ಪೋಸ್ಟ್‌ಗಳು

Guided Tour ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಾರ್ಗದರ್ಶಿ

ಇಮೇಜ್
ಸಿ ಪಿ ರವಿಕುಮಾರ್ ಕೆಲವು ವರ್ಷಗಳ ಹಿಂದೆ ನಾನು ಸ್ಯಾಂಟಾ ಕ್ಲಾರಾ (ಕ್ಯಾಲಿಫೋರ್ನಿಯಾ) ದಲ್ಲಿ ಒಂದು ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ. ಆಗ ಸಮ್ಮೇಳನದಲ್ಲಿ ಭಾಗವಹಿಸಿದವರ ಮನರಂಜನೆಗಾಗಿ ಅರ್ಧ ದಿನದ ಕಾರ್ಯಕ್ರಮ ಇತ್ತು. ಮೊದಲು ನಮ್ಮನ್ನು ಅಲ್ಲಿಯ ಒಂದು ಪಾರ್ಕಿಗೆ ಕರೆದುಕೊಂಡು ಹೋದರು; ಅಲ್ಲಿ ಸುತ್ತಾಡಿದ ನಂತರ ಔತಣಕೂಟವಿತ್ತು. "ಇಗೋ ಪಾರ್ಕಿನಲ್ಲಿ ಸುತ್ತಾಡಿಕೊಂಡು ಬನ್ನಿ" ಎಂದು ಸಮ್ಮೇಳನದಲ್ಲಿ ಭಾಗವಹಿಸಲು ದೂರದಿಂದ ಬಂದವರನ್ನು ಬಿಟ್ಟುಬಿಡುವ ಹಾಗಿಲ್ಲ! ಪಾರ್ಕಿನಲ್ಲಿ ಸುತ್ತಾಟಕ್ಕೆ ಒಂದು ವ್ಯವಸ್ಥೆ ಇತ್ತು. ನಮ್ಮ ಲಾಲ್ ಬಾಗಿಗೆ ಅಥವಾ ಕಬ್ಬನ್ ಪಾರ್ಕಿಗೆ ಹೋಲಿಸಿದರೆ ಈ ಪಾರ್ಕ್  ಏನೇನೂ ಇಲ್ಲ.  ಆದರೆ ಬಂದವರನ್ನು ಪಾರ್ಕಿನಲ್ಲಿ ಸುತ್ತಾಡಿಸಿ ಅವರಿಗೆ ಗಿಡಗಳ ವಿಶೇಷದ ಬಗ್ಗೆ ವಿವರಿಸಲು ಜನರಿದ್ದರು - ಇವರೆಲ್ಲರೂ ಬಹುತೇಕರು ವಯಸ್ಸಾದ ಮಹಿಳೆಯರು, ಹಿಂದೆ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದವರು.  ಪಾರ್ಕಿನಲ್ಲಿದ್ದ ಮರ-ಗಿಡಗಳನ್ನು ತೋರಿಸಿ ಕೆಲವು ಸ್ವಾರಸ್ಯಗಳನ್ನು ತಿಳಿಸುತ್ತಿದ್ದರು. ಉದಾಹರಣೆಗೆ "ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚು ಮಳೆ ಬೀಳುವುದಿಲ್ಲ. ಇಂಥ ಹವಾಮಾನಕ್ಕೆ ಗಿಡಗಳು ಹೇಗೆ ಹೊಂದಿಕೊಳ್ಳುತ್ತವೆ, ನೋಡಿ. ಈ ಗಿಡದ ಎಲೆಗಳು ಹೇಗೆ ಮುಳ್ಳುಗಳ ರೀತಿ ಬೆಳೆದಿವೆ," ಎಂದು ಅವರು ತೋರಿಸಿದಾಗ ಜನ ಕುತೂಹಲದಿಂದ ಚಿತ್ರಗಳನ್ನು ಕ್ಲಿಕ್ ಮಾಡುತ್ತಿದ್ದರು. ಪಾರ್ಕಿನಲ್ಲಿ ನಮಗೆ ಮಾರ್ಗದ...