ಪೋಸ್ಟ್‌ಗಳು

ವಿಜ್ಞಾನಕವಿತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಿಜ್ಞಾನಕ್ಕೆ ಕವಿಯ ಪತ್ರ

ಅನಾದಿ ಕಾಲನ ದಿಟಪುತ್ರಿಯೆಂದರೆ ನೀನಲ್ಲವೇ  ಓ ವಿಜ್ಞಾನ! ಬದಲಿಸದಿದ್ದುದೇನಿದೆ  ನೀನು ನಿನ್ನ ಕಣ್ಣುಗಳಿಂದ,  ವಾರೆನೋಟ  ನೋಡುತ್ತಾ ಎವೆಯಿಕ್ಕದೆ! ಕವಿಯ ಹೃದಯವನ್ನೇಕೆ ಕುಕ್ಕುವೆ  ಓ ರಣಪಕ್ಷಿ, ನೀರಸ ವಾಸ್ತವದ ನಿನ್ನ ರೆಕ್ಕೆಯನ್ನು ಬಡಿಯುತ್ತಾ? ಪ್ರೀತಿಸುವನಾದರೂ ಹೇಗೆ ಕವಿ ನಿನ್ನನ್ನು?  ನಿಶೆಯಲ್ಲವನು  ನಭದ  ನಕ್ಷತ್ರಲೋಕದ ನಿಧಿಗಳನ್ನರಸಿ ಹೊರಟರೆ  ಕಲ್ಪನೆಯ ಗರಿ ಬಿಚ್ಚಿ ವಿಹಂಗಮದಂತೆ, ಅಯ್ಯೋ  ಹಾರಗೊಡದಲ್ಲ  ನಿನ್ನ  ಅಡ್ಡಗಾಲು! ಧ್ರುವನನ್ನು ನೂಕಿ ಬೀಳಿಸಿದೆ ಕೆಳಕ್ಕೆ! ಸಪ್ತಋಷಿಗಳನ್ನು ಹೆದರಿಸಿ ಮೇಲೆಬ್ಬಿಸಿದೆ ಏಳು ಏಳೆಂದು! ಬೆದರಿಸಿ ಓಡಿಸಲಿಲ್ಲವೇ  ಶಶಾಂಕನ ಮೇಲಿದ್ದ ಮೊಲವನ್ನು? ಪೂರ್ಣಿಮೆಗೆ ಉಕ್ಕುವ ಸಾಗರದ ಸಂಭ್ರಮಕ್ಕೂ ನಿನ್ನದೊಂದು  ಶುಷ್ಕ ವಿವರಣೆ!  ಕದ್ದೆಯಲ್ಲ ಚಕ್ರವಾಕಗಳಿಂದ ಪ್ರೇಮಸ್ವರ್ಗವನ್ನೂ  ನಿಷ್ಕರುಣಿ! ಕದ್ದೆಯಲ್ಲ ಕೊಳದ ಬಳಿ ಹೂ ಬಿಟ್ಟ ಹುಣಸೇ- ಮರದಡಿಗೆ  ಬಚ್ಚಿಟ್ಟ ನನ್ನಲ್ಲಿ ಚಿಗುರಿದ್ದ ಒಂದೇ ಸಿಹಿಗನಸೇ!   ಮೂಲ - ಎಡ್ಗರ್ ಆಲನ್ ಪೋ  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್   Science! true daughter of Old Time thou art! Who alterest all things with thy peering eyes. Why preyest thou thus upon the poet’s heart, Vulture, who...

ವಿನಾಶ ಮತ್ತು ವಿಕಾಸ (ವಿಜ್ಞಾನ ಕವಿತೆ )

ಇಮೇಜ್
ಸಿ. ಪಿ. ರವಿಕುಮಾರ್   ಬಹಳ ಹಿಂದೆ ಟ್ರಯಾಸಿಕ್ ಯುಗದ ಅಂತ್ಯಭಾಗದಲ್ಲಿ ಅರವತ್ತಾರು ದಶಲಕ್ಷ ವರ್ಷಗಳ ಆಚೆಯ ಹಿಂಸಾಯುಗ  ಆಗಿನ್ನೂ ಭೂವಲಯದಲ್ಲಿರಲಿಲ್ಲ ಹಿಮಾಚ್ಛಾದಿತ ಧ್ರುವಗಳು ಹರಡಿಕೊಂಡಿತ್ತು ಎಲ್ಲೆಲ್ಲೂ ದಟ್ಟಕಾಡು  ಓಡಾಡಿಕೊಂಡಿದ್ದವು ಕೋರೆದಾಡೆಗಳ ಡೈನೋಸಾರ್ ಸರೀಸೃಪಗಳು ಕಂಡದ್ದನ್ನು ಕಬಳಿಸುವುದಷ್ಟೇ ಕಲಿತಿದ್ದ ಕ್ರೂರ ಮೃಗಗಳು  ಹಾರಾಡಲು ಕಲಿತ ಟೆರೋಸಾರ್ ಖಗಗಳು  ಇದೀಗ ಇನ್ನೂ ಬಲಿಯುತ್ತಿತ್ತು ವಿಕಾಸದ ರೆಕ್ಕೆ  ಹುಟ್ಟಿಕೊಂಡಿದ್ದವು ಕೆಲವು ನೆಲವಕ್ಕಿ  ಡೈನೋಸಾರ್ ಕಣ್ತಪ್ಪಿಸಿ ತಿನ್ನುತ್ತಿದ್ದವು ಕಾಳನ್ನು ಹೆಕ್ಕಿ  ಬದುಕಿದ್ದವು ಹೇಗೋ ಬಡಪಕ್ಷಿ  ಆಗ ನಡೆಯಿತೊಂದು ಅಕಲ್ಪಿತ ಘಟನೆ  ನಡೆಸಿ ಕ್ರೂರಮೃಗ ಹನನ ನೀಡಲೋ ಎಂಬಂತೆ ಭೂಮಿಗೆ ಉಪಶಮನ  ಯಾವುದೋ ಶಕ್ತಿಯ ಅದ್ಭುತ ನಟನೆ: ಭೂಮಿಗೆ ಲಕ್ಷಾಂತರ ಮೈಲಿ  ದೂರದಲ್ಲಿ  ಸೂರ್ಯನ ಸುತ್ತ ಸುತ್ತುತ್ತಿದ್ದ ಒಂದು  ಹೆಬ್ಬಂಡೆ -- ಬ್ರಹ್ಮಾಸ್ತ್ರದಂತಿರುವ  ಆಸ್ಟೆರಾಯ್ಡು -- ಗರಗರ ಸುತ್ತುತ್ತ  ಮಹಾವೇಗದಲ್ಲಿ ಚಲಿಸುತ್ತ  ತ್ಯಜಿಸಿ ತನ್ನ ಪ್ರದಕ್ಷಿಣಾ ಪಥ ತೊಟ್ಟು ನಿರ್ನಾಮದ ಶಪಥ   ಉರಿಯುತ್ತ ಉಲ್ಕೆಯಂತೆ  ನೇರವಾಗಿ ಅಪ್ಪಳಿಸಿತಂತೆ...