ಗಾಂಧೀಜಿ, ಭಗವದ್ಗೀತೆ ಮತ್ತು ಬ್ರಾಹ್ಮಣರು
ಸಿ ಪಿ ರವಿಕುಮಾರ್ ಭಗವದ್ಗೀತೆಯನ್ನು ಕುರಿತು ವಿವಾದಿತ ವ್ಯಕ್ತಿ ಶ್ರೀ ಕೆ. ಎಸ್. ಭಗವಾನ್ ಆಗಾಗ ಹೇಳಿಕೆಗಳನ್ನು ಕೊಡುವುದನ್ನು ನಾವು ಕೇಳುತ್ತೇವೆ. ಹಾಗೇ ಬ್ರಾಹ್ಮಣವರ್ಗವನ್ನು ಕುರಿತು ಅವರು ಮತ್ತು ಇನ್ನೂ ಅನೇಕ ಸಾಹಿತಿಗಳು ಆಕ್ರೋಶ ವ್ಯಕ್ತ ಪಡಿಸುವುದನ್ನೂ ಪತ್ರಿಕೆಗಳಲ್ಲಿ ಆಗಾಗ ಓದುತ್ತೇವೆ. ಭಗವದ್ಗೀತೆಯನ್ನು ಕುರಿತು ಮತ್ತು ಬ್ರಾಹ್ಮಣ್ಯವನ್ನು ಕುರಿತು ಗಾಂಧೀಜಿ ಏನು ಹೇಳುತ್ತಿದ್ದರು? ಇದನ್ನು ತಿಳಿಯುವ ಕುತೂಹಲದಿಂದ ನಾನು http://www.mkgandhi.org/ ವೆಬ್ ತಾಣದಲ್ಲಿ ಹುಡುಕಿದೆ. ಗಾಂಧೀಜಿಯವರ ಬರವಣಿಗೆಗಳಿಂದ ಆಯ್ದ ಭಾಗಗಳನ್ನು ಅವರು ಅಚ್ಚುಕಟ್ಟಾಗಿ ವಿಂಗಡಿಸಿದ್ದಾರೆ. ಈ ಎರಡೂ ವಿವಾದಿತ ವಿಷಯಗಳನ್ನು ಕುರಿತ ಗಾಂಧೀಜಿಯವರ ಮಾತುಗಳನ್ನು ನಾನು ಅನುವಾದಿಸಿ ಕೆಳಗೆ ಕೊಡುತ್ತಿದ್ದೇನೆ. ಇದನ್ನು ಓದುತ್ತಿದ್ದಾಗ ಕೆ. ಎಸ್. ಭಗವಾನ್ ನಂಥವರು ಗಾಂಧೀಜಿಯ ಕಾಲದಲ್ಲೂ ಇದ್ದಿರಬಹುದು ಎನ್ನಿಸಿತು; ಮುಂದೆಯೂ ಇರುತ್ತಾರೆ. ಅವರಿಗೆ ಗಾಂಧೀಜಿಯ ಮಾತುಗಳು ಬೆಳಕು ನೀಡಲೆಂದು ಹಾರೈಸುತ್ತೇನೆ! ಭಗವದ್ಗೀತೆ ಕುರಿತು ಗಾಂಧಿ ಭಗವದ್ಗೀತೆಯು ನಂಬಿಕೆ ಇಲ್ಲದವರಿಗೆ ಅಲ್ಲವೇ ಅಲ್ಲ (T-೨-೩೧೨) ಭಗವದ್ಗೀತೆಯು ಬೆಳಕು ಮತ್ತು ಕತ್ತಲೆಗಳ ಶಕ್ತಿಗಳನ್ನು ಪ್ರತ್ಯೇಕಗೊಳಿಸಿ ನೋಡುತ್ತದೆ ಮತ್ತು ಅವುಗಳ ನಡುವಿನ ಅಸಾಂಗತ್ಯವನ್ನು ತೋರಿಸುತ್ತದೆ (MM...