವ ಎಲ್ಲರೂ ಆಗಾಗ ತಮಗೆ ಕಂಡ ಯಾವುದಾದರೂ ಪ್ರಾಣಿ, ಹೂವು, ಬೆಟ್ಟ, ಗುಡ್ಡ ಮೊದಲಾದ ನೈಸರ್ಗಿಕ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವರ್ಡ್ಸ್ ವರ್ತ್ ಕಾಲದಲ್ಲಿ ಹೀಗೆ ಚಿತ್ರಗಳನ್ನು ತೆಗೆಯುವುದಾಗಲಿ, ಬೇರೆಯವರೊಂದಿಗೆ ಹಂಚಿಕೊಳ್ಳುವುದಾಗಲಿ ಸಾಧ್ಯವಿರಲಿಲ್ಲ! ತಾನು ಕಂಡ ಸುಂದರ ದೃಶ್ಯವನ್ನು ತನ್ನ ನೆನಪಿನ ಕೋಶದಲ್ಲಿ ಹಿಡಿದಿಟ್ಟುಕೊಳ್ಳುವುದು ಮಾತ್ರ ಸಾಧ್ಯವಾಗಿತ್ತು. ಏಕಾಂತದಲ್ಲಿ ಖಾಲಿತನವನ್ನು ಅನುಭವಿಸುವಾಗ ಇಂಥ ದೃಶ್ಯಗಳೇ ನೆರವಿಗೆ ಬರುತ್ತವೆ ಎಂದು ವರ್ಡ್ಸ್ ವರ್ತ್ ಹೇಳುತ್ತಾನೆ. ಇದೇ ವರ್ಡ್ಸ್ ವರ್ತ್ "ದ ವರ್ಲ್ಡ...