ತಿಪ್ಪೆಸಾಂಗ್
ಸಿ ಪಿ ರವಿಕುಮಾರ್ ಭಾಳ trashಆ ಆಗಲಿಕ್ಕೆ ಹತ್ತಿದೆರೀ ಬೆಂಗಳೂರದಾಗs ನಡುವs ನಡಕೋತ ಹೊಂಟೆs ಹಾಕುತ ತಿಪ್ಪರ್ ಲಾಗs ದೀರ್ಘ ಶ್ವಾಸs ಎಳಕೋಬೇಕಂತs ಬಾಬಾ ಪ್ರಾಣಾಯಾಮಾs ತಿಪ್ಪೆ ಗುಂಡಿ ಹತ್ರs ಎಂಥದ್ದೂರೀ ಅಯ್ಯೋ ರಾಮಾs ತಿಪ್ಪೆ, ತಿಪ್ಪೆ, ಎಲ್ಲಾ ಕಡೆಗೂ, ತಿಪ್ಪೆ ತಿಪ್ಪೆ ತಿಪ್ಪೆ! ಬ್ಯಾರೆ ಚಾನಲ್ ಹಾಕಿದರೂನೂ ಅಷ್ಟೇ ತಕ್ಕಡಿ ಬೆಪ್ಪೇ ಓದಲು ಕೂತರs ವಾರ್ತಾ ಪತ್ರಿಕೆ ಟೀವೀ ಬಂದು ಮಾಡಿs ಕೈಯಲ್ಲಿರುವುದು ಪತ್ರಿಕೆಯೋ ಅಥವಾ ಅದು ತಿಪ್ಪೇಗಾಡಿ? ಕನ್ನಡ ಪತ್ರಿಕೆ ಪುಟಪುಟದಲ್ಲೂ ಇಂಗ್ಲಿಷ್ ಜಾಹೀರಾತs ಪುರುಸೊತ್ ಸಿಕ್ರs ಕರೇಂಗೆ ಮಿಲ್ಕೇ ಹಿಂದೀಮೇ ಹಂ ಬಾತs ವಾರ್ತಾ ಪತ್ರಿಕೆ ಅಂತಾರs ತುಂಬಿದೆ ಬರಿಯ ವರಾತs ಯಾವುದು ಇಲ್ಲಿ ವಾರ್ತಾ ತಮ್ಮಾ ಯಾವುದು ಜಾಹೀರಾತs? ನಮ್ ತಿಪ್ಪಾರಳ್ಳಿ ದೂರ ಅಂದ್ರು ಸುಮ್ನೇ ಕೈಲಾಸಮ್ಮೂ ಹತ್ರs ತಂತು ತಿಪ್ಪಾರಳ್ಳಿ ಲೊಟ್ಟೆ-ಲೊಸಕು ಇಸಮ್ಮು