ಪೋಸ್ಟ್‌ಗಳು

Reading ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಟೆಲಿಫೋನ್ ಬೂತ್ ಸ್ವಗತ

ಇಮೇಜ್
  ಹಿಂದೊಮ್ಮೆ  ಹೊರಗೆ ಕಾಯುತ್ತಿದ್ದರು ಜನ ತಮ್ಮ ಸರದಿಗೆ ನೂರೆಂಟು ಕಾರಣಗಳಿದ್ದವು ಒಳಗೆ ಬಂದವರಿಗೆ. ಅವಸರವಿಲ್ಲದೆ ಪ್ರೇಮಾಲಾಪದಲ್ಲಿ ತೊಡಗಿದ ಯುವಕ ಹೊರಗೆ ನಿಂತವರ ಹಣೆಯಲ್ಲಿ ಕಾಣುತ್ತಿದೆ ತವಕ. ತಡವಾಗಿ ಬರುತ್ತೇನೆ ಕಚೇರಿಯಲ್ಲಿ ಕೆಲಸ ಹೆಚ್ಚಿದೆ ಎಂದು ಗೆಳತಿಯ ಜೊತೆ ಹೊರಟವನದು ಕೆಚ್ಚೆದೆ. ನಿಮ್ಮ ಹೆಂಡತಿಯನ್ನು ಅಪಹರಿಸಿದ್ದೇನೆ, ಬ್ರಿಜ್ ಬಳಿಗೆ ತಂದರೆ ಐದು ಸಾವಿರ ಪೌಂಡ್ ಬಿಡುಗಡೆ ನಿಮ್ಮವಳಿಗೆ ಚೌಕಾಸಿ ಇಲ್ಲ! ತಡವಾದರೆ ಮಧ್ಯರಾತ್ರಿಗೆ ಒಂದೇ ಘಳಿಗೆ ಗುಂಡು ಉಗುಳುವುದು ನನ್ನ ಬಂದೂಕಿನ ನಳಿಗೆ! ನಾನೇ ಇಟ್ಟುಕೊಳ್ಳಬೇಕೇ?!  ಏನಾಗಿದೆ ನಿಮ್ಮ ತಲೆಗೆ! (ದೊಡ್ಡ ಮೀನು ಬಿತ್ತೆಂದುಕೊಂಡಿದ್ದೆ ಬಲೆಗೆ! ಇದೊಳ್ಳೆ ಸಿಕ್ಕಿಕೊಂಡೆ ಶಾರ್ಕ್ ಹಲ್ಗೆ) ಐನೂರು ಪೌಂಡ್ ಆದೀತೆ? ಹೋಗಲಿ ಐವತ್ತು? ಏನೆಂದಿರಿ ನಾನೇ ಕೊಡಬೇಕೆ ಮತ್ತೂ! ಅಮ್ಮಾ ನಾನಿರಲಾರೆ ಇವನ ಜೊತೆ ಇನ್ನು. ತಪ್ಪು ಮಾಡಿದೆ ಮೀರಿ ನಿನ್ನ ಮಾತನ್ನು. ಪ್ರತಿದಿನವೂ ಕುಡಿದು ಬರುತ್ತಾನೆ ಮನೆಗೆ ಕೇಳಿದರೆ ಕೋಪ, ವಾಗ್ವಾದ, ಕೊನೆಗೆ ನಾಚಿಕೆಗೆಟ್ಟವನು ಕೆನ್ನೆಗೆ ಹೊಡೆದ ನನಗೆ. ನಾನು ನಗುತ್ತಿದ್ದೆ ಅಳುತ್ತಿದ್ದೆ ಇದನ್ನೆಲ್ಲ ಕೇಳುತ್ತಾ. ಅದೆಷ್ಟು ರಹಸ್ಯಗಳು ನನ್ನಲ್ಲಿ ಅಡಗಿವೆ ಗೊತ್ತಾ! ಎಷ್ಟು ಜನ ಮರೆತು ಹೋಗುತ್ತಿದ್ದರು ತಮ್ಮ ಕೊಡೆ! ಈಗ ಯಾರೂ ಸುಳಿಯುವುದಿಲ್ಲ ನನ್ನ ಕಡೆ. ಎಲ್ಲರ ಕೈಯಲ್ಲೂ ಈಗ ಸಂಚಾರಿ ಫೋನು ನಿರರ್ಥಕವಾಗಿ ನಿಂತಿದ್ದೇನೆ ನಾನು. ಯಾರಿಗೋ ಹೊಳೆಯಿತು ...

ನಾನು ಓದಿದ ಕವಿತೆ

ನಾನು ಓದಿದ ಮತ್ತು ನನಗೆ ಇಷ್ಟವಾದ ಕವಿತೆಗಳನ್ನು ಹಂಚಿಕೊಳ್ಳಲು ನಾನೊಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದೇನೆ.  ಈಗ ಈ ಚಾನೆಲಿನಲ್ಲಿ ಲಭ್ಯವಾದವು ೧. ಅಡಿಗರ "ನನ್ನ ಅವತಾರ" ೨. ಅಡಿಗರ "ಅಲಸನ ಹಾಡು" ೩. ಕೆ. ಎಸ್. ನರಸಿಂಹಸ್ವಾಮಿ ಅವರ "ದೇವರ ಹೆಜ್ಜೆ" ೪. ಬಾಬ್ ಡಿಲನ್ ಅವರ "ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?" ೫. ಮೈಥಿಲಿ ಶರಣ ಗುಪ್ತ ಅವರ "ಜೀವನಕ್ಕೇ ವಿಜಯ" ೬. ಮಾಯಾ ಏಂಜೆಲೋ ಅವರ "ವಸುಧೈವ ಕುಟುಂಬಕಮ್" ೭. ರಾಬರ್ಟ್ ಫ್ರಾಸ್ಟ್ ಬರೆದ "ನಾನು ತುಳಿಯದ ಹಾದಿ" ನಿಮ್ಮ ಅನ್ನಿಸಿಕೆಗಳನ್ನು ತಿಳಿಯಲು ಕುತೂಹಲಿಯಾಗಿದ್ದೇನೆ. ಸಿ. ಪಿ. ರವಿಕುಮಾರ್