ಬಾ ಈ ದೀಪವು ಮಸುಕಾದಾಗ!
ಮೂಲ ಹಿಂದಿ ಕವಿತೆ - ಮಹಾದೇವಿ ವರ್ಮಾ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಈ ಚಂಚಲ ಕನಸುಗಳು ಅಮಾಯಕ, ಬೆಳೆಸಿರುವೆನು ಕಣ್ಣೀರಿನಲಿ, ಮೃದು ಕಣ್ ರೆಪ್ಪೆಯ ತೊಟ್ಟಿಲೊಳಿಟ್ಟು ತೂಗಿರುವೆನು ನಿದ್ರೆಯ ಬಿಟ್ಟು ಸೌರಭವೆಂಬ ರೆಕ್ಕೆಯನಿತ್ತು ತಲುಪಿಸು ಎಲ್ಲಾ ಕಣ್ಗಳಿಗೆ! ಸಂಜೆಯ ಕರುಣಾಮಯ ಅಂಕವು ಶುರುವಾಗಿದೆ, ರಂಗೇರಿದೆ ಮುಸ್ಸಂಜೆ ಸಂಧ್ಯೆಯ ನಭದೊಳು ಬಣ್ಣದ ಜೊತೆಗೇ ಕವಿದಿಹ ವರ್ಷಾಕಾಲದ ಮೋಡಕ್ಕೆ ವಿದ್ಯುತ್ ಸ್ಪರ್ಶದ ಚೇತನ ನೀಡಿ ತೋರು ದಾರಿ ಪ್ರತಿಯೊಂದೂ ಎದೆಗೆ! ಪುಳಕ ತುಂಬಿರುವ ಪ್ರತಿ ಕ್ಷಣಕ್ಷಣವೂ ಪಾವನ ಸ್ನೇಹಾಮೃತದೊಳು ಮಿಂದು ಹೊಳೆಯುತ್ತಿವೆ ಜ್ವಾಲಾ ಚುಂಬನಕೆ! ನೀಡಿ ತಾರೆಗಳ ಪ್ರಾಣದ ಭಿಕ್ಷೆ ಮಾಡು ಶೂನ್ಯ ಶ್ವಾಸಗಳ ರಕ್ಷೆ, ಅಮೃತಗಳಿಗೆಗಳು ಇವುಗಳಿಂದಲೇ! ಇದು ಚಿರ ಉಜ್ಜ್ವಲ ಅನಂತ ಜೀವನ- ನಾಟಕದೊಳು ವ್ಯಥೆ-ಅಂಕದ ಸ್ಪಂದನ! ಇದು ಚೆದುರಿದ, ವಿಸ್ಮೃತ ಬದುಕಿನ ಕಥೆ ಮಾಸಿದ ಈ ಹಾಳೆಯಿಂದಲೇ ಚರಿತೆ ಬರೆಯಲು ಆರಂಭಿಸು, ನೀಡು ಅಕ್ಷರದ ಘನತೆ! ಬತ್ತಿಯನ್ನು ಗುರುತಿಸಿರುವುದು ಹಣತೆ ಬತ್ತಿ ಸ್ನೇಹವನ್ನು ಗುರುತಿಸಿದೆ ಸ್ನೇಹ ಗುರುತಿಸಿದೆ ಮಲಿನ ಸೆರಗನು ಚಿರಬಂಧನದೊಳು ಬಂಧಿಸಿ ಇವನು ವರವ ತಾ ನೀನು ತೊಳೆದು ಶುಭ್ರವಾಗುವಂತೆ! ಕವಿತೆಯ ಸ್ವಾರಸ್ಯ: ಇದು ಬದುಕಿನ ಸಂಜೆಯಲ್ಲಿರುವ ಒಂದು ಜೀವದ ಸ್ಪಂದನ. ತಾನು ಕಂಡ ಎ...