ಪೋಸ್ಟ್‌ಗಳು

ನೆನಪುಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮೈಸೂರುಪಾಕ್ ನೆನಪುಗಳು

ಇಮೇಜ್
ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನನಗೆ ರಾಂಕ್ ಬರಬಹುದು ಎಂದು ನ್ಯಾಷನಲ್ ಹೈಸ್ಕೂಲಿನ  ಕೆಲವು ಅಧ್ಯಾಪಕರು ಅಪೇಕ್ಷೆ ಇಟ್ಟುಕೊಂಡಿದ್ದರು. ನಾನು ಪ್ರಥಮ ಭಾಷೆ ಕನ್ನಡ ತೆಗೆದುಕೊಂಡ ಕಾರಣ ಇದು ಸುಲಭವಲ್ಲ ಎಂದು ಅವರಿಗೆ ತಿಳಿದಿತ್ತು. ಆಗ ಕನ್ನಡದಲ್ಲಿ ಹೆಚ್ಚು ಮಾರ್ಕ್ಸ್ ಕೊಡುತ್ತಿರಲಿಲ್ಲ.  ಎರಡು ಪರೀಕ್ಷೆಗಳು ಇರುತ್ತಿದ್ದವು. ಮುಖ್ಯ ಪಠ್ಯಪುಸ್ತಕವನ್ನು ಆಧರಿಸಿ ಮೊದಲ ಪರೀಕ್ಷೆ. ನಾನ್ ಡೀಟೇಲ್ಡ್ ಪಠ್ಯವನ್ನು ಆಧರಿಸಿ ಎರಡನೇ ಪರೀಕ್ಷೆ. ಇವು ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತಿದ್ದವು. ಎರಡನೇ ಭಾಗದಲ್ಲಿ ಪ್ರಬಂಧ, ಪತ್ರಲೇಖನ, ನಾವು ಹಿಂದೆ ಓದಿರದ ಕವಿತೆಯ ವಿಶ್ಲೇಷಣೆ ಇವೆಲ್ಲ ಇರುತ್ತಿದ್ದವು.   ಕನ್ನಡದಲ್ಲಿ ನನಗೆ ನೂರಾ ಐವತ್ತಕ್ಕೆ ನೂರಾ ಇಪ್ಪತ್ತೈದು ಅಂಕಗಳು ಬಂದವು. ಹೀಗಾಗಿ ಕನ್ನಡದ ಕಾರಣ ರಾಂಕ್ ತಪ್ಪಿತು ಎಂದು ಹೇಳಲು ಸಾಧ್ಯವಿರಲಿಲ್ಲ. ಸೋಷಿಯಲ್ ಸ್ಟಡೀಸ್ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಬಂದು ನನಗೆ ನಲವತ್ತಮೂರನೇ ರಾಂಕ್ ಬಂತು.  ಪ್ರಥಮ ಪಿಯುಸಿ ಪರೀಕ್ಷೆಗಳು ಮುಗಿದ ನಂತರ ನಮ್ಮ ತಾಯಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಗೈನಕಾಲಜಿ ಸಂಬಂಧದ ಚಿಕಿತ್ಸೆಗಾಗಿ  ಅವರು  ಮಾರ್ಥಾಸ್ ಆಸ್ಪತ್ರೆ ಸೇರಿದರು. ಅವರನ್ನು ಸೇರಿಸಲು ನಾನು ಮತ್ತು ನನ್ನ ದೊಡ್ಡಮ್ಮ ಇಂದಿರಮ್ಮ ಹೋಗಿದ್ದೆವು.  ನಮ್ಮ ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಅದಾದ ನಂತರ ಅವರಿಗೆ ಶುಶ್ರೂಷೆಯ ಅಗತ್ಯ ಇತ್...

ನಾಗಿರೆಡ್ಡಿ ಅವರನ್ನು ಮಾತಾಡಿಸಿದ್ದು

ಇಮೇಜ್
ನಾನು ಇನ್ನೂ ಆರನೇ ಅಥವಾ ಏಳನೇ ಕ್ಲಾಸಿನಲ್ಲಿದ್ದಾಗ ನಡೆದ ಘಟನೆ. ನಮ್ಮ ತಂದೆಗೆ ದೆಹಲಿಗೆ ವರ್ಗವಾಗಿದ್ದರಿಂದ ಐದು ವರ್ಷ ನಾವು ಅಲ್ಲಿ ವಾಸ ಮಾಡಬೇಕಾಯಿತು. ಮೊದಲು ಲೋಧಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಒಂದೇ ಕೋಣೆಯಲ್ಲಿ ಒಂದು ವರ್ಷ ವಾಸ ಮಾಡಿದ ನಂತರ ಜೋರ್ ಬಾಗ್ ಎಂಬಲ್ಲಿ ನಮಗೆ ಬಾಡಿಗೆ ಮನೆ ಸಿಕ್ಕಿತು. ನಮ್ಮ ತಂದೆಯವರ ಆಫೀಸಿಗಾಗಿ ಬಾಡಿಗೆ ಪಡೆದ ಕಟ್ಟಡದಲ್ಲಿ ಮೇಲಿನ ಎರಡು ಕೋಣೆಯ ಪುಟ್ಟ ಮನೆಯನ್ನು ನಮಗೆ ಸಬ್-ಲೆಟ್ ಮಾಡಿಕೊಟ್ಟರು. ಹೀಗೆ ಒಂದು ಕೋಣೆಯ ಮನೆಯಿಂದ ಎರಡು ಕೋಣೆಯ ಮನೆಗೆ ಪ್ರಗತಿ ಸಾಧಿಸಿದೆವು. ಇಲ್ಲಿ ಎರಡು ಕೋಣೆ ಎಂದರೆ ನೀವು ಟೂ ಬಿ.ಎಚ್.ಕೆ. ಎಂದೆಲ್ಲ ಕಲ್ಪಿಸಿಕೊಳ್ಳಬೇಡಿ. ಅಲ್ಲಿದ್ದದ್ದು ಎರಡೇ ಕೋಣೆ. ಒಂದು ನಮಗೆ ಲಿವಿಂಗ್ ರೂಮ್, ಬೆಡ್ ರೂಮ್, ಸ್ಟಡಿ ಎಲ್ಲವೂ ಆಗಿತ್ತು. ಇನ್ನೊಂದು ಕಿಚನ್, ಡೈನಿಂಗ್ ಹಾಲ್ ಆಗಿತ್ತು. ಆದರೆ ಮನೆಯ ಸುತ್ತಲೂ ಇದ್ದ ಬಿಸಿಲುಮಚ್ಚು ದೇಶೋವಿಶಾಲವಾಗಿತ್ತು. ಬೇಸಗೆ ದಿನಗಳಲ್ಲಿ ಅಲ್ಲಿ ಚಾರ್ ಪಾಯಿ ಹಾಕಿಕೊಂಡು ನಾವು ಮಲಗಿಕೊಳ್ಳುತ್ತಿದ್ದೆವು.  ಚಳಿಗಾಲದಲ್ಲಿ ಮಾತ್ರ ಒಂದು ಕೋಣೆಯಲ್ಲಿ ರಜಾಯಿಯ ಕೆಳಗೆ ಸೇರಿಕೊಳ್ಳುತ್ತಿದ್ದೆವು. ಇದೆಲ್ಲ ಯಾಕೆ ಹೇಳಲು ಹೊರಟೆ ಎಂದರೆ ನಿಮಗೆ ಮುಂದೆ ಹೇಳಲು ಹೊರಟಿರುವ ಕಥೆಗೆ ಪೀಠಿಕೆ, ಅಷ್ಟೇ. ನಮ್ಮ ತಂದೆಯವರ ಆಫೀಸ್ ಅದೇ ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿತ್ತು. ಅಲ್ಲಿ ಒಂದು ಗೆಸ್ಟ್ ರೂಮ್ ಕೂಡಾ ಇತ್ತು. ಬೆಂಗಳೂರಿನಲ್ಲಿ ನಮ್ಮ ತಂದೆಯವರ ಆಫ...

ಎನ್ ಆರ್ ಎನ್ - ನೆನಪುಗಳು

ಇಮೇಜ್
  ಭಾರತಕ್ಕೆ ಮರಳಿ ಬಂದಾಗ ಇನ್ಫೋಸಿಸ್ ಕಚೇರಿಯಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ಡೈರೆಕ್ಟರ್ ಆಫೀಸಿನಲ್ಲಿ ನಾರಾಯಣ ಮೂರ್ತಿ ಕೂಡುತ್ತಿದ್ದರು. ಅವರಿಗೆ ಮುಂಗೋಪ ಹೆಚ್ಚು. ಒಮ್ಮೊಮ್ಮೆ ಸೆಕ್ರೆಟರಿಯ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದರು. ಅವರ ಆಲೋಚನೆಯ ರೀತಿ ವಿಭಿನ್ನವಾಗಿತ್ತು.  ಭಾರತದಿಂದ ಪ್ರತಿಭಾವಂತರನ್ನು ಹೊರದೇಶಕ್ಕೆ ಕಳಿಸಿ ಅಲ್ಲಿ ಪ್ರಾಜೆಕ್ಟ್ ಮಾಡಿಸಿ ಹಣ ಮಾಡುವ ಕಂಪನಿಗಳಿಗೆ ಬಾಡಿ ಶಾಪರ್ಸ್ ಎಂದು ವ್ಯಂಗ್ಯದಿಂದ ಮಾತಾಡುತ್ತಿದ್ದ ಕಾಲದಲ್ಲಿ ಭಾರತದಲ್ಲೇ ಪ್ರಾಜೆಕ್ಟ್ ಮಾಡಿಸಬೇಕು ಎಂಬ ಆಸೆಯನ್ನು ಮೂರ್ತಿ ಹೊಂದಿದ್ದರು.   ಕೆ.ಎಸ್.ಆರ್.ಟಿ.ಸಿ.ಗೆ ಟಿಕೆಟಿಂಗ್ ವ್ಯವಸ್ಥೆಯ ತಂತ್ರಾಂಶವನ್ನು ಅವರು ನಿಶ್ಶುಲ್ಕವಾಗಿ ತಯಾರಿಸಿಕೊಟ್ಟರು. ಟ್ರಾಕ್ಸ್ ಎಂಬ ಹೆಸರಿನ ಈ ತಂತ್ರಾಂಶವನ್ನು ನಿರ್ಮಿಸಲು ಸಾಕಷ್ಟು ಇಂಜಿನಿಯರುಗಳು ಅನೇಕ ತಿಂಗಳು ದುಡಿದರು.  ಬಹುಶಃ ಇಂಥ ಪ್ರಯತ್ನಗಳು ಬೇರೆಡೆ ನಡೆದಿರಲಾರವು.   ಸುಧಾ ಮೂರ್ತಿ ಒಮ್ಮೊಮ್ಮೆ ಆಫೀಸಿಗೆ ಬರುತ್ತಿದ್ದರು. ಬಹುಶಃ ಎರಡು ವರ್ಷ ವಯಸಾಗಿದ್ದ ಮಗನನ್ನು ಎತ್ತಿಕೊಂಡು ಬರುತ್ತಿದ್ದರು. ನಾವು ಮಗುವನ್ನು ಮಾತಾಡಿಸಿದರೆ ಮೂರ್ತಿ "ಇವನ ಜೊತೆ ಹುಷಾರು, ಇವನು ಮಹಾ ಅಪಾಯಕಾರಿ ವ್ಯಕ್ತಿ" ಎಂದು ತಮಾಷೆ ಮಾಡುತ್ತಿದ್ದರು.  ಅಂದು ಗಣಕಯಂತ್ರಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಅಮೇರಿಕಾ ಮತ್ತು ಜಪಾನ್ ಮಾತ್ರ ಗಣಕಗಳನ್ನು ತಯಾರಿಸುತ್ತಿದ್ದವು. ಭ...

ವಾರ್ಡನ್ ಕಥನ

ಇಮೇಜ್
ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ...

ಸ್ಮರಣೆಯೊಂದೇ ಸಾಲದೇ?

ಇಮೇಜ್
ಗೆಳೆಯ ಸುಧೀಂದ್ರ ಕನ್ನಡ ಲೇಖಕರ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದಾನೆ. ಇದು ಬಹಳ ಸಂತೋಷದ ಸಂಗತಿ.  ಅವನು ನಿರಂಜನ ಮತ್ತು ಅನುಪಮಾ ಅವರನ್ನು ಕುರಿತು ಮಾತಾಡಿದ್ದು ಸ್ವಾರಸ್ಯಕರವಾಗಿದೆ. ಕೆಲವು ಖಾಸಗೀ ನೆನಪುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ನಿರಂಜನ ಮತ್ತು ಅನುಪಮಾ  ಅವರ ಸ್ಮರಣೆ ಎಂದಿಗೂ ಚೇತೋಹಾರಿ. ನಮ್ಮ ತಂದೆಗೆ ನಿರಂಜನ ಹತ್ತಿರದ ಗೆಳೆಯರು. ಒಂದು ಕಾಲದಲ್ಲಿ ಇಬ್ಬರೂ ಕನ್ನಡ ಪತ್ರಿಕೆಗಳಿಗೆ ಬರೆದವರು. ಆದರೆ ನನ್ನ ತಂದೆಯವರ ಒಲವು ಇಂಗ್ಲಿಷ್ ಬರವಣಿಗೆಯಲ್ಲಿ ಹೆಚ್ಚಿತ್ತು.  ನಿರಂಜನ ದಂಪತಿಗಳ ಮದುವೆಯಲ್ಲೂ ನಮ್ಮ ತಂದೆ ಒಂದು ಸಣ್ಣ ಪಾತ್ರ ವಹಿಸಿದ್ದರು.  ನನ್ನ ತಾಯಿಗೆ ಅನುಪಮಾ ಅವರು ಗೆಳತಿಯಾಗಿದ್ದರು. ಒಮ್ಮೆ ಅವರಿಗೆ ಚಿಕಿತ್ಸೆ ಕೂಡಾ ನೀಡಿದ್ದರು.  ನಮ್ಮ ತಂದೆ ದೆಹಲಿಗೆ ವರ್ಗವಾಗಿ ಹೋದಾಗ ಐದು  ವರ್ಷಗಳ ಕಾಲ ಸಂಪರ್ಕಗಳು ಕಡಿಮೆಯಾದವು. ಆಗ ಇಂದಿನಂತೆ  ಫೋನ್, ಸೋಷಿಯಲ್ ಮೀಡಿಯಾ ಇವೆಲ್ಲಾ ಇರಲಿಲ್ಲ. ಪತ್ರ ವ್ಯವಹಾರವೊಂದೇ ಆಗಿದ್ದ ಸಂಪರ್ಕ ಸಾಧನ!  ನಾವು ಮರಳಿ ಬೆಂಗಳೂರಿಗೆ ಬಂದಾಗ ಅವರು ನಮ್ಮ ತಂದೆಗೆ ವಿಮರ್ಶೆಗಾಗಿ ಕಳಿಸಿದ ಜ್ಞಾನಗಂಗೋತ್ರಿಯ ಸಂಪುಟಗಳನ್ನು ಓದುತ್ತಾ ನಾನು ಬೆಳೆದೆ. ಅಂಥ ದೊಡ್ಡ ಪ್ರಮಾಣದ ವಿಶ್ವಕೋಶದ ಸಂಪಾದನೆಯ ಹೊಣೆಯನ್ನು ಹೊರುವುದು ನಿರಂಜನ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಆದರೆ ಕೆಲಸದ ಒತ್ತಡ ಅವರ ಮೇಲೆ ಹೆಚ್ಚಾಯಿತು. ಸ...

ಗ್ರಂಥಾಲಯದಲ್ಲಿ ಕವನವಾಚನ

ಇಮೇಜ್
ಸಿ. ಪಿ. ರವಿಕುಮಾರ್ (17 ನವೆಂಬರ್, 2016) ಗ್ರಂಥಾಲಯ ಸಪ್ತಾಹ ಆಚರಣೆಯ ಪರವಾಗಿ ಒಂದು ಕಾವ್ಯವಚನ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೆಳೆಯ ಅಭಿನವ ರವಿಕುಮಾರ್ ಕರೆ ಮಾಡಿದರು. ಸಾಲದೆಂಬಂತೆ "ತೊಗೊಳ್ಳಿ, ಶ್ರೀನಿವಾಸ್ ಅವರೂ ನಿಮ್ಮ ಜೊತೆ ಮಾತಾಡುತ್ತಾರೆ," ಎಂದು ಫೋನ್ ವರ್ಗಾಯಿಸಿದರು. "ರವಿಕುಮಾರ್, ನೀವು ಖಂಡಿತ ಬರಬೇಕಪ್ಪ." ಎಂದು ಆತ್ಮೀಯವಾಗಿ ಕರೆದವರು "ಶೂದ್ರ" ಶ್ರೀನಿವಾಸ್.  ಅವರು ನನ್ನ ಹಿತೈಷಿಗಳು.   ನ್ಯಾಷನಲ್ ಕಾಲೇಜಿನಲ್ಲಿ ನನಗೆ ಕನ್ನಡ ಪಾಠ ಹೇಳಿದ  ಕೆ.ಎನ್.ಎನ್. ಮತ್ತು ಎಚ್.ಎಸ್.ಎಂ.ಆರ್. ಇವರಿಬ್ಬರೂ ನನ್ನನ್ನು ಕುರಿತು ಆಡಿರಬಹುದಾದ ಒಳ್ಳೆಯ ಮಾತುಗಳು ನನಗೆ ಎಷ್ಟೋ ಜನ ಹಿತೈಷಿಗಳನ್ನು ಸಂಪಾದಿಸಿಕೊಟ್ಟಿದೆ! ಕಾವ್ಯವಾಚನದಲ್ಲಿ ಮುಖ್ಯ ಅತಿಥಿಯಾಗಿ ಬಂದವರು ಪ್ರಸ್ತುತ ಕನ್ನಡ ಕಾವ್ಯ ಸಂದರ್ಭದಲ್ಲಿ ಅತ್ಯಂತ ಮುಖ್ಯ ಕವಿಯೆಂದು ಗುರುತಿಸಲ್ಪಡುವ ಎಚ್.ಎಸ್. ವೆಂಕಟೇಶಮೂರ್ತಿ.  ಎಚ್ಚೆಸ್ವಿ ಅವರ ಕಾವ್ಯದ ಹರಹು ಬಹಳ ದೊಡ್ಡದು. ಮಕ್ಕಳ ಕವಿತೆಯಿಂದ ಹಿಡಿದು ಮಹಾಕಾವ್ಯದವರೆಗೆ. ಅವರನ್ನು ಮತ್ತೊಮ್ಮೆ ನೋಡುವ ಮತ್ತು ಅವರ ಮಾತು ಕೇಳುವ ಅವಕಾಶ ನನಗೆ ಸಿಕ್ಕಿತು. ಜಯನಗರದ ನಗರ ಕೇಂದ್ರ ಗ್ರಂಥಾಲಯದೊಂದಿಗೆ ತಮಗಿರುವ ಸಂಬಂಧವನ್ನು ಎಚ್.ಎಸ್.ವಿ. ನೆನೆಸಿಕೊಂಡರು. "ನಾನು ಬೆಂಗಳೂರಿಗೆ ಬಂದಾಗ ಮೊದಲು ನೆಲೆಸಿದ್ದು ಜಯನಗರದಲ್ಲಿ. ಪಾಠ ಹೇಳಿ ಮನೆಗೆ ಬಂದ ಮೇಲೆ ಸಂಜೆ ವಾಕಿಂಗ್ ಹೊರಟು ಇಲ...