ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವಿಶೈಲದಲ್ಲೊಂದು ಸಂಜೆ

ಇಮೇಜ್
ಕೂಗಲು ಮೇಲೊಂದು ಒಂಟಿ ಬೆಳ್ಳಕ್ಕಿ ಮುಗಿಲಲ್ಲಿ ರಾಗವದಾವುದೋ ಕೇಳುವುದು ಕವಿಮನಕ್ಕೆ!     ಮಾಗಿಯ ಚಳಿಯಲ್ಲಿ ಕಾವ್ಯಸೃಷ್ಟಿಯ ಕಠಿಣ ತ್ಯಾಗಗಳ ತಪದಲ್ಲಿ ತೊಡಗಿದ್ದ  ರಸಋಷಿಗೆ! ರಾಗಿ-ಬತ್ತದ ಪೈರಿನ ಹಸಿರು ಪತ್ತಲವನ್ನುಟ್ಟು ಮೇಘಗಳ ಕರಿನೇರಳೆ ಬಣ್ಣದ ರವಿಕೆಯಂ ತೊಟ್ಟು ಹೂಗಳ ಚೆಲುವಿನಿಂ  ಕಂಗೊಳಿಸುವ  ಮಲೆನಾಡಿತಿ    ಜಾಗ ನೀಡಿದ್ದಾಳೆ ತನ್ನ ಮಡಿಲಲ್ಲಿ, ಕವಿಶೈಲದಲ್ಲಿ! ಈಗ ಕೇಳುವುದು ಕ್ರೌಂಚಪಕ್ಷಿಗಳ ಹರ್ಷಕಲರವ ಈಗ ಕೇಳುವುದು ನಿಷಾದನ ಬಾಣಕ್ಕೆ ಅಸು- ನೀಗಿದ ಜೊತೆಗಾತಿಗೆ ಮರುಗುವ ಒಂಟಿ ಆರ್ತನಾದ! ರಾಘವನ ಅಂತರಂಗದ ವ್ಯಥೆಯು ಕೇಳುವುದು .. ಓಗೊಡುವುದು ಎಲ್ಲಿಂದಲೋ ಸೀತೆಯ ದುಃಖವೃಷ್ಟಿ ಸಾಗುವುದು ದುಃಖದ ದೋಣಿಯಲ್ಲಿ ಕಾವ್ಯಸೃಷ್ಟಿ   - ಸಿ. ಪಿ. ರವಿಕುಮಾರ್  (c) ೨೦೧೭ 

ಒಂದು ಗಜಲ್ ಹಸಿರಾಗಿಸುತ್ತದೆ ಎಲ್ಲ ಹಳೆಯ ನೋವು

ಇಮೇಜ್
ಮೂಲ ... ಶಕೀಲ್ ಜಮಾಲಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಪಾಳು ಬಿದ್ದ ನೆನಪುಗಳೂ ಪಡೆದುಕೊಳ್ಳುತ್ತವೆ ಮರುಜೀವ ಒಂದು ಗಜಲ್ ಹಸಿರಾಗಿಸುತ್ತದೆ ಎಲ್ಲ ಹಳೆಯ ನೋವ ಪಡೆವ ಆಸೆಯಿಂದ ದೂರವಿರುವುದೆ ಮೇಲು ಜೋಕೆ! ಕೊ ರಗೆಂಬ ರೋಗ ಅಂಟಿಕೊಳ್ಳುವುದು ದುಃಖವನು ಹಿಂಬಾಲಿಸಿ ವ್ಯರ್ಥ ಅಲೆಯುವುದೇಕೆ? ತಲುಪುತ್ತದೆ ಈ ಸಂಪತ್ತು ಮನೆಯ ವಿಳಾಸಕ್ಕೇ ಕೂಡಿಟ್ಟುಕೊಳ್ಳಿ ದಿನದ ಗೊಂದಲಗಳನ್ನು ಮನದೊಳಗೆ ಅನೇಕ ನಿಶ್ಯಬ್ದಗಳನ್ನು ರಾತ್ರಿ ಕರೆತರುವುದು ಜೊತೆಗೆ ತುಂಬಿಕೊಳ್ಳಬಹುದು ಸೆರಗನ್ನು ಕಪಟವಂಚನೆಗಳಿಂದ ಕಹಿಯಾದೀತು ತಿನ್ನುವ ಎರಡು ತುತ್ತು ಕೂಡಾ ಸಿನಿಮಾ ಓಡುತ್ತದೆ ಪರದೆಯ ಮೇಲೆ ಸರಿರಾತ್ರಿಯವರೆಗೂ ಸುಪ್ರಭಾತದ ಪ್ರಾರ್ಥನೆ ಸಾಯುತ್ತದೆ ಪ್ರತಿ ಮುಂಜಾವು

ಮುಳ್ಳಿನಲ್ಲೊಂದು ಹೂವು

ಇಮೇಜ್
ಮೂಲ ... ಅಂಜುಮ್ ಲುಧಿಯಾನವಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಮುಳ್ಳಿನಲ್ಲೊಂದು ಹೂವು ಅರಳಿದೆಯಲ್ಲ ನಗುತ್ತಿರುತ್ತದೆ ನಾನು ನೋಡಿದಾಗಲೆಲ್ಲಾ ಗಮನಿಸುತ್ತೇನೆ ಅಲ್ಲೇ ಒಂದು ಹಳದಿ ಎಲೆ ಎಣಿಸುತ್ತಾ ಬಿಡಿಸುತ್ತಿದೆ ಏನೋ ಸಮಸ್ಯೆ ತೋಡಿಕೊಂಡಿತು ಹೂವು ನನ್ನಲ್ಲಿ ದುಃಖ ಗಾಳಿ ಕದ್ದಿತು ನನ್ನ ಗಂಧವನು ಅಕ್ಕಾ ಹರಿವ ನೀರಿನ ತರಂಗಗಳ ಮೇಲೆ ಹುಚ್ಚನಾರೋ ಗೀಚುತಿಹ ವರ್ಣಮಾಲೆ ಚಿನ್ನಬೆಳ್ಳಿಗಳ ಕೋರೈಸುವ ಬೆಳಕಿಗೆ ಎಲ್ಲರೂ ಕಣ್ ನೋಟ ಕಳೆದುಕೊಂಡಿದ್ದಾರೆ ಹಕ್ಕಿಯೊಂದು ಅಂಗಳ ಹೊಕ್ಕು ಎಲ್ಲೆಡೆಗೂ ಓಡಾಡಿ ಅಂಗಳವನು ಮಂಗಳ ಮಾಡಿರುವುದು ನೋಡಿ

ಕಾವ್ಯ

ಇಮೇಜ್
ಒಳ್ಳೆಯ ಕಾವ್ಯ ಹೇಗಿರುತ್ತದೆ? ಡಾನ್ ಪ್ಯಾಟರ್ಸನ್ ಅವರ ಉತ್ತರ ಒಂದು ಕವಿತೆಯ ರೂಪದಲ್ಲಿದೆ! ವಜ್ರದಲ್ಲಿ ಬಂಧಿತವಾಗಿರುವ ಬೆಳಕಿನ ಕಿಡಿ ಭೂಮಿಯ ಮೊದಲ ಬೆಂಕಿಯದು. ಹಾಗೇ ಕವಿತೆಯಲ್ಲಿ ಬಂಧಿಸಲು ಸಾಧ್ಯವಾಗುವುದು ಪ್ರೇಮದ ಉತ್ಕಟತೆಯನ್ನಲ್ಲ, ಪ್ರೇಮದ ಮೊದಲ ಕಿಡಿಯನ್ನು ಮಾತ್ರ ಎಂಬುದು ಕವಿಯ ನಿಲುವು. ಯಾವಾಗ (ಕಾವ್ಯದ) ಕೆಂಡವು ನಿಗಿನಿಗಿ ಎಂದು ದಹಿಸುತ್ತದೋ ಆಗ ಅದರಲ್ಲಿ ಕಾವ್ಯದ ಅಂಶವೂ ಸುಟ್ಟುಹೋಗುತ್ತದೆ. ಅದು ಮಂದವಾಗಿ ಉರಿದಾಗ ಮಾತ್ರ ಅದು ಕಾವ್ಯವಾಗುತ್ತದೆ. ಉದಾ. ಗಟ್ಟಿ ಘೋಷಣೆಗಳು ಕಾವ್ಯವಾಗುವುದಿಲ್ಲ. ಅಂತ ಘೋಷಣೆಗಳು ಕೇಳಿದಾಗ ಪಿಟೀಲುಗಳ ಸದ್ದಿನಲ್ಲಿ ಕಾವ್ಯದ ಧ್ವನಿ ಎಲ್ಲೋ ಕಳೆದುಹೋಗುತ್ತದೆ. ಕವಿಗೆ ಇದು ಗೊತ್ತು. ತನ್ನ ಕಾವ್ಯವು ಘೋಷಣೆಯಾದಾಗ ತನ್ನ ಧ್ವನಿಯಲ್ಲಿರುವ ಬಲವಂತವನ್ನು ಅವನು ಗುರುತಿಸಬಲ್ಲ. ತನಗೆ ಪರಿಶುದ್ಧ ಕಾವ್ಯ ಬೇಕೆಂದರೆ ತಾನು ಕಾಯಬೇಕೆಂದು ಕೂಡಾ ಅವನಿಗೆ ಗೊತ್ತು. ಅಂತ ಕಾವ್ಯವು ಬೆಟ್ಟದ ತೊರೆಯಂತೆ. ಅದರ ಶುದ್ಧನೀರಿನಲ್ಲಿ ಯಾವುದೇ ಬಣ್ಣವಿಲ್ಲ. ಯಾರದೇ ಹೆಸರಿಲ್ಲ.

ಟ್ರಾಫಿಕ್ ಟ್ರಾಫಿಕ್ ಎನುತ (ಗಜಲ್)

ಇಮೇಜ್
(ಪ್ರತಿದಿನ ಕೆಲಸಕ್ಕಾಗಿ ಗಂಟೆಗಟ್ಟಲೆ ಪ್ರಯಾಣ ಮಾಡುವ ಬೆಂಗಳೂರಿಗರಿಗೆ ಅರ್ಪಿತ.) ಹೀಗೇ ಕಳೆಯಿತು ಬೆಳಗು ಟ್ರಾಫಿಕ್ ಟ್ರಾಫಿಕ್ ಎನುತ ಜಾಗರಣೆ ರಾತ್ರಿಯಲೂ ಟ್ರಾಫಿಕ್ ಟ್ರಾಫಿಕ್ ಎನುತ ಹೊರಟಿದೆ ನಗರವೇ ಹಾ ಯಾವುದೋ ಹೋರಾಟಕ್ಕೆ ಬರುತಿದೆ ಮಳೆ ಕೂಡಾ ಟ್ರಾಫಿಕ್ ಟ್ರಾಫಿಕ್ ಎನುತ ಎಷ್ಟು ಓದಲಿ ಗೆಳೆಯಾ ಬರೆಯಲಿ ನಾನಿನ್ನೆಷ್ಟು ಸುಸ್ತು ಕಣ್ಣಿಗೆ ಬಂತು ಟ್ರಾಫಿಕ್ ಟ್ರಾಫಿಕ್ ಎನುತ ಬಸ್ಸಿನಲ್ಲಿ ಏಸಿ ಇದೆ ಆದರೂ ಹಾ ಸುಖವೆಲ್ಲಿ ಭುಸ್ ಭುಸ್ ಸದ್ದು ಜೊತೆಗೆ ಚಳಿಗೆ ಮೈನಡುಕ ರೇಡಿಯೋ ಹಾಡುತಿರುವ ಪ್ರೇಮಗೀತೆಯಲು ಕೂಡಾ ನೋಡು ಕೇಳುತ್ತಿದೆ ಕೋರಸ್ ಟ್ರಾಫಿಕ್ ಟ್ರಾಫಿಕ್ ಎನುತ ಸಿ.ಪಿ. ರವಿಕುಮಾರ್

ಕೈಝಾದಿಸುವೆ, ನಿಷ್ಕರುಣಿ!

ಇಮೇಜ್

ಮಾಡರ್ನ್ ಬಕ

ಇಮೇಜ್

ಧರ್ಮ, ರಾಜಕಾರಣ, ಸಾಹಿತ್ಯ

ಇಮೇಜ್

ನಗುಬಂತಾ!

ಇಮೇಜ್

ಸಾಲದಲ್ಲಿ ಸ್ವರ್ಗ

ಇಮೇಜ್

ನಡುಕ ಹುಟ್ಟಿಸುವ ಚಳಿ ಇಂದು ಬೆಳಗು

ಇಮೇಜ್

ಅಪರಾಧನಗರಿ

ಇಮೇಜ್

ಸೋಲಿಸು ಬಾ ನನ್ನನ್ನು

ಇಮೇಜ್

ಈ ಜೂಸು ಚಂದವೋ ಆ ಜೂಸು ಚಂದವೋ

ಇಮೇಜ್
ಇಬ್ಬರೂ ಹೋದರು ಜೂಸ್ ಪಾರ್ಲರಿಗೆ ನೂರಿಪ್ಪತ್ತು ರೂಪಾಯಿ ಬಿಲ್ಲು ಪ್ಲಸ್ ತೆರಿಗೆ ಮೂಸಂಬಿ ಜೂಸ್ ಆರ್ಡರ್ ಮಾಡಿದಳು ಆಕೆ ಆತನಿಗೆ ಸೇಬು ದ್ರಾಕ್ಷಿ ದಾಳಿಂಬೆಗಳ ಬಯಕೆ ಮೊದಲು ಬಂದಿತು ಎರಡು ಸ್ಟ್ರಾ ಜೋಡಿಸಿದ ಗ್ಲಾಸು ಅದರಲ್ಲಿ ಘಮಘಮಿಸುವ ಮೂಸಂಬಿ ಜೂಸು ಒಂದು ಸ್ಟ್ರಾ ತನ್ನತ್ತ ಎಳೆದುಕೊಂಡ ಆತ "ಶೇರ್ ಮಾಡೋಣ ಓಕೇ?" ಎಂದು ನಗೆಯ ಬೀರುತ್ತಾ ಹುಬ್ಬೇರಿಸಿ ಕೆಂಗಣ್ಣು  ಬಿಟ್ಟು "ನಾಟ್ ಓಕೆ! ಎನ್ನ ರಸ! ಸುಮ್ಮನಿರಿ!" ಎಂದಳಾಕೆ

ಮನೆಗೆಲಸದವಳು, ೧೯೩೭

ಇಮೇಜ್
ಮೂಲ - ನತಾಷಾ ಟ್ರೆಥೆವೇ (ಅಮೇರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಇಡೀ ವಾರ ಅವಳು ಶುಚಿಗೊಳಿಸಿದ್ದಾಳೆ ಬೇರಾರದೋ ಮನೆ.  ಬಗ್ಗಿ ನೋಡಿಕೊಂಡಿದ್ದಾಳೆ  ತನ್ನದೇ ಬಿಂಬ  ತಾನು ತಿಕ್ಕಿ ತೊಳೆದ  ತಾಮ್ರತಳದ ಪಾತ್ರೆಗಳಲ್ಲಿ, ತಾನೇ ಉಜ್ಜಿ ಒರೆಸಿದ  ಮರದ ಮೇಜು-ಬಾಗಿಲುಗಳಲ್ಲಿ, ತಾನೇ ಮುಚ್ಚಿದ  ಟಾಯ್ಲೆಟ್ ಮುಚ್ಚಳದಲ್ಲಿ.  ಅವಳ ಬಿಂಬ ಅವಳಿಗೆ ಹೇಳುತ್ತದೆ: ಇದನ್ನು ಬದಲಾಯಿಸೋಣ, ಹುಡುಗಿ.  ರವಿವಾರ ಮಾತ್ರ ಅವಳಿಗೆ ಸೇರಿದ್ದು - ಚರ್ಚಿಗೆ ಧರಿಸುವ ಬಟ್ಟೆಗಳಿಗೆ  ಗಂಜಿ ಹಾಕಿ ಒಗೆದು ಇಸ್ತ್ರಿ ಮಾಡಿ  ತೂಗುಹಾಕಿದ್ದಾಳೆ, ಸಂಗೀತದ ರೆಕಾರ್ಡ್ ಹಾಡುತ್ತಿದೆ, ಇಡೀ ಮನೆಯೇ ನರ್ತಿಸುತ್ತಿದೆ.  ಅವಳು ಪರದೆ ಸರಿಸಿ  ಇಡೀ ಮನೆಯನ್ನು ಬೆಳಗುತ್ತಾಳೆ, ಬೆಳಕಿನಿಂದ, ಬಕೆಟ್ ತುಂಬಾ ನೀರಿನಿಂದ, ಅಷ್ಟಮೂಲೆಗಳ ಸಾಬೂನಿನಿಂದ.  ಸ್ವಚ್ಚತೆಯು ದೈವತ್ವಕ್ಕೆ ಸಮಾನ.  ಕಿಟಕಿ ಬಾಗಿಲುಗಳನ್ನು ಪೂರ್ತಿ ತೆರೆದಿದ್ದಾಳೆ, ಪರದೆಗಳು ಹಿಂದೆಮುಂದೆ ಓಲಾಡುತ್ತಿವೆ, ಬಗ್ಗಿ ತೆಗೆಯುವಾಗ ಒಗೆದ ಬಟ್ಟೆಗಳನ್ನು ಅವಳ ಕುತ್ತಿಗೆ ಬಡಿಯುತ್ತದೆ ಮಡಕೆಗಳ ಅಂಚಿಗೆ, ಒಣಹಾಕಿದ ಬಟ್ಟೆಗಳು ತಂತಿಯ ಮೇಲೆ ರಪರಪ ಸದ್ದು ಮಾಡುತ್ತಿವೆ.  ನನ್ನ  ಬಳಿಯಲ್ಲೇ ಇರುವೆ ಓ ನನ್ನ ದೇವರೇ.  ಅವಳು ಕಂಬಳಿಗೆ ಹೊಡೆದು ಧೂಳೆಬ್ಬಿಸುತ್ತಾಳೆ ಪೊರಕೆಯಿಂದ ಝಾಡಿಸುತ್ತಾಳೆ ಮಣ್ಣುಧ

ಇಡೀ ರಾತ್ರಿ

ಇಮೇಜ್
ಮೂಲ ಗಜಲ್ - ಮಖದೂಮ್ ಮುಹಿಯುದ್ದೀನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ (ಇದನ್ನು "ಗಮನ್" ಹಿಂದಿ ಚಿತ್ರಕ್ಕಾಗಿ ಛಾಯಾ ಗಂಗೂಲಿ ಹಾಡಿದ್ದಾರೆ .) ಬರುತಲಿತ್ತು ನಿಮ್ಮದೇ ನೆನಪು ಇಡೀ ರಾತ್ರಿ ಒದ್ದೆಕಣ್ಣು ಮುಗುಳುನಗುತಲಿತ್ತು ಇಡೀ ರಾತ್ರಿ ಇಡೀ ರಾತ್ರಿ ಉರಿಯುತಿತ್ತು ನೋವಿನ ಕಿರುಹಣತೆ ದುಃಖದ ಹೊಗೆ ನರಳಿ ನಡುಗುತಿತ್ತು ಇಡೀ ರಾತ್ರಿ ಕೊಳಲ ಕೊರಳಿನಿಂದ ಹೊರಟ ಮಧುರ ನಾದವೊಂದು ನೆನಪಿನಂತೆ ಮರುಕಳಿಸುತಲಿತ್ತು ಇಡೀ ರಾತ್ರಿ ಎದೆಗೆ ಇಳಿಯುತ್ತಿತ್ತು ನೆನಪು ಚಂದ್ರಬಿಂಬದಂತೆ ಬೆಳದಿಂಗಳು ಜಗಮಗಿಸುತ್ತಿತ್ತು ಇಡೀ ರಾತ್ರಿ ಹುಚ್ಚನಂತೆ ಬೀದಿ ಬೀದಿ ಅಲೆಯುತಿದ್ದನಾರೋ ಸದ್ದು ಯಾವುದೋ ಕೇಳುತಿತ್ತು ಇಡೀ ರಾತ್ರಿ