ಒದ್ದೆಕಣ್ಣಿಂದ ಒರೆಸಿ ಕಣ್ಣೀರು
ಮೂಲ ... ಸಾಹಿರ್ ಲೂಧಿಯಾನವಿ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ ಒದ್ದೆಕಣ್ಣಿಂದ ಒರೆಸಿ ಕಣ್ಣೀರು ಮುಗುಳುನಗೆಯ ಹರಡು ನೋಡೋಣ ನತಶಿರರಿಂದ ಏನೂ ಸಾಧಿಸದು, ತಲೆಯ ಮೇಲೆತ್ತಿ ನಿಲ್ಲು ನೋಡೋಣ ಸಿಕ್ಕದು ಬಾಳು ಭಿಕ್ಷೆಯಲ್ಲೆಂದೂ, ಕಸಿಯಬೇಕು ಅದನ್ನು ಮುನ್ನುಗ್ಗಿ, ಕ್ರೂರ ಜಗದಿಂದ ನಿನ್ನ ಹಕ್ಕನ್ನು ಕಸಿದುಕೋ ಒಮ್ಮೆ ಮುಂದೆ ನೋಡೋಣ ಬಣ್ಣವು ಜಾತಿ ಕುಲ ಧರ್ಮಗಳು, ಮಾನವತೆ ಎಲ್ಲದಕ್ಕೂ ಮೀರಿದುದು ಸಹಮತ ನನ್ನ ಮಾತಿಗೆ ಇತ್ತು ನನ್ನ ಬಳಿ ಬಂದು ನಿಲ್ಲು ನೋಡೋಣ ದ್ವೇಷವೇ ತುಂಬಿರುವ ವಿಶ್ವದೊಳು ಕಟ್ಟುವಾ ಪ್ರೀತಿ ತುಂಬಿದ ಗೂಡು ಹೆಗ್ಗಳಿಕೆ ಏನು ದೂರ ನಿಲ್ಲುವುದು? ನಿಲ್ಲು ಬಳಿಸಾರಿ, ಆಗ ನೋಡೋಣ