ಪೋಸ್ಟ್‌ಗಳು

Mother ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೊಂದಿಕೆ

ಇಮೇಜ್
 ಮೂಲ: ಡೊರೀನ್ ನಿ ಘ್ರಿಯೋಫಾ ಕನ್ನಡಕ್ಕೆ: ಸಿ ಪಿ ರವಿಕುಮಾರ್   ತಿಂಗಳಾನುಗಟ್ಟಲೆ ಕಲ್ಪಿಸಿಕೊಂಡೆ ಹೇಗಿರಬಹುದು ಎಂದು ನನ್ನ ತೊಗಲಿನ ಕೆಳಗೆ ಕೈಕಾಲುಗಳ ಗಂಟಿನಲ್ಲಿ ಕಾಣಿಸಿದ್ದು  ಹರಿದಾಡುವ ನೆರಳುಗಳು ಮಾತ್ರ. ಭಾಷಾಂತರಿಸಿ ಹೇಳಲು ಅಸಾಧ್ಯ: ಉಬ್ಬಿದ ಹೊಟ್ಟೆಯ ನಡುವೆ ಅಲ್ಲಲ್ಲಿ ವಿರಾಮಚಿಹ್ನೆಗಳ ಹಾಗೆ ಮಂಡಿ ಮೊಳಕಾಲು; ಗೋಲಿಯಂತೆ ಜಾರಿ ಹೋಗಿದ್ದೇನು ಅದು  ಬಿಗಿಯಾಗಿ ಕಟ್ಟಿದ ಮುಷ್ಟಿ ಇರಬಹುದೇ  ಅಥವಾ ಪೃಷ್ಠದ ಅಥವಾ ಪಾದದ ನಿಗೂಢ ಹೊರಳಾಟವೆ? ಆದರೆ ನಸುಕು ಹೊರಗೆ ತಂದಾಗ ನಿನ್ನನ್ನು ಕತ್ತಲಲೋಕದಿಂದ ಮೇಲೆತ್ತಿ  ಹಲವಾರು ತಿಂಗಳು ಪ್ರಯತ್ನಿಸಿದೆ ಚಿತ್ರದ ಹಲವು ಚೂರುಗಳನ್ನು ಒಟ್ಟುಗೂಡಿಸಲು : ನಿನ್ನ ಪಾದದ ಕಮಾನು  ನನ್ನ  ಅಂಗೈಯ ಹಳ್ಳದಲ್ಲಿ  ಹೊಂದಿಕೊಳ್ಳುವುದು ಯಥಾವತ್ತು ಮತ್ತು ನನ್ನ ಕುತ್ತಿಗೆಯ ಸಂದಿಯಲ್ಲಿ ನೀನು ನಿನ್ನ ತಲೆಯನ್ನು ತೂರಿಸಿಕೊಂಡು ಮಲಗುತ್ತಿ ಇದನ್ನೆಲ್ಲ ಕಂಡಾಗ ನನಗೆ ಉಂಟಾಯಿತು  ನಾವಿಬ್ಬರೂ ಹೊಂದಿಕೊಳ್ಳುತ್ತೇವೆ  ಹೇಳಿ ಮಾಡಿಸಿದಂತೆ ಎಂಬ ಜ್ಞಾನೋದಯ. ಅನಂತರ ನೀನು ಬೆಳೆದೆ, ಪುಟ್ಟ ಅಪರಿಚಿತ, ಮತ್ತು ನಿನ್ನನ್ನು ಅರಿಯಲು ನಾನು ಬೆಳೆದೆ.

ಹೂರಣದ ಹೋಳಿಗೆ

ಇಮೇಜ್
  ಮೂಲ: ಪಾದ್ರಾಗ್ ಡ್ಯಾಲಿ ಭಾವಾನುವಾದ: ಸಿ ಪಿ ರವಿಕುಮಾರ್ ನಾವು ಏಳುವ ಮುನ್ನವೇ ನೀನು  ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು. ಇಡೀ ಬೆಳಗ್ಗೆ  ನಾವು ನೋಡಿದೆವು ನೀನು ಕಣಕ ನಾದುವುದನ್ನು  ಅದರೊಂದಿಗೆ ಪಿಸುಗುಟ್ಟುತ್ತಾ ಮಾತಾಡುವುದನ್ನು. ನಾವು ಕೆಳಗೆ ಇಳಿದು ಬಂದಾಗ ಎಲ್ಲಿ  ನಿನ್ನ ಏಕಾಗ್ರತೆಗೆ ಭಂಗವಾದೀತೋ ಎಂದು ಮೆಲ್ಲನೆ ನಡೆದು ಬಂದೆವು. ನಂತರ ನೀನು ಹೂರಣ ತುಂಬಿದ ಉಂಡೆಗಳನ್ನು ಲಟ್ಟಿಸುವುದು ಕಂಡಿತು ಕಪ್ಪು ಕಲ್ಲಿನ ಮೇಲೆ ತೆಳ್ಳಗೆ. ಅಂಚು ಬರಬಾರದು,  ತೆಳ್ಳಗೆ ಇರಬೇಕು ಹರಿಯಬಾರದು, ನಾಜೂಕು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಸಿದ್ಧವಾಯಿತು. ತುಪ್ಪ, ಹಾಲು, ಸೀಕರಣೆ ಇತ್ಯಾದಿ ಮೊದಲೇ ತಯಾರಾಗಿ ಕಾದಿದ್ದವು. ನಿನ್ನ ಹೊಳೆಯುವ ಕಣ್ಣುಗಳ  ಬೆಳಕಿನಲ್ಲಿ ನಾವು ಮೌನವಾಗಿ ತಿನ್ನುತ್ತಾ ಕುಳಿತೆವು ಎಲ್ಲೋ ಮಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವಾಗ.

ನವವಧು

ಇಮೇಜ್
ಅಮ್ಮ ಮನೆಯ ನೆಲವನ್ನು ನೆನ್ನೆ ಸಗಣಿಯಿಂದ ಸಾರಿಸಿದ್ದಾಳೆ. ಇವತ್ತು ಮನೆಯ ಹೊಸಲಿಗೆ ಕೆಮ್ಮಣ್ಣು ಬಳಿಯುವ ಕೆಲಸ ಮಾಡುತ್ತಿದ್ದಾಳೆ. ನಾಳೆ ಮನೆಯ ಗೋಡೆಗೆ ಕೆರೆಯ ಮಣ್ಣನ್ನು ಸಾರಿಸುವ ಕೆಲಸ ಇಟ್ಟುಕೊಂಡಿದ್ದಾಳೆ.  ಮನೆಗೆ ಸೊಸೆಯನ್ನು ಕರೆತರಲು ತಯಾರಿ ನಡೆದಿದೆ. ಮಣ್ಣಿನ ಹಣತೆಗಳು ಅಟ್ಟದ ಡಬ್ಬದಿಂದ ಕೆಳಗಿಳಿದಿವೆ. ಅಮ್ಮನ ಕೆಲಸ ನೋಡುತ್ತಾ ನನ್ನಲ್ಲಿರುವ ಕವಿ ಜಾಗೃತನಾಗುತ್ತಾನೆ.  ಒಂದೆರಡು ಸಾಲುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. “ಸೊಸೆಯ ಸ್ವಾಗತಕ್ಕೆ ಅಮ್ಮ ಮಾಡುತ್ತಿದ್ದಾಳೆ ಮನೆಯ ಗತಕಾಲಕ್ಕೆ ಸಾರಣೆ, ವರ್ತಮಾನಕ್ಕೆ ಲೇಪನ ಮತ್ತು ಮನೆಯ ಉಜ್ವಲ ಭವಿಷ್ಯಕ್ಕಾಗಿ ಹಣತೆಗಳ ಪ್ರಕ್ಷಾಲನ”. ಎಷ್ಟೋ ವರ್ಷಗಳ ಹಿಂದೆ ಅಮ್ಮ ಇದೇ ಮನೆಗೆ ಕಾಲಿಟ್ಟಳು. ಅವಳ ಅತ್ತೆ ಅವಳನ್ನು ಬರಮಾಡಿಕೊಳ್ಳಲು ಹೀಗೇ ಮನೆಯನ್ನು ಸಾರಿಸಿ ಬಳಿದು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿದ್ದಳು. ಎಲ್ಲಿ ಹಜ್ಜೆ ಇಡಲೆಂದು ತೋರದೆ ಅಮ್ಮ ಅಪ್ಪನ ಹಿಂದೆ ಹಿಂದೆ ಒಳಗೊಳಗೇ ಕಂಪಿಸುತ್ತಾ ಹಗುರವಾಗಿ ನಡೆಯುತ್ತಿರುವ ಚಿತ್ರ ನನ್ನ ಮನೋಭಿತ್ತಿಯ ಮೇಲೆ ಮಸುಕಾಗಿ ಮೂಡಿತು. ಅವಳು ಹದಿನಾರು ವರ್ಷದ ಹುಡುಗಿ. ಮನೆಯ ಏಕಮಾತ್ರ ಸೊಸೆ. ಇಡೀ ಮನೆಯ ಜವಾಬ್ದಾರಿಯನ್ನು ಅವಳೇ ಹೊರಬೇಕು. ಅದೆಷ್ಟು ಹೊಸ ಕೆಲಸಗಳನ್ನು ಕಲಿಯಬೇಕು, ಹೊಸ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು! ಅವಳು ಒಳಗೊಳಗೇ ಕಂಪಿಸಿದ್ದರೆ ಅದರಲ್ಲಿ ಏನು ಆಶ್ಚರ್ಯವಿದೆ? ಅವಳು ಇವನ್ನೆಲ್ಲ ಸಂಭಾಳಿಸಿಕೊಂಡು ಸಾಗಬಲ್...

ಅಮ್ಮನ ಸೀಕ್ರೆಟ್

ಇಮೇಜ್
ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು! ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು! ಪರಿಮಳ ಬರುತಿದೆ ಘಮಘಮ ಎಂದು ಇರಲಾಗದು ಬರಿಹೊಟ್ಟೆಯೊಳಿನ್ನು ಕೈತೊಳೆದಾಗಿದೆ, ಬೇಕಾದರೆ ನೋಡು ಹೇಳುವೆನೇ ಎಂದಾದರೂ ಸುಳ್ಳನ್ನು! ಗುಂಡಗೆ ಕೆಂಪಗೆ ಗರಿಗರಿ ರೊಟ್ಟಿ ಮೇಲ್ಗಡೆ ಕರಗುವ ತುಪ್ಪದ ಗಟ್ಟಿ ಮುರಿಯಿತೇ ಅಯ್ಯೋ ಪರವಾಗಿಲ್ಲ ಮುರಿದೇ ಬಾಯಿಗೆ ಹಾಕುವೆನಲ್ಲ! ರುಚಿರುಚಿಯಾಗಿದೆ ಬಿಸಿಬಿಸಿ ರೊಟ್ಟಿ ಇದು ಒನ್ ಹಂಡ್ರೆಡ್ ಪರ್ಸೆಂಟ್ ಬಿಟ್ಟಿ! ಏನಮ್ಮಾ ಹಾಕಿದೆ ಈ ಅದ್ಭುತ ರುಚಿಗೆ ಹೇಳಿಬಿಡಮ್ಮಾ ಸೀಕ್ರೆಟ್ ನನಗೆ! ಎಂದರೆ ನಗುವಳು ಗಲ್ಲವ ಹಿಂಡುತ್ತಾ ಪ್ರೀತಿ ಎಂಬುದೇ ಸೀಕ್ರೆಟ್ ಪುಟ್ಟಾ! ಇರುವುದು ಅಮ್ಮಂದಿರ ಬಳಿ ಮಾತ್ರ ಎಲ್ಲಾಕಡೆಗೂ ಸಿಕ್ಕಿಬಿಡುತ್ತಾ! ಕಾವಲಿ ಮೇಲೆ ಕಾದಿದೆ ಕೆಂಪಗೆ ಬಿಸಿಬಿಸಿ ರೊಟ್ಟಿ ನನಗೂ ಬೇಕು ಕಾವಲಿ ಹಾಗೆ ಕಾದಿದೆ ಹೊಟ್ಟೆ ಬಿಸಿಬಿಸಿ ರೊಟ್ಟಿ ತಟ್ಟೆಗೆ ಹಾಕು

ಚೇಳಿನ ರಾತ್ರಿ

ಇಮೇಜ್
ಮೂಲ: ನಿಸ್ಸೀಮ್ ಎಳಿಕಿಯೆಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನೆನಪಿದೆ ನನಗೆ ನನ್ನ ತಾಯಿಯನ್ನು ಚೇಳು ಕಚ್ಚಿದ ರಾತ್ರಿ. ಹತ್ತು ಗಂಟೆ ನಿರಂತರ ಸುರಿದ ಮಳೆಗೆ ಬೇಸತ್ತು ಅಕ್ಕಿಯ ಚೀಲದ ಕೆಳಗೆ ಬಂದು ಸೇರಿಕೊಂಡಿತ್ತು. ಕೋಣೆಯ ಕತ್ತಲಿನಲ್ಲಿ  ತನ್ನ ಪೈಶಾಚಿಕ ಕೊಂಡಿಯಿಂದ ನೀಡಿ ವಿಷದ ಚುಚ್ಚುಮದ್ದು ಮತ್ತೊಮ್ಮೆ ಮಳೆಯನ್ನು ಎದುರಿಸಲು ನಿರ್ಧರಿಸಿತು. ನೊಣಗಳ ಹಿಂಡಿನ ಹಾಗೆ ಬಂದು ಸೇರಿದ ರೈತಾಪಿ ಜನ ಗುಂಯ್ ಗುಟ್ಟಿದರು ನೂರಾರು ಸಲ ದೇವರ ಹೆಸರನ್ನ ದುಷ್ಟಶಕ್ತಿಯನ್ನು ಮಾಡಲು ಶಮನ. ಕೈಯಲ್ಲಿ ಹಿಡಿದು ಲಾಂದ್ರ ಮೋಂಬತ್ತಿ ಮಣ್ಣಿನ ಗೋಡೆಯ ಮೇಲೆ ನಡೆದಾಡುತ್ತಿರಲು ಚೇಳುನೆರಳು  ಹೋದರು ಅದನ್ನು ಬೆಂಬತ್ತಿ ಯಾರಿಗಾದರೂ ಸಿಕ್ಕಿದ್ದರೆ ಕೇಳು. ಬಂದವರು ಲೊಚಗುಟ್ಟಿದರು. ಏನೇನೋ ಕತೆ ಕಟ್ಟಿದರು. ಚೇಳು ಓಡಾಡಿದಾಗೆಲ್ಲನಿನ್ನ ರಕ್ತದಲ್ಲೂ  ವಿಷ ಹರಡುವುದು ಎಂದರು. ಒಂದು ಕಡೆ ತೆಪ್ಪಗೆ ಬಿದ್ದಿದ್ದರೆ ಸಾಕು ಹಾಳಾದ್ದು! ನಿನ್ನ ಪೂರ್ವಜನ್ಮದ ಕರ್ಮ! ಸುಟ್ಟುಹೋಗಲಿ ಇಂದು! ಮುಂದಿನ ಜನ್ಮದ ನೋವು ಕಡಿಮೆಯಾಗುವುದು ಬಿಡು! ಜಗತ್ತಿನಲ್ಲಿದೆ ಕೆಟ್ಟದ್ದು ಒಳ್ಳೆಯದು ಎರಡೂ, ಕೆಟ್ಟದ್ದು ಒಂದಿಷ್ಟು ನಾಶವಾದೀತು!  ವಿಷವು ನಿನ್ನ ದೇಹವನ್ನು ಮಾಡಲಿ ಶುದ್ಧ, ನಶಿಸಲಿ ಮೋಹ,ಮತ್ಸರ,ಲೋಭ,ಕಾಮಕ್ರೋಧ! ಹೀಗೆ ಮಾತಾಡುತ್ತ ಕುಳಿತರು ಅಮ್ಮನ ಸುತ್ತ, ಅರಿವಿನಿಂದ ಶಾಂತವಾದಂತಿತ್ತು ಅವರ ಚಿತ್ತ. ಇನ್ನಷ್ಟು ಮೋಂಬತ್ತಿ, ಇನ್ನಷ್ಟು ಲಾಂದ್ರಗಳು, ಇನ್ನಷ...

ಜೋಗುಳ

ಇಮೇಜ್
 ಮೂಲ ಕವಿತೆ: ಸರೋಜಿನಿ ನಾಯ್ಡು ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಜೀರಿಗೆಯ ಹೊಲದಿಂದ ಬತ್ತದ ಗದ್ದೆಯ ಹಾದು ಸುಳಿದಾಡಿ ತಾವರೆಕೆರೆ ಮೇಲೆ  ತಂದಿರುವೆ ನಿನಗೆಂದು ಇಬ್ಬನಿ ಹೊಳೆಯುವ ಒಂದು ಸುಂದರ ಕನಸುಗಳ ಸರಮಾಲೆ ಕಣ್ಮುಚ್ಚು ನನ್ನೊಲವೇ ಕಾಣಿಸುವುದು ನೋಡು  ಕಾಡಿನಲಿ ನರ್ತಿಸುವ ಮಿಂಚುಳ್ಳಿ ಕದ್ದು ತಂದಿರುವೆನು ನಿದ್ರಿಸಿದರೆ ಕೊಡುವೆ ಕನಸುಗಳ ಸರಮಾಲೆ ಕೈಯಲ್ಲಿ ಕಣ್ಮುಚ್ಚು ನನ್ನೊಲವೇ ತಾರೆಗಳು ಮಿನುಗುತಿವೆ ಚಂದಿರಮುಖದ ಸುತ್ತಾಮುತ್ತಾ ನಿನ್ನ ಕಣ್ಣಿನ ಮೇಲೆ ಕನಸುಗಳ ಸರಮಾಲೆ ಏರಿಸಿ ನಾನಿಡುವೆ ಹೂಮುತ್ತ

ಏರ್ ಪೋರ್ಟ್ ಬಾರಿನಲ್ಲಿ

ಇಮೇಜ್
  ಏರ್ ಪೋರ್ಟ್ ಬಾರಿನಲ್ಲಿ ಅಮ್ಮನಿಗೆ ನಾನು ಚಿಂತಿಸಬೇಡ ಎಂದು ಹೇಳುತ್ತೇನೆ. ಸ್ಯಾನ್ ಆಂಡ್ರಿಯಾಸ್ ಫಾಲ್ಟ್ ಒಳಗೆ ಯಾರೂ ಜಾರಿ ಬಿದ್ದಿಲ್ಲ ಅಮ್ಮಾ. ಆದರೆ ಅವಳು ಒಣಗಿದ ಕಣ್ಣುಗಳನ್ನು ಒರೆಸಿಕೊಳ್ಳುವಾಗ ನನಗೆ ನೆನಪಾಗುತ್ತವೆ ಹಳೆಯ ಚಲಚ್ಚಿತ್ರಗಳು, ಅಲ್ಲಿ ಭೂಮಿ ಬಾಯಿ ಬಿಡುತ್ತಿತ್ತಲ್ಲ. ಈ ಚಿತ್ರಗಳಲ್ಲಿ ಕಡ್ಡಾಯವಾಗಿ ಇರುತ್ತಿದ್ದರು ಒಬ್ಬ ಹೊಂಗೂದಲಿನ ಕೀಟ ಶಾಸ್ತ್ರಜ್ಞೆ, ನಾಲ್ವರು ಖದೀಮ ನಿಧಿಶೋಧಕರು, ಮತ್ತು ಕಾಡಿನಲ್ಲಾದರೂ ಚರ್ಮದ ಜ್ಯಾಕೆಟ್ ತೆಗೆಯಬೇಕೆಂದು ತಿಳಿಯದ ಒಬ್ಬ ಸ್ಫುರದ್ರೂಪಿ ಪೈಲಟ್. ಇಷ್ಟಾದರೂ ಅವನು ಮತ್ತು ಚೆಲುವೆ ಕೀಟಗಿತ್ತಿ ಇಬ್ಬರು ಮಾತ್ರ ಬದುಕುಳಿಯುವರು ಮಹಾಭೂಕಂಪನದಲ್ಲಿ, ಏಕೆಂದರೆ ಅವರ ಯೋಜನೆ ಏನಿತ್ತಪ್ಪ ಅಂದರೆ ತಮ್ಮ ಊರಿಗೆ ಮರಳಿ ಅವನ ಅಪ್ಪ ಅಮ್ಮಂದಿರ ಹತ್ತಿರ ಮನೆ ಹೂಡುವುದು. ಅದೇ ಆ ಖದೀಮರ ಹುನ್ನಾರ ಏನಿತ್ತು ಅಂದರೆ ಚಿನ್ನ ಮತ್ತು ದಂತ ಕದ್ದು ಲಾಸ್ ಏಂಜಲೀಸ್ ನಗರದಲ್ಲಿ ಮನೆ ಮಾಡಿಕೊಂಡು ತಮ್ಮ ಅಮ್ಮಂದಿರಿಗೆ ಎಂದೋ ವರ್ಷದಲ್ಲಿ ಒಮ್ಮೆ ಫೋನ್ ಮಾಡುವುದು ಮತ್ತು ಅಮ್ಮನ ಮನೆಗೆ ಎಂದೂ ಮರಳದೇ ಇರುವುದು, ಮರಳಿದರೂ ಒಮ್ಮೆ ಒಂದೆರಡು ದಿನಗಳಿಗೆ ಮಾತ್ರ. ಮೂಲ ಕವಿತೆ : ರಾನ್ ಕೋರ್ಟ್ಜೆ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್

ತಾಯಿ

ಇಮೇಜ್
 ತಾಯಿ ಟರ್ಕಿಯ ಭೂಕಂಪದ ನಾಲ್ಕು ದಿವಸಗಳ ತರುವಾಯ ಸಿಕ್ಕಿದ್ದಾರೆ ಜೀವಂತವಾಗಿ ಕಲ್ಲುಮಣ್ಣುಗಳ ತಳದಲ್ಲಿ ಹೊಕ್ಕಳುಬಳ್ಳಿಗೆ ಅಂಟಿಕೊಂಡಿದ್ದ ನವಜಾತ ಶಿಶು ಮತ್ತು ಪಕ್ಕದಲ್ಲಿ ಇನ್ನೂ ಜೀವಕ್ಕೆ ಅಂಟಿಕೊಂಡಿದ್ದ  ಅದರ ತಾಯಿ. ಮೂಳೆ ಕೊರೆವ ಚಳಿಯಲ್ಲಿ ಹೇಗೆ ಕಾಪಾಡಿದಳೊ ಎಳೆಯ ಬಾಳನ್ನು! ಎದೆಗವಚಿಕೊಂಡು, ಕತ್ತಲೆಯ ಕಂಬಳಿಯನ್ನೇ ಸೀಳಿ ಹೊದ್ದಿಸಿಕೊಂಡು! ತನ್ನೆದೆಯ ಹಾಲೇ ಅಮೃತವೆಂದು ಸೋಲನ್ನೊಪ್ಪದೆ ಹಾಡುತ್ತಾ ಕ್ಷೀಣದನಿಯಲ್ಲಿ ಹಳ್ಳುಳ್ಳಾಯಿ. ಎಲ್ಲಿದ್ದಾನೋ ಮಗುವಿನ ತಂದೆ! ಹುಡುಕುತ್ತಿರುವನೋ ಇಲ್ಲ ತತ್ತರಿಸಿಹೋದನೋ ವಿಧಿಯ ವಜ್ರಾಘಾತಕ್ಕೆ? ತಲ್ಲಣಿಸಿ ಅಳಲು ತಾಯಿಗೆ ಪುರುಸೊತ್ತೆಲ್ಲಿ! ಕರುಳಿನ ಬಳ್ಳಿಯನ್ನು ಕಾಪಾಡುವ ಹೊರೆಹೊತ್ತ ಏಕಧ್ಯೇಯಿ. ಕಪ್ಪುತೆರೆ ಆವರಿಸುತ್ತಿದೆ ಕಣ್ಮುಂದೆ, ನಿದ್ರೆಯ ಸುಖದ ಸುಪ್ಪತ್ತಿಗೆಯು ಕರೆಯುತ್ತಿದೆ, ಆದರೆ ಕಣ್ಮುಚ್ಚಲು ಅಳುಕು! ತಪ್ಪಿ ಕಣ್ತೆರೆಯದೇ ಹೋದರೆ ಏನಾದೀತು ಇದರ ಗತಿ! ಅಪ್ಪಿಕೊಂಡು ನನ್ನನ್ನೇ ನಂಬಿಕೊಂಡಿದೆ ಬಡಪಾಯಿ! ದೂರದಲ್ಲೆಲ್ಲೋ ಕುಟ್ಟಿದ ಸದ್ದು ಕೇಳುತ್ತಿದೆ, ಅರೆಮರುಳೇ? ತೂರಿ ಬರುತ್ತಿದೆ ಎಲ್ಲಿಂದಲೋ ಬೆಳಕು, ಸ್ವರ್ಗದ ಬಾಗಿಲೇ? ಯಾರೋ ಮೇಲೆತ್ತಿಕೊಂಡರು, ಅಂತಿಮಯಾತ್ರೆಯೇ? ನೀರು ಕುಡಿಸುತ್ತಿದ್ದಾರೆ! 'ನೋಡಿ ಇಲ್ಲಿದೆ ಮಗುವಿನ ಬಾಯಿ.' ದಪ್ಪ ಕಾಂಕ್ರೀಟ್ ಕೆಳಗೇನು ಸಿಕ್ಕಿತೆಂಬ ಪ್ರಶ್ನೆಗೆ ಸಪ್ಪಗೆ ನಕ್ಕು ಉತ್ತರಿಸಿದ  ರಕ್ಷಣಾ ಸಿಬ್ಬಂದಿ:  ಇಪ್ಪತ್ತುಸಾವಿರಕ್ಕೂ ಸ...

ಅಮ್ಮ

ಮೂಲ ಇಂಗ್ಲಿಷ್ ಕವಿತೆ: ತಬೀಶ್ ಖೈರ್ (ಭಾರತ)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಪ್ಲಾಸ್ಟರ್ ಕಿತ್ತು ಉದುರುವ ಈ ಮನೆಯ ಮೆಟ್ಟಿಲುಗಳನ್ನು ಇಳಿಯುವಾಗ   ಅದರ ಕೋಣೆಗಳ ಆಪ್ಯಾಯಮಾನ ಖಾಲೀತನದಲ್ಲಿ ಸುತ್ತುವಾಗ  ಮರುಧ್ವನಿಸುತ್ತದೆ ಅಜ್ಜಿ,  ನಿನ್ನ  ಮೆಲ್ಲನೆಯ ಹೆಜ್ಜೆಯ ಸಪ್ಪಳ ಮತ್ತು ನಡುವಣ ಮೌನ.  ಥೇಟ್ ಹಾಗೇ, ಹೇಗೆ ಅನುರಣಿಸುತ್ತಿದ್ದವೋ ಬೇಸಗೆಯ ಮಧ್ಯಾಹ್ನಗಳಲ್ಲಿ  ಕೋಣೆಯ ಸುತ್ತಲೂ ತೊಯ್ಯಿಸಿದ ಖಸ್ ಪರದೆಗಳ  ನಡುವೆ  ಮಾವು ನಿಂಬೆಗಳ ತಂಪುಪಾನೀಯಗಳಿಂದ, ಕಲ್ಲಂಗಡಿ ಚೂರುಗಳಿಂದ  ಕಾದುವಾಗ ಬಿಸಿಲನ್ನ.  ನಿಧಾನವಾಗಿ ತೂರಾಡಿಕೊಂಡು ಓಡಾಡುತ್ತಾ ನೀನು ಗಮನಿಸುತ್ತೀಯೆ   ಪರದೆಗಳಲ್ಲಿ ಎಷ್ಟು ಕಡೆ ಹರಿದಿದೆ ಹೊಸದಾಗಿ,  ಬೇಸಗೆಯಿಂದ ಬಿಡುವು ಸಿಕ್ಕರೆ ತಾನೇ, ಯಾವಾಗ ಬಂದೀತೋ ಮುಂಗಾರು ಮಳೆ, ಯಾವಾಗ ಮಾಡುವೆನೋ ಹೊಲೆದು ಜೋಪಾನ.   ಕೀಲುನೋವಿನ ನಡುವೆಯೇ ನೀನು ಓಡಾಡುವೆ ಕೋಣೆಯಿಂದ ಕೋಣೆಗೆ, ಲೆಕ್ಕ ಹಾಕುತ್ತಾ ಉರುಳುವ ಸಂವತ್ಸರಗಳು ಎಲ್ಲೆಲ್ಲಿ ಎಷ್ಟೆಷ್ಟು ಹಾನಿ ಮಾಡಿವೆ, ಎಂದು ಭೂತವು ಕುಸಿದು ಬೀಳುತ್ತದೋ  ಮತ್ತು ಎಷ್ಟು ಕಾಲ ಬಾಳುತ್ತದೋ ವರ್ತಮಾನ ನಿನಗೆಂದೂ ಬೇಕಾಗದು ಕನ್ನಡಕ ಮನೆಯ ಸುತ್ತ ಓಡಾಡುವುದಕ್ಕೆ, ಮೊಮ್ಮಕ್ಕಳನ್ನು ದೂರದಿಂದ ಗುರುತಿಸಲಾರೆಯಾದರೂ,  ರವಿಕೆ  ತಳಕಂಪಳಕ ಧರಿಸಿದ್ದೆ ಒಮ್ಮೆ! ಬ...

ತಾಯಿಹಕ್ಕಿ

ಇಮೇಜ್
ಮೂಲ ಇಂಗ್ಲಿಷ್ ಕವಿತೆ - ವಾಲ್ಟರ್ ಡಿ ಲ ಮೇರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದೊಂದು ಪುಟ್ಟ ಕಥನಕವನ.  ನಿಸರ್ಗದಲ್ಲಿ ಅದೆಷ್ಟೋ ರಹಸ್ಯಗಳಿವೆ. ಮನುಷ್ಯನಿಗೆ ಪ್ರತಿಯೊಂದರ ಬಗ್ಗೆಯೂ ಕುತೂಹಲ. ಆದರೆ ಪಶುಪಕ್ಷಿಗಳಿಗೂ ತಮ್ಮ ಗೌಪ್ಯತೆಎಂಬುದಿದೆ. ಅದರ ಗೆರೆ ದಾಟಿದಾಗ ಕವಿಗೆ ಆದ ಅನುಭವ ಈ ಕವಿತೆಯಲ್ಲಿ ದಾಖಲಾಗಿದೆ.   ತಂಪಾದ ಎಲೆಗಳಿಗೆ ಕೆನ್ನೆಯನ್ನೊತ್ತಿ  ಇಣುಕಿದಾಗ ಪೊದೆಯಲ್ಲಿ ಕಂಡೆ ಒಂದು ರಹಸ್ಯ  ಪೊದೆಮರೆಯ ಗೂಡಿನಲ್ಲಿದ್ದೊಂದು ಹಕ್ಕಿ  ಕಣ್ತೆರೆದು ಸುಮ್ಮನೇ ನೋಡಿತು ನನ್ನತ್ತ  ವಿನಮ್ರ  ನೋಟದಲ್ಲಿ   ಧೈರ್ಯವೂ ಇತ್ತು  ಎದ್ದೆದ್ದು ಬೀಳುತಿತ್ತು ಅದರ ಕಂದು ಬಿಸಿ ಎದೆ  ತೆರೆದುಕೊಂಡು ಒಮ್ಮೆಲೇ ಚೂರಿಯಂಥ ಕೊಕ್ಕು  ಕೂಗು ಬಾಣ ಬಿಟ್ಟಹಾಗೆ ಏರಿಸಿ ಬಿಲ್ಲಿನ ಹೆದೆ ನಸುಕಿನಲ್ಲಿ ಕೇಳುವಂಥ ಗುಬ್ಬಿಯ ಚಿಲಿಪಿಲಿಯಲ್ಲ ಸ್ಫುಟವಾದ , ಉತ್ಕಟ, ಕೆರಳಿದೊಂದು ಕೂಗು    ಶಾಂತಸಂಜೆಯಲ್ಲಿ ಕರಗುವ ಕೂಜನವಲ್ಲ  ಒಮ್ಮೆಲೇ ಝಳಪಿಸಿದ ಹರಿತ ಕತ್ತಿಯಲುಗು  ಕಾಣಿಸಿತು ಅದರಲ್ಲಿ  ಸಾಹಸದ ಕಣ್ಣೀರು   ಹತಾಶೆಯಲ್ಲಿ ಹುಟ್ಟಿದ ಹರ್ಷ, ವಿಜಯೋನ್ಮಾದ! ಪೆಚ್ಚಾಗಿ ಹಿಮ್ಮೆಟ್ಟಿದೆ ಕೂಡಲೇ ನಾನು  ಪೆದ್ದುನಗೆಯೊಂದೇ ಸಾಧ್ಯವಾದ ಸಂವಾದ ...