ಪೋಸ್ಟ್‌ಗಳು

noodles ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಾಗಿ ನೂಡಲ್ಸ್

ಇಮೇಜ್
 ರಾಗಿ ನೂಡಲ್ - ಒಂದು ಹರಟೆ  ಸಿ. ಪಿ. ರವಿಕುಮಾರ್ ಈಚೆಗಿನ ಅತ್ಯದ್ಭುತ ಇನ್ನೋವೇಶನ್ ಏನೆಂದು ಯಾರಾದರೂ ಕೇಳಿದರೆ ನನ್ನ ಉತ್ತರ ಸಿದ್ಧವಾಗಿದೆ. ರಾಗಿ ಶ್ಯಾವಿಗೆ! ಇದುವರೆಗೂ ನೀವು ಟ್ರೈ ಮಾಡದೇ ಇದ್ದರೆ ಹೊಸವರ್ಷದಲ್ಲಿ ಮಾಡುವವರಾಗಿ ಮತ್ತು ತಿನ್ನುವವರಾಗಿ.  ಎಲ್ಲಾ ಜನಾನೂ ರಾಗಿ ತಿಂದರೆ ರಾಗಿ ಜನಾನುರಾಗಿಯಾಗದೇ ಇರುವುದೇ? ರಾಗ-ದ್ವೇಷ ಬೇಡ ಎಂದು ಮಕ್ಕಳಿಗೆ ಪಾಠ ಹೇಳಿಕೊಡುವರಲ್ಲಾ, ಅವರು ರಾಗಿ-ದ್ವೇಷವನ್ನೇಕೆ ಖಂಡಿಸುವುದಿಲ್ಲ? ರಾಗವೆಂದರೆ ಬಣ್ಣ. ರಾಗಿಗೆ ನಿಜವಾದ ಹೆಸರು ಕರಿ-ರಾಗಿ ಅಥವಾ ಕಪ್ಪು ಬಣ್ಣದ್ದು ಎಂದೇ ಎಂಬುದು ನನ್ನ ಊಹೆ. ಆದರೆ ರಾಗಿಗೆ ಕರಿಯ ಸಂಗಾತಿ ತಪ್ಪಿ ಸಾರಿನ ಸಾಂಗತ್ಯವೇ ಪ್ರಿಯವಾದಾಗ "ಕರಿ" ಬಿಟ್ಟುಹೋಗಿ ಬರೀ ರಾಗಿ ಉಳಿದಿರಬಹುದು. ರಾಗಿಯ ರಾಗವನ್ನು  ನೋಡಿಯೇ ಅದಕ್ಕೆ "ಬೈಬೈ" ರಾಗ ಹಾಡುವ ಬೈರಾಗಿಗಳು ಎಂದಾದರೂ ರಾಗಿ ಶ್ಯಾವಿಗೆಯ ರುಚಿಯನ್ನು ಸವಿದರೆ - ಅದರಲ್ಲೂ ನನ್ನ ಹೆಂಡತಿ ಕೆಂಪು-ಹಳದಿ-ಹಸಿರು ಕ್ಯಾಪ್ಸಿಕಮ್ ಇತ್ಯಾದಿ ಬೆರೆಸಿ ಮಾಡುವ ಶ್ಯಾವಿಗೆಯ ರುಚಿಯನ್ನು ಸವಿದರೆ - ಮ್ಯಾಗಿಯನ್ನು ಮರೆತು ರಾಗಿಯನ್ನೇ ಧ್ಯಾನಿಸಿಯಾರು.  ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಈ ಕೆಂಪು-ಹಸಿರು-ಹಳದಿಗಳ ವೈಭವ ನೋಡಿದವರಿಗೇ  ಗೊತ್ತು. ಮುದ್ದಣನು ಕರಿಮಣಿಯ ಸರದಲ್ಲಿ ಕೆಂಪು ಹವಳವನ್ನು ಕೋದರೆ ಚೆನ್ನವೆಂದು ಮನೋರಮೆಗೆ ತಿಳಿಹೇಳಲಿಲ್ಲವೇ? ಆಗ ಅವನು ತನ್ನ ಹೆಂಡತಿ ಮನೋರಮೆಗೆ ರಾಗಿ-ಶ್ಯಾವಿಗೆಯಲ...