ಪೋಸ್ಟ್‌ಗಳು

ಸೆಪ್ಟೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾಳೆ

ಇಮೇಜ್
 ಮೂಲ ಕವಿತೆ: ಸಾರಾ ಟೀಸ್ಡೇಲ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಹೊಯ್ಯುವುದು ಮೆಲ್ಲಗೆ ಮಳೆ, ನೆಲದ ಗಂಧ ಹರಡುವುದು ಗಾಳಿಯೊಳು ಸುತ್ತುವುವು ಸ್ವಾಲೋ ಹಕ್ಕಿಗಳು ಮಾಡುತ್ತ ಥಳಥಳ ಹೊಳೆವ ಸದ್ದು ಹಾಡುವುವು ಕೆರೆಬಾವಿಗಳಲ್ಲಿ ಕಪ್ಪೆಗಳು ಕವಿದಾಗ ಇರುಳು ಕಾಡು ಪ್ಲಮ್ ಮರಗಳು ನಡುಗುವುವು ಬಿಳಿಯ ಹೂ ತೊಟ್ಟು. ರಾಬಿನ್ ಹಕ್ಕಿಗಳು ಧರಿಸುವುವು ರೆಕ್ಕೆಗಳಲ್ಲಿ ಅಗ್ನಿಜ್ವಾಲೆ ಹಾಡುವವು ಬೇಲಿಯ ತಂತಿಯ ಮೇಲೆ ಸಿಳ್ಳೆ ಹೊಡೆಯುತ್ತ ಇವರಲ್ಲಿ ಯಾರಿಗೂ ತಿಳಿಯದು ಯಾಕೆ ನಡೆಯಿತು ಯುದ್ಧ ಯಃಕಶ್ಚಿತ್ ಕೌತುಕವಿಲ್ಲ ಮಗುಚಿದಾಗ ಇತಿಹಾಸದ ಹಾಳೆ ನಾಶವಾದರೂ ಸಂಪೂರ್ಣವಾಗಿ ಮನುವಂಶ ಇವರಾರಿಗೂ ಇಲ್ಲ ಯಃಕಶ್ಚಿತ್ ಪರಿವೆ ನಸುಕು ಕಣ್ತೆರೆದ ವಸಂತನಿಗೆ ಇರದು ಅರಿವೇ ನಾವೆಲ್ಲ ತೆರಳಿದೆವೆಂಬ ಇತಿಹಾಸದ ಅಂಶ.

ವಿಜ್ಞಾನ ಲಿಮರಿಕ್

 (1) ಹೆಚ್ಚು ಮರ ಸಿಕ್ಕಷ್ಟೂ ಹೆಚ್ಚು ಸಿಕ್ಕುವುದು O2 ಚುನಾವಣೆಗೆ ನಿಂತವರಿಗೆ ಹೇಳಿ ಈ  ಗುಟ್ಟು! ನೆಡಿಸಿ ಮರಗಳ ಸಾಲು ಕಡುಬೇಸಗೆಯಲ್ಲೂ ನೆಳಲು ಕೊಟ್ಟವರನ್ನು ಆರಿಸೋಣ ನಮ್ಮ ಮತ ಕೊಟ್ಟು (2) ಸಾಗರದ ಮೇಲೆ ಬಂದಾಗ ಸೂರ್ಯ ಪ್ರಾರಂಭ ಫೋಟೋಸಿಂಥೆಸಿಸ್ ಕಾರ್ಯ ಸಮುದ್ರದಲ್ಲಿರುವ ಅಸಂಖ್ಯ ಫೋಟೋಪ್ಲಾಂಕ್ಟನ್ ನೀಡುತ್ತವಲ್ಲ ಉಪಉತ್ಪನ್ನವಾಗಿ ಆಕ್ಸಿಜನ್! ಅರವತ್ತು ಪರ್ಸೆಂಟ್ O2 ಹಾಕಿದ್ದು ಇವರೇ, ಮರೆತೀಯ!! (3) ನೀನು ಮಾಡಿದ ದೋಸೆಯ ಘಮ ತೇಲಿ ಬಂದಾಗ, ಪ್ರಿಯೇ ಜೊಲ್ಲು ಸುರಿಯುವುದು ಒಂದು ಸಾಮಾನ್ಯ ಪ್ರತಿಕ್ರಿಯೆ! ಜೊಲ್ಲು ಇಲ್ಲದೆ ದೋಸೆಯ ರುಚಿ ಏನೇನೂ ತಿಳಿಯಲಾರದು ಪ್ರಿಯೇ ಮಾನವನ ಬ್ರೇನು ಆಹಾರ ಕರಗಿದಾಗ ಜೊಲ್ಲಿನಲ್ಲಿ ಪ್ರಾರಂಭ  ನಾಲಗೆಯ ಆಸ್ವಾದ ಪ್ರಕ್ರಿಯೆ! (4) ಹೀಲಿಯಮ್ಮನ್ನು ಮೈನಸ್ ೨೬೯ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಡಿರಿ ಬೀಕರಿನ ಗೋಡೆ ಹತ್ತಿ ಉಪದ್ರವ ಮಾಡಿ ಗುರುತ್ವವಿಲ್ಲದ ಸೂಪರ್ ದ್ರವ ಗಾಜಿನಣುಗಳ ಮೂಲಕವೂ ಸೋರುವುದು ಕಣ್ರೀ! (5) ಸಾಗರದ ಮೇಲೆ ನಗುವ ಅಸಂಖ್ಯ ನಕ್ಷತ್ರ ನೋಡುತ್ತಿವೆ ಪಯೋನಿಧಿ ಎಂಬ ಪುಣ್ಯಕ್ಷೇತ್ರ: ಅಲ್ಲಿ ಫೈಟೋಪ್ಲಾಂಕ್ಟನ್ ಎಂಬ ಅಸಂಖ್ಯ ಸೂಕ್ಷ್ಮಾಣು ದಿನವಿಡೀ ಮೌನವಾಗಿ ಮಾಡುತ್ತಿರುವ ತಪವೇನು? ಕಾರ್ಬನ್ ಡೈಯಾಕ್ಸೈಡ್ ಶೇಖರಿಸಿಟ್ಟು ನೀಡುತ್ತಿವೆ ಆಕ್ಸಿಜನ್ ಮಾತ್ರ! (6) ಚಂದ್ರ ಭೂಮಿಯ ಭಾಗವೇ ಆಗಿದ್ದನಂತೆ  ದುರ್ಘಟನೆಯೊಂದು ಪ್ರತ್ಯೇಕತೆ ತಂತಂತೆ  ಎಲ್ಲಿಂದಲೋ ಬಂದ ಮಹಾಶಿಲೆಯೊಂದು ಅಂತಿಂಥದದಲ್ಲ ಮಂ

ಕನಸು

ಇಮೇಜ್
 ಮೂಲ ಕವಿತೆ:  ವಿಲಿಯಂ ವರ್ಡ್ಸ್ವರ್ತ್ ಅನುವಾದ: ಸಿ. ಪಿ. ರವಿಕುಮಾರ್ ಎನ್ನೆದೆ ಕುಣಿದಾಡುವುದು ಕಂಡಾಗ ಕಾಮನಬಿಲ್ಲು! ಇದೇನು ಇಂದಿನ ಮಾತಲ್ಲ, ಚಿಕ್ಕಂದಿನಿಂದಲೂ ಮುಂದುವರೆದಿದೆ ನಾನೀಗ ಎತ್ತರದ ಆಳಾದರೂ ಇದು ಹೀಗೇ ಇರಲಿ ನೆರೆತಾಗ ತಲೆಗೂದಲು: ಇಲ್ಲದಿದ್ದರೆ ದೇವ ಕರುಣಿಸಲಿ ಸಾವು! ಮಾನವನ ತಂದೆಯಲ್ಲವೆ ಶಿಶು? ನನ್ನೆದೆಯಲ್ಲಿ ಬೆಳಕು ಬೀರುವುದೊಂದು ಕನಸು:  ಬೆಸೆದುಕೊಂಡಿರಲಿ ನನ್ನ ದಿನಗಳು ಒಂದಕ್ಕೊಂದು ಮಾನವಸಹಜ ಭಕ್ತಿಯಿಂದ ಎಂದು.