ಪೋಸ್ಟ್‌ಗಳು

ಸಾವು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಆತ್ಮೋನ್ನತಿ

ಇಮೇಜ್
ಮೂಲ ಇಂಗ್ಲಿಷ್ ಸಾನೆಟ್: ಜಾನ್ ಕೀಟ್ಸ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಆವರಿಸುವ ಕತ್ತಲಿನಿಂದ ಬೆಳ್ಳಕ್ಕಿಯೊಂದು ಹೇಗೆ ಮೇಲೆದ್ದು ಸಾಗುವುದೋ ಪೂರ್ವದ ಬೆಳಕಿನ ಕಡೆಗೆ ನಿಷ್ಕಲ್ಮಶ ಆನಂದದ ವಿನಾ ಬೇರೇನನ್ನೂ ನೂಕವೋ ರೆಕ್ಕೆ ಹಾಗೇ ನಿನ್ನ ಆತ್ಮವೂ ಹಾರುವುದು ಮೇಲಣ ರಾಜಾಧಿಪತ್ಯಕ್ಕೆ ಎಲ್ಲಿ ಶಾಂತಿಯು ಶಾಶ್ವತವೋ ಮತ್ತು ನಿರಂತರವೋ ಪ್ರೀತಿ ಎಲ್ಲಿ ಸುಖಾತ್ಮಗಳು ಧರಿಸಿ ಪ್ರಭಾವಳಿಯ ಮುಕುಟ  ಅನುಪಮ ವೇಷಭೂಷಣ ತೊಟ್ಟು ಅಮೃತ ಹೀರುತ್ತಾ, ಪುಣ್ಯಾತ್ಮಗಳಿಗೆ ಮಾತ್ರ ಸಿಕ್ಕುವುದು ಈ ರೀತಿ, ಅಲ್ಲಿ ನಿನ್ನಾತ್ಮವು ಪಡೆವುದು ಅಮರತ್ವದ ಉನ್ನತಿ. ಹಿನ್ನೆಲೆಯಲ್ಲಿ ದೈವೀಕ ಸಂಗೀತ ಮೊಳಗೆ ತುಂಬಿಕೊಳ್ಳುವುದು ಮಹದಾನಂದ ಆತ್ಮದೊಳಗೆ. ಅಥವಾ ಆಸೆಯೊಂದು ನಿನ್ನಾತ್ಮದಲ್ಲಿ ಆಗ ಪಡೆದೀತು ಅಂಕುರ ಸರ್ವಶಕ್ತ ಪಿತನ ಕೆಲಸಗಳನ್ನು ಮಾಡಬೇಕೆಂಬ ಕಾತುರ. ಕಂಡುಕೊಳ್ಳಬೇಕು  ಯಾವುದು ತರವೆಂಬ ಪ್ರಶ್ನೆಗೆ ಉತ್ತರ  ಮತ್ತು ಏಕೆ ಹೆದರಬೇಕು ದುಃಖಗಳು ಬಂದಾಗ ಹತ್ತಿರ?

ಯಾವೊಬ್ಬ ಮಾನವನೂ ದ್ವೀಪವಲ್ಲ

ಇಮೇಜ್
ಮೂಲ ಇಂಗ್ಲಿಷ್ ಕವಿತೆ - ಜಾನ್ ಡನ್  ಅನುವಾದ - ಸಿ. ಪಿ. ರವಿಕುಮಾರ್  ಯಾವೊಬ್ಬ ಮಾನವನೂ ದ್ವೀಪವಲ್ಲ  ಯಾರೊಬ್ಬನೂ ತಾನೇ ಪೂರ್ಣನಾಗ.    ಪ್ರತಿಯೊಂದೂ ಭೂಖಂಡದ ಅಂಶ, ಮೂಲವೊಂದರ ಪುಟ್ಟ ಭಾಗ.  ಕಿನಾರೆಯಿಂದ ಒಂದೇ ಒಂದು ಭೂಮಿಯ ಚೂರು  ಕೊಚ್ಚಿ  ಕೊಂಡೊಯ್ದರೆ    ಕಡಲು   ಉಂಟಾಗುವುದು ಅಷ್ಟೇ  ಚ್ಯುತಿ ಮೂಲಭೂಖಂಡಕ್ಕೆ  ಕಳೆದುಕೊಂಡಂತೆ ಇಡೀ ಭೂಶಿರವನ್ನು ಒಡಲು; ಕಳೆದು ಹೋದರೆ ಹೇಗಿದ್ದೀತು   ನಿನ್ನ ಗೆಳೆಯನಿಗೋ ನಿನಗೋ  ಸೇರಿದ ಜಹಗೀರು.  ಪ್ರತಿಯೊಬ್ಬ ಮಾನವನ ಸಾವೂ  ಕುಂದಿಸುತ್ತದೆ ನನ್ನನ್ನು  ಏಕೆಂದರೆ  ನಾನು ಮಾನವತೆಯ ಅಂಗ.   ಪ್ರಶ್ನಿಸದಿರು  ಯಾರಿಗಾಗಿ ಬಾಜಿಸುತ್ತಿದೆ ಗಂಟೆ  ಎಂದು!  ಬಾಜಿಸುತ್ತಿದೆ  ನಿನಗಾಗಿ   ಮೃದಂಗ.