ಪೋಸ್ಟ್‌ಗಳು

Mirza Ghalib ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ

ಇಮೇಜ್
ಮೂಲ - ಮಿರ್ಜಾ ಗಾಲಿಬ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ('ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ'  - ಗಾಲಿಬ್ ಅವರ ಈ ಗಜಲ್ ಅನೇಕ ಗಾಯಕರಿಂದ ಹಾಡಲ್ಪಟ್ಟಿದೆ. ಕರ್ನಾಟಕ ಗಾಯನ ಶೈಲಿಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿಯವರೂ ಇದನ್ನು ಹಾಡಿದ್ದಾರೆ!  ತನ್ನ ಪ್ರೇಮಿಕೆಯಿಂದ ಯಾವುದೋ ಕಾರಣದಿಂದ ಬೇರಾದ ಪ್ರೇಮಿಯೊಬ್ಬನ ಅಳಲು ಈ ಕವಿತೆಯಲ್ಲಿದೆ.) ಸಿಂಧುವಿನಲ್ಲಿ ಕೊನೆಗಾಣುವುದರಲ್ಲಿದೆ ಬಿಂದುವಿನ ಆನಂದ ತಿಂದ ನೋವು ಮಿತಿ ಮೀರಿದಾಗ ಅದೇ ಆಗುತ್ತದೆ ದಿವ್ಯೌಷಧ ಬೀಗ ಮತ್ತದರ ಕೀಲಿಯಂತಾಯಿತಲ್ಲ ನನ್ನ ನಿನ್ನ ಸಂಬಂಧ ಎಲ್ಲ ನೇರವಾಯಿತು ಎನ್ನುವಾಗ ಕಳಚಿ ಬಿದ್ದಿತು ಬಂಧ ಕಷ್ಟಗಳಿಗಿಂತಲೂ ಪರಿಹಾರಗಳಿಂದ  ತತ್ತರಿಸಿದೆ  ಎದೆ  ಗಂಟು ಬಿಡಿಸಲು ಹೋಗಿ ಎಲ್ಲಾ  ಗೋಜಲುಗೋಜಲಾಗಿದೆ  ದೈವವೇ! ಹಿಂಸೆಯಿಂದಲೂ ವಂಚಿತವಾಗುತ್ತಿದೆ  ಮನಸ್ಸು ತನ್ನ  ಆರಾಧಕನ  ಮೇಲೆ ಅವಳಿಗೇಕೆ ಇಷ್ಟೊಂದು ಸಿಟ್ಟು? ಬಿಸಿ ನಿಟ್ಟುಸಿರುಗಳು  ಕಂಬನಿಯ ಸ್ಥಳವನ್ನಾಕ್ರಮಿಸಿದಾಗ ನೀರೂ ಆವಿಯಾಗಬಹುದೆಂದು ನಂಬಿಕೆ ಬಂತು ಆವಾಗ ಮದರಂಗಿ ಚಿತ್ತಾರದ ನಿನ್ನ ಮೃದು ಹಸ್ತಗಳ ನೆನಪು ಎದೆಯಿಂದ ಬೇರ್ಪಡಿಸುವುದಿದೆಯಲ್ಲ, ಕಿತ್ತಂತೆ ಉಗುರು ನಿನ್ನ ಮನೆ ಓಣಿಯನು ತಲುಪಲೊಲ್ಲದ  ಕುಸುಮದ ಗಂಧ ಬೀಸುಗಾಳಿಗೆ ಕಾದು ಕುಳಿತಿದೆ ಏತಕೆ  ಧೂಳಿ...

ಹೇಳು ಏನಾಯ್ತು ಮುಗ್ಧ ಮಾನಸವೇ

ಇಮೇಜ್
(ಮಿರ್ಜಾ ಗಾಲಿಬ್ ಅವರ 'ದಿಲ್ ಏ ನಾದಾನ್ ತುಝೇ ಹುವಾ ಕ್ಯಾ ಹೈ' ಎಂಬುದು ಚಿತ್ರಗೀತೆಯಾಗಿ ಬಹಳ ಪ್ರಸಿದ್ಧ. ಇದನ್ನು ಸುರೈಯ್ಯಾ ಮತ್ತು ತಲತ್ ಮಹಮೂದ್ ಅವರ ಮಧುರಕಂಠದಲ್ಲಿ ನೀವೂ ಕೇಳಬಹುದು . ಈ ಹಾಡಿನಲ್ಲಿ ಮಿರ್ಜಾ ಗಾಲಿಬ್ ಅವರ ತುಂಟತನವನ್ನು ಕಾಣಬಹುದು. ಒಬ್ಬ ಪ್ರೇಮಿ ತನ್ನ ಪ್ರೇಮಿಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆಕೆಗೆ ಕೋಪ ಬಂದಿರಬಹುದು. ಅವಳನ್ನು ರಮಿಸಲು ಪ್ರೇಮಿ ಪರಿಪರಿಯಾಗಿ ಪ್ರಯತ್ನಿಸುತ್ತಾನೆ. "ನಿನ್ನ ಹೊರತು ಬೇರಾರೂ ಇಲ್ಲ" ಎಂದು ಆಣೆ ಹಾಕುತ್ತಾನೆ. ಆಕೆಯ ಸೌಂದರ್ಯವನ್ನು ಹೊಗಳುತ್ತಾನೆ. ಪ್ರೇಮವೇ ಅರಿಯದ ನಿನ್ನಂಥವಳನ್ನು ನಾನು ಪ್ರೇಮಿಸಲು ಹಾತೊರೆಯುತ್ತಿರುವೆನಲ್ಲ ಎಂದು ಹಲುಬುತ್ತಾನೆ. "ಒಳ್ಳೆಯದು ಮಾಡಿದರೆ ಒಳಿತೇ ಆಗುತ್ತದೆ" ಎಂದು ದೊಡ್ಡ ಮಾತಾಡುತ್ತಾನೆ. ನನ್ನನ್ನು ಪ್ರೀತಿಸಿದರೆ ಅದರಿಂದ ಒಳಿತೇ ಆಗುತ್ತದೆ ಎಂಬುದು ಅವನ ಮಾತಿನ ಅರ್ಥ. ಕೊನೆಗೆ "ನೋಡು, ನನಗೆ ಯಾವ ಬೆಲೆಯೂ ಇಲ್ಲ ಅಲ್ಲವೇ? ಆದರೂ ಫ್ರೀ ಸಿಕ್ಕಾಗ ಯಾಕೆ ಬಿಡಬೇಕು?" ಎಂಬ ಸವಾಲು ಹಾಕುತ್ತಾನೆ!) ಹೇಳು ಏನಾಯ್ತು ಮುಗ್ಧಮಾನಸವೇ ಹೇಳು ಮದ್ದೇನು ಮನದ ಕಾಯಿಲೆಗೆ ಕಡೆಗಣ್ಣೇಕೆ ಪ್ರೇಮಯಾಚನೆಗೆ ದೈವವೇ ಹೇಳು ಹೀಗೆ ಏತಕ್ಕೆ ನನ್ನ ಬಾಯಲ್ಲೂ ಉಂಟು ನಾಲಗೆಯು ಕೇಳಲೇ ಬಾರದೇನು ನನ್ನರಿಕೆ ಇಲ್ಲ ಬೇರಾರೂ ಹೊರತು ನಿನ್ನನ್ನು ವ್ಯರ್ಥ ಸಂಘರ್ಷ ಆದರೂ ...

ಸಾವಿರಾರು ಕನಸುಗಳು

ಇಮೇಜ್
ಸಿ. ಪಿ. ರವಿಕುಮಾರ್  ಮಿರ್ಜಾ ಗಾಲಿಬ್ ಅವರ ಪ್ರಸಿದ್ಧ ಗಜಲ್ ಒಂದರ ಕನ್ನಡ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.  ಮಿರ್ಜಾ ಗಾಲಿಬ್ ಉರ್ದು ಶಾಯರಿಯ ಪ್ರಪಂಚದಲ್ಲಿ ಒಂದು ಮೇರುಶಿಖರವಿದ್ದಂತೆ.  ಅವರ ಪರಿಶುದ್ಧ ಉರ್ದು  ಮತ್ತು ಅಪೂರ್ವವೆನ್ನಿಸುವ ನುಡಿಗಟ್ಟುಗಳನ್ನು ಅನುವಾದಿಸುವುದು ಸುಲಭವಲ್ಲ! ಮೊದಲೇ ಹೇಳಿದಂತೆ ಇದೊಂದು ಪ್ರಯತ್ನ.  "ಹಜಾರೋ ಖ್ವಾಹಿಷೇ ಐಸೀ"  ಈ ಗಜಲ್ ಗಾಲಿಬ್ ಅವರ ಅತ್ಯಂತ ಜನಪ್ರಿಯ ರಚನೆಗಳಲ್ಲಿ ಒಂದು. ಇಲ್ಲಿ ಪದ್ಯಗಳ (ಶೇರ್) ನಡುವೆ ಎಲ್ಲೋ ಒಂದು ಕಥೆಯ ಎಳೆ ಇದೆ ಇಂದೂ ನಿಮಗೆ ಅನ್ನಿಸಬಹುದು. ಅನುರಕ್ತನಾದವನೊಬ್ಬನ ಕಥೆ. ಈ ಅನುರಕ್ತಿ ಒಬ್ಬ ಪ್ರೇಮಿಕೆಯಲ್ಲಿರಬಹುದು ಅಥವಾ ಮನಸ್ಸನ್ನು ಸೂರೆಗೊಳ್ಳುವ (ಶಾಯರಿಯಂಥ) ಇನ್ನಾವುದೇ ಕೆಲಸವೂ ಆಗಿರಬಹುದು.  ಮುಂದೆ ಓದುವ ಮುನ್ನ ಕವಿತೆಯ ಅನುವಾದವನ್ನು ಒಮ್ಮೆ ಓದಿ.  "ನಾನು ಕಂಡದ್ದು ಸಾವಿರಾರು ಕನಸುಗಳು, ಒಂದೊಂದನ್ನು ಪೂರೈಸಲೂ ಜೀವ ತೇಯಬೇಕು" ಎಂದು ಕವಿ ಹೇಳಿದಾಗ ಅವನು ತನ್ನ ಕಾವ್ಯ ರಚನೆಯ ಬಗ್ಗೆಯೇ ಹೇಳುತ್ತಿರಬಹುದು. "ಬಹಳಷ್ಟು ಇನ್ನೂ ಅಪೂರ್ಣ" ಎನ್ನುವಾಗ  ತಾನು ಬರೆಯಬೇಕಾದದ್ದು ಇನ್ನೂ ತುಂಬಾ ಇದೆ ಎನ್ನುವ ಅರ್ಥವೂ ಹೊಮ್ಮಬಹುದು.  "ಕೈಗೆ ನೆತ್ತರು ..." ಎನ್ನುವ ಸಾಲುಗಳಲ್ಲಿ ಗಾಲಿಬ್ ತನ್ನ ವಿಮರ್ಶಕರನ್ನು ಕುರಿತು ಹೇಳುತ್ತಿರಬಹುದೇ ಎಂಬ ಅನುಮಾನವೂ ನನಗೆ ಬರುತ್ತಿದೆ.  "ಮದಿರೆಯ ಕ...