ಚಾರ್ಲಿ ಚಾಪ್ಲಿನ್ ಪ್ರಸಂಗ
ಹೀಗಾಯಿತಂತೆ ಒಮ್ಮೆ, ಚಾರ್ಲಿ ಚಾಪ್ಲಿನ್ ರಂಗದ ಮೇಲೆ ಹೋಗಿ ಹೇಳಿದನಂತೆ ಒಂದು ಹಾಸ್ಯಪ್ರಸಂಗ. ಸಭಿಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ಬಿದ್ದುಹೋಗುವ ಹಾಗೆ ಸೂರು ತಟ್ಟಿದರು ಚಪ್ಪಾಳೆ. ಕಾದು ಕೂತರು ಮುಂದಿನ ಹಾಸ್ಯಚಟಾಕಿಗೆ. ಹೇಳಿದ ಪ್ರಸಂಗವನ್ನೇ ಚಾರ್ಲಿ ಹೇಳಿದನು ಮತ್ತೊಮ್ಮೆ. ಕೇಳಿ ನಕ್ಕರು ಹಲವರು, ಕೆಲವರು ಮಾಡಿದರು ಕರತಾಡನ. ಅದೇ ಹಾಸ್ಯಪ್ರಸಂಗ ಮೂರನೇ ಸಲ ಪುನರುಚ್ಚರಿಸಿ ಕಾದನಂತೆ ಚಾರ್ಲಿ ಸಭಿಕರ ಪ್ರತಿಕ್ರಿಯೆಗೆ. ಮೌನವಾಗಿತ್ತು ಸಭಾಭವನ. ಒಬ್ಬರೂ ನಗಲಿಲ್ಲ. ಏನಿದು ಹುಡುಗಾಟ ಎಂಬಂತಿತ್ತು ಎಲ್ಲರ ಭಾವ. ಆಗ ಹೇಳಿದನಂತೆ ಚಾರ್ಲಿ: ನೋಡಿದಿರಾ! ಒಂದೇ ನಗೆಪ್ರಸಂಗಕ್ಕೆ ನಗುವುದಿಲ್ಲ ಯಾರೂ ಪದೇಪದೇ ಅಳುವಿರಿ ಹೇಳಿ ಹಾಗಾದರೆ ಏಕೆ ಮತ್ತೆ ಮತ್ತೆ ನೆನೆನೆನೆದು ಹಳೆಯ ಯಾವುದೋ ದುಃಖವನ್ನು ಬಗೆ ಬಗೆದು? - ಸಿ. ಪಿ. ರವಿಕುಮಾರ್ ಏಪ್ರಿಲ್ ೨೦, ೨೦೨೪