ಪೋಸ್ಟ್‌ಗಳು

Iraq ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ದಾರಿ ತೋರುವ ಚಪ್ಪಲಿಗಳು

ಇಮೇಜ್
ಮೂಲ ... ಕಾಜಲ್ ಅಹ್ಮದ್ (ಕರ್ಡಿಸ್ತಾನ್ ಇರಾಕ್) ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ (ಇರಾಕ್ ದೇಶ ಅನೇಕ ರಾಷ್ಟ್ರಗಳಿಂದ ಬಹಿಷ್ಕಾರಕ್ಕೆ ಒಳಗಾದ ದೇಶ. ಬಹಳಷ್ಟು ದೇಶಗಳು ವ್ಯಾಪಾರ-ವಹಿವಾಟುಗಳ ವಿಷಯದಲ್ಲಿ ಇರಾಕ್ ದೇಶವನ್ನು ದೂರ ಇಟ್ಟಿವೆ. ಅನೇಕ ಯುವಕ-ಯುವತಿಯರು ತಮ್ಮ ದೇಶವನ್ನು ತೊರೆದು ಹೊರಡಲು ಸನ್ನದ್ಧರಾಗುವುದನ್ನು ಕಂಡಾಗ ಕವಯಿತ್ರಿಯ ಮನಸ್ಸು ಪ್ರತಿಕ್ರಯಿಸುತ್ತದೆ. ಹಿಂದೊಮ್ಮೆ ಬೆಟ್ಟಗಳನ್ನು ತೊರೆದು ನಗರಗಳಿಗೆ ಹೊರಟ ಜನರಂತೆಯೇ ತಾಯ್ನಾಡನ್ನು ತೊರೆದು ಜನ ಇನ್ನಿತರ ದೇಶಗಳಿಗೆ ಹೊರಟಿದ್ದಾರೆ. ಹಾಗೆ ಹೊರಟಾಗ ತಾಯ್ನಾಡಿನ ಹೃದಯದ (ರಾಜಧಾನಿ) ಮೂಲಕವೇ ವಿಮಾನ ಹತ್ತಿ ಹಾರಿಹೋಗಬೇಕು. ಹಾಗೆ ಹೋದ ಜನ ಪರದೇಶದಲ್ಲಿ ಸ್ವತಂತ್ರರಾಗಿ ತಲೆ ಎತ್ತಿ ಬದುಕುತ್ತಾರೆಯೇ? ಯಾರದೋ ಮನೆಯ ನೆಲಮಾಳಿಗೆಯಲ್ಲಿ ಗುಪ್ತವಾಗಿ ಬದುಕಬೇಕಾದ ಸಂದರ್ಭದಲ್ಲಿ ಸಿಲುಕಿಕೊಳ್ಳುವರೇ? ಅವರು ಕನಸಿದ ಬಣ್ಣಬಣ್ಣದ ಕಿಟಕಿಗಳ ಜಗತ್ತು ಅವರದ್ದಾದೀತೇ? ತಮ್ಮದೇ ದೇಶದಲ್ಲಿ ಅವರು ಇಂತಹ ಕನಸುಗಳನ್ನು ಕಾಣಲು ಸಾಧ್ಯವಿಲ್ಲವೇ?) ಅವನು ಬೆಟ್ಟಗಳಿಗೆ ಹೋಗುತ್ತಿದ್ದ ಕಾಲದಲ್ಲಿ ಶೂಗಳನ್ನು ಕಳಚಿಟ್ಟಾಗ ಅವು ನಗರದ ಕಡೆ ಮುಖ ಮಾಡುತ್ತಿದ್ದವು. ತನ್ನ ತಾಯ್ತಾಡು ಸ್ವತಂತ್ರವಾಗಲಿದೆ ಎಂಬುದೇ ಇದರರ್ಥ ಎಂದೇನೂ ಅವನು ಭ್ರಮಿಸಲಿಲ್ಲ. ಈಗ ಅವನು ನಗರದಲ್ಲೇ ವಾಸವಾಗಿದ್ದಾನೆ. ಶೂಗಳನ್ನು ಕಳಚಿಟ್ಟಾಗ ಅವು ಮುಖ ಮಾಡುತ್ತವೆ ದೂರದ ಯಾವುದೋ ನಾಡಿ...

ಹಣ್ಣು ವ್ಯಾಪಾರಿಯ ಫಿಲಾಸಫಿ

ಇಮೇಜ್
ಮೂಲ ಕವಯಿತ್ರಿ ... ಕಾಜಲ್ ಅಹ್ಮದ್ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ಓ ಗೆಳೆಯಾ, ನೀನು ನೇರಳೆಯ ಹಾಗೆ ಒಂದೇ ಸಲ ಕಚ್ಚಿದರೂ ಉಗಿದುಬಿಡುತ್ತೇನೆ ಒಳಗಿನ ಹೂರಣವನ್ನಷ್ಟೂ. ಓ ನನ್ನ ಪೂರ್ವದ ಪ್ರೇಮಾಗ್ನಿಯೇ, ನೀನು ಒಂದು ಕಿತ್ತಳೆಯ ಹಾಗೆ, ಸಲೀಸಾಗಿ ಕಳಚಿಬಿಡುವೆ. ಕೆಲವೊಮ್ಮೆ ನೀನು ಸೇಬಿನ ಹಾಗೆ. ಸಿಪ್ಪೆ ಸಮೇತವಾದರೂ ಸರಿ ಸಿಪ್ಪೆ ಇಲ್ಲದೆಯೂ ಓಕೆ. ಪಕ್ಕದ ಮನೆಯವರೇ! ನೀವು ಹಣ್ಣಿನ ಚಾಕುವಿನಂತೆ. ನಮ್ಮ ಊಟದ ಮೇಜಿಗೂ ನಿಮಗೂ ಬಿಡಿಸಲಾರದ ನಂಟು. ಬೇಸರಿಸಬೇಡಿ ಹೀಗೆ ಹೇಳಿದೆನೆಂದು: ಹಣ್ಣಿನ ಚಾಕು ನಿಷ್ಟ್ರಯೋಜಕ ವಸ್ತು ಓ ತಾಯ್ನಾಡೇ! ನೀನು ನಿಂಬೆಹಣ್ಣಿನ ಹಾಗೆ. ನಿನ್ನ ಹೆಸರು ಹೇಳಿದಾಗ ಎಲ್ಲರ ಬಾಯಲ್ಲಿ ಊರುತ್ತದೆ ನೀರು. ನನ್ನ ಮೈಮೇಲೆ ಏಳುತ್ತದೆ ಮುಳ್ಳು. ಓ ಅಪರಿಚಿತ! ಕಲ್ಲಂಗಡಿಯಂತೆ ನೀನು, ಖಂಡಿತ. ನಾನು ಚೂರಿಯ ಅವತಾರ ತಾಳದೇ ತಿಳಿಯದು ನಿನ್ನ ಅಂತರಂಗ.