ಪೋಸ್ಟ್‌ಗಳು

Kutti Revathi ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನಿನಗಾಗಿ ತಂದಿರುವೆ ಈ ವೈಶಾಖ

ಇಮೇಜ್
ಮೂಲ : ಡಾ. ಎಸ್. (ಕುಟ್ಟಿ) ರೇವತಿ (ತಮಿಳು) ಇಂಗ್ಲಿಷ್ ಅನುವಾದ: ಕಲ್ಯಾಣ್ ರಾಮನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ನಿನ್ನೆದೆಯ ಹುಲ್ಲುಗಾವಲು ಒಣಗಿಹೋಗಿದೆಯೇ,   ಪತ್ರಗಳೇ ಬರೆದಿಲ್ಲ ಈನಡುವೆ.  ಪ್ರಶಾಂತಸಾಗರದಂತಿರುವ ನಿನ್ನ ಪತ್ರಗಳು, ಅವುಗಳ ಕೆಳಗೆ ಭೋರ್ಗರೆಯುವ ಕಣ್ಣೀರಿನ ಕಡಲು.  ರಕ್ಷಿಸಲು ಧಾವಿಸಬೇಕೆಂಬ ತವಕ   ಉಂಟು ಮಾಡುವ ನಿನ್ನ ಮೃದುವಾದ ಒಡಲು.  ಬೇಸಗೆಯ ಬೀದಿಯಲ್ಲಿ ಬೇರಾರೂ ಕಾಣಿಸುವುದಿಲ್ಲ,  ಹೊರತಾಗಿ ಒಬ್ಬ ಪೋಸ್ಟ್ ಮ್ಯಾನ್,  ಅವನು ತರುತ್ತಿದ್ದಾನೆ ಕತ್ತು ಹಿಸುಕಿದ ಪತ್ರಗಳನ್ನು ಹೊತ್ತು, ಹಾಗೂ ಬಾಲ್ಯದ ರಹಸ್ಯಗಳನ್ನು ಕಳೆದುಕೊಂಡ ಹುಡುಗಿಯನ್ನು ಬಿಟ್ಟು.  ಎಲ್ಲ ತೊರೆಗಳನ್ನೂ ಒಂದೇ ಗುಟುಕಿನಲ್ಲಿ  ಹೀರಿಬಿಡುವ ವೈಶಾಖದ ವಿಚಿತ್ರ ಹಕ್ಕಿ  ಮೆಲ್ಲನೆ ಬಂದಾಗ ಕಲ್ಲುಬಂಡೆಗಳಿಗೂ ಜೀವ ಬರುತ್ತದೆ.  ಮಕ್ಕಳು ಆಡಲು ನಿರಾಕರಿಸುತ್ತಾರೆ  ನಿತ್ಯವೂ ರಕ್ತದಲ್ಲಿ ಮಿಂದೇಳುವ ಸೂರ್ಯನ ಕೆಳಗೆ.   ಒಂದು ಖಾಲೀ ಮನೆಯಲ್ಲಿ ಬಹಳ ಹೊತ್ತಿನಿಂದಲೂ  ಟೆಲಿಫೋನ್ ರಿಂಗಣಿಸುತ್ತಿದೆ.  ಹುಡುಗಿಯರ ಕಣ್ಣುಗಳು ಮಬ್ಬಿನಲ್ಲಿ ತೇಲುತ್ತವೆ.  ಹಿಂದೊಮ್ಮೆ  ಮರಗಳಿಗೆ ನಿಲ್ಲಲೂ ಶಕ್ತಿಯಿಲ್ಲದ ಒಂದು ಬೇಸಗೆಯಲ್ಲಿ  ನನ್ನ ದೇಹವನ್ನು ಜೀವಂತ, ಅಗಾಧವೆಂದು  ಬಣ್ಣಿಸಿದ್ದೆ ನೀನು....

ಬೂದುಹಕ್ಕಿ

ಇಮೇಜ್
ಮೂಲ: ಕುಟ್ಟಿ ರೇವತಿ (ತಮಿಳುನಾಡು)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಮರದ ನೆರಳು  ಮೌನವಾಗಿ ಕುಳಿತಿದೆ ಎಲೆಗಳ ಛಾವಣಿಯ ಕೆಳಗೆ  ಬೂದುಹಕ್ಕಿಯ ಹಾಗೆ  ಬೀದಿಯುದ್ದಕ್ಕೂ ಚಾಚಿಕೊಂಡಿರುವ ಬಿಮ್ಮನೆಯ ಮೌನವನ್ನೂ  ಕಸಿದುಕೊಂಡು ಹಾರಿಹೋಗುವುದೋ ಎಂಬಂತೆ.  ಒಬ್ಬಳು ಹುಡುಗಿ ಗುಡಿಸುತ್ತಾ ಬಂದಳು.  ಇಲ್ಲೇ ಅವನು ನನಗೆ ಕಾಯಲು ಹೇಳಿದ್ದು.  ಇಲ್ಲೇ ನನ್ನ ಪ್ರೇಮವನ್ನು ಬೇಡಿದ್ದು.  ತಿರುಗಿ ತಿರುಗಿ ನೋಡುತ್ತಾ ನನ್ನ ಕಡೆ ಮೌನವನ್ನು ಗುಡಿಸಿಕೊಂಡು   ಕಸದ ಹುಡುಗಿ  ತೆರಳಿ ಎಷ್ಟೋ ಹೊತ್ತಾಯಿತು.  ಕತ್ತಲು ಕೆಳಗೆ ಸುರಿಯುತ್ತಿದೆ ಈಗ ಕಣ್ಣೀರಿನ ಧಾರೆಯಂತೆ.  ಕೊನೆಗೂ ತನ್ನ ಋತುಮಾನ ಪರ್ವಕ್ಕೆ  ತಾನೇ ಬರಲು ಸಿದ್ಧವಾದ ದೇಹದಂತೆ ಮೋಡಿಗೊಳಗಾಗಿ, ಭೀತಿಯುಕ್ತಳಾಗಿ ನಾನು ಕಾಯುತ್ತೇನೆ.  ಇಗೋ ... ಅವನು ದೂರದಲ್ಲಿ ನಡೆದು ಬರುತ್ತಿದ್ದಾನೆ. ಮಳೆಯನ್ನು ಕಾರಿ  ಹಗುರಾಗಲು ಸಿದ್ಧವಾದ  ಮೋಡದಂತೆ.   ಸಂತೋಷ ತಾಳಲಾರದೇ ನನ್ನ ಮೈಯಲ್ಲಿ ಕೆಂಪು ತಾರೆಗಳು  ಬಿರಿಯುತ್ತಿವೆ.  ಮರವು ಮಾತ್ರ  ಸ್ತಬ್ಧವಾಗಿದೆ, ಕಿಂಚಿತ್ತೂ ಅಲುಗಾಡದೆ, ಬೂದುಹಕ್ಕಿಯ ಹಾಗೆ.