ನೀನೀಗ ನನಗೆ ಹೇಳಿದ ಮಾತು ಕೇಳಿಸಿಕೊಂಡವರು
ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - 2 ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ Add caption ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಎಂಬ ಸಂಗ್ರಹದ ಎರಡನೇ ಸಾನೆಟ್. ಮೊದಲ ಸಾನೆಟ್ಟಿನ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಮೊದಲ ಸಾನೆಟ್ಟಿನಲ್ಲಿ ಕವಯಿತ್ರಿಗೆ ಅವಳ ಪ್ರೇಮಿಯು ತನ್ನ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ. ಇದನ್ನು ಕೇಳಿದಾಗ ಕವಯಿತ್ರಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳು ಈ ಸಾನೆಟ್ಟಿನಲ್ಲಿ ಚಿತ್ರಿತವಾಗಿವೆ. ಪ್ರಿಯಕರನ ಪ್ರೇಮನಿವೇದನೆಯಿಂದ ಅವಳಿಗೆ ಜೀವನದಲ್ಲಿ ಮತ್ತೊಮ್ಮೆ ಉತ್ಸಾಹ ಮೂಡಿದೆ. ಅವಳಿಗೆ ದೇವರೇ ಬಂದು (ಜೀವನ)ಪ್ರೇಮವನ್ನು ಬೋಧಿಸಿದಂತೆ ತೋರುತ್ತದೆ. ದೈಹಿಕ ನೋವುಗಳನ್ನು ಕುರಿತು ಅವಳಿಗೆ ನೆನಪಾಗುತ್ತದೆ. ಅದು ಅವಳಿಗೆ ತಗುಲಿದ್ದ ಶಾಪವೆಂದು ಕವಯಿತ್ರಿಗೆ ಅನ್ನಿಸುತ್ತದೆ. ಇದೇ ಕಾರಣ ತನ್ನ ಪ್ರಿಯಕರನನ್ನು ನೋಡಲು ಕೂಡಾ ಆವಳಿಗೆ ಸಾಧ್ಯವಾಗಿರಲಿಲ್ಲ. ಈ ದೈಹಿಕ ಬಾಧೆಗಳ ಕಾರಣ ತನ್ನ ಪ್ರಾಣವೇ ಹೋಗಿದ್ದರೂ ಪ್ರಿಯಕರನನ್ನು ನೋಡದ ಬಾಧೆಗಿಂತ ಅದು ಹೆಚ್ಚಲ್ಲ ಎಂದು ಕವಯಿತ್ರಿಗೆ ಅನ್ನಿಸುತ್ತದೆ. ಇದುವರೆಗೆ ದೈವವೇ ತನಗೆ ಪ್ರೇಮವನ್ನು ನಿರಾಕರಿಸಿತ್ತೇ? ಈಗ ತನಗೆ ಅದು ಸಿಕ್ಕಿದ ಮೇಲೆ ಯಾವುದೇ ಶಕ್ತಿಯೂ ಪ್ರಿಯಕರನಿಂದ ತನ್ನನ್ನು ಬೇರ...