ಗೋಪಿಹಕ್ಕಿ
ನೀಲಮೇಘನ ಘನನೀಲವರ್ಣ ತುಂಬಿತ್ತು ಕಣ್ಣುಗಳಲ್ಲಿ ಗೋಪಾಲನ ಮುರಳೀಗಾನ ತುಂಬಿತ್ತು ಕಿವಿಗಳಲ್ಲಿ. ಬಿಕೋ ಎನ್ನುತ್ತಿತ್ತು ಬೃಂದಾವನ ಕೊಲ್ಲುತ್ತಿತ್ತು ಶ್ಯಾಮನ ಪ್ರಸ್ಥಾನ. ತಾಳಲಾರದೆ ವಿರಹ, ರಾಧೆ, ನೀಲಬಣ್ಣದ ಗೋಪಿಹಕ್ಕಿಯಾದೆ! ಎಂದೋ ನೀನು ಸ್ವರವೆತ್ತಿ ಹಾಡಿದಾಗ ಕೇಳುತ್ತದೆ ಮುರಳೀಧರನ ಮೋಹನರಾಗ.