ಪೋಸ್ಟ್‌ಗಳು

Father ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಟೆಲಿಫೋನ್

ಇಮೇಜ್
ಮೂಲ: ಮೆಲ್ ಮೆಕ್ ಮಾಒನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ೧ ಬೆಳ್ಳಗೆ, ಬೃಹದಾಕಾರ, ಆನೆಯೊಂದು ನಿಲ್ಲಬಹುದಾದಷ್ಟು ದೊಡ್ಡ ಸಂಖ್ಯೆಗಳುಳ್ಳ ಅಪ್ಪನ ಕಡೆಯ ಫೋನ್. ಅದನ್ನು ಅವನು ಬಳಸಿದ್ದು ಅಷ್ಟಕ್ಕಷ್ಟೇ ತಾನು ಮಾತಾಡಬೇಕಾದಾಗ ಮನೆಗೇ ಹೋಗಿ ಮಾತಾಡುವುದು ಅವನ ಪದ್ಧತಿ. ಯಾರೋ ಫೋನ್ ಮಾಡಿದಾಗ ಟಿವಿ ಪರದೆ ಮೇಲೆ ಕುದುರೆ ರೇಸ್ ನೋಡುತ್ತಾ ಕುಳಿತಿರುತ್ತಿದ್ದ.  ಅಥವಾ ಹೊರಗೆ ಹೊರಡಲು ನಡೆಸುತ್ತಿದ್ದ ಸಿದ್ಧತೆ. ಫ್ರಾನ್ಸ್ ನಲ್ಲಿ ಒಂದು ಸಂಜೆ  ಇದೇ ಫೋನ್ ಬಳಸಿ ಒಮ್ಮೆಲೇ ಕರೆ ಮಾಡಿದ ಸಾಯುವ ಮೂರು ದಿವಸಗಳ ಮುನ್ನ. ನಾನು ಬೇಸಗೆ ರಜಕ್ಕೆ ಬಂದಾಗ ಎಲ್ಲೆಲ್ಲಿ ಹೋಗಬಹುದು ಎಂದೆಲ್ಲಾ ಮಾತಾಡಿದ, ಬಚ್ಚಿಡಲಾಗದೆ ಉತ್ಸಾಹವನ್ನ. ಈಗ ಅದೇ ಫೋನಿನ ರಿಸೀವರ್ ಹಿಡಿದು ಕೇಳಿಸಿಕೊಂಡಾಗ: ಸ್ಮಶಾನ ಮೌನ. ಅವನು ಕೇಳಿಸಿಕೊಳ್ಳುತ್ತಿರಬಹುದೆಂಬ ಕಲ್ಪನಾಯಾನ.  ನಾನು ಕಲ್ಪಿಸಿಕೊಳ್ಳುತ್ತೇನೆ ಸಂಖ್ಯೆಗಳ ಸರಣಿ. ನೀವು ಕರೆ ಮಾಡಿದ ವ್ಯಕ್ತಿ ವ್ಯಾಪ್ತಿಯ ಹೊರಗಿದ್ದಾರೆ ಎನ್ನುತ್ತದೆ ಅಶರೀರವಾಣಿ. ೨ ಎರಡು ನಿಮಿಷಕ್ಕಿಂತಲೂ ಹೆಚ್ಚು ಮಾತಾಡುವುದಿದ್ದರೆ  ಪತ್ರ ಬರೆಯುವುದೇ ಸರಿ ಎಂದು ಸಿಡಿಮಿಡಿಗೊಳ್ಳುತ್ತಿದ್ದ. ನಾವು ಹದಿಹರೆಯದಲ್ಲಿದ್ದಾಗ ಅವನ ಸಿಡಿಮಿಡಿಗೆ ಹೆದರಿ ಜಗಳವೇತಕ್ಕೆ ವ್ಯರ್ಥ ಎಂದು ನಮ್ಮ ಫೋನ್ ಕರೆಗಳು  ಎಷ್ಟು ಬೇಕೋ ಅಷ್ಟು, ಸಂಕ್ಷಿಪ್ತ. ಈಗ ಅವನೊಂದಿಗೆ ಮಾತಾಡಬೇಕೆಂಬ ಹಂಬಲವಾದಾಗ ಟೆಲಿಪೋನ್ ಕಡೆಗೆ ದಿಟ್ಟಿಸಿ ನೋಡಿ...

ತೆಗೆದೆಸೆಯಿರಿ ಅಲಾರಂ ಗಡಿಯಾರ

ಇಮೇಜ್
 ತೆಗೆದೆಸೆಯಿರಿ ಅಲಾರಂ ಗಡಿಯಾರ ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಅನುವಾದ: ಸಿ ಪಿ ರವಿಕುಮಾರ್  ನನ್ನ ಅಪ್ಪನದು ಯಾವಾಗಲೂ ಒಂದೇ ಹಾಡು "ಯಾರು ಬೇಗ ಮಲಗಿ ಬೇಗ ಏಳುವರೋ ಅವರು ಆರೋಗ್ಯ ಹೊಂದುವರು, ಸಂಪತ್ತು ಗಳಿಸುವರು, ಜಾಣರಾಗುವರು." ರಾತ್ರಿ ಎಂಟಕ್ಕೆಲ್ಲ ದೀಪ ನಂದಿಸಿಬಿಡುತ್ತಿದ್ದರು  ನಮ್ಮ ಮನೆಯಲ್ಲಿ ಯಾವತ್ತೂ ಬೆಳಗ್ಗೆ ಎದ್ದಾಗ ಕಾಫಿ-ಉಪಾಹಾರದ  ಘಮಘಮ ಹರಡಿರುತ್ತಿತ್ತು.  ಈ ನಿಯಮವನ್ನು ಉದ್ದಕ್ಕೂ ಪಾಲಿಸುತ್ತಿದ್ದ ಅಪ್ಪ ಸತ್ತಾಗ ಅವನಿಗಿನ್ನೂ ಚಿಕ್ಕ ವಯಸ್ಸು, ಹಣ ಆಸ್ತಿ ಏನಿಲ್ಲ,ತುಸ್ಸು, ಮತ್ತು ಜಾಣ್ಮೆಯ ಲೆಕ್ಕಾಚಾರದಲ್ಲೂ ಕಮ್ಮಿ ಮಾರ್ಕ್ಸು. ಹೀಗಾಗಿ ನಾನು ಅವನ ಸಲಹೆಯನ್ನು ನಿರ್ಲಕ್ಷಿಸಿದ್ದೇನೆ. ತಡವಾಗಿ ಮಲಗಿ ತಡವಾಗಿ ಏಳುತ್ತೇನೆ. ಹಾಗೆಂದು ನಾನೇನೂ ಜಗತ್ತನ್ನೇ ಗೆದ್ದುಬಿಟ್ಟಿಲ್ಲ, ಆದರೆ ಪಾರಾಗಿರುವೆ ಅದೆಷ್ಟೋ ಟ್ರಾಫಿಕ್ ದಟ್ಟಣೆಗಳಿಂದ ಮತ್ತು ಸಾಧಾರಣವಾಗಿ ಜನರು ಜಾರಿ ಬೀಳುವ ಸಂದರ್ಭಗಳಿಂದ. ಹಾಗೂ ಪರಿಚಯ ಮಾಡಿಕೊಂಡಿದ್ದೇನೆ ಎಷ್ಟೋ ಜನ ವಿಚಿತ್ರ ಮತ್ತು ವಿಸ್ಮಯಕಾರಿ ವ್ಯಕ್ತಿಗಳನ್ನು. ಅವರಲ್ಲಿ ಒಬ್ಬ  ನಾನು. ನನ್ನ ಅಪ್ಪ ಎಂದೂ ಭೇಟಿಯಾಗದವನು.

ಫೋನ್ - ಅಂದು, ಇಂದು

 ನಾನು ಮೊದಲ ಸಲ ಅಮೆರಿಕಾಗೆ ಹೋದಾಗ ನಮ್ಮ ಮನೆಯಲ್ಲಿ ಫೋನ್ ಇರಲಿಲ್ಲ. ಆಗ ಫೋನ್ ಕನೆಕ್ಷನ್ ಸುಲಭವಾಗಿ ಸಿಕ್ಕುತ್ತಿರಲಿಲ್ಲ. ನಾಲ್ಕೈದು ಬೀದಿಗಳಲ್ಲಿ ಹುಡುಕಿದರೆ ಒಬ್ಬರ ಮನೆಯಲ್ಲಿ ಫೋನ್ ಇದ್ದರೆ ಹೆಚ್ಚು.   ನಾನು ನ್ಯೂಯಾರ್ಕ್ ತಲುಪಿದ್ದು ಸಂಜೆ. ನಮ್ಮನ್ನು ಕರೆದೊಯ್ಯಲು ಬಂದಿದ್ದ ದಿನೇಶ್ ನಮ್ಮನ್ನು ನೇರವಾಗಿ ಊಟಕ್ಕೆ ಕರೆದುಕೊಂಡು ಹೋಗಿ ನಂತರ ನಾವು ತಂಗಬೇಕಾಗಿದ್ದ ಹೋಟೆಲಿಗೆ ಕರೆದುಕೊಂಡು ಹೋಗಿ ಬಿಟ್ಟರು. ಆಗಲೇ ಕತ್ತಲಾಗಿತ್ತು.  ಆಯಾಸವಾದರೂ ನಿದ್ದೆ ಸರಿಯಾಗಿ ಬರಲಿಲ್ಲ.  ಹೊರಗೆ ಹಿಮಪಾತವಾಗುತ್ತಿತ್ತು. ಅದನ್ನು ಕಿಟಕಿಯ ಮೂಲಕ ನೋಡುತ್ತಾ ನಿಲ್ಲುವುದೇ ಒಂದು ಅಪೂರ್ವ ಅನುಭವ.  ಮರುದಿನ ಬೆಳಗ್ಗೆ  ನಾನು ಮತ್ತು ನನ್ನ ಸಹೋದ್ಯೋಗಿಗಳು ಪೋಸ್ಟ್ ಆಫೀಸ್ ಹುಡುಕಿಕೊಂಡು ಹೋಗಿ ಕ್ಷೇಮವಾಗಿ ತಲುಪಿದೆವೆಂದು ಟೆಲಿಗ್ರಾಮ್ ಕೊಟ್ಟು ಬಂದೆವು.  ಮುಂದೆ ಅಪಾರ್ಟ್ಮೆಂಟಿನಲ್ಲಿ ವಾಸ ಪ್ರಾರಂಭವಾದ ನಂತರ ಮನೆಗೆ ಪತ್ರ ಬರೆಯುವ ಸಂಪ್ರದಾಯ ಪ್ರಾರಂಭವಾಯಿತು.   ಬೆಂಗಳೂರಿನಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಕೃಷ್ಣಮೂರ್ತಿ ಎನ್ನುವವರ ಮನೆಯಲ್ಲಿ ಫೋನ್ ಇತ್ತು. ಬಹುಶಃ ಅದು ಅವರ ಆಫೀಸ್ ನೀಡಿದ ಫೋನ್. ಅವರ  ಬಾಡಿಗೆ ಮನೆ ಬಹಳ ಚಿಕ್ಕದು. 30x30 ಸೈಟಿನಲ್ಲಿ ಮಾಲೀಕ ಎರಡು ಮನೆ ಕಟ್ಟಿಸಿ ಬಾಡಿಗೆ ಕೊಟ್ಟಿದ್ದ. ಮನೆಯಲ್ಲಿ ಒಂದು ಅಡುಗೆ ಮನೆ, ಒಂದು ಕೋಣೆ ಮತ್ತು ಹಾಲ್ ಎಂದು ಕರೆಸಿಕೊಳ್ಳುವ...

ಪಾರ್ಕರ್ ಪೆನ್

ಕೊನೆಗೂ ನಾನು ಧೈರ್ಯ ಮಾಡಿ ಮೇಜಿನ ಸೆಳೆಖಾನೆಯನ್ನು ಧೈರ್ಯ ಮಾಡಿ ಎಳೆದೆ. ಪಾರ್ಕರ್ ಪೆನ್ ತೊಟ್ಟಿಲಲ್ಲಿ ಮಲಗಿದ ಮುಗ್ಧ ಮಗು ನನ್ನನ್ನು ಎತ್ತಿಕೋ ಎಂದು ಕೇಳಿಕೊಳ್ಳುವಂತೆ ನಕ್ಕಿತು. ನ ಮ್ಮ ತಂದೆಯ ಹತ್ತಿರ ಒಂದು ಪಾರ್ಕರ್ ಪೆನ್ ಇತ್ತು. ಅದರ ನಿಬ್ ಚಿನ್ನದಿಂದ ಮಾಡಿದ್ದಾರೆಂದು ನಮ್ಮ ತಾಯಿ ನಮಗೆ ಆಗಾಗ ಹೇಳುತ್ತಿದ್ದರು. ಆಗ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ ಎಂದು ನೆನಪು. ಆಗೆಲ್ಲ ಮನೆಯಲ್ಲಿ ಒಬ್ಬರಿಗೆ ಒಂದರಂತೆ ಪೆನ್ ಇರುತ್ತಿತ್ತು. ಬಾಲ್ ಪಾಯಿಂಟ್ ಪೆನ್ ಇನ್ನೂ ಅಷ್ಟೊಂದು ರೂಢಿಗೆ ಬಂದಿರಲಿಲ್ಲ. ಇಂಕ್ ತುಂಬಿಸಿ ಬರೆಯುವ ಪೆನ್. ಅದರಲ್ಲಿ ಶಾಯಿ ತುಂಬಿಸುವುದೊಂದು ಫಜೀತಿ. ಅದಕ್ಕೆ ಇಂಕ್ ಫಿಲ್ಲರ್ ಎಂಬ ಸಲಕರಣೆ ಸಿಕ್ಕುತ್ತಿತ್ತು. ಬಹಳ ಜನ ಇಂಕ್ ಪಿಲ್ಲರ್ ಎನ್ನುತ್ತಿದ್ದರು. ಕೆಲವೊಮ್ಮೆ ಈ ಇಂಕ್ ಫಿಲ್ಲರ್ ಕೂಡಾ ಕೈಕೊಟ್ಟು ಇಂಕ್ ಕೈಗೆಲ್ಲಾ ಮೆತ್ತಿಕೊಳ್ಳುತ್ತಿತ್ತು. ಬೆರಳಲ್ಲಿ ಇಂಕ್ ಕಲೆ ಇಲ್ಲದ ಹುಡುಗರು ಕಂಡರೆ ಅವರು ಓದಿ ಬರೆಯದ ಸೋಮಾರಿಗಳೆಂದು ಹೇಳಬಹುದಾಗಿತ್ತು. ನನ್ನ ತಂದೆಯ ಪಾರ್ಕರ್ ಪೆನ್ ಕೂಡಾ ಇಂಥ ಇಂಕ್ ತುಂಬಿಸಿ ಬರೆಯುವ ಪೆನ್ನೇ ಆಗಿತ್ತು. ಕಪ್ಪು ಬಣ್ಣದ, ಸ್ವಲ್ಪ ಡುಮ್ಮ ಎನ್ನಬಹುದಾದ ಮೈಕಟ್ಟು. ಪೆನ್ ಸಿಕ್ಕಿಸಿಕೊಳ್ಳಲು ಚಿನ್ನದ ಬಣ್ಣದ ಪಿನ್ ಜೋಡಿಸಿದ್ದರು. ಈ ಪೆನ್ನನ್ನು ನಮ್ಮ ತಂದೆ ತಮ್ಮ ಮೇಜಿನ ಡ್ರಾನಲ್ಲಿ ಇಟ್ಟುಕೊಂಡಿರುತ್ತಿದ್ದರು. ಡ್ರಾವರಿಗೆ ಬೀಗ ಇದ್ದರೂ ಅವರು ಅದನ್ನು ಹಾಕುತ್ತಿರಲಿಲ್ಲ. ಬೇಸಿ...

ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ

ಇಮೇಜ್
ಮೂಲ ಹಿಂದಿ ಕವಿತೆ - ಮಧು  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಕಣ್ಣೀರನ್ನು ಬಚ್ಚಿಟ್ಟುಕೊಂಡು ಬೇರೆಡೆಗೆ ನೋಡುತ್ತಾ ಸಪ್ಪಗೆ ಹೀಗೆ ನಗಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮನೆಯ ದೀಪಗಳನ್ನು ಹುಷಾರಾಗಿ ಆರಿಸುವೆ ಬೇಕಾದ ವಸ್ತುಗಳನ್ನೂ ಬೇಡವೆಂದು ಸಾಧಿಸುವೆ ಪದೇಪದೇ ಗಾಡಿಯ ಮೈಲೇಜು ಚೆಕ್ ಮಾಡುವ ಅಪ್ಪಾ ನನ್ನ ಕೈಯಲ್ಲಿ ಎಟಿಎಂ ಕಾರ್ಡು ಇಡಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ನೀರಿನ ಬಾಟಲ್ ಇಟ್ಟುಕೊಂಡೆಯೋ ಇಲ್ಲವೋ ಟಿಕೆಟ್ ಇದೆಯೋ ಇಲ್ಲವೋ ಮತ್ತೊಮ್ಮೆ ನೋಡಿಕೋ ಇಟ್ಟುಕೊಂಡಿದ್ದೀ ತಾನೇ ಪರ್ಸಿನಲ್ಲಿ ಚಿಲ್ಲರೆ? ನಿನ್ನ ಒದ್ದೆ ಪ್ರೀತಿಯನ್ನು ಸುರಿಸದಿರು ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಚೀಲವನ್ನು ನೂಕುತ್ತಾ ಸೀಟಿನ ಕೆಳಗೆ ಒಂದು ಕಣ್ಣಿಟ್ಟಿರಿ ಹೊರಟಿದ್ದಾಳೆ ಒಬ್ಬಾಕೆ ಎಂದು ಬೇಡುತ್ತಾ ಎದುರು ಸೀಟಿನ ಹೆಂಗಸಿಗೆ ಸುಮ್ಮನೆ ಕಾಳಜಿ ಮಾಡಿಕೊಳ್ಳಬೇಡಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮುಟ್ಟಿದ ಕೂಡಲೇ ಫೋನ್ ಮಾಡು ಆಯಿತಾ? ಇನ್ನು ಯಾವಾಗಲೋ ಮತ್ತೆ ಈಕಡೆಗೆ ಪಯಣ? ನೀನಿಲ್ಲದೆ ಇನ್ನು ಮನೆಯೆಲ್ಲ ಭಣಭಣ  ಎನ್ನುತ್ತಾ ತಲೆಯ ಮೇಲೆ ಕೈ ಇಡಬೇಡ ಅಪ್ಪಾ ನನ್ನನ್ನು ಸ್ಟೇಷನ್ನಿಗೆ ಬಿಡಲು ಬರಬೇಡ ಅಪ್ಪಾ ಮೌನಿಯಾಗುವೆನು ಏನು ಹೇಳಲೂ ತೋರದೆ ಎದೆತುಂಬಿ ನನ್ನನ್ನು ಅಪ್ಪಿಕೊಳ...

ಹೀಗೊಂದು ಇತ್ತು ಬಾಲ್ಯ

ಇಮೇಜ್
ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಹೀಗೊಂದು ಇತ್ತು ಬಾಲ್ಯ ಪುಟ್ಟದಾಗಿತ್ತು,  ಇಷ್ಟೇ ಇಷ್ಟು, ಬಾಲ್ಯ  ಬಾಲ್ಯದಲ್ಲೊಬ್ಬರು, ಅಪ್ಪ ಎಂಬವರು,  ಸಾಚಾತನ, ಒಳ್ಳೆಯತನ ಅವರ ಆಂತರ್ಯ  ಹೇಗಿತ್ತು ನಮ್ಮ ಸುಂದರ ಬಾಂಧವ್ಯ! ಹೀಗೊಂದು ಇತ್ತು ಬಾಲ್ಯ  ಮೇಲೆ ರೆಂಬೆಯನ್ನೇರಿ  ಬಾ  ಎನ್ನುವ  ಹೂಗಳು ಹಿಡಿಯಲು ಕೈ ಎತ್ತಿದರೆ  ನಿಲುಕಲಾರವು  ಚಾಚಿದರೂ  ಆಗ ಎಲ್ಲಿಂದಲೋ ಬಂದು  ಬಾಲ್ಯದ ಎರಡು ಕೈಗಳು  ಮೇಲೆತ್ತಿದರೆ ಮುಟ್ಟುವುದು  ಹೂವಿನೊಂದಿಗೆ ಹೂಬೆರಳು - ಇತ್ತು ಬಾಲ್ಯ ಹೀಗೊಂದು  ಹೀಗೇ ಬರುವಾಗ  ಎಲ್ಲೋ ಯಾವಾಗಲೋ  ಬಾಲ್ಯದಲ್ಲೇ ಅಪ್ಪ  ಲೀನವಾದರು  ಕೈಬಿಟ್ಟು  ಮುಷ್ಟಿಯಲ್ಲಿವೆ ಇನ್ನೂ  ಒಣಗಿ ಹೋದ ಹೂದಳ  ಬದುಕ ಬೇಕೆಂಬಾಸೆ  ಈ ಹೂವಿನ ಪರಿಮಳ - ಹೀಗೊಂದು ಇತ್ತು ಬಾಲ್ಯ  ನನ್ನ ತುಟಿಗಳ ಮೇಲೆ ಇನ್ನೂ  ಅವರ ದನಿ ಆಡುತ್ತಿದೆ  ಲಾಸ್ಯ  ನನ್ನ ಉಸಿರಿನಲ್ಲಿ ಇನ್ನೂ ಇದೆ  ಅವರಿತ್ತ ಆತ್ಮವಿಶ್ವಾಸ  ಎಂದು ಸಿಕ್ಕುವರೋ ಮತ್ತೆ  ಯಾವುದೋ ತಿರುವಿನಲ್ಲಿ  ಕೇಳುವರು - ನೆನಪಿದೆಯೇ  ಬಾಲ್ಯದ ...