ಪೋಸ್ಟ್‌ಗಳು

Kunwar Bechain ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬೇಕಾದಷ್ಟು ಪಿನ್ನು

ಬೇಕಾದಷ್ಟು ಪಿನ್ನು  ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್ ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಬದುಕಿನ ಅರ್ಥ  ಸಾಯುವುದೆಂದೇ ಆಗಿಬಿಟ್ಟಿದೆ ಹಾಗೂ  ಬದುಕಲು ದಿನಗಳು  ಬೇಕಾದಷ್ಟಿವೆ ಇನ್ನೂ  ಕಾಲದ ಮೇಜಿನ ಮೇಲೆ  ಸೂಜಿ ಚುಚ್ಚಲು ಇಟ್ಟ  ದಿಂಬಿನಂತಿದೆ ಬದುಕು;  ಸ್ನೇಹದ ಅರ್ಥ  ಚುಚ್ಚುವುದೆಂದೇ ಆಗಿಬಿಟ್ಟಿದೆ  ಹಾಗೂ  ಚುಚ್ಚಲು ಇವೆ  ಬೇಕಾದಷ್ಟು  ಪಿನ್ನು ಕೆಳ ಮಧ್ಯಮ ವರ್ಗದ   ಅಲ್ಪ ಮಾಸಿಕ ವೇತನದಂತಿದೆ ಬದುಕು;  ವೇತನದ ಅರ್ಥ  ತೀರಿಸುವುದೆಂದೇ ಆಗಿಬಿಟ್ಟಿದೆ ಹಾಗೂ  ತೀರದಷ್ಟಿವೆ ಎಣಿಸಿದರೆ ಋಣಗಳನ್ನು  Kannada Translation by C.P. Ravikumar of a Hindi Poem by Kunwar Bechain